ನಾಗರಹಾವು (ಚಲನಚಿತ್ರ ೧೯೭೨)
ಕನ್ನಡದ ಒಂದು ಚಲನಚಿತ್ರ
ನಾಗರಹಾವು - ೧೯೭೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ನಾಗರಹಾವು (ಚಲನಚಿತ್ರ ೧೯೭೨) | |
---|---|
ನಾಗರಹಾವು | |
ನಿರ್ದೇಶನ | ಪುಟ್ಟಣ್ಣ ಕಣಗಾಲ್ |
ನಿರ್ಮಾಪಕ | ಎನ್.ವೀರಾಸ್ವಾಮಿ |
ಚಿತ್ರಕಥೆ | ಪುಟ್ಟಣ್ಣ ಕಣಗಾಲ್ |
ಕಥೆ | ತ.ರಾ.ಸುಬ್ಬರಾಯ |
ಪಾತ್ರವರ್ಗ | ವಿಷ್ಣುವರ್ಧನ್ ಆರತಿ ಶುಭ, ಲೀಲಾವತಿ, ಅಶ್ವಥ್, ಶಿವರಾಂ, ಅಂಬರೀಶ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಚಿಟ್ಟಿಬಾಬು |
ಸಂಕಲನ | ವಿ.ಪಿ.ಕೃಷ್ಣ |
ಬಿಡುಗಡೆಯಾಗಿದ್ದು | ೧೯೭೨ |
ಚಿತ್ರ ನಿರ್ಮಾಣ ಸಂಸ್ಥೆ | ಈಶ್ವರಿ ಪ್ರೊಡಕ್ಷನ್ಸ್ |
ಸಾಹಿತ್ಯ | ವಿಜಯನಾರಸಿಂಹ, ಆರ್.ಎನ್.ಜಯಗೋಪಾಲ್ |
ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲ |
ಚಿತ್ರಗೀತೆಗಳು | ||
ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
ಬಾರೆ ಬಾರೆ | ವಿಜಯ ನಾರಸಿಂಹ | ಪಿ.ಬಿ.ಶ್ರೀನಿವಾಸ್ |
ಕನ್ನಡ ನಾಡಿನ | ಪಿ.ಬಿ.ಶ್ರೀನಿವಾಸ್ | |
ಸಂಗಮ ಸಂಗಮ | ವಿಜಯ ನಾರಸಿಂಹ | ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ |
ಕಥೆ ಹೇಳುವೆ | ಆರ್.ಎನ್.ಜಯಗೋಪಾಲ್ | ಪಿ.ಸುಶೀಲ |
ಹಾವಿನ ದ್ವೇಷ | ಎಸ್.ಪಿ.ಬಾಲಸುಬ್ರಹ್ಮಣ್ಯಂ | |
ಕರ್ಪೂರದ ಗೊಂಬೆ ನಾನು | ಆರ್.ಎನ್.ಜಯಗೋಪಾಲ್ | ಪಿ.ಸುಶೀಲ |
ಖ್ಯಾತಸಾಹಿತಿ, ಕಾದಂಬರಿಕಾರ ತ.ರಾ.ಸುಬ್ಬರಾಯರು ಬರೆದಿರುವ ನಾಗರಹಾವು ಕಾದಂಬರಿ ಆಧಾರಿತವಾದ ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದಾರೆ.
ಪಾತ್ರವರ್ಗ
ಬದಲಾಯಿಸಿ- ರಾಮಾಚಾರಿ - ವಿಷ್ಣುವರ್ಧನ್
- ಅಲಮೇಲು - ಆರತಿ
- ಮಾರ್ಗರೇಟ್ - ಶುಭ
- ಚಾಮಯ್ಯ ಮೇಷ್ಟ್ರು - ಕೆ ಎಸ್ ಅಶ್ವಥ್
- ಜಲೀಲ್ - ಅಂಬರೀಶ್
- ವರದ - ಶಿವರಾಂ
ಸ್ವಾರಸ್ಯ
ಬದಲಾಯಿಸಿ- ನಾಯಕನಾಗಿ ವಿಷ್ಣುವರ್ಧನ್ ಅವರ ಮೊದಲ ಚಿತ್ರ
- ಅಂಬರೀಶ್ ಅಭಿನಯದ ಮೊದಲ ಚಲನಚಿತ್ರ
- ಅಂಬರೀಶ್ ಅಭಿನಯದ 'ಜಲೀಲ್' ಪಾತ್ರಕ್ಕೆ ರಜನೀಕಾಂತ್ ಆಯ್ಕೆಯಾಗಿದ್ದರು. ಹಲವಾರು ದೃಶ್ಯಗಳ ಚಿತ್ರೀಕರಣ ನಡೆದಿತ್ತು. ನಂತರ ಕಾರಣಾಂತರಗಳಿಂದ ರಜನೀಕಾಂತ್ ಬದಲು ಅಂಬರೀಶ್ ಆ ಪಾತ್ರದಲ್ಲಿ ನಟಿಸಿದರು.
- ಸ್ಲೋ ಮೋಶನ್ ಕ್ಯಾಮರದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ.
- ಬೆಂಗಳೂರಿನ ೩ ಚಿತ್ರಮಂದಿರಗಳಲ್ಲಿ ಏಕ ಕಾಲಕ್ಕೆ ಶತದಿನೋತ್ಸವ ಆಚರಿಸಿದ ಮೊದಲ ಚಿತ್ರ.
- ತ.ರಾ.ಸು. ಅವರ ಮೂರು ಕಾದಂಬರಿಗಳನ್ನು (ಸರ್ಪ ಮತ್ಸರ, ಒಂದು ಗಂಡು ಎರಡು ಹೆಣ್ಣು, ನಾಗರ ಹಾವು) ಸೇರಿ ತಯಾರಿಸಿದ ಚಿತ್ರ.