ಶ್ರೀನಾಥ್
ಶ್ರೀನಾಥ್(೧೯೪೪-) - ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶುಭಮಂಗಳ,ಮಾನಸ ಸರೋವರ ಮೊದಲಾದ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾನಸ ಸರೋವರ ನಿರ್ಮಿಸಿದ ಮಿತ್ರವೃಂದ ಮೂವೀಸ್ ನಿರ್ಮಾಪಕರಲ್ಲಿ ಒಬ್ಬರು. ಕನ್ನಡದ ಕಿರುತೆರೆ ವಾಹಿನಿ ಉದಯ ಟಿವಿ ಯ ನಿರ್ವಾಹಕರಲ್ಲೊಬ್ಬರಾಗಿದ್ದಾರೆ. ಲಗ್ನಪತ್ರಿಕೆ ಚಿತ್ರದ ಸಣ್ಣದೊಂದು ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಾಥ್, ಚಿತ್ರರಂಗದಲ್ಲಿ ೪೦ ವರ್ಷಗಳನ್ನು ಪೂರೈಸಿದ್ದಾರೆ.[೧][೨][೩] ಇವರು ಪ್ರಖ್ಯಾತ ನಟ ಸಿ.ಆರ್.ಸಿಂಹ ಅವರ ಸಹೊದರರು
Srinath | |
---|---|
Born | ನಾರಾಯಣ ಸ್ವಾಮಿ 28 ಡಿಸೆಂಬರ್ 1943 |
Occupation | ನಟ, ಚಲನಚಿತ್ರ ನಿರ್ಮಾಪಕ, ದೂರದರ್ಶನ ನಿರೂಪಕ, ವಿಧಾನ ಪರಿಷತ್ ಸದಸ್ಯ |
Years active | 1967–ಪ್ರಸ್ತುತ |
Spouse(s) | ಗೀತಾ (ವಿವಾಹ 1972) |
Children | 2 |
Family | ಸಿ. ಆರ್. ಸಿಂಹ (ಸಹೋದರ) |
ಶ್ರೀನಾಥ್ ಅಭಿನಯದ ಕೆಲವು ಚಿತ್ರಗಳುಸಂಪಾದಿಸಿ
- ಅಜ್ಞಾತವಾಸ
- ಆನಂತರ
- ಗಂಡ ಭೇರುಂಡ
ರಾಜಕೀಯಸಂಪಾದಿಸಿ
ಪ್ರಸಕ್ತ ರಾಜಕೀಯದಲ್ಲು ಸಕ್ರಿಯರಾಗಿರುವ ಇವರು ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ಸದಸ್ಯರಾಗಿದ್ದರು .