ರಾಬರ್ಟ್ (ಚಲನಚಿತ್ರ)
ರಾಬರ್ಟ್ ೨೦೨೧ರಲ್ಲಿ ಬಿಡುಗಡೆಯಾದ ಕನ್ನಡ- ಭಾಷೆಯ ಭಾರತೀಯ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ತರುಣ್ ಸುಧೀರ್ [೧] ಈ ಚಲನಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ ಮತ್ತು ಉಮಾಪತಿ ಶ್ರೀನಿವಾಸ ಗೌಡ ಅವರು ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ದರ್ಶನ್, [೨] ಜಗಪತಿ ಬಾಬು, ರವಿ ಕಿಶನ್, ಆಶಾ ಭಟ್, ದೇವರಾಜ್ ಮತ್ತು ಪಿ ರವಿಶಂಕರ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಮತ್ತು ಅರ್ಜುನ್ ಜನ್ಯಾ ಸಂಗೀತ ಈ ಚಲನಚಿತ್ರಕ್ಕಿದೆ. ಈ ಚಿತ್ರದ ಛಾಯಾಗ್ರಹಣ ಸುಧಾಕರ್ ಎಸ್ ರಾಜ್ ಮತ್ತು ಸಂಕಲನವನ್ನು ಕೆ.ಎಂ.ಪ್ರಕಾಶ್ ನಿರ್ವಹಿಸಿದ್ದಾರೆ. ಈ ಚಿತ್ರವು ಅದೇ ಹೆಸರಿನಿಂದ ತೆಲುಗು ಆವೃತ್ತಿಯೊಂದಿಗೆ ೧೧ ಮಾರ್ಚ್ ೨೦೨೧ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ರಾಬರ್ಟ್ | |
---|---|
ನಿರ್ದೇಶನ | ತರುಣ್ ಸುಧೀರ್ |
ನಿರ್ಮಾಪಕ | ಉಮಾಪತಿ ಶ್ರಿನೀವಾಸ್ |
ಚಿತ್ರಕಥೆ | ತರುಣ್ ಸುಧೀರ್ |
ಕಥೆ | ತರುಣ್ ಸುಧೀರ್ |
ಪಾತ್ರವರ್ಗ | ದರ್ಶನ್ ಆಶಾ ಭಟ್ ಜಗಪತಿ ಬಾಬು ದೇವರಾಜ್ ಪಿ ರವಿಶಂಕರ್ ವಿನೋದ್ ಪ್ರಭಾಕರ್ |
ಸಂಗೀತ | ಅರ್ಜುನ್ ಜನ್ಯ, ವಿ.ಹರಿಕೃಷ್ಣ |
ಛಾಯಾಗ್ರಹಣ | ಸುಧಾಕರ್ ಎಸ್. ರಾಜ್ |
ಸಂಕಲನ | ಕೆ.ಎಂ.ಪ್ರಕಾಶ್ |
ಸ್ಟುಡಿಯೋ | ಉಮಾಪತಿ ಫಿಲ್ಮ್ಸ್ |
ಬಿಡುಗಡೆಯಾಗಿದ್ದು | ೧೧ ಮಾರ್ಚ್ ೨೦೨೧ |
ಅವಧಿ | ೧೬೬ ನಿಮಿಷ |
ದೇಶ | ಭಾರತ |
ಭಾಷೆ | ಕನ್ನಡ ಹಾಗೂ ತೆಲುಗು |
ಬಂಡವಾಳ | ೫೦ ಕೋಟಿ |
ಬಾಕ್ಸ್ ಆಫೀಸ್ | ೧೦೧ ಕೋಟಿ |
ಪಾತ್ರವರ್ಗ
ಬದಲಾಯಿಸಿ- ರಾಘವ / ರಾಬರ್ಟ್ ಪಾತ್ರದಲ್ಲಿ ದರ್ಶನ
- ನಾನಭಾಯಿಯಾಗಿ ಜಗಪತಿ ಬಾಬು
- ರಾಘವನಾಗಿ ವಿನೋದ್ ಪ್ರಭಾಕರ್
- ಸರ್ಕಾರ್ ಪಾತ್ರದಲ್ಲಿ ಪಿ ರವಿಶಂಕರ್
- ಅಮೃತ ಪಾತ್ರದಲ್ಲಿ ಆಶಾ ಭಟ್, (ರಾಬರ್ಟ್‌ನ ಪ್ರೇಯಸಿ)
- ರಾಘವನ ಪತ್ನಿಯಾಗಿ ಸೋನಲ್ ಮೊಂತೇರೊ
- ಶಾಸಕ ತ್ರಿಪಾಠಿಯಾಗಿ ರವಿ ಕಿಶನ್
- ಪೊಲೀಸ್ ಆಯುಕ್ತರಾಗಿ ದೇವರಾಜ್
- ಸಚಿವರಾಗಿ ಅವಿನಾಶ್
- ಅಗ್ನಿಯಾಗಿ ಚಿಕ್ಕಣ್ಣ
- ಬಾಬು / ಬಾಬಿಯಾಗಿ ಶಿವರಾಜ್ ಕೆ.ಆರ್ ಪೇಟೆ
- ರಾಘವನ ಮಗ ಅರ್ಜುನ್ ಪಾತ್ರದಲ್ಲಿ ಜೇಸನ್ ಡಿಸೋಜಾ
- ಕಮಲಾ ಪಾತ್ರದಲ್ಲಿ ಐಶ್ವರ್ಯ ಪ್ರಸಾದ್
- ಶಾಸಕನ ಪುತ್ರನಾಗಿ ಚಂದು ಬಿ ಗೌಡ
- ನಾನಾಭಾಯ್ ಅವರ ಮಗ ಚೆರ್ರಿ ಪಾತ್ರದಲ್ಲಿ ದಿಲೀಪ್ ಶೆಟ್ಟಿ
- ವಿಶ್ವನಾಥ್ ಭಟ್ ಆಗಿ ಅಶೋಕ್
- ವಿಶ್ವನಾಥ್ ಭಟ್ ಅವರ ಸೋದರ ಮಾವನಾಗಿ ನವೀನ್ ಡಿ ಪಡಿಲ್
- ಮದನಾ ಪಾತ್ರದಲ್ಲಿ ಧರ್ಮಣ್ಣ ಕಡೂರ್
- ಭೂತಯ್ಯನಾಗಿ ಗಿರಿ ದ್ವಾರಕಿಶ್
- ಕರಿ ಸುಬ್ಬು
- ಉಮಾಪತಿ ಶ್ರೀನಿವಾಸ ಗೌಡ ಅವರು "ಜೈ ಶ್ರೀರಾಮ್" ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
- ತರುಣ್ ಸುಧೀರ್ "ದೋಸ್ತಾ ಕಣೋ" ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ನಿರ್ಮಾಣ ಪ್ರಕ್ರಿಯೆ
ಬದಲಾಯಿಸಿಡಿ ೫೩ ಎಂಬ ತಾತ್ಕಾಲಿಕ ಶೀರ್ಷಿಕೆಯೊಂದಿಗೆ ಚಿತ್ರದ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಯಿತು. [೩] ಈ ಚಿತ್ರವನ್ನು ಹೆಬ್ಬುಲಿ ಮತ್ತು ಒಂದಲ್ಲ - ಎರಡಲ್ಲ ಚಿತ್ರಗಳ ನಿರ್ಮಾಪಕರಾದ ಉಮಾಪತಿ ಫಿಲ್ಮ್ಸ್ ನಿರ್ಮಾಣ ಹಾಗೂ ತರುಣ್ ಕಿಶೋರ್ ಸುಧೀರ್ ಅವರ ನಿರ್ದೇಶನದಲ್ಲಿ ದರ್ಶನ್ [೪] ಅವರ ಮುಖ್ಯಪಾತ್ರದೊಂದಿಗೆ ನಿರ್ಮಿಸುವುದಾಗಿ ಘೋಷಿಸಲಾಯ್ತು.[೫] ೨೦೧೭ರಲ್ಲಿ ದರ್ಶನ್ ಅವರು ತರುಣ್ ಸುಧೀರ್ ನಿರ್ದೇಶನದ ಚೊಚ್ಚಲ ಚಿತ್ರ ೨೦೧೭ರಲ್ಲಿ ಬಿಡುಗೊಂಡ ಚೌಕ ದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಬರ್ಟ್ ಚಿತ್ರದ ಚಿತ್ರೀಕರಣ ಪ್ರಕ್ರಿಯೆ ಜೂನ್ ೨೦೧೯ ರಲ್ಲಿ ಪ್ರಾರಂಭವಾಯಿತು. [೬] ಈ ಚಿತ್ರದ ಮೊದಲ ಥೀಮ್ ಪೋಸ್ಟರನ್ನು ೬ ನವೆಂಬರ್ ೨೦೧೮ ರಂದು ಬಿಡುಗಡೆ ಮಾಡಲಾಗಿತ್ತು. ಚಲನಚಿತ್ರದ ಶೀರ್ಷಿಕೆಯನ್ನು೨೫ ಡಿಸೆಂಬರ್ ೨೦೧೮ರಂದು ಕ್ರಿಸ್‌ಮಸ್‌ನ ಸಂದರ್ಭದಲ್ಲಿ ಘೋಷಿಸಲಾಯ್ತು [೭] ಹಾಗೂ ಚಿತ್ರದ ಎರಡನೇ ಥೀಮ್ ಪೋಸ್ಟರ್ ರಂಜಾನ್ ಹಬ್ಬದ ಮುನ್ನಾದಿನದಂದು ೫ ಜೂನ್ ೨೦೧೯ ರಂದು ಬಿಡುಗಡೆ ಮಾಡಲಾಯ್ತು. [೮] [೯]
ಸಂಗೀತ
ಬದಲಾಯಿಸಿಚಿತ್ರದ ಹಾಡುಗಳನ್ನು ಅರ್ಜುನ್ ಜನ್ಯಾ ಸಂಯೋಜಿಸಿದ್ದಾರೆ ಹಾಗೂ ವಿ.ಹರಿಕೃಷ್ಣ ಅವರು ಹಿನ್ನಲೆ ಸಂಗೀತ ನೀಡಿದ್ದಾರೆ.
- ರಾಬರ್ಟ್ ಚಿತ್ರದ ಮೊದಲ ಹಾಡು "ಬಾ ಬಾ ಬಾ ನಾ ರೆಡಿ" ೩ ಮಾರ್ಚ್ ೨೦೨೦ರಂದು ಬಿಡುಗಡೆಯಾಯಿತು.
- ಚಲನಚಿತ್ರದ ಎರಡನೇ ಹಾಡು "ಜೈ ಶ್ರೀ ರಾಮ್" ಅನ್ನು ಎರಡು ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಯ್ತು. ಅದರಲ್ಲಿ ಒಂದು ಆವೃತ್ತಿಯನ್ನು ಶಂಕರ್ ಮಹಾದೇವನ್ ಹಾಡಿದ್ದಾರೆ ಮತ್ತು ಇನ್ನೊಂದು ಹಾಡನ್ನು ದಿವ್ಯಾ ಕುಮಾರ್ ಹಾಡಿದ್ದಾರೆ.
- ಮೂರನೆಯ ಹಾಡು "ದೋಸ್ತಾ ಕಣೋ" ೨೧ ಮಾರ್ಚ್೨೦೨೦ರಂದು ಬಿಡುಗಡೆಯಾಯಿತು.
- "ಕಣ್ಣು ಹೊಡಿಯಾಕಾ" ೨೦ ಫೆಬ್ರವರಿ ೨೦೨೧ರಂದು ಬಿಡುಗಡೆಯಾದರೆ, "ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ" ೨೮ ಫೆಬ್ರವರಿ ೨೦೨೧ ರಂದು ಬಿಡುಗಡೆಯಾಯಿತು.
ಬಿಡುಗಡೆ
ಬದಲಾಯಿಸಿರಾಬರ್ಟ್ ೧೧ ಮಾರ್ಚ್ ೨೦೨೧ರಂದು [೧೦], ಮಹಾ ಶಿವರಾತ್ರಿಯ ಮುನ್ನಾದಿನದಂದು ವಿಶ್ವದಾದ್ಯಂತ ೧೨೦೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಏಪ್ರಿಲ್ ೨೦೨೦ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, [೧೧] ಆದರೆ ಭಾರತದಲ್ಲಿ COVID-19 ಸಾಂಕ್ರಾಮಿಕ ರೋಗದಿಂದಾಗಿ ಈ ಚಿತ್ರವು ಹಲವಾರು ತಿಂಗಳುಗಳ ಬಳಿಕ ಬಿಡುಗಡೆ ಮಾಡಲಾಯ್ತು.[೧೨]
ಈ ಚಿತ್ರವು ಕರ್ನಾಟಕದಲ್ಲಿ ೬೫೦ ಮತ್ತು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸುಮಾರು ೩೫೦, ಭಾರತದ ಉಳಿದ ಭಾಗಗಳಲ್ಲಿ ೩೦೦ ಹಾಗೂ ವಿದೇಶಗಳಲ್ಲಿ ೩೦೦ ಪರದೆಗಳು ಸೇರಿದಂತೆ ಸುಮಾರು ೧೬೦೦ಪರದೆಗಳಲ್ಲಿ ಬಿಡುಗಡೆಮಾಡಲಾಯ್ತು. [೧೩]
ಪ್ರತಿಕ್ರಿಯೆಗಳು
ಬದಲಾಯಿಸಿಪತ್ರಿಕಾ ವಿಮರ್ಶೆಗಳು
ಬದಲಾಯಿಸಿಟೈಮ್ಸ್ ಆಫ್ ಇಂಡಿಯಾ ಈ ಚಿತ್ರಕ್ಕೆ ೪/೫ ಅಂಕ ನೀಡಿ "ಚಿತ್ರವು ಒಂದು ವರ್ಷ ತಡವಾಗಿ ಬಿಡುಗಡೆಯಾಗಿದ್ದರೂ, ಮನೋರಂಜನೆ ನೀಡುವಲ್ಲಿ ಸಫಲವಾಗಿದೆ. ಈ ಚಿತ್ರವು ಕೇವಲ ಜನಪ್ರಿಯ ಅಂಶಗಳನ್ನಷ್ಟೇ ಹೊಂದದೇ ಸಂಪೂರ್ಣ ಕುಟುಂಬಕ್ಕೆ ಖುಷಿ ಪಡೆಸಲು ಸಫಲವಾಗಿದೆ" ಎಂದು ಅಭಿಪ್ರಾಯಪಟ್ಟಿದೆ.
ಬೆಂಗಳೂರು ಮಿರರ್‌ನ ವೈ ಮಹೇಶ್ವರ ರೆಡ್ಡಿ ೪/೫ ಅಂಕ ನೀಡಿ, "ರಾಬರ್ಟ್ ದ್ವಿಭಾಷಾ (ಕನ್ನಡ ಮತ್ತು ತೆಲುಗು) ಚಲನಚಿತ್ರವು ವ್ಯಾಪಾರಿ ಚಿತ್ರಗಳ ಪ್ರೇಕ್ಷಕರನ್ನು ರಂಜಿಸಲು ಬೇಕಾದ ಎಲ್ಲಾ ಅಂಶಗಳನ್ನು ಹೊಂದಿದೆ, ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ನ ಅಭಿಮಾನಿಗಳ ಹಾಗೂ ಚಲನಚಿತ್ರ ಬಫ್‌ಗಳ ನಿರೀಕ್ಷೆಯನ್ನು ಪೂರೈಸುವಲ್ಲಿ ಇದು ಯಶಸ್ವಿಯಾಗಿದೆ. " ಎಂದು ವಿಮರ್ಶೆ ವ್ಯಕ್ತ ಪಡಿಸಿದ್ದಾರೆ. [೧೪] ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಶಾರದಾ ೪/೫ ಎಂದು ರೇಟ್ ಮಾಡಿ, "ದರ್ಶನ್-ನಟಿಸಿದ 'ರಾಬರ್ಟ್' ಚಾಲೆಂಜಿಂಗ್ ಸ್ಟಾರ್‌ನ ಒಂದು ವಿಶಿಷ್ಟವಾದ ಚಿತ್ರವಾಗಿದೆ. ಕನ್ನಡ ಚಿತ್ರರಂಗದ ಜನಪ್ರಿಯ ನಟರಾದ ಇವರು, ತನ್ನ ಅಭಿಮಾನಿಗಳ ನಿರೀಕ್ಷೆಯನ್ನ ಪೂರೈಸಿದ್ದಾರೆ. " [೧೫] ಎಂದು ವಿಮರ್ಶಿಸಿದ್ದಾರೆ
ಗಲ್ಲಾಪೆಟ್ಟಿಗೆಯಲ್ಲಿ
ಬದಲಾಯಿಸಿಬಿಡುಗಡೆಯಾದ ಮೊದಲ ದಿನ ರಾಬರ್ಟ್ ವಿಶ್ವಾದ್ಯಂತ ₹ ೨೧ ಕೋಟಿ ಸಂಗ್ರಹಿಸಿದ್ದು, ಕರ್ನಾಟಕದಲ್ಲಿ ೧೭.೨೪ ಕೋಟಿ, [೧೬] ತೆಲಂಗಾಣ, ಆಂಧ್ರಪ್ರದೇಶ, ಉಳಿದ ಭಾರತೀಯ ರಾಜ್ಯಗಳು ಮತ್ತು ವಿದೇಶಗಳಿಂದ ೩.೧೨ ಕೋಟಿ (ತೆಲುಗು ಆವೃತ್ತಿಗೆ) ಗಳಿಸಿತು [೧೭] . ಕರ್ನಾಟಕದಲ್ಲಿ ರಾಬರ್ಟ್ ಎರಡನೇ ಮತ್ತು ಮೂರನೇ ದಿನ ಕ್ರಮವಾಗಿ ೧೨.೭೮ ಕೋಟಿ ಮತ್ತು ೧೪.೧೦ ಕೋಟಿ ರೂ. ಗಳಿಸುವ ಮೂಲಕ ಮೂರು ದಿನಗಳಲ್ಲಿ ಒಟ್ಟು ೪೪.೧೨ ಕೋಟಿ ರೂ.ಗಳನ್ನು ಸಂಗ್ರಹಿಸಿ ಈ ಚಿತ್ರವು ನಾಲ್ಕನೇ ದಿನ ೫೦ ಕೋಟಿ ರೂ.ಗಳ ಕ್ಲಬ್‌ಗೆ ಪ್ರವೇಶಿಸಿತು. ಈ ಚಿತ್ರವು ಮೂರನೇ ವಾರದ ಪ್ರದರ್ಶನದ ವೇಳೆಗೆ ಕರ್ನಾಟಕದ ಚಿತ್ರಮಂದಿರಗಳಿಂದ ೧೦೨.೪ ಕೋಟಿ ಸಂಗ್ರಹಿಸಿದೆ. [೧೮]
ಉಲ್ಲೇಖಗಳು
ಬದಲಾಯಿಸಿ- ↑ "Darshan Tharun Sudhir's project to be titled Roberrt?". Cinema Express. Retrieved 24 October 2018.
- ↑ "Darshan's 53rd movie is titled robert". Times of India. Retrieved 26 December 2018.
- ↑ "Darshan's next movie titled Roberrt". Times of India. Retrieved 17 October 2018.
- ↑ "Roberrt makers kick start the shooting schedule in bengaluru". Times of India. Retrieved 9 June 2019.
- ↑ "Darshan's 53rd film Roberrt to go on floors from may 6". in.com. Archived from the original on 3 September 2019. Retrieved 25 April 2019.
- ↑ "Wrap for Darshan's Roberrt". Cinema Express. Retrieved 14 March 2021.
- ↑ "Roberrt poster darshan film looks like a stylish actioner". Indian Express. Retrieved 5 June 2019.
- ↑ "Second schedule of Roberrt to begin from September 5". Cinema Express. Archived from the original on 3 ಸೆಪ್ಟೆಂಬರ್ 2019. Retrieved 26 August 2019.
- ↑ "Darshan's perspective poster as Roberrt generates curiosity". Times of India. Retrieved 7 June 2019.
- ↑ "Roberrt to release on March 11". Times of India. 10 January 2021. Retrieved 14 March 2021.
- ↑ "Roberrt is ready to hit the theatres on April 2020". Cini Mirror. 12 February 2020. Retrieved 14 March 2021.
- ↑ "Roberrt release postponed to next year?". Times of India. 23 June 2020. Retrieved 26 July 2020.
- ↑ Nair, Shreeya (19 March 2021). "'Roberrt' box office collection: The Darshan starrer is a hit with the audience". Republic World (in ಇಂಗ್ಲಿಷ್). Retrieved 19 March 2021.
- ↑ Y, Maheswara Reddy (12 March 2021). "A POWERFUL MESSAGE WITH A DOSE OF ACTION" (in ಇಂಗ್ಲಿಷ್). Retrieved 14 March 2021.
- ↑ A, Sharadhaa (11 March 2021). "Darshan strikes a fine balance between class and mass in this revenge drama". The New Indian Express (in ಇಂಗ್ಲಿಷ್). Archived from the original on 15 ಮಾರ್ಚ್ 2021. Retrieved 14 March 2021.
- ↑ "'Roberrt' 2 days box office collection report: Darshan mania runs wild". Deccan Herald. 13 March 2021. Retrieved 14 March 2021.
- ↑ "Darshan starrer-Roberrt earns big at the box office on Day 1". Zoom Entrainment (in ಇಂಗ್ಲಿಷ್). 12 March 2021. Retrieved 14 March 2021.
- ↑ "Roberrt Day 17 Karnataka Collections: Darshan Film Box Office Magic Still On". Sakshi. 29 March 2021. Retrieved 19 March 2021.