ರಮ್ಯಾ ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಒಬ್ಬ ನಟಿ. (ನವೆಂಬರ್ ೨೯, ೧೯೮೨ ರಂದು ಸದಾಶಿವನಗರದ ಐಡಿಯಲ್ ನರ್ಸಿಂಗ್ ಹೋಮ್ ನಲ್ಲಿ ಜನನ) ಹುಟ್ಟು ಹೆಸರು ದಿವ್ಯ ಸ್ಪಂದನ. ರಮ್ಯಾರವರು 'ಅಭಿ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರು 'ತನನಂ ತನನಂ' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫೇರ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ರಮ್ಯಾ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ದಿವ್ಯ ಸ್ಪಂದನ
ನವೆಂಬರ್ ೨೯, ೧೯೮೨
ಬೆಂಗಳೂರು, ಕರ್ನಾಟಕ, ಭಾರತ
ವೃತ್ತಿ ನಟಿ, ರಾಜಕಾರಣಿ
ವರ್ಷಗಳು ಸಕ್ರಿಯ ೨೦೦೩—ಪ್ರಸಕ್ತ

ರಾಜಕೀಯ ಪ್ರವೇಶ

ಬದಲಾಯಿಸಿ

ರಮ್ಯ ಅವರು ಕರ್ನಾಟಕ ರಾಜ್ಯದ ಪ್ರದೇಶ ಕಾಂಗ್ರೆಸ್‌ನ ಸಕ್ರಿಯ ಸದಸ್ಯರಾಗಿದ್ದು[] ಮಂಡ್ಯ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ೨೩ ಆಗಸ್ಟ್ ೨೦೧೩ ರಂದು ನಡೆದ ಲೋಕಸಭಾ ಉಪ-ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಜಾತ್ಯಾತೀತ ಜನತಾದಳ ಪಕ್ಷದ ಪುಟ್ಟರಾಜು ಅವರನ್ನು ೬೭,೬೧೧ ಮತಗಳ ಅಂತರದಿಂದ ಸೋಲಿಸಿ ಪ್ರಥಮ ಪ್ರಯತ್ನದಲ್ಲೇ ಲೋಕಸಭೆಗೆ ಪ್ರವೇಶ ಮಾಡಿದ್ದರು. ರಾಜ್ಯದಿಂದ ಕನ್ನಡ ನಟಿಯೊಬ್ಬರು ಲೋಕಸಭೆಗೆ ಪ್ರವೇಶ ಮಾಡಿರುವುದರಲ್ಲಿ ರಮ್ಯಾ ಮೊದಲಿಗರು.

೨೦೧೪ರ ಚುನಾವಣೆ

ಬದಲಾಯಿಸಿ

ಲೋಕಸಭೆಗೆ ಏಪ್ರಿಲ್ ೧೭, ೨೦೧೪ರಲ್ಲಿ ಜರುಗಿದ ಚುನಾವಣೆಯಲ್ಲಿ ರಮ್ಯಾ ಅವರು ಸೋಲನ್ನನುಭವಿಸಿದರು. ಅವರನ್ನು ಜಾತ್ಯಾತೀತ ಜನತಾದಳ ಪಕ್ಷದ ಪುಟ್ಟರಾಜು ಅವರು ಸೋಲಿಸಿದರು.[]

ಚಿತ್ರಗಳು

ಬದಲಾಯಿಸಿ
# ವರ್ಷ ಚಿತ್ರ ಪಾತ್ರ ಸಹ-ನಟ ನಿರ್ದೇಶಕ
೨೦೦೩ ಅಭಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ದಿನೇಶ್ ಬಾಬು
೨೦೦೩ ಎಕ್ಸ್ ಕ್ಯೂಸ್ ಮಿ ಮಧುಮಿತ ಸುನೀಲ್ ರಾವ್ ಪ್ರೇಮ್
೨೦೦೪ ರಂಗ ಎಸ್.ಎಸ್.ಎಲ್.ಸಿ ಪದ್ಮ ಸುದೀಪ್ ಯೋಗರಾಜ್ ಭಟ್
೨೦೦೪ ಕಂಠಿ ರೀಮಾ ಮುರಳಿ ಭರತ್
೨೦೦೫ ಆದಿ ಐಶ್ವರ್ಯ ಆದಿತ್ಯ ಎಮ್.ಎಸ್. ರಮೇಶ್
೨೦೦೫ ಆಕಾಶ್ ನಂದಿನಿ ಪುನೀತ್ ರಾಜ್‌ಕುಮಾರ್ ಮಹೇಶ್ ಬಾಬು
೨೦೦೫ ಗೌರಮ್ಮ ಗೌರಿ ಉಪೇಂದ್ರ ನಾಗಣ್ಣ
೨೦೦೫ ಅಮೃತಧಾರೆ ಅಮೃತ ಧ್ಯಾನ್ ನಾಗತಿಹಳ್ಳಿ ಚಂದ್ರಶೇಖರ್
೨೦೦೬ ಸೇವಂತಿ ಸೇವಂತಿ ಸೇವಂತಿ ವಿಜಯ ರಾಘವೇಂದ್ರ ಎಸ್ ನಾರಾಯಣ್
೧೦ ೨೦೦೬ ಜೂಲಿ ಜೂಲಿ ಕ್ರೀಸ್ಶ್ ಪೂರ್ಣಿಮ ಮೋಹನ್
೧೧ ೨೦೦೬ ದತ್ತ ದಿವ್ಯ ದರ್ಶನ್ ತೂಗುದೀಪ್ ಚಿ ಗುರುದತ್ತ್
೧೨ ೨೦೦೬ ಜೊತೆ ಜೊತೆಯಲಿ ದಿವ್ಯ ಪ್ರೇಮ್ ದಿನಕರ್ ತೂಗುದೀಪ್
೧೩ ೨೦೦೬ ತನನಂ ತನನಂ ವನಜ ಶ್ಯಾಮ್,ರಕ್ಷಿತ ಕವಿತ ಲಂಕೇಶ್
೧೪ ೨೦೦೭ ಅರಸು ಶೃತಿ ಪುನೀತ್ ರಾಜ್‌ಕುಮಾರ್ ಮಹೇಶ್ ಬಾಬು
೧೫ ೨೦೦೭ ಪ್ರಾರಂಭ ಕಿರುಚಿತ್ರ
೧೬ ೨೦೦೭ ಮೀರಾ ಮಾಧವ ರಾಘವ ಮೀರಾ ದಿಗಂತ್ ಟಿ.ಎನ್.ಸೀತಾರಾಂ
೧೭ ೨೦೦೮ ಮುಸ್ಸಂಜೆ ಮಾತು ತನು ಸುದೀಪ್ ಮಹೇಶ್
೧೮ ೨೦೦೮ ಮೆರವಣಿಗೆ ಸ್ಪಂದನ (Guest appearance) ಪ್ರಜ್ವಲ್ ಮಹೇಶ್ ಬಾಬು
೧೯ ೨೦೦೮ ಬೊಂಬಾಟ್ ಶಾಲಿನಿ ಗಣೇಶ್ ಡಿ. ರಾಜೇಂದ್ರ ಬಾಬು
೨೦ ೨೦೦೮ ಅಂತು ಇಂತು ಪ್ರೀತಿ ಬಂತು ಪ್ರೀತಿ ಆದಿತ್ಯ ಬಾಬು ವೀರ ಶಂಕರ್
೨೧ ೨೦೧೦ ಜಸ್ಟ್ ಮಾತ್ ಮಾತಲ್ಲಿ ಸುದೀಪ್ ಸುದೀಪ್
೨೨ ೨೦೧೦ ಜೊತೆಗಾರ ಪ್ರೇಮ್ ಸಿಂಗಮಣಿ
೨೩ ೨೦೧೦ ಕಿಚ್ಚ ಹುಚ್ಚ ಸುದೀಪ್ ಚಿ ಗುರುದತ್
೨೪ ೨೦೧೧ ದಂಡಂ ದಶಗುಣಂ ಚಿರಂಜೀವಿ ಸರ್ಜಾ ಕೆ.ಮಾದೇಶ್
೨೫ ೨೦೧೧ ಸಂಜು ವೆಡ್ಸ್ ಗೀತಾ ಗೀತಾ ಶ್ರೀನಗರ ಕಿಟ್ಟಿ ನಾಗಶೇಖರ್
೨೬ ೨೦೧೧ ಜಾನಿ ಮೇರ ನಾಮ್ ಪ್ರೀತಿ ಮೇರ ಕಾಮ್ ಪ್ರಿಯಾ ದುನಿಯಾ ವಿಜಯ್ ಪ್ರೀತಮ್ ಗುಬ್ಬಿ
೨೭ ೨೦೧೨ ಸಿದ್ದಲಿಂಗು ಮಂಗಳಾ ಯೋಗೀಶ್ ವಿಜಯ್ ಪ್ರಸಾದ್
೨೮ ೨೦೧೨ ಲಕ್ಕಿ ಗೌರಿ ಯಶ್ ಡಾ.ಸೂರಿ
೨೯ ೨೦೧೨ ‍‍‍‌‌ಕಠಾರೀವೀರ ಸುರಸುಂದರಾಂಗಿ ಇಂದ್ರಜ ಉಪೇಂದ್ರ ಸುರೇಶ್ ಕೃಷ್ಣ
೩೦ ೨೦೧೩ ದಿಲ್ ಕ ರಾಜ ಪ್ರಜ್ವಲ್ ದೇವರಾಜ್ ಸೋಮನಾಥ್ ಪಾಟೀಲ್
೩೧ ೨೦೧೪ ಜಾನಿ ೨ ದುನಿಯಾ ವಿಜಯ್ ಪ್ರೀತಮ್ ಗುಬ್ಬಿ
೩೨ ೨೦೧೪ ಆರ್ಯನ್ ಶಿವರಾಜ್ ಕುಮಾರ್ ಡಿ. ರಾಜೇಂದ್ರ ಬಾಬು

ಹೊರಕೊಂಡಿಗಳು

ಬದಲಾಯಿಸಿ
  1. ಐಎಂಡಿಬಿಯಲ್ಲಿ ದಿವ್ಯ ಸ್ಪಂದನ
  2. ಕಾಂಗ್ರೆಸ್ಸಿನ 'ಸೋಷಿಯಲ್ ಪವರ್' ರಮ್ಯಾ

ಉಲ್ಲೇಖಗಳು

ಬದಲಾಯಿಸಿ
  1. Ramya joins Youth Congress Archived 2013-12-02 ವೇಬ್ಯಾಕ್ ಮೆಷಿನ್ ನಲ್ಲಿ., The New Indian Express, 19th April 2011
  2. "ಆರ್ಕೈವ್ ನಕಲು". Archived from the original on 2014-05-19. Retrieved 2014-05-17.



"https://kn.wikipedia.org/w/index.php?title=ರಮ್ಯಾ&oldid=1219139" ಇಂದ ಪಡೆಯಲ್ಪಟ್ಟಿದೆ