ದೊಡ್ಡರಂಗೇಗೌಡ

ಡಾ|| ದೊಡ್ಡರಂಗೇಗೌಡರು ಕನ್ನಡದ ಕವಿ, ಸಾಹಿತಿ , ಪ್ರಾಧ್ಯಾಪಕರು ಮತ್ತು ಚಲನಚಿತ್ರ ಸಾಹಿತಿಗಳು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮನುಜ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದಾರೆ. ಚಲನಚಿತ್ರ ಗೀತಸಾಹಿತ್ಯಕ್ಕೆ ಹೆಸರಾಗಿದ್ದಾರೆ. ಗ್ರಾಮೀಣ ಸೊಗಡಿನ ಗೀತ ಸಾಹಿತ್ಯವು ಇವರ ಸಾಹಿತ್ಯದ ಗುರುತಾಗಿದೆ. ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದೂ ಪ್ರಸಿದ್ಧಿಯಾಗಿದ್ದಾರೆ.

ದೊಡ್ಡರಂಗೇಗೌಡ
ಜನನ(೧೯೪೬-೦೨-೦೭)೭ ಫೆಬ್ರವರಿ ೧೯೪೬
ಕುರುಬರಹಳ್ಳಿ, ಮಧುಗಿರಿ ತಾಲೂಕು, ತುಮಕೂರು ಜಿಲ್ಲೆ
ಕಾವ್ಯನಾಮಮನುಜ
ವೃತ್ತಿಗೀತರಚನಾಕಾರ, ರಾಜಕಾರಣಿ, ಸಾಹಿತಿ, ನಿವೃತ್ತ ಪ್ರಾಧ್ಯಾಪಕ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪ್ರಮುಖ ಕೆಲಸ(ಗಳು)ಕಣ್ಣು ನಾಲಿಗೆ ಕಡಲು (ಕವನ ಸಂಕಲನ), ಹಳ್ಳಿ ಹುಡುಗಿ ಹಾಡು-ಪಾಡು (ಪ್ರಗಾಥ)
ಪ್ರಮುಖ ಪ್ರಶಸ್ತಿ(ಗಳು)೧೯೭೨ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-(ಕಣ್ಣು ನಾಲಿಗೆ ಕಡಲು ಕೃತಿಗೆ), ಪದ್ಮಶ್ರೀ

ಜೀವನಸಂಪಾದಿಸಿ

ಇವರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ 0೭ ಫೆಬ್ರುವರಿ ೧೯೪೬ರಲ್ಲಿ ಜನಿಸಿದರು.ತಂದೆ ಶ್ರೀ ಕೆ. ರಂಗೇಗೌಡರು,ತಾಯಿ ಶ್ರೀಮತಿ ಅಕ್ಕಮ್ಮ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಮದ್ರಾಸ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದರು. ಇವರು ಕನ್ನಡ ನವೋದಯ ಕಾವ್ಯ- ಒಂದು ಪುನರ್ ಮೌಲ್ಯಮಾಪನ ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್‍ಡಿ(ಡಾಕ್ಟರೇಟ್) ಪದವಿ ದೊರಕಿತು.[೧][೨]

೧೯೭೨ರಿಂದ ೨೦೦೪ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.[೩]

೨೦೦೮ ರಿಂದ ೨೦೧೪ ರ ವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು.[೪]

೨೦೨೧ರ ೮೬ನೇ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ[೫][೬].[೭]

ಸಾಹಿತ್ಯ ಕೃಷಿಸಂಪಾದಿಸಿ

ದೊಡ್ಡರಂಗೇಗೌಡರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮನುಜ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದಾರೆ. ೪೭ಕ್ಕೂ ಅಧಿಕ ಪ್ರಗಾಥ(ode)ಗಳನ್ನು ರಚಿಸಿರುವ ಅವರು ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದೂ ಪ್ರಸಿದ್ಧಿಯಾಗಿದ್ದಾರೆ.

ಪ್ರಗಾಥ ಕೃತಿಗಳುಸಂಪಾದಿಸಿ

 • ಪ್ರೀತಿ ಪ್ರಗಾಥ
 • ಹಳ್ಳಿ ಹುಡುಗಿ ಹಾಡು-ಪಾಡು

ಕವನ‌ ಸಂಕಲನಗಳುಸಂಪಾದಿಸಿ

 • ಕಣ್ಣು ನಾಲಿಗೆ ಕಡಲು ಕಾವ್ಯ
 • ಜಗುಲಿ ಹತ್ತಿ ಇಳಿದು
 • ನಾಡಾಡಿ
 • ಮೌನ‌ ಸ್ಪಂದನ
 • ಕುದಿಯುವ ಕುಲುಮೆ ‌
 • ಚದುರಂಗಗ ಕುದುರೆಗಳು
 • ಯುಗವಾಣಿ
 • ಬದುಕು ತೋರಿದ ಬೆಳಕು
 • ಏಳು ಬೀಳಿನ ಹಾದಿ
 • ಅವತಾರ ಐಸಿರಿ
 • ಹೊಸಹೊನಲು
 • ಲೋಕಾಯಣ
 • ನಿಕ್ಷೇಪ
 • ಗೆಯ್ಮೆ

ಭಾವಗೀತೆಗಳುಸಂಪಾದಿಸಿ

 • ಮಾವು-ಬೇವು
 • ಪ್ರೇಮ ಪಯಣ
 • ಕಾವ್ಯ-ಕಾವೇರಿ
 • ನಲ್ಮೆ ನೇಸರ
 • ಅಂತರಂಗದ ಹೂ ಬನ

ಮುಕ್ತಕಗಳುಸಂಪಾದಿಸಿ

 • ಮಣ್ಣಿನ ಮಾತುಗಳು
 • ಮಿಂಚಿನ ಗೊಂಚಲು

ಗದ್ಯ ಕೃತಿಗಳುಸಂಪಾದಿಸಿ

 • ವರ್ತಮಾನದ ವ್ಯಂಗ್ಯದಲ್ಲಿ
 • ವಿಚಾರ ವಾಹಿನಿ
 • ವಿಶ್ವ ಮುಖಿ
 • ದಾರಿ ದೀಪಗಳು

ಪ್ರವಾಸ ಸಾಹಿತ್ಯಸಂಪಾದಿಸಿ

 • ಅನನ್ಯನಾಡು ಅಮೇರಿಕ
 • ಪಿರಮಿಡ್ಡುಗಳ ಪರಿಸರದಲ್ಲಿ

ಕ್ಯಾಸೆಟ್ಸಂಪಾದಿಸಿ

ದೊಡ್ಡರಂಗೇಗೌಡರು ೫೦ ಭಾವಗೀತೆ ಕ್ಯಾಸೆಟ್ ಹೊರತಂದಿದ್ದಾರೆ.

ಚಿತ್ರರಂಗದಲ್ಲಿಸಂಪಾದಿಸಿ

ದೊಡ್ಡರಂಗೇಗೌಡರು 'ಮಾಗಿಯ ಕನಸು' ಚಿತ್ರದಲ್ಲಿ ಮತ್ತು ಸಾಧನೆ ಶಿಖರ ಚಲನಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಟಿಸಿದ್ದಾರೆ. 'ಹಾರುವ ಹಂಸಗಳುʼ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಹತ್ತು ಸಿನೆಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ದೊಡ್ಡರಂಗೇಗೌಡರು ಚಲನಚಿತ್ರ ಗೀತಸಾಹಿತ್ಯಕ್ಕೆ ಹೆಸರಾಗಿದ್ದಾರೆ. ಸುಮಾರು ೬೦೦ ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಗ್ರಾಮೀಣ ಸೊಗಡಿನ ಗೀತ ಸಾಹಿತ್ಯವು ಇವರ ಸಾಹಿತ್ಯದ ಗುರುತಾಗಿದೆ.

ಚಲನಚಿತ್ರ ಗೀತಸಾಹಿತ್ಯಸಂಪಾದಿಸಿ

ಕಿರುತೆರೆಯಲ್ಲಿಸಂಪಾದಿಸಿ

ದೊಡ್ಡರಂಗೇಗೌಡರು ೧೦೦ ಟಿವಿ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ.

ಪ್ರಶಸ್ತಿ/ಪುರಸ್ಕಾರಗಳುಸಂಪಾದಿಸಿ

 • ೧೯೮೨ರಲ್ಲಿ ಗೌಡರು 'ಆಲೆಮನೆ' ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ಸರ್ಕಾರದಿಂದ ವಿಶೇಷ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು. ವಿಶೇಷ ಗೀತೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಇವರು.
 • ನಾಲ್ಕು ಬಾರಿ ಉತ್ತಮ ಗೀತರಚನೆಗೆ ರಾಜ್ಯ ಪ್ರಶಸ್ತಿ
 • ರಾಜ್ಯೋತ್ಸವ ಪ್ರಶಸ್ತಿ
 • ಪದ್ಮಶ್ರೀ ಪ್ರಶಸ್ತಿ - ೨೦೧೮
 • ಕಣ್ಣು ನಾಲಿಗೆ ಕಡಲು ಕಾವ್ಯ - ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೭೨.
 • ಪ್ರೀತಿ ಪ್ರಗಾಥ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ ೧೯೯೦
 • ೨೦೨೧ರ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ

ಉಲ್ಲೇಖಗಳುಸಂಪಾದಿಸಿ

 1. "Council nominations: teachers get preference - KARNATAKA". ದಿ ಹಿಂದೂ. 23 June 2008. Retrieved 2016-03-01.
 2. "Dodda Range Gowda to be felicitated - KARNATAKA". ದಿ ಹಿಂದೂ. 16 January 2012. Retrieved 2016-03-01.
 3. https://www.bookbrahma.com/author/doddarangegowda
 4. [http://www.kla.kar.nic.in/council/members/EXMEMBERS/DoddarangeGowda.htm ಡಾ: ದೊಡ್ಡರಂಗೇಗೌಡ ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು, (ನಾಮ ನಿರ್ದೇಶನ ಹೊಂದಿದವರು), (ಭಾರತೀಯ ಜನತಾಪಕ್ಷ)]
 5. "Council members treated to a song - KARNATAKA". ದಿ ಹಿಂದೂ. 31 March 2012. Retrieved 2016-03-01.
 6. "Padma awards 2018 announced, MS Dhoni, Sharda Sinha among 85 recipients: Here's complete list". India TV. 25 January 2018. Retrieved 26 January 2018.
 7. https://www.prajavani.net/karnataka-news/doddarange-gowda-elected-president-of-86th-kannada-sahitya-sammelana-798621.html