ರಂಗನಾಯಕಿ

1981ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ

ರಂಗನಾಯಕಿ (೧೯೮೧) ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಕನ್ನಡ ಚಿತ್ರ. ಅಂಬರೀಶ್ ಮತ್ತು ಆರತಿ ನಟಿಸಿದ ಈ ಚಿತ್ರ ರಂಗಭೂಮಿಯ ಕನಸು ಹೊತ್ತ ಕಲಾವಿದೆಯೊಬ್ಬಳ ಜೀವನವನ್ನು ಕುರಿತದ್ದು. ಪುಟ್ಟಣ್ಣ ಕಣಗಾಲ್ ರವರ ಕಲಾತ್ಮಕ ಶೈಲಿ ಚಿತ್ರದಲ್ಲಿ ಮೂಡಿಬಂದಿದೆ. ಆರತಿಯವರ ಮನೋಜ್ಞನ ಅಭಿನಯದಿಂದಾಗಿ, ಅವರು ಇಂದಿಗೂ ಕನ್ನಡ ಚಲನಚಿತ್ರರಂಗದಲ್ಲಿ ರಂಗನಾಯಕಿ ಎಂದೇ ಗುರುತಿಸಲ್ಪಡುತ್ತಾರೆ. ಅವರ ಚಿತ್ರರಂಗ ಜೀವನದಲ್ಲಿ ಇದೊಂದು ಮೈಲಿಗಲ್ಲು.

ರಂಗನಾಯಕಿ
ರಂಗನಾಯಕಿ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಬಿ. ತಿಮ್ಮಣ್ಣ
ಪಾತ್ರವರ್ಗಅಶೋಕ್ ಆರತಿ ಅಂಬರೀಶ್, ರಾಜಾನಂದ್, ರಾಮಕೃಷ್ಣ
ಸಂಗೀತಎಂ.ರಂಗರಾವ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಮಂಗಳಾ ಮೂವಿಸ್
ಸಾಹಿತ್ಯಕಣಗಾಲ್ ಪ್ರಭಾಕರ ಶಾಸ್ತ್ರಿ, ದೊಡ್ಡರಂಗೇಗೌಡ, ಎಮ್.ಎನ್.ವ್ಯಾಸರಾವ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಎಸ್.ಪಿ.ಶೈಲಜಾ, ಪಿ.ಜಯಚಂದ್ರನ್
ಇತರೆ ಮಾಹಿತಿಅಶ್ವತ್ಥ ಅವರ ಕಾದಂಬರಿ ಆಧಾರಿತ ಚಿತ್ರ.

ರಂಗನಾಯಕಿ, ೧೯೮೧ ರಲ್ಲಿ ಪುಟ್ಟಣ್ಣ ಕಣಗಾಲ್ ರವರ ಕನ್ನಡ ಚಿತ್ರದಲ್ಲಿ ಅಂಬರೀಶ್, ಆರತಿ, ರಾಮಕೃಷ್ಣ, ಅಶೋಕ್, ರಾಜಾನಂದ್, ಅಶ್ವತ್ಥ್ರ ರಂಗನಾಯಕಿ ಪುಸ್ತಕದ ಆಧಾರರದಮೇಲೆ ನಾಯಕಿ ಒಬ್ಬ ಥಿಯೇಟರ್ ನಟಿ, ಒಬ್ಬ ಶ್ರೀಮಂತ ತರುಣನಜೊತೆ ಪ್ರೇಮಿಸುತ್ತಾಳೆ, ಮದುವೆಯಾಗುತ್ತಾರೆ.ಮಗು ಪಡೆಯುತ್ತಾರೆ. ಆದರೆ ವಿವಾಹ ಜೀವನ ಬೇಸರವಾಗುತ್ತದೆ. ನಟನೆಯಲ್ಲೇ ಆಸಕ್ತಳಾಗುತ್ತಾಳೆ. ಪತಿ ಅವಳ ಜೊತೆ ಇರಲು ಇಚ್ಛಿಸದೆ ಮಗುವನ್ನು ಕರೆದುಕೊಂಡು ಊರುಬಿಟ್ಟುಹೋಗುತ್ತಾನೆ. ನಾಯಕಿ ಸಿನೆಮಾದಿಂದ ಪಡ್ದು ಜನಪ್ರಿಯಳಾಗುತ್ತಾಳೆ. ಒಬ್ಬ ಎಳೆಯ ಪ್ರಾಯದ ಹುಡುಗ ಅವಳಲ್ಲಿ ಅನುರಕ್ತನಾಗುತ್ತಾನೆ. ಒಬ್ಬ ತಾಯಿಯಾಗಿ ಅವಳೂ ಅವನನ್ನು ಇಷ್ಟಪಡುತ್ತಾಳೆ. ಆದರೆ ಅವಳು ಒಬ್ಬ ತಾಯಿಯ ತರಹ ಅವನ ಜೊತೆ ವರ್ತಿಸುತ್ತಾಳೆ. ಹಳೆಯ ಪತಿಯಜೊತೆ ಮಗನನ್ನು ತೋರಿಸಲು ಬೇಡುತ್ತಾಳೆ ಆದರೆ ಅದಕ್ಕೆ ಅವನು ಒಪ್ಪುವುದಿಲ್ಲ. ಈ ಮಾನಸಿಕ ಆಘಾತವನ್ನು ಸಹಿಸಲಾರದೆ ಅವಳು ಕೋಮಾಕ್ಕೆ ಹೋಗುತ್ತಾಳೆ. ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಾಳೆ. ಇಷ್ಟು ಹೊತ್ತಿಗೆ ಎಳೆಯ ಹುಡುಗನಿಗೆ ಹಿರಿಯನಾಯಕಿಯು ತನ್ನ ತಾಯಿಯೆಂದು ಗೊತ್ತಾಗುತ್ತದೆ.

ಜನನ,ಬಾಲ್ಯ,ವಿದ್ಯಾಭ್ಯಾಸ

ಬದಲಾಯಿಸಿ

೧೯೭೪ ರ ಆಗಸ್ಟ್ ೧೪ ರಂದು ಗೋಪಾಲಕೃಷ್ಣ, ಮತ್ತು ನಾಗಲಕ್ಷ್ಮಿ ದಂಪತಿಗಳ ಮಗಳಾಗಿ ಜನಿಸಿದಳು. ತಾಯಿಯ ಆಶೆಯಂತೆ, ಪತ್ರಿಕಾ ಕ್ಷೇತ್ರದಲ್ಲಿ ಮಾಡೆಲ್ ಆಗಿ ೩ ವರ್ಷದವಳಾಗಿದ್ದಾಗಲೇ ಕೆಲಸಮಾಡಿದಳು. ೫ ನೆಯ ವರ್ಷಕ್ಕೆ ಅವಳಿಗೆ 'ಭರತನಾಟ್ಯಮ್' ಮತ್ತು 'ಕುಚಿಪುಡಿ ನೃತ್ಯಶಿಕ್ಷಣ'ಕೊಡಿಸಿದರು. ಮುಂದೆ ಕನ್ನಡ ಸಿನೆಮಾದಲ್ಲಿ ಹಲವಾರು ನಾಯಕ/ನಾಯಕಿಯರ ಜೊತೆ ಅಭಿನಯಿಸಿದ್ದಾರೆ.

  1. ಅಂಬರೀಶ್
  2. ಆರತಿ
  3. ರಾಮಕೃಷ್ಣ
  4. ಅಶೋಕ್
  5. ರಾಜಾನಂದ