ರಾಮಕೃಷ್ಣ - ೨೦೦ ಕ್ಕೂ ಹೆಚ್ಚಿನ ಸಂಖ್ಯೆಯ ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟ.

ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲ್ಲೂಕಿನವರು ಇವರು.

ಬಬ್ರುವಾಹನ ಚಿತ್ರದಲ್ಲಿ ಕೃಷ್ಣನ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಪುಟ್ಟಣ್ಣ ಕಣಗಾಲ್ ಅವರ ಅಮೃತ ಘಳಿಗೆ,ಮಾನಸ ಸರೋವರ, ರಂಗನಾಯಕಿ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು.

ಅಮೃತವರ್ಷಿಣಿ,ಬೆಂಕಿಯಲ್ಲಿ ಅರಳಿದ ಹೂವು ಅವರ ಇತರ ಪ್ರಮುಖ ಚಿತ್ರಗಳು.

‘ರಂಗ ನಾಯಕಿ’ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ಶ್ರೇಷ್ಠ ಪೋಷಕ ನಟ, ೧೯೯೮ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ‘ಅಮೃತವರ್ಷಿಣಿ’ ಚಿತ್ರಕ್ಕೆ ೧೯೯೬-೯೭ರಲ್ಲಿ ನಾಕ್‌ಔಟ್‌ ಉದಯ ಚಲನಚಿತ್ರ ಪ್ರಶಸ್ತಿ ಗಳು ಅವರಿಗೆ ಸಿಕ್ಕಿವೆ.


ಗುಬ್ಬಿ ವೀರಣ್ಣ, ಕೆ.ಬಾಲಚಂದರ್, ರಾಜ್ ಕುಮಾರ್, ರಾಜೇಂದ್ರ ಸಿಂಗ್ ಬಾಬು ಅವರೊಂದಿಗೂ ಇವರು ಕೆಲಸಮಾಡಿದ್ದಾರೆ

ಮಾತುಗಳು

ಬದಲಾಯಿಸಿ

ಓದು ಮನುಷ್ಯನ್ನು ಬಹಳಷ್ಟು ರೀತಿಯಲ್ಲಿ ಬದಲಾಯಿಸುವ ಶಕ್ತಿ ಹೊಂದಿದೆ ಎಂದು ಖ್ಯಾತ ಚಿತ್ರ ನಟ ರಾಮಕೃಷ್ಣ ಹೇಳಿದರು. ಜಾವಗಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಿರಿಯ ಗಾಯಕರು ಮತ್ತು ಸಾಹಿತಿಗಳಿಗೆ ಅಭಿನಂದನೆ, ಕನ್ನಡ ಗೀತ ಗಾಯನ ಹಾಗೂ ಬಾಂಧವ್ಯ ಲೋಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನೀರಿಗೂ ಮತ್ತು ಗಿಡಕ್ಕೂ ಬಾಂಧವ್ಯವಿದ್ದು ಮಕ್ಕಳಲ್ಲಿ ಕನ್ನಡ ಭಾಷೆಯನ್ನು ಕಲಿಸಿ ನಂತರ ಬೇರೆ ಭಾಷೆಗಳನ್ನು ಕಲಿಸಬೇಕು. ಮನುಷ್ಯನ ಬದುಕು ಹಸನಾಗಲು ಮಧುರಬಾಂಧವ್ಯ ಇದ್ದರೆ ಸಾಕು ಎಂದು ನುಡಿದರು.