ಭಾರತೀಯ ಚಿತ್ರರಂಗ ಕಂಡ ಉತ್ತಮ ಪ್ರತಿಭೆಗಳಲ್ಲಿ ರೇಖಾ ಒಬ್ಬರು. ಎಂತಹ ಕನಿಷ್ಠ ಪಾತ್ರವೇ ಇರಲಿ ತಮ್ಮನ್ನು ತಾವೇ ಅರ್ಪಿಸಿಕೊಂಡಂತೆ ಅಭಿನಯಿಸುವ ಅಪೂರ್ವ ನಿಷ್ಟೆಯ ಕಲಾವಿದೆ. ಅವರು ಜನಿಸಿದ್ದು ಅಕ್ಟೋಬರ್ 10, 1954ರ ವರ್ಷದಲ್ಲಿ.

ರೇಖಾ

ರೇಖಾ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಭಾನುರೇಖಾ ಗಣೇಶನ್
(೧೯೫೪-೧೦-೧೦)೧೦ ಅಕ್ಟೋಬರ್ ೧೯೫೪
ಚೆನ್ನೈ, ತಮಿಳುನಾಡು, ಇಂಡಿಯಾ
ವೃತ್ತಿ ನಟಿ
ವರ್ಷಗಳು ಸಕ್ರಿಯ 1966 – present
ಪತಿ/ಪತ್ನಿ ಮುಖೇಶ್ ಅಗರ್‌ವಾಲ್ (1990 - 1991 his death)

ತಮಿಳು ಚಿತ್ರರಂಗದ ಜೆಮಿನಿ ಗಣೇಶನ್ ಮತ್ತು ತೆಲುಗು ಚಿತ್ರರಂಗದ ಪುಷ್ಪವಲ್ಲಿ ಅವರಿಗೆ ಜನಿಸಿದ ರೇಖಾ, ತನಗೆ ಜನ್ಮ ಕೊಟ್ಟವ ತನ್ನನ್ನು ಮಗಳು ಎಂದು ಒಪ್ಪದ ಮಾನಸಿಕ ಬಳಲಿಕೆಯಲ್ಲಿ ಬೆಳೆದು ಬಂದವರು[೧]. ಮತ್ತೊಂದು ರೀತಿಯಲ್ಲಿ ಅವರು, ತಮ್ಮ ಬದುಕಿನ ಸಂಬಂಧಗಳನ್ನೂ, ತಮ್ಮೊಳಗೇ ಇರಿಸಿಕೊಳ್ಳಲೂ ಆಗದೆ ಹೊರಗೆ ಬಿಡಲೂ ಆಗದಂತಹ ಗೊಂದಲದಲ್ಲೇ ಬದುಕನ್ನು ನಡೆಸಿಕೊಂಡು ಬರಬೇಕಾಯಿತು.

ಚಿಕ್ಕವಯಸ್ಸಿನಲ್ಲೇ ತೆಲುಗು ಚಿತ್ರವೊಂದಕ್ಕೆ ಬಣ್ಣ ಹಚ್ಚಿದ ರೇಖಾ ಮುಂದೆ ನಾಯಕ ನಟಿಯಾಗಿದ್ದು ‘ಗೋವಾದಲ್ಲಿ ಸಿ.ಐ.ಡಿ 999’ ಎಂಬ ರಾಜ್ ಕುಮಾರ್ ಅವರ ಜೊತೆಗಿನ ಕನ್ನಡ ಚಿತ್ರದಲ್ಲಿ. ಎಪ್ಪತ್ತರ ದಶಕದ ವರೆಗೆ ಹಲವು ಚಿತ್ರಗಳಲ್ಲಿ ಗ್ಲಾಮರ್ ಗೊಂಬೆಯಾಗಿ ನಟಿಸಿದ ರೇಖಾ, ಮುಂದೆ ಮೂಡಿಬಂದ ಹಲವಾರು ಪ್ರಸಿದ್ಧ ಚಿತ್ರಗಳಲ್ಲಿನ ತಮ್ಮ ಶ್ರೇಷ್ಠ ಅಭಿವ್ಯಕ್ತಿಯಿಂದ ಜನಮನವನ್ನು ಸೂರೆಗೊಂಡರು.

ಹೃಷೀಕೇಶ್ ಮುಖರ್ಜಿಯವರ ‘ಖೂಬ್ ಸೂರತ್’, ‘ಮುಖ್ಖದ್ದರ್ ಕಾ ಸಿಕಂದರ್’, ‘ಖೂನ್ ಭರಿ ಮಾಂಗ್’, ‘ಖಿಲಾಡಿಯೋಂ ಕಾ ಖಿಲಾಡಿ’ ಅವರಿಗೆ ಪ್ರತಿಷ್ಠಿತ ಫಿಲಂ ಫೇರ್ ಪ್ರಶಸ್ತಿಗಳನ್ನು ತಂದುಕೊಟ್ಟರೆ, ‘ಉಮ್ರಾವ್ ಜಾನ್’ ಚಿತ್ರದ ಶ್ರೇಷ್ಠ ಅಭಿನಯ ಅವರಿಗೆ ರಾಷ್ಟ್ರೀಯ ಪುರಸ್ಕಾರವನ್ನು ತಂದಿತು.

ಪ್ರಶಸ್ತಿ ಪಡೆದ ಚಿತ್ರಗಳ ಆಚೆಗೆ ಕೂಡಾ ರೇಖಾ ಅವರು ‘ಘರ್’, ಶ್ಯಾಮ್ ಬೆನಗಲ್ ಅವರ ‘ಕಲಿಯುಗ್’, ಗೋವಿಂದ ನಿಹಲಾನಿ ಅವರ ‘ವಿಜೇತಾ’, ಗಿರೀಶ್ ಕಾರ್ನಾಡರ ‘ಉತ್ಸವ್’, ಗುಲ್ಜಾರ್ ಅವರ ‘ಇಜಾಸತ್’ ಮುಂತಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರು.

ಸುಮಾರು 180 ಚಿತ್ರಗಳಲ್ಲಿ ನಟಿಸಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ನೆಲೆಸಿರುವ ರೇಖಾ, ಇಂದಿನ ದಿನಗಳಲ್ಲೂ ಚಲನಚಿತ್ರ ಸಮಾರಂಭಗಳಲ್ಲಿ ಲಕ್ಷಣವಾಗಿ ಸೀರೆಯುಟ್ಟು ಸುಕೋಮಲವಾದ ಅಂಗ ಸೌಷ್ಟವದಿಂದ ಗಮನ ಸೆಳೆಯುತ್ತಾರೆ. ‘ಯೋಗ’ದ ಅಭ್ಯಾಸವನ್ನು ತಮ್ಮ ಸತತ ಸಂಗಾತಿಯಾಗಿಸಿಕೊಂಡಿರುವ ರೇಖಾ ಅವರ ‘ಯೋಗ ಮತ್ತು ದೇಹವೆಂಬ ದೇಗುಲ’ ಪುಸ್ತಕ ಸಹಾ ಜನಪ್ರಿಯಗೊಂಡಿದೆ.

ಚಿತ್ರರಂಗವೆಂಬ ಬೂದಿಮುಚ್ಚಿದ ಕೆಂಡದಲ್ಲಿ ಬದುಕು ಎಷ್ಟರಮಟ್ಟಿಗೆ ವ್ಯಥಿತವಾದದ್ದು, ಅದೂ ನಟಿಯರಿಗೆ ಎಂಬುದು ಚರಿತ್ರೆಯಲ್ಲಿ ಸಾಕಷ್ಟು ಕಾಣಬರುತ್ತದೆ. ಈ ವಿರುದ್ಧದ ಅಲೆಗಳ ಮಧ್ಯದಲ್ಲಿ ತನ್ನನ್ನು ಸರಿದೂಗಿಸಿಕೊಂಡು ಸಾಕಷ್ಟು ಸಾಧನೆಯನ್ನೂ ಮಾಡಿದ ರೇಖಾ ಅವರು ಭಾರತೀಯ ಚಿತ್ರರಂಗದಲ್ಲಿ ಹಲವು ನಿಟ್ಟಿನಲ್ಲಿ ಗಮನಾರ್ಹರು. ಅವರ ಬದುಕು ಸುಗಮವಾಗಿ ಸಾಗಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.

ರೇಖಾ ಮದ್ರಾಸ್‌ನಲ್ಲಿ ೧೦ಅಕ್ಟೋಬರ್ ೧೯೫೪ ರಂದು ತಮಿಳು ನಟ ಜೆಮಿನಿ ಗಣೇಶನ್ ಮತ್ತು ತೆಲುಗು ನಟಿ ಪುಷ್ಪವಲ್ಲಿ ದಂಪತಿಗೆ ಜನಿಸಿದರು. ರೇಖಾಗೆ ಒಬ್ಬ ಸಹೋದರಿ, ಒಬ್ಬ ಅಣ್ಣ ಒಟ್ಟಿಗೆ ಐದು ಅಕ್ಕ-ತಂಗಿಯರಿದ್ದಾರೆ. ರೇಖಾ ತಮಿಳುನಾಡಿನ ಯೆರ್ಕಾಡ್ನಲ್ಲಿ ಬಾಲಕಿಯರ ಸೇಕ್ರೆಡ್ ಹಾರ್ಟ್ ಕಾನ್ವೆಂಟ್ಗೆ ಹಾಜರಾದರು. 13 ನೇ ವಯಸ್ಸಿನಲ್ಲಿ, ಅವರು ನಟನಾ ವೃತ್ತಿಯನ್ನು ಪ್ರಾರಂಭಿಸಲು ಶಾಲೆಯನ್ನು ತೊರೆದರು. ಈ ದಿಕ್ಕಿನಲ್ಲಿ ಇವರು ಯಾವುದೇ ವೈಯಕ್ತಿಕ ಆಕಾಂಕ್ಷೆಗಳನ್ನು ಹೊಂದಿರಲಿಲ್ಲ, ಆದರೆ ಅವರ ಕುಟುಂಬದ ತೊಂದರೆಗೀಡಾದ ಆರ್ಥಿಕ ಸ್ಥಿತಿ ಅವರನ್ನು ಹಾಗೆ ಮಾಡಲು ಒತ್ತಾಯಿಸಿತು.[೨][೩]

ವೈಯಕ್ತಿಕ ಜೀವನ

ಬದಲಾಯಿಸಿ

೧೯೯೦ ರಲ್ಲಿ ರೇಖಾ ದೆಹಲಿ ಮೂಲದ ಕೈಗಾರಿಕೋದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು. ರೇಖಾ ಪ್ರಸ್ತುತ ಮುಂಬೈನ ತನ್ನ ಬಾಂದ್ರಾ ಮನೆಯಲ್ಲಿ ವಾಸಿಸುತ್ತಿದ್ದಾರೆ.[೪]

ಚಲನಚಿತ್ರಗಳು

ಬದಲಾಯಿಸಿ
 • ೨೦೧೮ - ಯಮ್ಲಾ ಪಗ್ಲಾ ದಿವಾನಾ ಫಿರ್ ಸೇ .
 • ೨೦೧೫ - ಶಮಿತಾಬ್ .
 • ೨೦೧೪ - ಸೂಪರ್ ನಾನಿ .
 • ೨೦೧೩ - ಕ್ರಿಷ್ ೩ .[೫][೬]
 • ೨೦೧೦ - ಸದಿಯಾ .
 • ೨೦೦೭ - ಯಾತ್ರ , ಓಂ ಶಾಂತಿ ಓಂ .[೭][೮]
 • ೨೦೦೬ - ಕ್ರಿಷ್ , ಕುಡಿಯೋನ್ ಕಾ ಹೈ ಜಮಾನಾ .
 • ೨೦೦೫ - ಪರಿಣಿತಾ ಬಚ್ಕೆ ರೆಹೆನಾರೆ ಬಾಬಾ .

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
 1. Chopra, Sonia (8 October 2007). "Rekha's journey: The 'ageless' diva over the years". Sify. Retrieved 2008-04-19.
 2. https://www.leoranews.com/profiles/bollywood-actress-profile/rekha/ Leora News. Retrieved 1 September 2018
 3. https://www.iloveindia.com/indian-heroes/rekha.html
 4. DelhiSeptember 4, India Today Web Desk New; October 10, India Today Web Desk New; Ist, India Today Web Desk New. "Smooch, Sindoor and Suicide: Rekha biography gives shocking details on the star's life". India Today (in ಇಂಗ್ಲಿಷ್). Retrieved 19 March 2020.{{cite news}}: CS1 maint: numeric names: authors list (link)
 5. "Rekha is not part of Krrish 2 - Indian Express". archive.indianexpress.com. Retrieved 19 March 2020.
 6. [deccanchronicle.com/131029/entertainment-bollywood/gallery/krrish-series-koimil-gaya-krrish-krrish-3 "The Krrish Series: From 'Koi...Mil Gaya', 'Krrish' to 'Krrish 3'"]. Deccan Chronicle (in ಇಂಗ್ಲಿಷ್). 29 October 2013. Retrieved 19 March 2020. {{cite news}}: Check |url= value (help)
 7. "Ageless diva Rekha tostun in OM SHANTI OM". India Forums (in ಇಂಗ್ಲಿಷ್). Retrieved 19 March 2020.
 8. "Rekha: 7 things only the diva can carry off". The Times of India. Retrieved 19 March 2020.
"https://kn.wikipedia.org/w/index.php?title=ರೇಖಾ&oldid=1045759" ಇಂದ ಪಡೆಯಲ್ಪಟ್ಟಿದೆ