ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಕರ್ನಾಟಕದಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ನೀಡಲಾಗುವ ಅತ್ಯಂತ ಗಮನಾರ್ಹ ಮತ್ತು ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಾಗಿವೆ. ಇವುಗಳನ್ನು ಕನ್ನಡ ಭಾಷಾ ಚಲನಚಿತ್ರಗಳಿಗೆ ಅತ್ಯುನ್ನತ ಪ್ರಶಸ್ತಿಗಳೆಂದು ಪರಿಗಣಿಸಲಾಗಿದೆ. ಚಿತ್ರರಂಗದ ಉತ್ತಮ ಪ್ರತಿಭೆಗಳನ್ನು ಮತ್ತು ಚಿತ್ರಗಳನ್ನು ಗುರುತಿಸಿ ಈ ಗೌರವ ಸಲ್ಲಿಸಲಾಗುವುದು.
{{{awardname}}} | ||
ಪ್ರಶಸ್ತಿಯ ವಿವರ | ||
---|---|---|
ವರ್ಗ | ಕನ್ನಡ ಚಿತ್ರರಂಗ | |
ಪ್ರಾರಂಭವಾದದ್ದು | 1966 | |
ಮೊದಲ ಪ್ರಶಸ್ತಿ | 1966-67 | |
ಕಡೆಯ ಪ್ರಶಸ್ತಿ | 2016 | |
ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
ಹಿಂದಿನ ಹೆಸರು(ಗಳು) | ಮೈಸೂರು ರಾಜ್ಯ ಚಿತ್ರ ಪ್ರಶಸ್ತಿ |
ಕನ್ನಡ ಚಿತ್ರರಂಗದ ಆಯ್ಕೆಯಾದ ಪ್ರಸಿದ್ಧ ವ್ಯಕ್ತಿಗಳ ಆಯ್ಕೆ ಸಮಿತಿಯಿಂದ ಪ್ರಶಸ್ತಿಗಳನ್ನು ನಿರ್ಧರಿಸಲಾಗುತ್ತದೆ. ಪ್ರಶಸ್ತಿಗಳು ಕಲಾತ್ಮಕ ಮೌಲ್ಯಗಳೊಂದಿಗೆ ಚಲನಚಿತ್ರಗಳನ್ನು ಉತ್ತೇಜಿಸಲು ಮತ್ತು ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಪಕರನ್ನು ಉತ್ತೇಜಿಸಲು ಉದ್ದೇಶಿಸಿದೆ. ಪ್ರಶಸ್ತಿಗಳನ್ನು ಸಾಂಸ್ಕೃತಿಕ ವ್ಯವಹಾರಗಳ ಮಂತ್ರಿಯವರು ಘೋಷಿಸುತ್ತಾರೆ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನಿಸುತ್ತಾರೆ.
ಪ್ರಶಸ್ತಿಗಳು ಸಂಪಾದಿಸಿ
• ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಚಿತ್ರ ಪ್ರಶಸ್ತಿ
- ನಾಲ್ಕನೇ ಅತ್ಯುತ್ತಮ ಚಿತ್ರ
• ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ
• ಚೊಚ್ಚಲ ನಿರ್ದೇಶನದ ಅತ್ಯುತ್ತಮ ಚಿತ್ರ