ಚುನಾವಣೆ
ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ.ಇದರಲ್ಲಿ,ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು[೧] ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ.[೧] ಚುನಾವಣೆಗಳು-ಶಾಸಕಾಂಗಳಲ್ಲಿ,ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ. ಈ ಚುನಾವಣೆ ಪ್ರಕ್ರಿಯೆಯನ್ನು,ಖಾಸಗಿ ಮತ್ತು ವ್ಯಾಪಾರದ ಸಂಘಟನೆಗಳಲ್ಲಿ, ಕ್ಲಬ್‌ಗಳಿಂದ ಹಿಡಿದು ಸ್ವಯಂ ಸೇವಾ ಸಂಘಟನೆ ಮತ್ತು ಪಾಲಿಕೆಗಳವರೆಗೂ ಬಳಸಲಾಗುತ್ತದೆ.
ಆಧುನಿಕ ಪ್ರಜಾತಂತ್ರದಲ್ಲಿ ಈ ಚುನಾವಣಾ ಪ್ರಕ್ರಿಯೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆಗೆ ಅಸ್ತ್ರವಾಗಿ ವಿಶ್ವವ್ಯಾಪಿ ಬಳಸಲಾಗುತ್ತದೆ. ಆದರೆ ಪುರಾತನ ಅಥೆನ್ಸರಲ್ಲಿ ರೂಢಿಯಲ್ಲಿರುವ ಮೂಲಮಾದರಿಯ ಪ್ರಜಾಪ್ರಭುತ್ವಕ್ಕಿಂತ ಭಿನ್ನವಾಗಿದೆ. ಚುನಾವಣೆಗಳನ್ನು ಕೆಲಜನರ ಗುಂಪಿನ ವ್ಯವಸ್ಥೆಯೆಂದು ಪರಿಗಣಿಸಲಾಗುತ್ತಿತ್ತು ಮತ್ತು ಬಹುತೇಖ ರಾಜಕೀಯ ಕಛೇರಿಗಳಲ್ಲಿ ಪದಾಧಿಕಾರಿಗಳನ್ನು ವಿಂಗಡಿಸುವ ರೀತಿಯಲ್ಲಿ,ವಿತರಣೆ ಎಂದೂ ಕರೆಯುಬಹುದಾದ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತಿತ್ತು.
ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವುದೆಂದರೆ, ಕ್ರಮಬದ್ಧ ಚುನಾವಣೆ ವ್ವವಸ್ಥೆ ಎಲ್ಲಿ ಇಲ್ಲವೋ ಮತ್ತು ಪ್ರಚಲಿತ ಚುನಾವಣೆ ಎಲ್ಲಿ ಸುಧಾರಿಸಬೇಕೋ ಅಂಥ ಕಡೆಗಳಲ್ಲಿ ಕ್ರಮಬದ್ಧ ಚುನಾವಣಾ ವ್ಯವಸ್ಥೆಯನ್ನು ಅಳವಡಿಸುವುದು. ಸೆಫಾಲಜಿ ಅಂದರೆ ಚುನಾವಣಾ ಫಲಿತಾಂಶಗಳನ್ನು ಮತ್ತು ಅದಕ್ಕೆ ಸಂಬಂದ್ಧ ಪಟ್ಟ ಅಂಕಿ ಅಂಶಗಳನ್ನು ಅಧ್ಯಯನ ಮಾಡುವುದು.(ವಿಶೇಷವಾಗಿ ಇವುಗಳ ಆಧಾರದ ಮೇಲೆ ಚುನಾವಣಾ ಫಲಿತಾಂಶಗಳ ಭವಿಷ್ಯ ನುಡಿಯುವುದು).
ಚುನಾಯಿಸು ವುದೆಂದರೆ,"ಆಯ್ಕೆ ಮಾಡುವುದು ಅಥವಾ ನಿರ್ಧರಿಸುವುದು[೨]",ಮತ್ತು ಕೆಲವು ಸಾರಿ ಬ್ಯಾಲೆಟ್ ಅನ್ನು ಬೇರೆ ರೀತಿಯಲ್ಲಿ ಕರೆಯುವುದೂ ಇದೆ, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸನಲ್ಲಿ ಚುನಾವಣೆಯನ್ನು ರೆಫೆರಂಡಂ ಅಂತ ಉಲ್ಲೇಖಿಸುವುದೂ ಇದೆ.
ಸಿದ್ಧಾಂತ
ಬದಲಾಯಿಸಿಮೊಂಟೆಸ್ಕ್ಯೂಯಿ ಅವರ ಪುಸ್ತಕ ’ದಿ ಸ್ಪಿರಿಟ್ ಆಫ್ ಲಾಸ್’,ಬುಕ್ II, ಚಾಪ್ಟರ್ 2ರಲ್ಲಿ ಹೇಳಿರುವ ಪ್ರಕಾರ, ಗಣತಂತ್ರ ಅಥವಾ ಪ್ರಜಾತಂತ್ರ ಚುನಾವಣೆಗಳಲ್ಲಿ, ಮತದಾರರರು ದೇಶದ ಆಡಳಿತಗಾರರಾಗುವುದು ಮತ್ತು ಸರಕಾರದ ಆಧೀನರಾಗುವುದು, ಇವೆರಡರಲ್ಲಿ ಪರ್ಯಾಯವಾಗುತ್ತಿರಬೇಕು. ಮತ ಚಲಾಯಿಸುವ ಕ್ರಿಯೆಯಲ್ಲಿ,ಜನರು ಆಯ್ಕೆ ಮಾಡಲು ಬಯಸುವ ಸರಕಾರ "ಬರುವುದರಲ್ಲಿ", ಅವರು ಸಾರ್ವಭೌಮತನದ ಶಕ್ತಿಯನ್ನು ಪಡೆದಿರುತ್ತಾರೆ,"ಒಡೆಯ"ರಂತೆ ವರ್ತಿಸುತ್ತಾರೆ.
ಇತಿಹಾಸ
ಬದಲಾಯಿಸಿಪ್ರಾಚೀನ ಗ್ರೀಸ್ಮತ್ತು ಪ್ರಾಚೀನ ರೋಮ್‌ನಲ್ಲಿ ಮತ್ತು ಮಧ್ಯಕಾಲೀನ ಯುಗದ ಪೂರ್ತಿ ಹೋಲಿ ರೋಮನ್ ಎಂಪರರ್ ಹಾಗು ದಿ ಪೋಪ್[೧][1][1] ಅವರಂಥ ಆಳುವವರನ್ನು ಆಯ್ಕೆ ಮಾಡಲು ಚುನಾವಣೆಗಳನ್ನು ಬಳಸಲಾಗುತ್ತಿತ್ತು. 17ನೇ ಶತಮಾನದ ಆರಂಭದವರೆಗೂ, ಉತ್ತರ ಅಮೇರಿಕಾದಲ್ಲಿ ಮತ್ತು ಯುರೋಪಿ[೧] ನಲ್ಲಿ ಪ್ರತಿನಿಧಿ ಸರ್ಕಾರದ ಆಲೋಚನೆ ಆಗುವವರೆಗೂ ಸರಕಾರಿ ಅಧಿಕಾರಿಗಳನ್ನೊಳಗೊಂಡ ಇಂದಿನಂತಹ ಆಧುನಿಕ ಸಾರ್ವಜನಿಕ "ಚುನಾವಣೆಗಳ" ಆಲೋಚನೆ ಮೂಡಿರಲಿಲ್ಲ.
ಚುನಾವಣೆಯ ಇತಿಹಾಸದಲ್ಲಿ ಮತಾಧಿಕಾರ,ವಿಶೇಷವಾಗಿ ಅಲ್ಪಸಂಖ್ಯಾತರ ಗುಂಪಿಗೆ ಮತಾಧಿಕಾರ,ಎನ್ನುವುದೇ ಪ್ರಬಲವಾಗಿರುತ್ತದೆ. ಉತ್ತರ ಅಮೇರಿಕ ಮತ್ತು ಯುರೋಪಿನಲ್ಲಿ ಪುರುಷರ ಸಾಂಸ್ಕೃತಿಕ ಗುಂಪೇ ಪ್ರಬಲ. ಪದೇ ಪದೇ ಅದೇ ಗುಂಪು, ಪ್ರಬಲ ಮತದಾರರ ಸಮುದಾಯವಾಗಿತ್ತು ಮತ್ತು ಇದು ಇನ್ನು ಅನೇಕ ರಾಷ್ಟ್ರಗಳಲ್ಲಿ[೧] ಯೂ ಮುಂದುವರೆದಿತ್ತು. ಜಮೀನ್ದಾರರು ಅಥವಾ ಆಳುವ ವರ್ಗದ ಪುರುಷರೇ[೧]ಗ್ರೇಟ್ ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸನಲ್ಲಿ ನಡೆಯುತ್ತಿದ್ದ ಚುನಾವಣೆಗಳಲ್ಲಿ ಪ್ರಬಲವಾಗಿರುತ್ತಿದ್ದರು. ಆದಾಗ್ಯೂ, 1920ರಷ್ಟು ಹೊತ್ತಿಗೆ ಎಲ್ಲಾ ಪಶ್ಚಿಮ ಯುರೋಪು ಮತ್ತು ಉತ್ತರ ಅಮೇರಿಕಾದ ಪ್ರಜಾಪ್ರಭುತ್ವಗಳಲ್ಲಿ ವಿಶ್ವವ್ಯಾಪಿಯಾಗಿ ಪುರುಷ ಮತಾಧಿಕಾರವೇ ಇದ್ದರೂ ಅನೇಕ ರಾಷ್ಟ್ರಗಳು ಮಹಿಳಾ ಮತಾಧಿಕಾರವನ್ನು ಪರಿಗಣಿಸಲು ಪ್ರಾರಂಭಿಸಿತು.[೧] ಅದಾಗ್ಯೂ,ವಿಶ್ವವ್ಯಾಪಿಯಾಗಿ ಪುರುಷ ಮತಾಧಿಕಾರ ಅಧಿಕೃತ ಆದೇಶವಾಗಿದ್ದರೂ ರಾಜಕೀಯ ಪ್ರತಿಬಂಧಕಗಳು ಅನೇಕಸಲ ನೇರವಾದ ಚುನಾವಣೆಗೆ ಎಡೆಯಾಗುತ್ತಿರಲಿಲ್ಲ (ನೋಡಿ ಸಿವಿಲ್ ರೈಟ್ಸ್ ಮುವ್‌ಮೆಂಟ್ಸ್).[೧]
ಕಾರ್ಯಕ್ರಮಗಳು
ಬದಲಾಯಿಸಿಯಾರು ಆಯ್ಕೆಯಾಗುತ್ತಾರೆ
ಬದಲಾಯಿಸಿಸರಕಾರದ ಪದವಿಗಳಿಗೆ ನಡೆಯುವ ಚುನಾವಣೆಗಳು ಆ ಘಟನೆಗಳನ್ನಾಧರಿಸಿದ ಸ್ಥಳಗಳ ಮೇಲೆ ಅವಲಂಬಿಸಿರೋದು. ನಿರ್ದಿಷ್ಟ ಸಾಮರ್ಥ್ಯ ಅಥವಾ ದಕ್ಷತೆ ಬೇಕಾಗುವ ಕೆಲವು ವಿಶೇಷ ಪದವಿಗಳಿಗೆ ಯುನೈಟೆಡ್ ಸ್ಟೇಟ್ಸ್ ಮುಂತಾದ ಪ್ರಾತಿನಿಧಿಕ ಪ್ರಜಾಪ್ರಭುತ್ವಗಳಲ್ಲಿ ಚುನಾವಣೆಗಳ ಮುಖೇನ ತುಂಬಿರುವುದಿಲ್ಲ. ಉದಾಹರಣೆಗೆ ನ್ಯಾಯಾಧೀಶರು, ಇವರಿಗೆ ಸಮ ದರ್ಶಿತ್ವವನ್ನು ಕಾಪಾಡಿಕೊಳ್ಳಲು ಸಹಾಯವಾಗಲು ಇವರನ್ನು ನೇಮಕ ಮಾಡುತ್ತಾರೆಯೆ ಹೊರತು ಚುನಾಯಿಸುವುದಿಲ್ಲ. ಈ ಪದ್ಧತಿಯಲ್ಲಿ ಕೆಲವು ವಿನಾಯಿತಿಯೂ ಇದೆ,ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೆಲವು ನ್ಯಾಯಾಧೀಶರನ್ನು ಮತ್ತು ಪ್ರಾಚೀನ ಅಥೆನ್ಸನ ಮಿಲಿಟರಿ ಜನರಲ್‌ಗಳನ್ನು ಚುನಾಯಿಸಲಾಗುತ್ತದೆ.
ಕೆಲವು ಘಟನೆಗಳಲ್ಲಿ, ಉದಾಹರಣೆಗೆ ಸೋವಿಯತ್ ಪ್ರಜಾತಂತ್ರದಲ್ಲಿ, ಮತದಾರನಿಗೂ ಮತ್ತು ಚುನಾಯಿತನಿಗೂ ಮಧ್ಯೆ ಮಧ್ಯಂತರ ಸಾಲಿನ ಮತದಾರ ಇರಬಹುದು. ಆದಾಗ್ಯೂ, ಎಷ್ಟೋ ಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಸುತ್ತು ಬಳಸಿನ ಹಂತ ಒಂದು ಔಪಚಾರಿಕತೆ ಅಷ್ಟೇ ಹೊರತು ಬೇರೇನೂ ಅಲ್ಲ. ಉದಾಹರಣೆಗೆ,ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷರನ್ನು ಎಲೆಕ್ಟ್ರಾಲ್ ಕಾಲೇಜ್ (ಅಂದರೆ ಆಯ್ಕೆ ಮಾಡುವ ಕರ್ತವ್ಯದ ಗುಂಪು) ಆಯ್ಕೆ ಮಾಡುತ್ತದೆ ಮತ್ತು ವೆಸ್ಟ್ ಮಿನಿಸ್ಟರ್ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿಯನ್ನು ಔಪಚಾರಿಕವಾಗಿ ಆಯ್ಕೆ ಮಾಡುವುದು ಹೆಡ್ ಆಫ್ ಸ್ಟೇಟ್ (ವಾಸ್ತವಾಗಿ ಶಾಸಕಾಂಗ ಅಥವಾ ಅದರ ಪಕ್ಷ).
ಚುನಾವಣೆಯ ಮಾದರಿಗಳು
ಬದಲಾಯಿಸಿಅನೇಕ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಗಳಲ್ಲಿ,ಸಾರ್ವಜನಿಕ ಆಡಳಿತದ ಹಲವು ಹಂತಗಳಿಗೆ ಅಥವಾ ಭೌಗೋಳಿಕ ವ್ಯಾಪ್ತಿಗೆ ತಾಳೆಯಾಗುವಂತೆ ವಿವಿಧ ಶೈಲಿಯ ಚುನಾವಣೆಗಳಿವೆ. ಕೆಲವು ಸಾಮಾನ್ಯ ಶೈಲಿಯ ಚುನಾವಣೆ ಎಂದರೆ:
ರೆಫೆರೆಂಡಂ ಅಂದರೆ ಜನಾಭಿಮತ ಅಥವಾ ಮತದಾರರ ನೇರ ತೀರ್ಪು(ಬಹುವಚನ-ಜನಾಭಿಮತಗಳು ಅಂದರೆ ರೆಫರೆಂಡಂಸ್ ಅಥವಾ ರೆಫರೆಂಡಾ , ಮತದಾರರ ನೇರ ತೀರ್ಪುಗಳು),ಚುನಾವಣೆಯಲ್ಲಿ ಅದು ಮತದಾರರಿಗೆ ಪ್ರಜಾಭುತ್ವದ ಅಸ್ತ್ರ.ಅದರಲ್ಲಿ ನಿರ್ದಿಷ್ಟ ಯೋಜನೆಗೆ,ಕಾನೂನು ಅಥವಾ ನಿಯಮಕ್ಕೆ ಪರ ಅಥವಾ ವಿರೋಧ-ಸಾರ್ವತ್ರಿಕವಾಗಿಯಾದರೂ ಆಗಬಹುದು ಅಥವಾ ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕಾದರೂ ಆಗಬಹುದು. ಜನಾಭಿಮತಗಳು ಚುನಾವಣೆಯ ಬ್ಯಾಲೆಟ್‌ಗಳಿಗಾದರೂ ಸೇರಿಸಬಹುದು ಅಥವಾ ಪ್ರತ್ಯೇಕವಾಗಿಯಾದರೂ ಇಡಬಹುದು ಸಾಮಾನ್ಯವಾಗಿ ಅದು ಸಂವಿಧಾನದ ಮೇರೆಗೆ ಕಡ್ದಾಯವೋ ಅಥವಾ ಚರ್ಚೆಯ ಮೂಲಕ ಪೂರೈಸ ಬಲ್ಲವೋ ಆಗಿರುತ್ತವೆ. ಸಾಮಾನ್ಯವಾಗಿ ಸರ್ಕಾರ ಶಾಸಕಾಂಗಳ ಮುಖಾಂತರ ಜನಾಭಿಮತಗಳನ್ನು ಕೇಳುತ್ತದೆ,ಆದರೂ ಅನೇಕ ಪ್ರಜಾಪ್ರಭುತ್ವಗಳಲ್ಲಿ ನಾಗರೀಕರು ಜನಾಭಿಮತದ ಅಹವಾಲನ್ನು ನೇರವಾಗಿ ಕೊಡುವುದಕ್ಕೆ ಆಸ್ಪದವಿರುತ್ತದೆ,ಅದನ್ನು ತೊಡಗುವಿಕೆ ಗಳು ಎಂದು ಕರೆಯಲಾಗುತ್ತದೆ.
[[ಸ್ವಿಟ್ಜರ್‌ಲ್ಯಾಂಡ್‌ನಲ್ಲಿದ್ದಂತೆ ಜನಾಭಿಮತಗಳು ನಿರ್ದಿಷ್ಟವಾಗಿ,ನೇರ ಪ್ರಜಾಪ್ರಭುತ್ವ|ಸ್ವಿಟ್ಜರ್‌ಲ್ಯಾಂಡ್‌ನಲ್ಲಿದ್ದಂತೆ ಜನಾಭಿಮತಗಳು ನಿರ್ದಿಷ್ಟವಾಗಿ,ನೇರ ಪ್ರಜಾಪ್ರಭುತ್ವ]]ದಲ್ಲಿ ಪ್ರಚಲಿತವೋ ಮತ್ತು ಪ್ರಮುಖವೋ ಆಗಿವೆ. ಏನೇ ಆದರೂ ಈ ಮೂಲ ಸ್ವಿಸ್ ವ್ಯವಸ್ಥೆ ಇನ್ನೂ ಪ್ರತಿನಿಧಿಗಳ ಜೊತೆಗೇ ಕಾರ್ಯನಿರತವಾಗಿದೆ. ಅನೇಕ ನೇರ ರೀತಿಯ ಪ್ರಜಾಪ್ರಭುತ್ವದಲ್ಲಿ ಯಾರೊಬ್ಬರೂ ಯಾವುದಕ್ಕಾದರೂ ಮತ ಚಲಾಯಿಸ ಬಹುದು. ಜನಾಭಿಮತಕ್ಕೆ ಇದು ಹತ್ತಿರವಾಗಿರುತ್ತದೆ ಮತ್ತು ಒಮ್ಮತಾಭಿಪ್ರಾಯದ ನಿರ್ಧಾರವನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಗತಕಾಲದ ನೆನಪು ತರುವಂತಹ ಪುರಾತನ ಗ್ರೀಕ ವ್ಯವಸ್ಥೆಯಲ್ಲಿ,ಯಾರೊಬ್ಬರೂ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಅದು ಒಮ್ಮತಕ್ಕೆ ಬರುವವರೆಗೂ ಚರ್ಚಿಸಬಹುದಾಗಿತ್ತು. ಒಮ್ಮತ ಅಗತ್ಯವಿದೆ ಅಂದರೆ ಆ ಚರ್ಚೆ ದೀರ್ಘಾವಧಿವರೆಗೂ ನಡೆಯಬಹುದಾಗಿತ್ತು. ಫಲಿತಾಂಶವೇನೆಂದರೆ ಯಾರಿಗೆ ಅದರ ಬಗ್ಗೆ ಅಸಲಿ ಆಸಕ್ತಿಯಿದೆಯೋ ಅವರು ಪಾಲ್ಗೊಳ್ಳುತ್ತಿದ್ದರು ಮತ್ತು ಮತವೂ ಅದರ ಪ್ರಕಾರವೇ ಲಭ್ಯವಾಗುತ್ತಿತ್ತು. ಈ ವ್ಯವಸ್ಥೆಯಲ್ಲಿ ವಯಸ್ಸಿನ ಮಿತಿ ಇರಬಾರದು ಕಾರಣ ಮಕ್ಕಳಿಗೆ ಸಾಮಾನ್ಯವಾಗಿ ಬೇಸರ ಬಂದು ಬಿಡುತ್ತದೆ. ಏನೇ ಆದರೂ ಈ ವ್ಯವಸ್ಥೆ ಕಾರ್ಯ ಸಾಧ್ಯವಾಗಬೇಕಾದರೆ ಅದು ಅಲ್ಪ ಪ್ರಮಾಣದಲ್ಲಿ ಮಾತ್ರ ಜಾರಿಗೆ ತಂದಿರಬೇಕು.
ಲಕ್ಷಣಗಳು
ಬದಲಾಯಿಸಿಮತದಾನದ ಹಕ್ಕು
ಬದಲಾಯಿಸಿಯಾರು ಮತ ಹಾಕಬೇಕು ಎನ್ನುವ ಪ್ರಶ್ನೆ ಚುನಾವಣೆಯಲ್ಲಿ ಕೇಂದ್ರೀಕೃತ ವಿವಾದ. ಸಾಮಾನ್ಯವಾಗಿ ಎಲ್ಲಾ ಮತದಾರರು ಒಟ್ಟು ಜನಸಂಖ್ಯೆಯಯಲ್ಲಿ ಸೇರಿರುವುದಿಲ್ಲ; ಉದಾಹರಣೆಗೆ,ಎಷ್ಟೋ ರಾಷ್ಟ್ರಗಳಲ್ಲಿ ಮಾನಸಿಕ ಅಸಮರ್ಥರಾದವರೆಂದು ನಿರ್ಧಾರಿತವಾದವರನ್ನು ಮತದಾನದಿಂದ ನಿರ್ಬಂಧಿಸಲಾಗಿರುತ್ತದೆ ಮತ್ತು ಎಲ್ಲಾ ಆಡಳಿತ ಪರಿಧಿಯಲ್ಲಿ ನಡೆವ ಮತದಾನಕ್ಕೆ ಕನಿಷ್ಠ ವಯೋಮಿತಿ ಅಗತ್ಯವಿರುತ್ತದೆ.
ಚಾರಿತ್ರಿಕವಾಗಿ ಬೇರೆ ಗುಂಪಿನ ಜನರನ್ನು ಕೂಡ ಮತದಾನದಿಂದ ದೂರವಿರಿಸಲಾಗಿರುತ್ತದೆ. ನಿದರ್ಶನಕ್ಕಾಗಿ, ಪುರಾತನ ಅಥೆನ್ಸ್‌ನವರು ಮಹಿಳೆಯರಿಗೆ,ವಿದೇಶಿಯರಿಗೆ,ಗುಲಾಮರಿಗೆ ಮತ ಚಲಾಯಿಸುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ ಮತ್ತು ಮೂಲ ಯುನೈಟೆಡ್ ಸ್ಟೇಟ್ಸ್ ಸಂವಿಧಾನದಲ್ಲಿ ಮತದಾನದ ಹಕ್ಕಿನ ವಿಷಯವನ್ನು ರಾಜ್ಯಗಳಿಗೆ ಬಿಟ್ಟು ಬಿಡಲಾಗುತ್ತಿತ್ತು; ಸಾಮಾನ್ಯವಾಗಿ ಬರೀ ಬಿಳಿ ಪುರುಷ ಆಸ್ತಿದಾರರಿಗೆ ಮಾತ್ರ ಮತದಾನಕ್ಕೆ ಅವಕಾಶವಿರುತ್ತಿತ್ತು. ಚುನಾವಣೆಯ ಚರಿತ್ರೆಗಳಲ್ಲಿ ನಿರ್ಬಂಧಿತ ಗುಂಪುಗಳಿಗೆ ಮತದಾನದ ಹಕ್ಕನ್ನು ಕೊಡಿಸಲು ಕೈಗೊಂಡ ಶ್ರಮದ ಬಗ್ಗೆಯೇ ಸಾಕಷ್ಟು ಇರುತ್ತದೆ. ಮಹಿಳಾ ಮತದಾನದ ಹಕ್ಕಿನ ಹೋರಾಟವು ಮಹಿಳೆಯರಿಗೆ ಮತದಾನದ ಹಕ್ಕನ್ನು ಎಷ್ಟೋ ರಾಷ್ಟ್ರಗಳಲ್ಲಿ ಕೊಡಿಸಿತು,ಮತ್ತು ನಿರ್ಭೀತವಾಗಿ ಮತ ಚಲಾಯಿಸುವ ಹಕ್ಕನ್ನು ಕೊಡಿಸುವುದೇ ಅಮೇರಿಕನ್ ಸಿವಿಲ್ ರೈಟ್ಸ್ ಮುವ್‌ಮೆಂಟ್‌ನವರ ಮುಖ್ಯ ಗುರಿಯಾಗಿತ್ತು. ಮತದಾನದ ಹಕ್ಕನ್ನು ಇನ್ನಿತರ ನಿರ್ಬಂಧಿತ ಗುಂಪುಗಳಾದ (ತಪ್ಪಿತಸ್ಥರೆಂದು ನಿರ್ಧಾರಿತವಾದ ಮಹಾ ಉಗ್ರರು, ಅಲ್ಪ ಸಂಖ್ಯಾತ ಗುಂಪಿನ ಸದಸ್ಯರು,ಮತ್ತು ಆರ್ಥಿಕ ಬಲಾಹೀನರು) ಇವರುಗಳಿಗೆ ಮತದಾನದ ಹಕ್ಕನ್ನು ಕೊಡಿಸುವುದನ್ನೇ ಮುಖ್ಯ ಗುರಿಯನ್ನಾಗಿ ಇಟ್ಟುಕೊಂಡು ಮುಂದುವರೆಸಿದವರು ಮತದಾನದ ಹಕ್ಕಿನ ವಕೀಲರು.
ಮತದಾನದ ಹಕ್ಕು ಪ್ರಾತಿನಿಧಿಕವಾಗಿ ದೇಶದ ನಾಗರೀಕರಿಗೆ ಮಾತ್ರ. ಜತೆಗೆ ಕಾಲಮಿತಿಯನ್ನು ಹೊರಿಸಬಹುದು : ಉದಾಹರಣೆಗೆ,ಕುವೈತಿನಲ್ಲಿ 1920ರಿಂದ ನಾಗರೀಕರಾದವರು ಅಥವಾ ಅವರ ಸಂತತಿಯವರಿಗೆ ಮತದಾನದ ಅವಕಾಶವನ್ನು ಕೊಡಲಾಗಿದೆ,ಆದರೆ ಈ ಷರತನ್ನು ಬಹುತೇಖ ನಾಗರೀಕರು ಪೂರಯಿಸುವುದಿಲ್ಲ. ಏನೇ ಆಗಲಿ,ಯಾರಾದರೂ ಯುರೋಪಿಯನ್ ಯೂನಿಯನ್‌ನ ಪ್ರಜೆಯಾಗಿದ್ದರೆ, ಪಾಲಿಕೆ ಚುನಾವಣೆಯಲ್ಲಿ, ಆ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರೆ ಮತದಾನ ಮಾಡಬಹುದಾಗಿದೆ;ದೇಶದಲ್ಲಿ ವಾಸಿಸುವ ಬಗ್ಗೆ ರಾಷ್ಟ್ರೀಯತೆಯನ್ನು ಹೊಂದಿರಬೇಕಾಗಿಲ್ಲ.
ಕೆಲವು ರಾಷ್ಟ್ರಗಳಲ್ಲಿ, ಮತ ಚಲಾಯಿಸುವುದು ಕಾನೂನಿನ ಅಗತ್ಯ;ಒಬ್ಬ ಅರ್ಹ ಮತದಾರ ಮತ ಚಲಾವಣೆ ಮಾಡದಿದ್ದಲ್ಲಿ ಅವನಿಗೆ ಅಥವಾ ಅವಳಿಗೆ ಶಿಕ್ಷಾರೂಪವಾಗಿ ಸಣ್ಣ ದಂಡವನ್ನು ವಿಧಿಸಲಾಗುತ್ತದೆ.
ನಾಮ ನಿರ್ದೇಶನ
ಬದಲಾಯಿಸಿಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ,ರಾಜಕೀಯ ಅಧಿಕಾರಕ್ಕೆ ನಾಮ ನಿರ್ದೇಶನವನ್ನು ಮಾಡಿದಾಗ ಅದನ್ನು ನಿರ್ಣಯಿಸುವುದಕ್ಕೇ ಒಂದು ಕಾರ್ಯ ಪದ್ಧತಿ ಅಗತ್ಯವಿರುತ್ತದೆ. ಹೆಚ್ಚು ಸಂಗತಿಗಳಲ್ಲಿ, ನಾಮ ನಿರ್ದೇಶನಗಳನ್ನು ಮಾಡಲು ವ್ಯವಸ್ಥಿತ ರಾಜಕೀಯ ಪಕ್ಷಗಳಲ್ಲಿ,[೩] ಪೂರ್ವಭಾವಿ ಆಯ್ಕೆಗಳನ್ನು ಮಧ್ಯಸ್ಥಿಕೆ ಮುಖಾಂತರ ಮಾಡಲಾಗುತ್ತದೆ.
ನಾಮ ನಿರ್ದೇಶನಕ್ಕೆ ಸಂಬಂಧಿಸಿದ್ದಂತೆ ನಿಷ್ಪಕ್ಷಪಾತ ವ್ಯವಸ್ಥೆಗಳು ಪಕ್ಷಪಾತ ವ್ಯವಸ್ಥೆಗಳಿಂದ ಭಿನ್ನವಾಗಿರುತ್ತದೆ. ನೇರ ಪ್ರಜಾಪ್ರಭುತ್ವದಲ್ಲಿ ನಿಷ್ಪಕ್ಷಪಾತ ಪ್ರಜಾಪ್ರಭುತ್ವವೂ ಒಂದು ಶೈಲಿ, ಇದರಲ್ಲಿ ಯಾರಾದರೂ ಅರ್ಹ ವ್ಯಕ್ತಿಯನ್ನು ನಾಮಕರಣ ಮಾಡ ಬಹುದಾಗಿದೆ. ಕೆಲವು ನಿಷ್ಪಕ್ಷಪಾತ ಪ್ರಾತಿನಿಧಿಕ ವ್ಯವಸ್ಥೆಗಳಲ್ಲಿ ನಾಮಕರಣಗಳನ್ನು (ಅಥವಾ ಅಭಿಯಾನ,ಚುನಾವಣಾ ಪ್ರಚಾರ ಇತ್ಯಾದಿ)ಗಳನ್ನು ಮಾಡುವುದಿಲ್ಲ,ಇಲ್ಲಿ ಮತದಾರರು ತಮ್ಮ ಇಚ್ಚಾನುಸಾರ ಯಾರನ್ನಾದರೂ ಆಯ್ಕೆ ಮಾಡಬಹುದಾಗಿದೆ ಆದರೆ ಕಾನೂನು ವ್ಯಾಪ್ತಿಗೆ ಬರುವ ಕೆಲವು ಕನಿಷ್ಠ ವಯೋಮಾನದಂಥ ವಿಚಾರಗಳನ್ನು ಹೊರತು ಪಡಿಸಬೇಕಷ್ಟೇ. ಚುನಾಯಿತ ಪ್ರತಿನಿಧಿಗಳಿಗೆ ಅರ್ಹವಾದ ಅಭ್ಯರ್ಥಿಗಳ ಬಗ್ಗೆ ನೇರ ಮಾಹಿತಿ ದೊರೆಯುವುದು ಇದಕ್ಕಿಂತಲ್ಲೂ ದೊಡ್ಡದಾದ ಭೌಗೋಳಿಕ ಮಟ್ಟದಲ್ಲಿನ ಚುನಾವಣೆಗಳ ಮೂಲಕ ಸಾಧ್ಯವಿದ್ದರೂ,ಎಲ್ಲಾ ಅರ್ಹ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಅರಿತುಕೊಳ್ಳುವುದು ಅಗತ್ಯವೂ ಅಲ್ಲ,ಸಾಧ್ಯವೂ ಅಲ್ಲ.
ಮತಗಳನ್ನು ತಾಳೆ ಮಾಡುವುದು ಮೊದಲ ಹಂತ.ಅದಕ್ಕಾಗಿ ಮತಗಳ ಎಣಿಕೆ ಮತ್ತು ಬ್ಯಾಲೆಟ್ ಶೈಲಿಗಳನ್ನು ಬಳಸಲಾಗುತ್ತದೆ. ಮತದಾನದ ವ್ಯವಸ್ಥೆ, ಫಲಿತಾಂಶವನ್ನು ಆನಂತರ ತಾಳೆಯಾಧಾರದ ಮೇಲೆ ನಿರ್ಧರಿಸಲ್ಪಡುತ್ತದೆ. ಹೆಚ್ಚಿನ ವ್ಯವಸ್ಥೆಗಳು ಅನುಪಾತ ಅಥವಾ ಬಹುಮತ ಎಂದು ವರ್ಗೀಕರಿಸಲಾಗಿದೆ. ಮುಂಚಿನದರಲ್ಲಿ ಪಕ್ಷ-ಪಟ್ಟಿಯ ಅನುಪಾತ ಪ್ರಾತಿನಿಧ್ಯ ಮತ್ತು ಹೆಚ್ಚುವರಿ ಸದಸ್ಯ ವ್ಯವಸ್ಥೆಗಳಿರುತ್ತವೆ. ಇತ್ತೀಚಿನದರಲ್ಲಿ ಫಸ್ಟ್ ಪಾಸ್ಟ್ ದಿ ಪೋಸ್ಟ್ (FPP) (ತುಲನಾತ್ಮಕ ಬಹುಮತ) ಮತ್ತು ಸ್ಪಷ್ಟ ಬಹುಮತವಿರುತ್ತದೆ. ಅನೇಕ ರಾಷ್ಟ್ರಗಳಲ್ಲಿ ಮತದಾರ ವ್ಯವಸ್ಥೆಯ ಸುಧಾರಣಾ ಚಳುವಳಿಗಳು ಬೆಳೆದಿವೆ,ಅವುಗಳು ಸೂಚಿಸುವ ವ್ಯವಸ್ಥೆಗಳು-ಅಪ್ರೂವಲ್ ವೋಟಿಂಗ್,ಸಿಂಗಲ್ ಟ್ರಾನ್ಸ್ಫರಬಲ್ ವೋಟಿಂಗ್,ಇನ್ಸ್‌ಟಂಟ್ ರನ್‌ಆಫ್ ವೋಟಿಂಗ್ ಅಥವಾ ಕಾಂಡೋರ್ಕಟ್ ಮೆಥೆಡ್; ಈ ವ್ಯವಸ್ಥೆಗಳು ಕೆಲ ದೇಶಗಳಲ್ಲಿ ಅಂದರೆ ಎಲ್ಲಿ ಕಡಿಮೆ ಚುನಾವಣೆಗಳು ನಡೆಯುತ್ತಿವೆಯೋ ಮತ್ತು ಇನ್ನು ಸಾಂಪ್ರದಾಯಿಕ ರೀತಿಯ ಮತ ಎಣಿಕೆ ಬಳಸಲಾಗುತ್ತಿದೆಯೋ ಅಲ್ಲಿ ಜನಪ್ರಿಯತಯನ್ನು ಗಳಿಸಿಕೊಳ್ಳುತ್ತಿದೆ.
ಪಾರದರ್ಶಕತೆ ಮತ್ತು ಅಕೌಂಟಬಿಲಿಟಿ ಅಥವಾ ಸಮರ್ಥಿಸಬೇಕಾದ ಕರ್ತವ್ಯ ಇವು ಪ್ರಜಾಪ್ರಭುತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ,ಮತದಾನ ಮಾಡುವ ಕ್ರಿಯೆ ಮತ್ತು ಮತದಾರನ ಬ್ಯಾಲೆಟ್‌ಗಳ ತಿರುಳು ಮಾತ್ರ ಇದಕ್ಕೆ ಮುಖ್ಯವಾದ ಅಪವಾದ. ಗೌಪ್ಯ ಬ್ಯಾಲೆಟ್‌ಗಳು ತುಲನಾತ್ಮಕವಾಗಿ ಆಧುನಿಕ ಬೆಳವಣಿಗೆಯೇ ಆದರೆ ಅದು ಈಗ ನಿಷ್ಪಕ್ಷವಾದ ಚುನಾವಣೆಗಳಲ್ಲಿ ಕ್ಲಿಷ್ಟವಾದುದ್ದೆಂದು ಪರಿಗಣಿಸಲಾಗಿದೆ ಭಯೋತ್ಪಾದನೆಯ ಕಾರಣದಿಂದಾಗಿ ಅದು ಮಿತಿಗೊಂಡಿದೆ.
ಅನುಸೂಚಿತಗೊಳ್ಳಿಸುವುದು ಅಥವಾ ನಿಗದಿಪಡಿಸುವಿಕೆ
ಬದಲಾಯಿಸಿಪ್ರಜಾಪ್ರಭುತ್ವದ ಸ್ವಭಾವದಲ್ಲಿ, ಚುನಾಯಿತ ಅಧಿಕಾ ಜನರಿಗೆ ಉತ್ತರಿಸುವ ಜವಾಬ್ದಾರಿ ಇರುತ್ತದೆ ಮತ್ತು ಅಧಿಕಾರದಲ್ಲಿ ಮುಂದುವರಿಯಲು ಮತದಾರರ ಬಳಿ ನಿಗದಿತ ಅವಧಿಗೆ ತೆರಳಿ ಮತ್ತೊಮ್ಮೆ ಜನಾದೇಶವನ್ನು ಪಡೆಯಬೇಕಾಗುತ್ತದೆ. ಈ ಕಾರಣಕ್ಕೆ ಪ್ರಜಾಪ್ರಭುತ್ವದ ಸಂವಿಧಾನಗಳು ಚುನಾವಣೆಗಳನ್ನು ನಡೆಸಲು ನಿಗದಿತ ಕಾಲಾವಧಿಯನ್ನು ಸೂಚಿಸಿರುತ್ತದೆ. ಯುನೈಟೆಡ್ ಸ್ಟೇಟ್ಸ್‌ನ ಅನೇಕ ರಾಜ್ಯಗಳಲ್ಲಿ ಚುನಾವಣೆಗಳನ್ನು ಪ್ರತಿ ಮೂರು ಮತ್ತು ಆರು ವರ್ಷಗಳಿಗೆ ನಡೆಸಲಾಗುತ್ತದೆ.ಇದರಲ್ಲಿ ಕೆಲವು ಅಪವಾದಗಳುಂಟು U.S.ನ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಇದಕ್ಕೊಂದು ಉದಾಹರಣೆ, ಇಲ್ಲಿ ಚುನಾವಣೆಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುವುದು. ಇದರಲ್ಲಿ ವಿವಿಧ ರೀತಿಯ ನಿಗಧಿತಗಳುಂಟು,ಉದಾಹರಣೆಗೆ ಅಧ್ಯಕ್ಷರುಗಳದ್ದು : ಐರ್ಲೆಂಡ್‌ನ ಅಧ್ಯಕ್ಷರನ್ನು ಪ್ರತಿ ಏಳು ವರ್ಷಗಳಿಗೆ ಚುನಾಯಿಸಲಾಗುವುದು, ಫಿನ್‌ಲೆಂಡ್‌ನ ಅಧ್ಯಕ್ಷರನ್ನು ಪ್ರತಿ ಆರು ವರ್ಷಗಳಿಗೆ ಚುನಾಯಿಸಲಾಗುವುದು, ಫ್ರಾನ್ಸ್‌ನ ಅಧ್ಯಕ್ಷರನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಚುನಾಯಿಸಲಾಗುವುದು, ರಶಿಯಾದ ಅಧ್ಯಕ್ಷರನ್ನು ಮತ್ತು ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷರನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾಯಿಸಲಾಗುವುದು.
ಮೊದಲೇ ಖಚಿತಪಡಿಸಿದ ಅಥವಾ ನಿಗದಿಪಡಿಸಿದ ಚುನಾವಣೆಯ ದಿನಾಂಕಗಳಲ್ಲಿ ಇರುವ ಅನುಕೂಲತೆಗಳೆಂದರೆ ನ್ಯಾಯಬದ್ಧ ಮತ್ತು ಫಲಿತಾಂಶಗಳನ್ನು ನಿರೀಕ್ಷಿಸಬಹುದಾದದ್ದು. ಹಾಗಿದ್ದರೂ,ಇವುಗಳು ದೊಡ್ಡ ಮಟ್ಟದ ಚುನಾವಣೆ ಅಭಿಯಾನಗಳಿಗೆ ಎಡೆ ಮಾಡಿಕೊಡುತ್ತದೆ ಮತ್ತು ವಿಧಾನ ಮಂಡಲ ವಿಸರ್ಜನೆ (ಪಾರ್ಲಿಮೆಂಟರಿ ವ್ಯವಸ್ಥೆ) ವಿಚಾರದಲ್ಲಿ ಚುನಾವಣೆ ದಿನಾಂಕಗಳನ್ನು ನಿಗದಿಪಡಿಸುವುದು ಕಷ್ಟಸಾಧ್ಯವೇ ಸರಿ,(ಉದಾಹರಣೆಗೆ ಯುದ್ಧದಂಥ ಸಂದರ್ಭದಲ್ಲಿ ವಿಸರ್ಜನೆ ಸಾಧ್ಯವಾಗದು) ಇತರ ರಾಜ್ಯಗಳು(ಉದಾಹರಣೆಗೆ ಯುನೈಟೆಡ್ ಕಿಂಗ್‌ಡಂ) ಗರಿಷ್ಠ ಕಾಲಾವಧಿಯನ್ನು ನಿಗದಿ ಪಡಿಸಿರುತ್ತದೆ, ಮತ್ತು ಕಾರ್ಯಕಾರಿಯು ಚುನಾವಣೆಗೆ ಯಾವ ಕಾಲಮಿತಿಯೊಳಗೆ ನಡೆಯಬೇಕೆಂದು ನಿರ್ಧರಿಸುತ್ತದೆ. ಅಭ್ಯಾಸದಲ್ಲಿ,ಇದರ್ಥ ಸರಕಾರವು ಅಧಿಕಾರದಲ್ಲಿ ಪೂರ್ಣಾವಧಿವರೆಗೂ ಇರಬೇಕೆನ್ನುವುದು.ಚುನಾವಣೆಯ ದಿನಾಂಕವನ್ನು ತನಗೆ ಅನುಕೂಲವಾಗುವಂತೆ ಸರ್ಕಾರವು ಲೆಕ್ಕಿಸುತ್ತದೆ (ಅವಿಶ್ವಾಸ ಸೂಚನೆಯಂಥ ವಿಶೇಷಣ ನಡೆಯದಿದ್ದರೆ) ಈ ಲೆಕ್ಕಾಚಾರವು ಹಲವು ಮಾರ್ಪಡಿಸಬಹುದಾದ ಕಾರಣಗಳ ಮೇಲೆ ಅವಲಂಬಿಸಿರುತ್ತದೆ.ಮತಾಭಿಪ್ರಾಯ ಮತ್ತು ತನ್ನ ಬಹುಮತದ ಗಾತ್ರವೂ ಇಂಥವುಗಳಲ್ಲಿ ಒಂದು.
ಸಾಮಾನ್ಯವಾಗಿ ಚುನಾವಣೆಗಳನ್ನು ಒಂದೇ ದಿನದಲ್ಲಿ ನಡೆಸಲಾಗುತ್ತದೆ. ಮುಂಗಡ ಚುನಾವಣೆ ಮತ್ತು ಗೈರು ಹಾಜರಿನ ಮತಗಳಿಗಾಗಿ ಹೊಂದಾಣಿಕೆ ವೇಳಾಪಟ್ಟಿ ಇರುತ್ತದೆ. ಯುರೋಪಿನಲ್ಲಿ, ಗಣನೀಯ ಪ್ರಮಾಣದ ಮತಗಳನ್ನು ಮುಂಗಡವಾಗಿ ಚಲಾಯಿಸಲಾಗುತ್ತದೆ.
ಚುನಾವಣೆ ಅಭಿಯಾನಗಳು
ಬದಲಾಯಿಸಿಚುನಾವಣೆಗಳು ಘೋಷಣೆ ಆದ ತಕ್ಷಣ ರಾಜಕಾರಣಿಗಳು ಮತ್ತವರ ಬೆಂಬಲಿಗರು ಸ್ಪರ್ಧಿಸುವುದಾಗಿ ನೇರವಾಗಿ ಹೇಳಿ ಮತದಾರರ ಮೇಲೆ ಪ್ರಭಾವದ ನೀತಿಯನ್ನು ಬೀರುವುದಕ್ಕೆ ಪ್ರಯತ್ನಿಸಿ ಇದನ್ನು ಚುನಾವಣಾ ಅಭಿಯಾನ ಎನುತ್ತಾರೆ. ಅಭಿಯಾನದಲ್ಲಿ ಬೆಂಬಲಿಗರನ್ನು ಸಂಘಟಿಸಬಹುದು ಅಥವಾ ಬಿಡಿ ಬಿಡಿಯಾಗಿ ಸೇರಿಸಿಕೊಳ್ಳಬಹುದು ಮತ್ತು ಅಭಿಯಾನದ ಜಾಹೀರಾತನ್ನು ಅಡಿಗಡಿಗೆ ಉಪಯೋಗಿಸಬಹುದು ರಾಜಕೀಯ ವಿಜ್ಞಾನಿಗಳು, ರಾಜಕೀಯ ಮುನ್ಸೂಚನೆಯ ಕ್ರಮಗಳಿಂದ ಚುನಾವಣೆಯ ಫಲಿತಾಂಶವನ್ನು ಭವಿಷ್ಯ ನುಡಿಯುವುದು ಸಾಮಾನ್ಯ.
ಚುನಾವಣೆಯ ತೊಂದರೆಗಳು
ಬದಲಾಯಿಸಿದುರ್ಬಲವಾದ ರೂಲ್ ಆಫ್ ಲಾ ಅಥವಾ ಕಾನೂನಿನ ನಿಯಮ ಇರುವ ಅನೇಕ ದೇಶಗಳಲ್ಲಿ ಚುನಾವಣೆಗಳು ಅಂತಾರಾಷ್ಟ್ರೀಯ ಮಟ್ಟವನ್ನು ಮುಟ್ಟದಿರಲು ಕಾರಣ, ಅಧಿಕಾರಸ್ಥ ಸರಕಾರದ ಹಸ್ತಕ್ಷೇಪದಿಂದಾಗಿ ಚುನಾವಣೆಯನ್ನು "ಸ್ವಚ್ಚ ಹಾಗೂ ನಿರ್ಮಲವಾಗಿ" ನಡೆಸಲು ಆಗುವುದಿಲ್ಲ. ಜನಾಭಿಪ್ರಾಯ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಬಹುದು ಎಂದು ಕಂಡು ಬಂದರೆ ಸರ್ವಾಧಿಕಾರಿಗಳು ಕಾರ್ಯಾಂಗಗಳಾದ (ಪೊಲೀಸ್, ಮಾರ್ಶಿಯಲ್ ಲಾ, ಸೆನ್ಸಾರ್‌ಶಿಪ್, ಚುನಾವಣಾ ಪ್ರಕ್ರಿಯೆಯನ್ನ ದೈಹಿಕವಾಗಿ ತಮ್ಮ ನಿಲುವಿಗೆ ಬದಲಾಯಿಸುವುದು,ಇತ್ಯಾದಿ)ಗಳನ್ನು ತಾವಿನ್ನೂ ಅಧಿಕಾರದಲ್ಲೇ ಉಳಿಯಲು ಉಪಯೋಗಿಸಿಕೊಳ್ಳುತ್ತಾರೆ. ವಿಧಾನ ಮಂಡಲದ ಒಂದು ಗುಂಪಿನ ಸದಸ್ಯರು ತಮ್ಮ ಬಹುಮತ ಅಥವಾ ಶ್ರೇಷ್ಠ ಬಹುಮತದ ಅಧಿಕಾರವನ್ನು ಉಪಯೋಗಿಸಿ (ಕ್ರಿಮಿನಲ್ ಕಾನೂನಿನ ನಿಯಮಗಳನ್ನು ಜಾರಿ ಮಾಡುವುದು,ಚುನಾವಣಾ ಪ್ರಕ್ರಿಯೆಯನ್ನ ನಿರೂಪಿಸುವುದು,ಅರ್ಹತೆ ಮತ್ತು ಜಿಲ್ಲಾ ಗಡಿಗಳನ್ನು ನಿಗದಿ ಪಡಿಸುವುದೂ ಸೇರಿದಂತೆ) ಮಾಡಿ ಚುನಾವಣೆಯಲ್ಲಿ ವಿರೋಧ ಪಕ್ಷದವರಿಗೆ ಅನುಕೂಲವಾಗುವುದನ್ನು ತಪ್ಪಿಸಬಹುದಾಗಿದೆ.
ಸರ್ಕಾರೇತರಗಳೂ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಬಹುದು.ದೈಹಿಕ ಬಲದ ಮೂಲಕ,ಮಾತಿನಲ್ಲಿ ಭಯಪಡಿಸುವುದು,ಮತದಾನ ಅಥವಾ ಎಣಿಕೆಯಲ್ಲಿ ಕುಟೀಲ ತಂತ್ರ ಮಾಡುವುದು ಮಾಡಬಹುದು. ಸ್ವಚ್ಚ ಹಾಗು ನಿರ್ಮಲ ಚುನಾವಣೆಯನ್ನು ನಡೆಸುವ ಸಂಪ್ರದಾಯದ ಖ್ಯಾತಿ ಹೊಂದಿರುವ ದೇಶಗಳಲ್ಲಿ ಕುಟಿಲ ತಂತ್ರಗಳನ್ನು ಗಮನಿಸಿ ಕಡಿಮೆಗೊಳ್ಳಿಸುವುದೂ ನಿರಂತರ ನಡೆಯುವ ಕಾರ್ಯವಾಗಿದೆ. "ಸ್ವಚ್ಚ ಹಾಗು ನಿರ್ಮಲ" ಚುನಾವಣೆಗಳನ್ನು ನಡೆಸುವುದಕ್ಕೆ ಬರುವ ತೊಂದರೆಗಳು ಹಲವು ಹಂತಗಳಲ್ಲಿ ಒದಗಿ ಬರಬಹುದು:
- ಮುಕ್ತ ರಾಜಕೀಯ ಚರ್ಚೆಗಳ ಕೊರತೆ ಅಥವಾ ಮತದಾರನಿಗೆ ಮಾಹಿತಿಯಲ್ಲಿ ಕೊರತೆ. ಮತದಾರನಿಗೆ ವಿಚಾರಗಳ ಬಗ್ಗೆ ಅಥವಾ ಅಭ್ಯರ್ಥಿಯ ಬಗ್ಗೆ ಪೂರ್ಣ ಮಾಹಿತಿ ಇಲ್ಲದಿರುವುದು, ಮಾಧ್ಯಮದ ಸ್ವಾತಂತ್ಯದ ಕೊರತೆ, ಸರಕಾರ ಅಥವಾ ಕಾರ್ಪೊರೇಟ್ ವಲಯದ ಹಿಡಿತದಿಂದಾಗಿ ಮಾಧ್ಯಮದಲ್ಲಿರುವ ವಸ್ತುನಿಷ್ಠತೆಯ ಕೊರತೆ ಅಥವಾ ಸುದ್ದಿಗಾಗಿ ರಾಜಕೀಯ ಮಾಧ್ಯಮದೊಳಗೆ ಪ್ರವೇಶ ಪಡೆಯಲಾರದ ಕೊರತೆ ಇರಬಹುದು. ವಾಕ್ ಸ್ವಾತಂತ್ಯವನ್ನು ಪ್ರಭುತ್ವ ಮೊಟಕುಗೊಳಿಸಿರಬೇಕು, ಕೆಲವು ದೃಷ್ಟಿಕೋನಕ್ಕಾಗಿ ಅಥವಾ ಪ್ರಭುತ್ವದ ಪ್ರಚಾರದ ಕಾರಣಕ್ಕಾಗಿ.
- ನ್ಯಾಯವಲ್ಲದ ಕಾನೂನು ಹಸ್ತಕ್ಷೇಪಗಳು,ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಅನರ್ಹಗೊಳ್ಳಿಸುವುದು,ಚುನಾವಣೆಯ ಯಶಸ್ಸಿಗೆ ಕೈಚಳಕ ತೋರುವುದು ಇವು ಚುನಾವಣೆಯನ್ನು ನಿರ್ದಿಷ್ಟ ಅಭ್ಯರ್ಥಿಗೆ ಅಥವಾ ಗುಂಪಿಗೆ ಅನುಕೂಲವಾಗುವಂತೆ ಬದಲಾಯಿಸುವ ಕಾರ್ಯಗಳು.
- ಅಭಿಯಾನದಲ್ಲಿ ಮಧ್ಯ ಬರುವುದು. ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಬಂಧಿಸುವುದು ಅಥವಾ ಕೊಲ್ಲುವುದು,ಅಭಿಯಾನದ ಚಟುವಟಿಕೆಗಳನ್ನು (ಭಾಷಣಗಳು,ಪೋಸ್ಟ್‌ರ್‌ಗಳು,ಪ್ರಸಾರ ಮಾಡುವ ಜಾಹೀರಾತುಗಳು)ಅಡಗಿಸುವುದು,ಅಭಿಯಾನದ ಪ್ರಧಾನ ಕಾರ್ಯಾಲಯವನ್ನು ಮುಚ್ಚುವುದು,ಅಭಿಯಾನವನ್ನು ಅಪರಾಧಿಸುವುದು,ಅಭಿಯಾನದ ಕಾರ್ಯಕರ್ತರನ್ನು ಹೊಡೆಯುವುದು ಅಥವಾ ಮಾನಸಿಕ ಹಿಂಸೆಗೆ ಗುರಿಪಡಿಸುವುದು. ಮತದಾರರಿಗೆ ಅಪಾಯದ ಭಯ ಹುಟ್ಟಿಸುವುದು ಅಥವಾ ನಿಜವಾಗಿ ಹಿಂಸಾಚಾರ ಮಾಡುವುದು.
- ಚುನಾವಣಾ ಯಾಂತ್ರಿಕ ವ್ಯವಸ್ಥೆಯನ್ನು ಅಕ್ರಮವಾಗಿ ತಿದ್ದುವುದು. ಮತದಾರರಿಗೆ ಮತದಾನ ಮಾಡುವ ಕ್ರಿಯೆಯಲ್ಲಿ ತಬ್ಬಿಬ್ಬುಗೊಳಿಸುವುದು ಅಥವಾ ದಾರಿ ತಪ್ಪಿಸುವುದು,ಗೌಪ್ಯ ಬ್ಯಾಲೆಟ್‌ಗಳಿಗೆ ಭಂಗ ತರುವುದು,ಬ್ಯಾಲೆಟ್‌ಗಳನ್ನು ತುಂಬುವುದು,ಮತದಾನ ಯಂತ್ರಗಳನ್ನು ಅಕ್ರಮವಾಗಿ ತಿದ್ದುವುದು,ಅಧಿಕೃತ ಬ್ಯಾಲೆಟ್‌ಗಳನ್ನು ಹಾಳುಗೆಡುವುದು, ಮತದಾರರನ್ನು ನಿಗ್ರಹಿಸುವುದು, ಫಲಿತಾಂಶವನ್ನು ಕುಟಿಲವಾಗಿ ವರ್ಗಾಯಿಸುವುದು,ಮತದಾನದ ಸ್ಥಳಗಳಲ್ಲಿ ದೈಹಿಕವಾಗಿ ಬಲ ಪ್ರಯೋಗಿಸುವುದು ಅಥವಾ ಕೆಟ್ಟ ಮಾತುಗಳನ್ನಾಡುವುದು.
ವಿಶ್ವಾದ್ಯಂತ ಚುನಾವಣೆಗಳು
ಬದಲಾಯಿಸಿಇದನ್ನೂ ಗಮನಿಸಿ
ಬದಲಾಯಿಸಿ- ನೇಮಕಾತಿ
- ಬ್ಯಾಲೆಟ್ಗೆ ಪ್ರವೇಶ
- ಡಿಮಾರ್ಕಿ-"ಚುನಾವಣೆಯಿಲ್ಲದ ಪ್ರಜಾಪ್ರಭುತ್ವ"
- ಮತದಾರರ ಕ್ಯಾಲೆಂಡರ್
- ಚುನಾವಣೆ ಕಾನೂನು
- ಚುನಾವಣೆ ಕಸಕಡ್ಡಿ
- ಪೂರ್ತಿ ಹಲಗೆ
- ಫೆನ್ನೋಸ್ ಪ್ಯಾರಾಡಾಕ್ಸ್
- ಗರ್ರಟ್ ಚುನಾವಣೆಗಳು
- ಗೆರೊಂತೊಕ್ರಾಸಿ
- ಮೆರಿಟೋಕ್ರಾಸಿ
- ನಾಮಕರಣ ನಿಯಮಗಳು
- ಬಹುವಚನ(ರಾಜಕೀಯ ತತ್ವಜ್ಞಾನ)
- ರಾಜ್ಯಶಾಸ್ತ್ರ
- ಮತಗಟ್ಟೆ ಸ್ಟೇಷನ್
- ಹಲಗೆ
- ವಿಂಗಡಣೆ
- ದ್ವಿ ಪಕ್ಷ ಪದ್ಧತಿ
- ಮತದಾರನ ಹಾಜರಾತಿ ಸಂಖ್ಯೆ
ಬಿ
ಬದಲಾಯಿಸಿ- ↑ ೧.೦ ೧.೧ ೧.೨ ೧.೩ ೧.೪ ೧.೫ ೧.೬ ೧.೭ "ಎಲೆಕ್ಶನ್ (ಪೊಲಿಟಿಕಲ್ ಸೈನ್ಸ್)," ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕಾ ಆನ್ ಲೈನ್. ಆಕ್ಸೆಸಡ್ ಆಗಸ್ಟ್ 18, 2009
- ↑ ವಿಕ್ಶನರಿ-ಎಲೆಕ್ಟ್
- ↑ ರಿಯುವೆನ್ ಹಜನ್,'ಕ್ಯಾಂಡಿಡೇಟ್ ಸೆಲೆಕ್ಶನ್',ಇನ್ ಲಾವ್ರೆನ್ಸ್ ಲೆ ಡ್ಯೂಕ್,ರಿಚರ್ಡ್ ನೈಮಿ ಆಂಡ್ ಪಿಪ್ಪಾ ನೊರ್ರಿಸ್ (eds), ಕಂಪೇರಿಂಗ್ ಡೆಮಾಕ್ರಾಸೀಸ್ 2 ,ಸಾಗಾ ಪಬ್ಲಿಕೇಶನ್ಸ್, ಲಂಡನ್, 2002
ಗ್ರಂಥಸೂಚಿ
ಬದಲಾಯಿಸಿ- ಆರ್ರೋ,ಕೆನ್ನೆತ್ ಜೆ. 1963. ಸೋಶಿಯಲ್ ಚಾಯ್ಸ್ ಆಂಡ್ ಇಂಡಿವಿಡ್ಯುಲ್ ವ್ಯಾಲ್ಯೂಸ್. 2nd ed. ನ್ಯೂ ಹವೆನ್, ಸಿಟಿ:ಯಾಲೆ ಯುನಿವರ್ಸಿಟಿ ಪ್ರೆಸ್.
- ಬೆನಾಯ್ಟ್,ಜೀನ್-ಪೀಯ್ರೆ ಆಂಡ್ ಲೆವಿಸ್ ಎ. ಕಾರ್ನ್‌ಹೌಸರ್. 1994. "ಸೋಶಿಯಲ್ ಚಾಯ್ಸ್ ಇನ್ ಎ ರೆಪ್ರೆಸೆಂಟೇಟಿವ್ ಡೆಮಾಕ್ರಸಿ." ಅಮೇರಿಕನ್ ಪೊಲಿಟಿಕಲ್ ಸೈನ್ಸ್ ರಿವ್ಯೂ 88.1: 185-192.
- ಕೊರ್ರಾಡೋ ಮಾರಿಯಾ,ಡಕ್ಲೋನ್. 2004. US ಎಲೆಕ್ಶನ್ಸ್ ಅಂಡ್ ವಾರ್ ಆನ್ ಟೆರರಿಸಂ–ಇಂಟರ್‌ವ್ಯೂ ವಿಥ್ ಪ್ರೊಫೆಸರ್ ಮಾಸ್ಸಿಮೊ ಟಿಯೊದೊರೊ ಅನಾಲಿಸಿ ಡಿಫಿಸೋ,ಎನ್. 50
- ಫರ್ಖುಹಾರ್ಸನ್,ರಾಬಿನ್. 1969. ಎ ಥಿಯರಿ ಆಫ್ ವೋಟಿಂಗ್ ನ್ಯೂ ಹವೆನ್,ಸಿಟಿ:ಯಾಲೆ ಯುನಿವರ್ಸಿಟಿ ಪ್ರೆಸ್.
- ಮ್ಯೂಲ್ಲೆರ್,ಡೆನ್ನಿಸ್ ಸಿ.1996. ಕಾನ್ಸಿಟಿಟ್ಯೂಶನಲ್ ಡೆಮಾಕ್ರಸಿ ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್.
- ಓವೆನ್,ಬರ್ನಾರ್ಡ್,2002. "ಲಿ ಸಿಸ್ಟಮ್ ಎಲೆಕ್ಟೋರೆಲ್ ಎಟ್ ಸನ್ ಎಫೆಟ್ ಸುರ್ ಲಾ ರೆಪ್ರೆಸೆಂಟೇಶನ್ ಪಾರ್ಲೆಮೆಂಟೈರ್ ದಿಸ್ ಪಾರ್ಟಿಸ್:ಲೆ ಕಾಸ್ ಯುರೋಪೀನ್.", LGDJ;
- ರೈಕರ್,ವಿಲ್ಲಿಯಂ. 1980. ಲಿಬರಲಿಸಂ ಎಗೈನ್ಸ್‌ಟ್ ಪಾಪ್ಯುಲಿಸಂ:ಎ ಕಾನ್ ಫ್ರಾಂಟೇಷನ್ ಬಿಟ್‌ವೀನ್ ದಿ ಥೀಯರಿ ಆಫ್ ಡೆಮಾಕ್ರಸಿ ಆಂಡ್ ದಿ ಥಿಯರಿ ಆಫ್ ಸೋಶಿಯಲ್ ಚಾಯ್ಸ್. ಪ್ರಾಸ್ಪೆಟ್ ಹೈಟ್ಸ್,IL:ವೇವ್ ಲೆಂಡ್ ಪ್ರೆಸ್.
- ವೇರ್,ಅಲಾನ್. 1987. ಸಿಟಿಜನ್ಸ್,ಪಾರ್ಟೀಸ್ ಆಂಡ್ ದಿ ಸ್ಟೇಟ್ಸ್. ಪ್ರಿನ್ಸ್‌ಟನ್: ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್
ಬಾಹ್ಯ ಕೊಂಡಿಗಳು
ಬದಲಾಯಿಸಿ- ಪಾರ್ಲೈನ್ ಡಾಟಾಬೇಸ್ ಆನ್ ನ್ಯಾಷನಲ್ ಪಾರ್ಲಿಮೆಂಟ್ಸ್. ರಿಸಲ್ಟ್ಸ್ ಫಾರ್ ಆಲ್ ಪಾರ್ಲಿಮೆಂಟರಿ ಎಲೆಕ್ಶನ್ಸ್ ಸಿನ್ಸ್ 1966
- ElectionGuide.org — ವರ್ಳ್ಡ್ ವೈಡ್ ಕವರೇಜ್ ಆಫ್ ನ್ಯಾಷನಲ್-ಲೆವೆಲ್ ಎಲೆಕ್ಶನ್ಸ್
- ಪಾರ್ಟೀಸ್-ಆಂಡ್-ಎಲೆಕ್ಶನ್ಸ್.de:ಡಾಟಾಬೇಸ್ ಫಾರ್ ಆಲ್ ಯುರೋಪಿಯನ್ ಎಲೆಕ್ಶನ್ಸ್ ಸಿನ್ಸ್ 1945
- ACE ಎಲೆಕ್ಟೊರಲ್ ಕ್ನಾಲೆಡ್ಜ್ ನೆಟ್ವರ್ಕ್ —ಎಲೆಕ್ಟೊರಲ್ ಎನ್ಸೈಕ್ಲೋಪಿಡಿಯಾ ಆಂಡ್ ರೆಲೇಟೆಡ್ ರೆಸೋರ್ಸ್ಸ ಫ್ರಮ್ ಎ ಕನ್ಸಾರ್ಟಿಯಮ್ ಆಫ್ ಎಲೆಕ್ಟೊರಲ್ ಏಜೆನ್ಸೀಸ್ ಆಂಡ್ ಆರ್ಗನೈಸೇಶನ್ಸ್.
- ಅಂಗಸ್ ರೆಯ್ಡ್ ಗ್ಲೋಬಲ್ ಮಾನಿಟರ್:ಎಲೆಕ್ಶನ್ ಟ್ರಾಕರ್ Archived 2006-01-08 ವೇಬ್ಯಾಕ್ ಮೆಷಿನ್ ನಲ್ಲಿ.
- IDEA's ಟೇಬಲ್ ಆಫ್ ಎಲೆಕ್ಟೊರಲ್ ಸಿಸ್ಟಮ್ಸ್ ವರ್ಳ್ಡ್ವೈಡ್ Archived 2005-10-15 ವೇಬ್ಯಾಕ್ ಮೆಷಿನ್ ನಲ್ಲಿ.
- ಯುರೋಪಿಯನ್ ಎಲೆಕ್ಶನ್ ಲಾ ಅಸೋಸೊಯೇಶನ್ (ಯುರೇಲಾ) Archived 2005-02-20 ವೇಬ್ಯಾಕ್ ಮೆಷಿನ್ ನಲ್ಲಿ.
- voter list india states election results