ಅಂತರಜಾಲ ಸಿನೆಮಾ ದತ್ತಸಂಚಯ

(ಐ ಎಮ್ ಡಿ ಬಿ ಇಂದ ಪುನರ್ನಿರ್ದೇಶಿತ)

ಐ ಎಮ್ ಡಿ ಬಿ (ಇಂಟರ್ನೆಟ್ ಮೂವಿ ಡೇಟಾಬೇಸ್) (ಅಂತರಜಾಲ ಸಿನೆಮಾ ದತ್ತಸಂಚಯ).ಇದು ಬಹಳ ಜನಪ್ರಿಯವಾಗಿರುವ ಅಂತಾರಾಷ್ಟ್ರೀಯ ಚಲನಚಿತ್ರ, ದೂರದರ್ಶನ ಕಾರ್ಯಕ್ರಮಗಳು, ವೀಡಿಯೋ ಆಟಗಳು ಹಾಗೂ ಪ್ರಖ್ಯಾತ (ಚಿತ್ರೋದ್ಯಮದ) ವ್ಯಕ್ತಿಗಳ ಹಾಗೂ ಪಾತ್ರಗಳ ಮಾಹಿತಿಯನ್ನೊಳಗೊಂಡ ಅಂತರಜಾಲ ದತ್ತಾಂಶ ಸಂಗ್ರಹ ಜಾಲತಾಣ. ಇದು ೧೭ ಅಕ್ಟೊಬರ್ ೧೯೯೦ ರಂದು ಪ್ರಾರಂಭಗೊಂಡಿತು.

ಇಂಟರ್‌ನೆಟ್ ಮೂವೀ ಡಾಟಾಬೇಸ್ (IMDb)
ಜಾಲತಾಣದ ವಿಳಾಸimdb.com
ವಾಣಿಜ್ಯ ತಾಣಹೌದು
ತಾಣದ ಪ್ರಕಾರಅಂತರಜಾಲಾಧಾರಿತ ಧಾರಾವಾಹಿ, ಸಿನೆಮಾಗಳ ದತ್ತ ಸಂಚಯ
ನೊಂದಾವಣಿಕಡ್ಡಾಯ ಅಲ್ಲ, ಆದರೆ ಸಿನೆಮಾ ದಾರಾವಹಿಗಳಿಗೆ ಅಭಿಪ್ರಾಯ ಬರೆಯಲು, ರೇಟಿಂಗ್ ಕೊಡಲು ಖಾತೆ ಬೇಕು.
ಲಭ್ಯವಿರುವ ಭಾಷೆಆಂಗ್ಲ
ಒಡೆಯಅಮೇಜಾನ್
ಸೃಷ್ಟಿಸಿದ್ದುಕೊಲ್ ನೀದಾಮ್ (CEO)
ಪ್ರಾರಂಭಿಸಿದ್ದುಅಕ್ಟೋಬರ್ 17, 1990; 12323 ದಿನ ಗಳ ಹಿಂದೆ (1990-೧೦-17)
ಅಲೆಕ್ಸಾ ‍‍ಶ್ರೇಯಾಂಕpositive decrease 44 (March 2014)[೧]
ಸಧ್ಯದ ಸ್ಥಿತಿActive

ಈ ಜಾಲತಾಣದಲ್ಲಿ ಯಾವುದೇ ಚಲನಚಿತ್ರದ ಬಗ್ಗೆ (ಪ್ರಮುಖವಾಗಿ ಆಂಗ್ಲ ಭಾಷೆಯ) ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಉದಾಹರಣೆಗೆ ಚಲನಚಿತ್ರಗಳ ವಿಮರ್ಶೆ, ಕಥಾ ಸಾರಾಂಶ ಹಾಗೂ ಅಂಕ (ರೇಟಿಂಗ್) ಕೊಡಲಾಗಿರುತ್ತದೆ. ಅಲ್ಲದೇ ಇದರಲ್ಲಿ ಅತ್ಯುತ್ತಮ ೨೫೦ ಚಲನಚಿತ್ರಗಳ ಪಟ್ಟಿಯೂ ಇದೆ.

ಈ ಜಾಲತಾಣದಲ್ಲಿ ಹಲವಾರು ಹಿಂದಿ ಹಾಗೂ ಇತರೆ ಭಾರತೀಯ ಭಾಷೆಗಳ (ಕನ್ನಡವನ್ನು ಒಳಗೊಂಡು) ಚಲನಚಿತ್ರಗಳ ಮಾಹಿತಿಯೂ ಇದೆ. ಬಳಕೆದಾರರು ಸುಮಾರು ಆರು ಸಾವಿರ ದೂರದರ್ಶಣದಲ್ಲಿ ಬರು ವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.ಚಲನಚಿತ್ರ ಪ್ರಿಯರಿಗೆ ಇದೊಂದು ಉತ್ತಮ ಮಾಹಿತಿಪೂರ್ಣ ಅಂತರಜಾಲ ತಾಣ.

ಉಲ್ಲೇಖಗಳು

ಬದಲಾಯಿಸಿ