ದರ್ಶನ್ ತೂಗುದೀಪ್

ಕನ್ನಡ ನಟ, ನಿರ್ದೇಶಕ ಮತ್ತು ಚಲನಚಿತ್ರ ವಿತರಕ

ದರ್ಶನ್ (ಜನನ ೧೬ ಫೆಬ್ರವರಿ ೧೯೭೭ ), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು,   ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು ೧೯೯೦ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು .  ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. ೨೦೦೧ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಿದ್ದರು.

ದರ್ಶನ್ ತೂಗುದೀಪ್
ದರ್ಶನ್ ೨೦೧೧ ರಲ್ಲಿ ಸಾರಥಿ ಚಿತ್ರೀಕರಣ
Born
ಹೇಮಂತ್ ಕುಮಾರ್

(1977-02-16) ೧೬ ಫೆಬ್ರವರಿ ೧೯೭೭ (ವಯಸ್ಸು ೪೭)
ಪೊನ್ನಂಪೇಟ್, ಕೊಡಗು, ಕರ್ನಾಟಕ, ಭಾರತ
Occupation(s)ನಟ, ಚಲನಚಿತ್ರ ನಿರ್ಮಾಪಕ, ವಿತರಕ
Years active೧೯೯೭–ಪ್ರಸ್ತುತ
Spouse

ವಿಜಯ್ ಲಕ್ಷ್ಮಿ (Married:2003)

Children1 ವಿನೀಶ್ ದರ್ಶನ್
Relativesತೂಗುದೀಪ ಶ್ರೀನಿವಾಸ್ (ತಂದೆ)

ಕರಿಯಾ (೨೦೦೩) ,ನಮ್ಮ ಪ್ರೀತಿಯ ರಾಮು (೨೦೦೩),ಕಲಾಸಿಪಾಳ್ಯ (೨೦೦೫),ಗಜ (೨೦೦೮), ಸಾರಥಿ (೨೦೧೧) ಮತ್ತು ಬುಲ್ ಬುಲ್ (೨೦೧೩) ನಂತಹ ವಾಣಿಜ್ಯಿಕವಾಗಿ ಯಶಸ್ವಿಯಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾರಥಿ ಮತ್ತು ಸಂಗೊಳ್ಳಿ  ರಾಯಣ್ಣ  (೨೦೧೨) ಚಿತ್ರದಲ್ಲಿನ ಅಭಿನಯಕ್ಕಾಗಿ   ವಿಮರ್ಶಕರಿಂದ ಪ್ರಶಂಸೆಯನ್ನು ಪಡೆದರು ಮತ್ತು ಸಂಗೊಳ್ಳಿ  ರಾಯಣ್ಣ  ಚಿತ್ರದ ಅಭಿನಯಕ್ಕಾಗಿ  ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು  ಪಡೆದಿದ್ದಾರೆ . ದರ್ಶನ್ ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿದ್ದಾರೆ. ಅವರು 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು.

ದರ್ಶನ್ ತೂಗುದೀಪ್ ಕುಟುಂಬ

ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ, ಫೆಬ್ರುವರಿ ೧೬ ೧೯೭೭ರಂದು ದರ್ಶನ್ ಹುಟ್ಟಿದರು. . ಈಗ ಕನ್ನಡ ಚಿತ್ರರಂಗದ ಚಿತ್ರ ನಿರ್ಮಾಪಕರೊಲ್ಲಬ್ಬರಾಗಿದ್ದಾರೆ. ತೂಗುದೀಪ ಪ್ರೂಡಕ್ಷನ್ಸ್ಅಡಿಯಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ತೂಗುದೀಪ ಡಿಸ್ಟ್ರಿಬ್ಯೂಟರ್ಸ್ಸೋ ಅಡಿಯಲ್ಲಿ ಚಿತ್ರ ವಿತರಕರಾಗಿದ್ದಾರೆ. ತಮ್ಮದಿನಕರ್ ತೂಗುದೀಪ್ ನಿರ್ದೇಶಕರಾಗಿದ್ದಾರೆ.

ವೈಯಕ್ತಿಕ ಜೀವನ

ದರ್ಶನ್ ೨೦೦೦ ರಲ್ಲಿ ವಿಜಯಲಕ್ಷ್ಮೀ ಅವರನ್ನು ವಿವಾಹವಾದರು. ಅವರಿಗೆ 'ವಿನೇಶ್' ಹೆಸರಿನ ಒಂದು ಗಂಡು ಮಗು ಇದೆ.

ಕೃಷಿ ಜೀವನ

ದರ್ಶನ್ ಅವರಿಗೆ ಕೃಷಿ ಬಹಳ ಅಚ್ಚುಮೆಚ್ಚು. ಅವರು ಪಾರ್ಮ್ ಹೌಸ್‌ನಲ್ಲಿ ಹಸು, ಕುದುರೆ ಸಾಕಿದ್ದಾರೆ. ಅವುಗಳ ಲಾಲನೆ ಪಾಲನೆ ಅವರೆ ಕುದ್ದು ಮಾಡುತ್ತಾರೆ. ಇತ್ತೀಚಿಗೆ ಅವರು ಸುಮಾರು 50 ಎಕರೆ ಜಮೀನಿನಲ್ಲಿ ಅಧಿಕ ಲಾಭ ತರುವ ಕ್ಯಾಸನೂರು ನಾಟಿ ಅಡಿಕೆ ತಳಿಯ ತೋಟ ಮಾಡಿದ್ದಾರೆ. ಇತ್ತೀಚೆಗೆ ಅಧಿಕ ಸಮಯ ಇದೇ ತೋಟದಲ್ಲಿ ಕಳೆಯುತ್ತಾರೆ. ದರ್ಶನ್ ಅವರ ಅಡಿಕೆ ತೋಟ ನೋಡಲು ಬಹಳಷ್ಟು ಅಭಿಮಾನಿಗಳು ಇಲ್ಲಿಗೆ ಬರುತ್ತಾರೆ

ದರ್ಶನ್ ಅಭಿನಯದ ಕನ್ನಡ ಚಿತ್ರಗಳು

56 2014 ಅಂಬರೀಶ ದರ್ಶನ್ ರಚಿತಾ ರಾಮ್

ವಿಶೇಷ ಪಾತ್ರಗಳಲ್ಲಿ ದರ್ಶನ್

ದರ್ಶನ್ ಕೆಲವು ಚಿತ್ರಗಳಲ್ಲಿ ವಿಶೇಷ ಪಾತ್ರಗಳನ್ನು ಮಾಡಿದ್ದಾರೆ.

ಕ್ರಮ ಸಂಖ್ಯೆ ವರ್ಷ ಚಿತ್ರ ನಿರ್ದೇಶಕ ನಾಯಕಿ
೨೦೦೨ ಮೆಜೆಸ್ಟಿಕ್ ಪಿ ಎನ್ ಸತ್ಯಾ ರೇಖಾ
೨೦೦೨ ಧ್ರುವ ಎಮ್ ಎಸ್ ರಮೇಶ್ ಶಿರಿನ್
೨೦೦೨ ನಿನಗೋಸ್ಕರ ಯೋಗೀಶ್ ಹುಣಸೂರ್ ರುಚಿತಾ ಪ್ರಸಾದ್
೨೦೦೨ ಕಿಟ್ಟಿ ನವ್ಯ
೨೦೦೩ ಕರಿಯ ಪ್ರೇಮ್ ಅಭಿನಯಶ್ರೀ
೨೦೦೩ ಲಾಲಿಹಾಡು ಹೆಚ್ ವಾಸು ಅಭಿರಾಮಿ,ಋತಿಕ
೨೦೦೩ ನೀನಂದ್ರೆ ಇಷ್ಟ
೨೦೦೩ ಲಂಕೇಶ್ ಪತ್ರಿಕೆ ಇಂದ್ರಜಿತ್ ಲಂಕೇಶ್ ವಸುಂಧರ ದಾಸ್
೨೦೦೩ ನಮ್ಮ ಪ್ರೀತಿಯ ರಾಮು ಸಂಜಯ್ ನವ್ಯ
೧೦ ೨೦೦೩ ದಾಸ ಪಿ ಎನ್ ಸತ್ಯಾ ಅಮೃತ
೧೧ ೨೦೦೩ ಅಣ್ಣಾವ್ರು ಎನ್ ಓಂಪ್ರಕಾಶ್ ರಾವ್ ಕನ್ನಿಕಾ
೧೨ ೨೦೦೪ ಧರ್ಮ ಸಿಂಧು ಮೆನನ್
೧೩ ೨೦೦೪ ದರ್ಶನ್ ರಮೇಶ್ ಕಿಟ್ಟಿ ನವನೀತ್ ಕೌರ್
೧೪ ೨೦೦೪ ಭಗವಾನ್ ಹೆಚ್ ವಾಸು ಡೈಸಿ ಬೋಪಣ್ಣ,ಭಾವನಾ
೧೫ ೨೦೦೪ ಕಲಾಸಿಪಾಳ್ಯ ಎನ್ ಓಂಪ್ರಕಾಶ್ ರಾವ್ ರಕ್ಷಿತ
೧೬ ೨೦೦೪ ಸರ್ದಾರ ಪಿ ಎನ್ ಸತ್ಯಾ ಗುರ್ಲಿನ್ ಚೋಪ್ರಾ
೧೭ ೨೦೦೫ ಅಯ್ಯ ಎನ್ ಓಂಪ್ರಕಾಶ್ ರಾವ್ ರಕ್ಷಿತ
೧೮ ೨೦೦೫ ಶಾಸ್ತ್ರಿ ಪಿ ಎನ್ ಸತ್ಯಾ ಮಾನ್ಯ
೧೯ ೨೦೦೫ ಸ್ವಾಮಿ ಎಮ್ ಎಸ್ ರಮೇಶ್ ಗಾಯಿತ್ರಿ
೨೦ ೨೦೦೬ ಮಂಡ್ಯ ಎನ್ ಓಂಪ್ರಕಾಶ್ ರಾವ್ ರಕ್ಷಿತ,ರಾಧಿಕ
೨೧ ೨೦೦೬ ಸುಂಟರಗಾಳಿ ಸಾಧು ಕೋಕಿಲ ರಕ್ಷಿತ
೨೨ ೨೦೦೬ ದತ್ತ ಚಿ ಗುರುದತ್ ರಮ್ಯ
೨೩ ೨೦೦೬ ಜೊತೆ ಜೊತೆಯಲಿ ದಿನಕರ್ ತೂಗುದೀಪ ರಮ್ಯ
೨೪ ೨೦೦೬ ತಂಗಿಗಾಗಿ ಪಿ ಎನ್ ಸತ್ಯಾ ಪೂನಮ್
೨೫ ೨೦೦೭ ಭೂಪತಿ ಎಸ್ ಗೋವಿಂದು ಶಿರಿನ್
೨೬ ೨೦೦೭ ಅನಾಥರು ಸಾಧು ಕೋಕಿಲ ರಾಧಿಕ
೨೭ ೨೦೦೭ ಸ್ನೇಹನಾ ಪ್ರೀತಿನಾ ಶಾಹುರಾಜ್ ಶಿಂಧೆ ಲಕ್ಷ್ಮಿ ರೈ,ಸಿಂಧು
೨೮ ೨೦೦೭ ಈ ಬಂಧನ ವಿಜಯಲಕ್ಷ್ಮಿ ಸಿಂಗ್ ಜಯಪ್ರದ,ಜೆನಿಫರ್ ಕೊತ್ವಾಲ್
೨೯ ೨೦೦೮ ಗಜ ಕೆ ಮಾದೇಶ್ ನವ್ಯಾ ನಾಯರ್
೩೦ ೨೦೦೮ ಇಂದ್ರ ಹೆಚ್ ವಾಸು ನಮಿತಾ
೩೧ ೨೦೦೮ ಅರ್ಜುನ ಶಾಹುರಾಜ್ ಶಿಂಧೆ ಮೀರಾ ಚೋಪ್ರಾ
೩೨ ೨೦೦೮ ನವಗ್ರಹ ದಿನಕರ್ ತೂಗುದೀಪ ವರ್ಷ,ಶರ್ಮಿಳಾ ಮಾಂಡ್ರೆ
೩೩ ೨೦೦೯ ಯೋಧ ಎನ್ ಓಂಪ್ರಕಾಶ್ ರಾವ್ ನಿಖಿತ
೩೪ ೨೦೦೯ ಅಭಯ್ ಮಹೇಶ್ ಬಾಬು ಆರತಿ ಠಾಕೂರ್
೩೫ ೨೦೧೦ ಪೊರ್ಕಿ ಎಂ ಡಿ ಶ್ರೀಧರ್ ಪ್ರಣೀತ
೩೬ ೨೦೧೦ ಶೌರ್ಯ ಸಾಧು ಕೋಕಿಲ ಮದಲಸಾ
೩೭ ೨೦೧೧ ಬಾಸ್ ರಘುರಾಜ್ ನವ್ಯಾ ನಾಯರ್,ರೇಖಾ
೩೮ ೨೦೧೧ ಪ್ರಿನ್ಸ್ ಎನ್ ಓಂಪ್ರಕಾಶ್ ರಾವ್ ನಿಖಿತ,ಜೆನಿಫರ್ ಕೊತ್ವಾಲ್
೩೯ ೨೦೧೧ ಸಾರಥಿ ದಿನಕರ್ ತೂಗುದೀಪ ದೀಪಾ
೪೦ ೨೦೧೨ ಚಿಂಗಾರಿ ಹರ್ಷ ದೀಪಿಕಾ
೪೧ ೨೦೧೨ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಗಣ್ಣ ನಿಖಿತ,ಜಯಪ್ರದ
೪೩ ೨೦೧೩ ಬುಲ್ ಬುಲ್ ಎಂ.ಡಿ.ಶ್ರೀಧರ್ ರಚಿತಾ ರಾಮ್
೪೪ ೨೦೧೩ ಬೃಂದಾವನ ಕೆ ಮಾದೇಶ್ ಕಾರ್ತಿಕ ನಾಯರ್, ಮಿಲನ ನಾಗರಾಜ್
೪೫ ೨೦೧೫ ಮಿ. ಐರಾವತ ಎ.ಪಿ ಅರ್ಜುನ್ ಊರ್ವಶಿ ರೌಟೇಲ,ಚಿಕ್ಕಣ್ಣ,ಪ್ರಕಾಶ್ ರಾಜ್
೪೨ ೨೦೧೬ ವಿರಾಟ್ ಹೆಚ್. ವಾಸು ಚೈತ್ರ,ವಿದಿಶಾ
೪೭ ೨೦೧೬ ಜಗ್ಗುದಾದಾ ರಾಘವೇಂದ್ರ ಹೆಗ್ಡೆ ದೀಕ್ಷಾ ಸೇಟ್ ಸೃಜನ್ ರವಿಶಂಕರ್
೪೮ ೨೦೧೭ ಚಕ್ರವರ್ತಿ ಚಿಂತನ್ ದೀಪಾ ಸನ್ನಿದಿ ಸೃಜನ್ ಕುಮಾರ್ ಬಂಗಾರಪ್ಪ
೪೯ ೨೦೧೭ ತಾರಕ್ ಮಿಲನ ಪ್ರಕಾಶ್ ಶ್ರುತಿ ಹರಿಹರನ್ ಸಾನ್ವಿ ಶ್ರೀವಾತ್ಸವ್ ದೇವರಾಜ್
೫೦ ೨೦೧೯ ಕುರುಕ್ಷೇತ್ರ ನಾಗಣ್ಣ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ಸ್ನೇಹ, ಹರಿಪ್ರಿಯ, ರವಿಶಂಕರ್, ಶಶಿಕುಮಾರ್
೫೧ ೨೦೧೯ ಯಜಮಾನ ವಿ.ಹರಿಕೃಷ್ಣ, ಪಿ.ಕುಮಾರ್ ರಶ್ಮಿಕಾ ಮಂದಣ್ಣ,ತಾನ್ಯಾ ಹೋಪ್
೫೨ ೨೦೧೯ ಒಡೆಯ ಎಮ್.ಡಿ.ಶ್ರೀಧರ್ ಸನಾ ತಿಮ್ಮಯ್ಯ, ದೇವರಾಜ್
೫೩ ೨೦೨೧ ರಾಬರ್ಟ್ ತರುಣ್ ಕಿಶೋರ್ ಸುಧೀರ್ ಆಶಾ ಭಟ್
೫೪ ನಿರ್ಧರಿಸಬೇಕಿದೆ ರಾಜವೀರ ಮದಕರಿನಾಯಕ ಎಸ್.ವಿ.ರಾಜೇಂದ್ರಸಿಂಗ್ ಬಾಬು
೫೫ ೨೦೨೩ ಕ್ರಾಂತಿ
ಕ್ರಮ ಸಂಖ್ಯೆ ಚಿತ್ರ ಪಾತ್ರ
ಮಹಾಭಾರತ ಖಳನಟ
ದೇವರ ಮಗ ಪೋಷಕ ಪಾತ್ರ
ಭೂತಯ್ಯನ ಮಕ್ಕಳು ಪೋಷಕ ಪಾತ್ರ
ಕುಶಲವೇ ಕ್ಷೇಮವೆ ಅತಿಥಿ ಪಾತ್ರ
ದಿಲ್ ಅತಿಥಿ ಪಾತ್ರ
ಮೊನಾಲಿಸಾ ಅತಿಥಿ ಪಾತ್ರ
ಅರಸು ಅತಿಥಿ ಪಾತ್ರ
ಮೇಸ್ತ್ರಿ ಅತಿಥಿ ಪಾತ್ರ
ಸ್ನೇಹಿತರು ಅತಿಥಿ ಪಾತ್ರ
೧೦ ಮುಮ್ತಾಜ್ ಅತಿಥಿ ಪಾತ್ರ
11 ಅಗ್ರಜ ಅತಿಥಿ ಪಾತ್ರ
12 ನಾಗರಹಾವು ಅತಿಥಿ ಪಾತ್ರ
13 ಚೌಕ ಅತಿಥಿ ಪಾತ್ರ
14 ಇನ್ಸ್ಪೆಕ್ಟರ್ ವಿಕ್ರಮ್ ಅಥಿತಿ ಪಾತ್ರ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಪ್ರಶಸ್ತಿಗಳು ಹಾಗೂ ನಾಮನಿರ್ದೇಶನಗಳು

Year Award Nominated work Category Result Ref.
೨೦೧೦ ಜ಼ೀ ಕನ್ನಡ ಇನೋವೇಟಿವ್ ಫ಼ಿಲ್ಮ್ ಅವಾರ್ಡ್ಸ್ - ಒನಿಡಾ ಸ್ಟೈಲ್ ಐಕಾನ್ ಗೆಲುವು []
೨೦೧೨ ಟೇವಿ9 ಅವಾರ್ಡ್ಸ್ ಸಾರಥಿ ಅತ್ಯುತಮ ನಟ ಗೆಲುವು []
೨೦೧೨ ಸುವರ್ಣ ಫಿಲ್ಮ್ ಅವರ್ಡ್ಸ್ ಸಾರಥಿ ನೆಚ್ಚಿನ ನಾಯಕ ಗೆಲುವು []
೨೦೧೨ ಫಿಲ್ಮ್ ಫೇರ್ ಅವಾರ್ಡ್ ಸೌತ್ ಸಾರಥಿ ಅತ್ಯುತಮ ನಟ Nominated
೨೦೧೨ ಸೈಮಾ ಅವಾರ್ಡ್ಸ್ ಸಾರಥಿ ಅತ್ಯುತಮ ನಟ Nominated []
೨೦೧೨ ಬೆಂಗಳೂರು ಪ್ರೆಸ್ ಕ್ಲಬ್ ಮ್ಯಾನ್ ಆಫ್ ದ ಇಯರ್ - - ಗೆಲುವು []
೨೦೧೨ ಬೆಂಗಳೂರು ಟೈಮ್ಸ್ ಫಿಲ್ಮ್ ಅವಾರ್ಡ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅತ್ಯುತಮ ನಟ ಗೆಲುವು []
೨೦೧೩ ಸೈಮಾ ಅವಾರ್ಡ್ಸ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅತ್ಯುತಮ ನಟ Nominated []
೨೦೧೩ ಸುವರ್ಣ ಫಿಲ್ಮ್ ಅವರ್ಡ್ಸ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅತ್ಯುತಮ ನಟ ಗೆಲುವು []
೨೦೧೩ Filmfare Best Actor Award ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅತ್ಯುತಮ ನಟ ಗೆಲುವು []
೨೦೧೩ Karnataka State Film Award for Best Actor ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅತ್ಯುತಮ ನಟ ಗೆಲುವು [೧೦]

ಉಲ್ಲೇಖಗಳು

  1. "Zee Kannada Innovative Film Awards". Cineloka. Archived from the original on 18 ಜೂನ್ 2015. Retrieved 17 June 2015.
  2. TV9 awards
  3. "4th Suvarna film awards Part 1.mp4". Youtube. Retrieved 18 June 2015.
  4. "SIIMA - South Indian International Movie Awards". Retrieved 18 June 2015.
  5. http://www.bharatstudent.com/ (2012-12-14). "Darshan and Superstar Rajinikanth among man of the year list - Kannada Movie News". Bharatstudent.com. Archived from the original on 2014-02-21. Retrieved 2014-02-04. {{cite web}}: External link in |author= (help)
  6. "Bangalore Times Film Awards 2012 goes to..." THE TIMES OF INDIA. Retrieved 18 June 2015.
  7. "SIIMA 2013". Retrieved 18 June 2015.
  8. "Suvarna Awards 2013 - DECLARED". Gandhada Gudi. Archived from the original on 17 ಮೇ 2014. Retrieved 18 June 2015.
  9. "Filmfare Awards 2013 (South): Complete List of Winners". IBTIMES. Retrieved 18 June 2015.
  10. "Darshan Thanks 'Krantiveera Sangolli Rayanna' Team, Fans After Winning State Award". IBTIMES. Retrieved 18 June 2015.