ಹಾಲಾಹಲ ಅಥವಾ ಕಾಲಕೂಟವು (ಅಕ್ಷರಶಃ 'ಕಪ್ಪು ರಾಶಿ' ಅಥವಾ 'ಸಮಯದ ಒಗಟು'[]) (ಹಿಂದೂ ಪುರಾಣದ ಪ್ರಕಾರ) ದೇವತೆಗಳು ಮತ್ತು ಅಸುರರು ಅಮರತ್ವದ ಪಾನೀಯವಾದ ಅಮೃತವನ್ನು ಪಡೆಯಲು ಸಮುದ್ರ ಮಂಥನ ಮಾಡಿದಾಗ ಸೃಷ್ಟಿಯಾದ ಒಂದು ವಿಷದ ಹೆಸರು.

ಈ ಕಾರ್ಯದಲ್ಲಿ ಹದಿನಾಲ್ಕು ವಿಭಿನ್ನ ರತ್ನಗಳನ್ನು ಪಡೆಯಲಾಯಿತು, ಮತ್ತು ಅಸುರರು ಅವರಿಗೆ ಮೋಸಮಾಡಲು ಪ್ರಯತ್ನಿಸಿದ ನಂತರ ಇವು ಬಹುತೇಕವಾಗಿ ದೇವತೆಗಳು ಕೈ ಸೇರಿದವು. ಆದರೆ ಅಮೃತ ರೂಪಗೊಳ್ಳುವುದಕ್ಕೆ ಮುಂಚೆ, ಹಾಲಾಹಲವು ಉತ್ಪತ್ತಿಯಾಯಿತು ಮತ್ತು ಎರಡೂ ಪಕ್ಷಗಳಿಗೆ ಗಾಯಮಾಡಲು ಆರಂಭಿಸಿತು. ವಿಷವು ಹೊರಸೂಸಿದ ಮಾರಕ ಧೂಮವನ್ನು ಯಾರೂ ಕೂಡ ಸಹಿಸಲಾಗದ್ದರಿಂದ, ದೇವತೆಗಳು ಮತ್ತು ಅಸುರರು ಇಬ್ಬರೂ ಉಸಿರುಗಟ್ಟುವಿಕೆಯಿಂದ ಕುಸಿದು ಬೀಳುವುದು ಆರಂಭವಾಯಿತು. ಸಹಾಯಕ್ಕಾಗಿ ಅವರು ಬ್ರಹ್ಮನ ಬಳಿ ಓಡಿದರು, ಬ್ರಹ್ಮನು ಅವರನ್ನು ವಿಷ್ಣುವಿನ ಬಳಿ ಕಳಿಸಿದನು. ವಿಷ್ಣುವು ನಿರಾಕರಿಸಿ ಕೇವಲ ಶಿವನು ಮಾತ್ರ ಅವರಿಗೆ ಸಹಾಯ ಮಾಡಬಲ್ಲನು ಎಂದು ಸಲಹೆ ನೀಡಿದನು. ಹಾಗಾಗಿ ಎರಡೂ ಪಕ್ಷಗಳು ಕೈಲಾಸಪರ್ವತಕ್ಕೆ ಹೋಗಿ ಸಹಾಯಮಾಡುವಂತೆ ಶಿವನನ್ನು ಪ್ರಾರ್ಥಿಸಿದರು. ಶಿವನು ವಿಷವನ್ನು ಸೇವಿಸಲು ಆಯ್ಕೆಮಾಡಿಕೊಂಡನು ಮತ್ತು ಹಾಗಾಗಿ ಅದನ್ನು ಕುಡಿದನು. ಅವನ ಪತ್ನಿಯಾದ ಪಾರ್ವತಿಯು ಗಾಬರಿಗೊಂಡು ವಿಷವನ್ನು ನಿಲ್ಲಿಸುವ ಸಲುವಾಗಿ ತನ್ನ ಪತಿಯ ಕತ್ತನ್ನು ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದಳು. ಹಾಗಾಗಿ ಅವನಿಗೆ ವಿಷಕಂಠ ಎಂಬ ಹೆಸರು ಬಂದಿತು. ಪಾರ್ವತಿಯ ರೂಪವಾದ ಮಹಾವಿದ್ಯೆ ತಾರಾಳು ನಂತರ ಶಿವನನ್ನು ರಕ್ಷಿಸಿದಳು. ವಿಷವು ಅವನ ಗಂಟಲನ್ನು ನೀಲಿಗೊಳಿಸಿತು; ಹಾಗಾಗಿ ಅವನನ್ನು ನೀಲಕಂಠ ಎಂದೂ ಕರೆಯಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
"https://kn.wikipedia.org/w/index.php?title=ಹಾಲಾಹಲ&oldid=887664" ಇಂದ ಪಡೆಯಲ್ಪಟ್ಟಿದೆ