ಅಶೋಕ್
ಅಶೋಕ್ (ಜನನ 12 ಸೆಪ್ಟೆಂಬರ್ 1951) ಕನ್ನಡ ಚಲನಚಿತ್ರ ನಟರಾಗಿದ್ದಾರೆ. ಅವರು ಗೋಕಾಕ ಚಳುವಳಿ ಮತ್ತು ರೈತ ಸಂಘದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ.[೧]
ಅಶೋಕ್ | |
---|---|
ಜನನ | |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ನಟ |
ಆರಂಭಿಕ ಜೀವನ
ಬದಲಾಯಿಸಿಅಶೋಕ್ , ವಿ ಲಕ್ಷ್ಮಿ ನರಸಿಂಹಯ್ಯ ಮತ್ತು ಮತ್ತು ಪುಟ್ಟಮ್ಮನವರ ಮಗನಾಗಿ ಆನೇಕಲ್ ನಲ್ಲಿ ಜನಿಸಿದರು.ಅವರ ತಂದೆ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದರು.ಅವರ ಬಾಲ್ಯದ ಕನಸು ಚಲನಚಿತ್ರ ತಾರೆಯಾಗುವದಾಗಿತ್ತು,ಡಿಗ್ರಿ ಮುಗಿಸಿದ ನಂತರ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಪ್ರವೇಶ ಪಡೆದರು.
ವೃತ್ತಿ
ಬದಲಾಯಿಸಿಅವರ ಮೊದಲ ಕನ್ನಡ ಚಿತ್ರ ಹೆಣ್ಣು ಸಂಸಾರದ ಕಣ್ಣು . ಅವರ ಇತರ ಗಮನಾರ್ಹ ಚಲನಚಿತ್ರಗಳೆಂದರೆ ಸನಾದಿ ಅಪ್ಪಣ್ಣ, ವಿಜಯವಾಣಿ, ಅರ್ಚನಾ, ರಂಗನಾಯಕಿ, ಚೆಲ್ಲಿದ ರಕ್ತ, ತಾಯಿಯ ಮಡಿಲಲ್ಲಿ, ರಾಜಾ ಮಹಾರಾಜ ಮತ್ತು ಕ್ರಾಂತಿಯೋಗಿ ಬಸವಣ್ಣ ಆಗಿವೆ. 1986 ರಲ್ಲಿ ಅವರು ಕರ್ನಾಟಕ ಚಲನಚಿತ್ರ ಕಲಾವಿದರು, ಕೆಲಸಗಾರರ ಮತ್ತು ತಂತ್ರಜ್ಞರು ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದರು.[೨]
ಚಿತ್ರಗಳು
ಬದಲಾಯಿಸಿ- 1975 ಹೆನ್ನು ಸಂಸಾರದ ಕಣ್ಣು[೩]
- 1977 ಸನಾದಿ ಅಪ್ಪಣ್ಣ ಪೋಷಕ ಪಾತ್ರ
- 1977 ಬಯಲು ದಾರಿ
- 1977 ಭಾಗ್ಯವಂತರು
- 1977 ಪಾವನ ಗಂಗಾ
- 1981 ರಂಗನಾಯಕಿ
- 1983 ಕ್ರಾಂತಿಯೋಗಿ ಬಸವಣ್ಣ
- 1985 ಮುಗಿಲ ಮಲ್ಲಿಗೆ
- 1995 ತುಂಬಿದ ಮನೆ
- 1998 ಜನುಮದ ಜೋಡಿ
- 2005 ನಮ್ಮಣ್ಣ (ಚಲನಚಿತ್ರ)
- 2014 ಗಜಕೇಸರಿ
- 2014 ಕೆಂಪೇ ಗೌಡ
- 2015 ರಣ ವಿಕ್ರಮ
- 2015 ಐರಾವತ
- 2016 ಪರಪಂಚ