ಪುಟ್ಟಣ್ಣ ಕಣಗಾಲ್

ಭಾರತೀಯ ಚಿತ್ರ ನಿರ್ದೇಶಕ

ಎಸ್.ಆರ್.ಪುಟ್ಟಣ್ಣ ಕಣಗಾಲ್ (ಡಿಸೆಂಬರ್ ೧, ೧೯೩೩ - ಜೂನ್ ೫, ೧೯೮೫) ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ನಿರ್ದೇಶಕ ರಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದೆಂದು ಹಲವು ಕನ್ನಡಿಗರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಕಣಗಾಲ್, ಕನ್ನಡ ಸಿನಿಮಾಕ್ಕೆ ಹೊಸ ರೂಪ ತಂದವರು.ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ ಅವರು ಪುಟ್ಟಣ್ಣಕಣಗಾಲರ ಚಲನಚಿತ್ರಗಳ ವಿಮರ್ಶೆಯನ್ನು ಕುರಿತ ಕೃತಿ 'ಕನ್ನಡ ಚಲನಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲರ ಕೊಡುಗೆ' ಎಂಬ ಕೃತಿಯನ್ನು ಹೊರತಂದಿರುವುದನ್ನು ಕಾಣಬಹುದು.

ಎಸ್. ಆರ್. ಪುಟ್ಟಣ್ಣ ಕಣಗಾಲ್
ಪುಟ್ಟಣ್ಣ ಕಣಗಾಲ್
ಜನನ
ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ

ಡಿಸೆಂಬರ್ ೧, ೧೯೩೩
ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲು ಗ್ರಾಮ
ಮರಣಜೂನ್ ೫, ೧೯೮೫
ಇದಕ್ಕೆ ಖ್ಯಾತರುಚಲನಚಿತ್ರ ನಿರ್ದೇಶಕರು

ಆರಂಭದ ದಿನಗಳುಸಂಪಾದಿಸಿ

ಕರ್ನಾಟಕದ ಪುಟ್ಟಣ್ಣ ರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿ.ಇವರ ಮೊದಲ ಹೆಸರು "ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ" ಮುಂದೆ ಆದದ್ದು ಎಸ್‌.ಆರ್‌.ಪುಟ್ಟಣ್ಣ ಕಣಗಾಲ್‌. ಕನ್ನಡ ಚಿತ್ರರಂಗದ ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಇವರ ಸಹೋದರರು.

ಚಿತ್ರರಂಗಸಂಪಾದಿಸಿ

 • ಪುಟ್ಟಣ್ಣರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದವರು ಪುಟ್ಟಣ್ಣರವರು ಚಿತ್ರರಂಗಕ್ಕೆ ಬರುವ ಮುನ್ನ ಇವರು ಹಲವು ನೆಲೆಗಳಲ್ಲಿ ದುಡಿದಿದ್ದರು. ನಾಟಕ ಕಂಪೆನಿ,ಡ್ರೈವರ್, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕರಲ್ಲೊಬ್ಬರಾದ ಬಿ.ಆರ್. ಪಂತುಲು ಅವರ ಬಳಿ ೧೯೫೪ರಲ್ಲಿ ಡೈಲಾಗ್ ಕೋಚ್ ಆಗಿ ಸೇರಿದ ಪುಟ್ಟಣ್ಣ ನಂತರದ ದಿನಗಳಲ್ಲಿ " ಪದ್ಮಿನಿ ಪಿಕ್ಚರ್ಸ್"ನ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದರು.
 • ಕಾದಂಬರಿ ಆಧಾರಿತ ಚಿತ್ರಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ'ಸ್ಕೂಲ್‍ಮಾಸ್ಟರ್' (೧೯೬೪). ಪುಟ್ಟಣ್ಣನವರು ರಷ್ಯಾ ಪ್ರವಾಸ ಮಾಡಿ ಸಾಕಷ್ಟು ದೇಶಗಳನ್ನು ಸುತ್ತಿ ಕೋಶಗಳನ್ನು ಓದಿ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
 • ಪುಟ್ಟಣ್ಣನವರ ಚಿತ್ರಗಳ ಮೂಲಕ ಬೆಳಕಿಗೆ ಬಂದ, ಪ್ರಸಿದ್ಧರಾದ ಚಿತ್ರಕಲಾವಿದರು ಅನೇಕ. ಆ ಪೈಕಿ ನಾಯಕಿ ನಟಿಯರಲ್ಲಿ ಕಲ್ಪನಾ, ಆರತಿ, ಪದ್ಮಾ ವಾಸಂತಿ ಹಾಗೂ ಅಪರ್ಣಾ ಪ್ರಮುಖರು. ನಾಯಕ ನಟರಲ್ಲಿ ವಿಷ್ಣುವರ್ಧನ್, ರಾಮಕೃಷ್ಣ, ಜೈಜಗದೀಶ್, ಅಂಬರೀಶ್, ಶ್ರೀನಾಥ್ ಶ್ರೀಧರ್ ಮೊದಲಾದವರು ಇದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳುಸಂಪಾದಿಸಿ

ಕಣಗಲ್ ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು,ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು.ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯವು ಚಲನಚಿತ್ರ ನಿರ್ದೇಶಕರು ಮತ್ತು ವಿವಿಧ ವ್ಯಕ್ತಿಗಳನ್ನು ಪುಟ್ಟಣ್ಣ ಕಣಗಲ್ ಪ್ರಶಸ್ತಿ ನೀಡಿ ಗೌರವಿಸುತ್ತದೆ.

ವೃತ್ತಿಸಂಪಾದಿಸಿ

ಪ್ರಚಾರದ ಹುಡುಗನಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಕಣಗಲ್, ರಂಗಭೂಮಿಯಲ್ಲಿ ಕೆಲಸ ಮಾಡಿದ ನಂತರ ಸ್ವತಂತ್ರ ಚಲನಚಿತ್ರ ನಿರ್ಮಾಣಕ್ಕೆ ಆಕರ್ಷಿತರಾದರು ಮತ್ತು ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಬಿ. ಆರ್. ಪಂತುಲು ಅವರ ಸಹಾಯಕರಾಗಿ ಕೆಲಸ ಮಾಡಿದರು.

ನಿರ್ದೇಶಕರಾಗಿಸಂಪಾದಿಸಿ

ಕಣಗಲ್ ಅವರು ಮೊದಲು ನಿರ್ದೇಶಿಸಿದ ಸಿನೆಮಾ ೧೯೬೪ರ ಮಲಯಾಳಂ ಚಲನಚಿತ್ರ ಸ್ಕೂಲ್ ಮಾಸ್ಟರ್.ಅದು ಅವರ ಮಾರ್ಗದರ್ಶಕ ಬಿ.ಆರ್.ಪಂತುಲು ಅವರ ಸಿನೆಮಾದ ರಿಮೇಕ್.ನಂತರ ಅವರು ತ್ರಿವೇಣಿಯವರ ಕನ್ನಡ ಕಾದಂಬರಿ ಬೆಕ್ಕಿನ ಕಣ್ಣು ಆಧಾರಿತ ಎಂಬ ಮತ್ತೊಂದು ಮಲಯಾಳಂ ಚಿತ್ರ ಪೂಚಕ್ಕನ್ನಿ ಅನ್ನು ನಿರ್ದೇಶಿಸಿದರು. ನಿರ್ದೇಶಕರಾಗಿ ಪುಟ್ಟಣ್ಣ ಅವರ ಮೊದಲ ಕನ್ನಡ ಚಿತ್ರ ೧೯೬೭ ರಲ್ಲಿ ಮೂಡಿಬಂದ ಬೆಳ್ಳಿಮೋಡ.ಗೆಜ್ಜೆ ಪೂಜೆ, ಶರಪಂಜರ, ನಾಗರಹಾವು ಮುಂತಾದ ಅನೇಕ ಮೇರುಕೃತಿಗಳನ್ನು ಅವರು ನಿರ್ದೇಶಿಸಿದರು. ಅವರ ಕೊನೆಯ ಚಿತ್ರ ಸಾವಿರ ಮೆಟ್ಟಿಲು, ಇದು ಅವರ ಜೀವಿತಾವಧಿಯಲ್ಲಿ ಬಿಡುಗಡೆಯಾಗಲಿಲ್ಲ.

ನಿಧನಸಂಪಾದಿಸಿ

 • ಮಸಣದ ಹೂವು ಚಿತ್ರವು ತಯಾರಿಕೆ ಹಂತದಲ್ಲಿದ್ದಾಗ ಜೂನ್ ೫, ೧೯೮೫ ರಂದು ಚೆನ್ನೈ ನಲ್ಲಿ ನಿಧನರಾದರು. ಅರ್ಧ ಚಿತ್ರೀಕರಣಗೊಂಡಿದ್ದ ಮಸಣದ ಹೂವು ಚಿತ್ರದ ಉಳಿದ ಭಾಗವನ್ನು ಪುಟ್ಟಣ್ಣನವರ ಶಿಷ್ಯರಾದ ಕೆ.ಎಸ್.ಎಲ್.ಸ್ವಾಮಿಯವರು ಪೂರ್ತಿಗೊಳಿಸಿದರು. ಎಪ್ಪತ್ತರ ದಶಕದಲ್ಲಿ ಅವರು ತೊಡಗಿಸಿಕೊಂಡಿದ್ದ "ಸಾವಿರ ಮೆಟ್ಟಿಲು"ಚಿತ್ರವನ್ನು ಅದರ ನಿರ್ಮಾಪಕರಾದ ಡಿ.ಬಿ. ಬಸವೇಗೌಡರು ಪೂರ್ಣಗೊಳಿಸಿ ಬಿಡುಗಡೆ ಮಾಡಿದರು.
 • ಒಬ್ಬ ನಿರ್ದೇಶಕನ ಎರಡು ಅಪೂರ್ಣ ಚಿತ್ರಗಳು ಅವರ ನಿಧನಾ ನಂತರ ಪೂರ್ಣಗೊಂಡಿದ್ದು ಒಂದು ದಾಖಲೆಯೇ. ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ಜಯನಗರದಲ್ಲಿ ಸ್ಥಾಪಿಸಲಾಗಿದ್ದ ಪುಟ್ಟಣ್ಣ ಥಿಯೇಟರ್ ನವೀಕರಣದ ಹೆಸರಿನಲ್ಲಿ ೨೦೦೪ ರಿಂದ ಈ ಥಿಯೇಟರ್ ಬಾಗಿಲು ಹಾಕಿಕೊಂಡಿದ್ದ ಈ ಥಿಯೇಟರ್‌ನ ಜಾಗದಲ್ಲಿ ಈಗ ಕಾಂಪ್ಲೆಕ್ಸ್ ಒಂದು ತಲೆಯೆತ್ತಿ ನಿಂತಿದೆ. ಪುಟ್ಟಣ್ಣ ಪುತ್ರ ರಾಮು ಕಣಗಾಲ್ ರವರು "ಕಣಗಾಲ್ ನೃತ್ಯಾಲಯ" ಎನ್ನುವ ಹೆಸರಿನಲ್ಲಿ ನಾಟ್ಯ ಶಾಲೆ ನಡೆಸುತ್ತಿದ್ದಾರೆ.
 • ಕರ್ನಾಟಕ ಸರಕಾರವು ಪ್ರತಿ ವರ್ಷವೂ ಚಿತ್ರ ರಂಗದಲ್ಲಿ ಹೆಸರು ಮಾಡಿದವರಿಗೆ ಪುಟ್ಟಣ್ಣರ ಹೆಸರಿನಲ್ಲಿ "ಪುಟ್ಟಣ್ಣ ಕಣಗಾಲ್" ಪ್ರಶಸ್ತಿ ನೀಡಲಾಗುತ್ತಿದೆ.ಪುಟ್ಟಣ್ಣನವರ ಜೀವನ ಚರಿತ್ರೆಯ ‘ಬೆಳ್ಳಿ ತೆರೆ ಭಾವಶಿಲ್ಪಿಯಲ್ಲಿ’ಎಂಬ ಪುಸ್ತಕವನ್ನು ಡಿ.ಬಿ.ಬಸವೇಗೌಡ ಬರೆದಿದ್ದಾರೆ. ಕನ್ನಡದ ಖ್ಯಾತ ಕಾದಂಬರಿಕಾರ್ತಿ ದಿ. ಎಂ.ಕೆ. ಇಂದಿರಾ ರವರು "ಚಿತ್ರ ಶಿಲ್ಪಿ ಪುಟ್ಟಣ್ಣ ಕಣಗಾಲ್" ಎಂಬ ಪುಸ್ತಕ ಬರೆದಿದ್ದಾರೆ.

ಪುಟ್ಟಣ್ಣ ನಿರ್ದೇಶನದ ಚಲನಚಿತ್ರಗಳುಸಂಪಾದಿಸಿ

ಕನ್ನಡಸಂಪಾದಿಸಿ

 1. ನಾಗರ ಹಾವು (೧೯೭೨)
 2. ಸಾವಿರ ಮೆಟ್ಟಿಲು (೧೯೬೮)
 3. ಮಲ್ಲಮ್ಮನ ಪವಾಡ (೧೯೬೯)
 4. ಕಪ್ಪು ಬಿಳುಪು (೧೯೬೯)
 5. ಗೆಜ್ಜೆ ಪೂಜೆ (೧೯೭೦)
 6. ಕರುಳಿನ ಕರೆ (೧೯೭೦)
 7. ಶರಪಂಜರ (೧೯೭೧)
 8. ಸಾಕ್ಷಾತ್ಕಾರ (೧೯೭೧)
 9. ಎಡಕಲ್ಲು ಗುಡ್ಡದ ಮೇಲೆ (೧೯೭೩)
 10. ಉಪಾಸನೆ (೧೯೭೪)
 11. ಶುಭಮಂಗಳ (೧೯೭೫)
 12. ಬಿಳಿ ಹೆಂಡ್ತಿ (೧೯೭೫)
 13. ಕಥಾಸಂಗಮ (೧೯೭೬)
 14. ಕಾಲೇಜು ರಂಗ (೧೯೭೬)
 15. ಫಲಿತಾಂಶ (೧೯೭೬)
 16. ಪಡುವಾರಳ್ಳಿ ಪಾಂಡವರು (೧೯೭೮)
 17. ಧರ್ಮಸೆರೆ (೧೯೭೯)
 18. ರಂಗನಾಯಕಿ (೧೯೮೧)
 19. ಮಾನಸ ಸರೋವರ (೧೯೮೨)
 20. ಧರಣಿ ಮಂಡಲ ಮಧ್ಯದೊಳಗೆ (೧೯೮೩)
 21. ಅಮೃತ ಘಳಿಗೆ (೧೯೮೪)
 22. ಋಣಮುಕ್ತಳು (೧೯೮೪)
 23. ಮಸಣದ ಹೂವು (೧೯೮೫)
 24. ಬೆಳ್ಳಿಮೋಡ - (1966)

ಹಿಂದಿಸಂಪಾದಿಸಿ

 1. ಹಮ್ ಪಾಂಚ್ (೧೯೮೧)
 2. ಜಹ್ರೀಲಾ ಇನ್ಸಾನ್ (೧೯೭೪)

ಮಲಯಾಳಂಸಂಪಾದಿಸಿ

 1. ಸ್ಕೂಲ್‍ಮಾಸ್ಟರ್ ೧೯೬೪
 2. ಕಳಜ್ಞು ಕಿಟ್ಟಿಯ ತಂಗಂ ೧೯೬೪
 3. ಮೇಯರ್ ನಾಯರ್ ೧೯೬೬
 4. ಪೂಚಕಣ್ಣಿ ೧೯೬೬
 5. ಸ್ವಪ್ನ ಭೂಮಿ.೧೯೬೮

ಹೊರಗಿನ ಸಂಪರ್ಕಗಳುಸಂಪಾದಿಸಿ