ಅಮೃತ
- ಅಮರ್ದು ಇಲ್ಲಿ ಪುನರ್ನಿರ್ದೇಶಿಸುತ್ತದೆ. ಹಾಲು ಲೇಖನಕ್ಕಾಗಿ ಇಲ್ಲಿ ನೋಡಿ.
ಅಮೃತ ಎಂದರೆ ಅಮರತ್ವ ಎಂದು ಅರ್ಥ. ಇದು ಗ್ರೀಕ್ ಭಾಷೆಯ "ಅಂಬ್ರೋಸಿಯ" ಎಂಬ ಶಬ್ದದಿಂದ ಉತ್ಪತ್ತಿಯಾದುದು[೧]. ಗ್ರೀಕ್ ಭಾಷೆಯಲ್ಲಿಯೂ ಇದಕ್ಕೆ ಅಮರತ್ವ ಎಂದೇ ಅರ್ಥವಿದೆ[೨].ಈ ಶಬ್ದದ ಪ್ರಥಮ ಉಲ್ಲೇಖ ಋಗ್ವೇದದಲ್ಲಿ ದೊರೆಯುತ್ತದೆ.ಇದು ದೇವತೆಗಳಿಗೆ ಅಮರತ್ವವನ್ನು ತಂದುಕೊಟ್ಟ ಪಾನೀಯವಾದ ಸೋಮಕ್ಕೆ ಸಮಾನಾರ್ಥಕವಾಗಿ ಉಪಯೋಗಿಸಲಾಗಿದೆ.
ಪುರಾಣಗಳಲ್ಲಿ
ಬದಲಾಯಿಸಿಅಮೃತ ದೇವದಾನವರು ಕ್ಷೀರಸಮುದ್ರವನ್ನು ಮಥಿಸಿದಾಗ ಲಕ್ಷ್ಮಿ, ಚಂದ್ರ, ಐರಾವತ, ಉಚ್ಚೈಃಶ್ರವಸ್, ಹಾಲಾಹಲ ಮುಂತಾದುವುಗಳ ಜೊತೆಗೆ ಉದ್ಭವಿಸಿದುದು[೩]. ಚಂದ್ರ ಅಮೃತಭರಿತ ಎಂದು ಹಿಂದೂಗಳ ನಂಬಿಕೆ. ಕದ್ರುವಿನಿಂದ ತನ್ನ ತಾಯಿಯನ್ನು ಮುಕ್ತಗೊಳಿಸುವುದಕ್ಕಾಗಿ ಗರುಡ ಇದನ್ನು ದೇವಲೋಕದಿಂದ ಅಪಹರಿಸಿದ. ಶ್ರೀ ಕೃಷ್ಣನೂ ಇದನ್ನು ಉದಂಕ ಮಹರ್ಷಿಯ ತೃಪ್ತ್ಯರ್ಥವಾಗಿ ತರಿಸಿಕೊಟ್ಟ. ಇದನ್ನು ಕುಡಿದವರು ಮರಣವನ್ನು ಗೆಲ್ಲಬಲ್ಲರೆಂದೂ ಇದು ಸ್ವರ್ಗದಲ್ಲಿನ ದೇವತೆಗಳ ಪಾನೀಯವೆಂದೂ ನಂಬಿಕೆ.
ಉಲ್ಲೇಖಗಳು
ಬದಲಾಯಿಸಿ- ↑ Walter W. Skeat, Etymological English Dictionary
- ↑ "Ambrosia" in Chambers's Encyclopædia. London: George Newnes, 1961, Vol. 1, p. 315.
- ↑ Gopal, Madan (1990). K.S. Gautam (ed.). India through the ages. Publication Division, Ministry of Information and Broadcasting, Government of India. p. 66.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Ayurvedic Rasayana - Amrit Archived 2008-05-31 ವೇಬ್ಯಾಕ್ ಮೆಷಿನ್ ನಲ್ಲಿ.
- Immortal Boons of Amrit and Five Kakars Archived 2012-02-22 ವೇಬ್ಯಾಕ್ ಮೆಷಿನ್ ನಲ್ಲಿ.
- Depictions in stone at Angkor Wat and Angkor Thom (Cambodia) of how the gods dredged amrit from the bottom of the ocean
- http://earthrites.org/magazine_article_crowley.htm Archived 2011-01-10 ವೇಬ್ಯಾಕ್ ಮೆಷಿನ್ ನಲ್ಲಿ.
- http://www.20kweb.com/etymology_dictionary_A/origin_of_the_word_ambrosia.htm Archived 2011-07-07 ವೇಬ್ಯಾಕ್ ಮೆಷಿನ್ ನಲ್ಲಿ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: