ಅಸುರ

ಪೌರಾಣಿಕ ಜೀವಿಗಳು, ದೇವತೆ-ದೇವತೆಗಳು, ಭಾರತೀಯ ಧರ್ಮಗಳಲ್ಲಿ ರಾಕ್ಷಸರು

ಅಸುರರು ಅಧಿಕಾರಕ್ಕಾಗಿ ಹೆಚ್ಚು ದಯಾಳು ದೇವರೊಡನೆ (ಸುರರು ಎಂದೂ ಕರೆಯಲಾಗುತ್ತದೆ) ಸ್ಪರ್ಧಿಸುವ ಭಾರತೀಯ ಪಠ್ಯಗಳಲ್ಲಿನ ಪೌರಾಣಿಕ ಜೀವಿಗಳು.[] ಭಾರತೀಯ ಪಠ್ಯಗಳಲ್ಲಿ ಅಸುರರನ್ನು ಒಳ್ಳೆ ಅಥವಾ ಕೆಟ್ಟ ಗುಣಗಳಿರುವ ಬಲಿಷ್ಠ ಅತಿಮಾನುಷ ದೇವಮಾನವರು ಅಥವಾ ರಾಕ್ಷಸರು ಎಂದು ವರ್ಣಿಸಲಾಗಿದೆ. ಒಳ್ಳೆ ಅಸುರರನ್ನು ಆದಿತ್ಯರು ಎಂದು ಕರೆಯಲಾಗುತ್ತದೆ ಮತ್ತು ಇವರ ಮುಖಂಡ ವರುಣ, ದುಷ್ಟ ಅಸುರರನ್ನು ದಾನವರು ಎಂದು ಕರೆಯಲಾಗುತ್ತದೆ ಮತ್ತು ಇವರ ಮುಖಂಡ ವೃತ್ರ.[] ವೈದಿಕ ಪಠ್ಯಗಳ ಅತ್ಯಂತ ಮುಂಚಿನ ಘಟಕಗಳಲ್ಲಿ ಅಗ್ನಿ, ಇಂದ್ರ ಮತ್ತು ಇತರ ದೇವತೆಗಳನ್ನೂ ಅಸುರರು ಎಂದು ಕರೆಯಲಾಗಿದೆ, ಅವರು ತಮ್ಮ ಆಯಾ ಕ್ಷೇತ್ರಗಳು, ಜ್ಞಾನ ಮತ್ತು ಸಾಮರ್ಥ್ಯಗಳ ಒಡೆಯರು ಎಂಬ ಅರ್ಥದಲ್ಲಿ. ನಂತರದ ವೈದಿಕ ಮತ್ತು ವೈದಿಕೋತ್ತರ ಪಠ್ಯಗಳಲ್ಲಿ, ದಯಾಳು ದೇವತೆಗಳನ್ನು ದೇವ ಎಂದು, ದುಷ್ಟ ಅಸುರರು ಈ ದೇವರೊಡನೆ ಸ್ಪರ್ಧಿಸುತ್ತಾರೆ ಮತ್ತು ಇವರನ್ನು "ದೇವತೆಗಳ ಶತ್ರುಗಳು" ಅಥವಾ ರಾಕ್ಷಸರು ಎಂದು ಪರಿಗಣಿಸಲಾಗುತ್ತದೆ.

ಅಸುರರು ದೇವತೆಗಳು, ಯಕ್ಷರು (ನಿಸರ್ಗಾತ್ಮಗಳು), ರಾಕ್ಷಸರ (ಪ್ರೇತಗಳು, ದೈತ್ಯರು) ಜೊತೆಗೆ ಭಾರತೀಯ ಪುರಾಣಗಳ ಭಾಗವಾಗಿದ್ದಾರೆ. ಅಸುರರು ಹಿಂದೂ ಧರ್ಮದಲ್ಲಿನ ಅನೇಕ ವಿಶ್ವವಿಜ್ಞಾನ ಸಂಬಂಧಿತ ಸಿದ್ಧಾಂತಗಳ ಪೈಕಿ ಒಂದರಲ್ಲಿ ಚಿತ್ರಿಸಲ್ಪಟ್ಟಿದ್ದಾರೆ.

ಕೆಲವು ಸಂದರ್ಭಗಳಲ್ಲಿ ದಾಸ ಶಬ್ದವನ್ನು ಸಂಸ್ಕೃತ ಶಬ್ದಗಳಾದ ದಸ್ಯು ಮತ್ತು ಅಸುರದೊಂದಿಗೆ ಪರಸ್ಪರ ಬದಲಾಯಿಸಬಹುದು. ಇವೆರಡೂ ಶಬ್ದಗಳನ್ನು ಇತರ ಭಾಷೆಗಳಲ್ಲಿ "ರಾಕ್ಷಸ", "ಹಾನಿಕಾರಕ ಅಲೌಕಿಕ ಶಕ್ತಿ", "ಸೇವಕ", "ಗುಲಾಮ" ಅಥವಾ "ಅನಾಗರಿಕ"ಕ್ಕೆ ಸಮಾನವಾದ ಶಬ್ದಗಳಾಗಿ ಅನುವಾದಿಸಲಾಗಿದೆ, ಶಬ್ದವನ್ನು ಬಳಸಿದ ಸಂದರ್ಭವನ್ನು ಅವಲಂಬಿಸಿ.

ಅಸುರರು ಮತ್ತು ದೇವತೆಗಳ ನಡುವಿನ ಹಗೆತನವು ಹಿಂದೂ ಧರ್ಮದಲ್ಲಿ ವ್ಯಾಪಕ ದಂತಕಥೆಗಳು, ಕಥೆಗಳು ಮತ್ತು ಸಾಹಿತ್ಯದ ಮೂಲವಾಗಿದೆ; ಆದರೆ, ಅನೇಕ ಪಠ್ಯಗಳು ಅವರಿಬ್ಬರ ಹಗೆತನವನ್ನು ತಟಸ್ಥ ಪದಗಳಲ್ಲಿ ಮತ್ತು ಸ್ಪಷ್ಟ ನೈತಿಕ ಅರ್ಥಗಳು ಅಥವಾ ಖಂಡನೆಯಿಲ್ಲದಂತೆ ಚರ್ಚಿಸುತ್ತವೆ. ಈ ಕಥೆಗಳಲ್ಲಿ ಕೆಲವು ಪ್ರಮುಖ ಹಿಂದೂ ಮಹಾಕಾವ್ಯಗಳು ಮತ್ತು ವಾರ್ಷಿಕ ಹಬ್ಬಗಳ ಹಿಂದಿನ ಕಲ್ಪಿತ ಕಥೆಗಳಿಗೆ ಆಧಾರಗಳಾಗಿವೆ, ಉದಾಹರಣೆಗೆ ರಾಮಾಯಣದಲ್ಲಿ ಅಸುರನಾದ ರಾವಣ ಮತ್ತು ದೇವನಾದ ರಾಮನ ಕಥೆ ಮತ್ತು ಅಸುರ ಹಿರಣ್ಯಕಶಿಪು ಮತ್ತು ನರಸಿಂಹನಾಗಿ ವಿಷ್ಣುವಿನ ದಂತಕಥೆ. ಇದರಲ್ಲಿ ಎರಡನೇ ಕಥೆಯನ್ನು ಹಿಂದೂ ಹಬ್ಬವಾದ ಹೋಳಿಯೊಂದಿಗೆ ಸಂಬಂಧಿಸಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Wash Edward Hale (1999), Ásura in Early Vedic Religion, Motilal Barnarsidass, ISBN 978-8120800618, pages 2-6
  2. Wash Edward Hale (1999), Ásura in Early Vedic Religion, Motilal Barnarsidass, ISBN 978-8120800618, page 4
"https://kn.wikipedia.org/w/index.php?title=ಅಸುರ&oldid=780308" ಇಂದ ಪಡೆಯಲ್ಪಟ್ಟಿದೆ