ಆರ್.ಎನ್.ಜಯಗೋಪಾಲ್

ಆರ್.ಎನ್. ಜಯಗೋಪಾಲ್(೧೯೩೫,ಆಗಸ್ಟ್ ೧೭) ಕನ್ನಡದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು. ಕನ್ನಡದ ಪ್ರಮುಖ ನಿರ್ದೇಶಕ, ನಟ ಆರ್. ನಾಗೇಂದ್ರರಾಯರು ಇವರ ತಂದೆ. ತಾಯಿಯ ಹೆಸರು ರತ್ನಮ್ಮ. ಇವರದ್ದು ಕಲಾವಿದರ ಮನೆತನ. ಆರ್. ಎನ್.ಜಯಗೋಪಾಲ್ ಅವರ ಸಹೋದರರಾದ ಆರ್.ಎನ್. ಕೃಷ್ಣಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿಯೂ, ಇನ್ನೊಬ್ಬ ಸಹೋದರ ಆರ್.ಎನ್.ಸುದರ್ಶನ್ ನಟನೆಯಲ್ಲಿಯೂ ಹೆಸರು ಮಾಡಿದ್ದಾರೆ. ಆರ್. ಎನ್. ಜಯಗೋಪಾಲ್ ಅವರ ಪತ್ನಿ ಲಲಿತಾ ರಾಜಗೋಪಾಲ್ ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆರ್.ಎನ್.ಜಯಗೋಪಾಲ್ ೧೫೦ ಚಿತ್ರಗಳಿಗೆ ಸಂಭಾಷಣೆ. ೧೬೦೦ ಗೀತೆಗಳನ್ನು ರಚಿಸಿದ್ದಾರೆ. ಕಲಾವತಿ ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿದ್ದಾರೆ. ತಮಿಳಿನನಾಯಗನ್ ಚಿತ್ರವೂ ಸೇರಿದಂತೆ ೩೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೀವನದಿ, ಹೃದಯ ಪಲ್ಲವಿ, ಮುಂತಾದ ಚಿತ್ರಗಳಲ್ಲಿ, ಹಾಗು ಕೆಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 'ಬಾಳೋಂದು ಭಾವಗೀತೆ " ಪುಸ್ತಕವನ್ನು ಬರೆದಿದ್ದಾರೆ. ಆರ್.ಎನ್. ಜಯಗೋಪಾಲ್ ಗೀತ ರಚನೆಕಾರರಾಗಿ ಎಲ್ಲರಿಗೂ ಗೊತ್ತು.ನಿರ್ದೇಶಕರಾಗಿ,ಕಿರುತೆರೆಗೆ ಮೆಗಾ ಧಾರಾವಾಹಿಗಳ ಯುಗವನ್ನು ಪರಿಚಯಿಸಿದವರಾಗಿ ಕೆಲವರಿಗೆ ಮಾತ್ರ ಗೊತ್ತು,ಅವರು ಉತ್ತಮ ವಾಯಲಿನ್ ವಾದಕರು ಮತ್ತು ವಸಂತ ಕುಮಾರಿ,ಎಂ,ಎಸ್,ಸುಬ್ಬುಲಕ್ಷ್ಮಿ ಯವರಂತಹ ಮೀರು ಗಾಯಕರಿಗೆ ಪಕ್ಕವಾದ್ಯ ನುಡಿಸಿದ್ದಾರೆ ಎಂದು ತೀರಾ ನಿಕಟವರ್ತಿಗಳಿಗೆ ಮಾತ್ರ ಗೊತ್ತು.ಸೌಂಡ್ ಎಂಜಿನಿಯರಿಂಗ್ ಓದಿದ್ದ ಆರ್.ಎನ್. ಜಯಗೋಪಾಲ್ ಕೆಲವು ಚಿತ್ರಗಳಿಗೆ ಶಬ್ದ ಗ್ರಾಹಕರಾಗಿ ಕೂಡಾ ಕೆಲಸ ಮಾಡಿದ್ದಾರೆ.ಚಿತ್ರ ಗೀತೆಗಳ ಹಕ್ಕುಗಳಿಗೆ ಹೋರಾಡಿದ್ದು ಚಿತ್ರೋದ್ಯಮಿಗಳಿಗೆ ಮಾತ್ರ ಗೊತ್ತು.ಮೂರು ಜಾಗತಿಕ ಸಮ್ಮೇಳನಗಳಲ್ಲಿ ಭಾರತವನ್ನು ಪ್ರತಿನಿದಿಸಿದ್ದಾರೆ. ಆರ್.ಎನ್. ಜಯಗೋಪಾಲ್ ೧೯೭೬ ರರಲ್ಲಿ ಮದ್ರಾಸಿನಲ್ಲಿ "ವಿದ್ಯಾ ವಿನಯ ವಿನೋದ" ಎಂಬ ಹೆಸರಿನ ಕನ್ನಡ ಶಾಲೆಯನ್ನು ಆರಂಬಿಸಿ ಸುಮಾರು ೨೫ ವರ್ಷಗಳ ಕಾಲ ಕನ್ನಡ ಶಾಲೆಯನ್ನು ತಮಿಳುನಾಡಿನಲ್ಲಿ ನಡೆಸಿದ ಕೀರ್ತಿ ಇವರದು. ಮೂರು ನಾಲ್ಕು ದಶಕಗಳಲ್ಲಿ ಆರ್.ಎನ್. ಜಯಗೋಪಾಲ್ ೧೭೮೦ ಚಿತ್ರ ಗೀತೆಗಳನ್ನು ರಚಿಸಿದ್ದಾರೆ.೧೨೩ ಚಿತ್ರಗಳಿಗೆ ಸಂಭಾಷಣೆ ನೀಡಿದ್ದಾರೆ, ವಿಶೇಷವೆಂದರೆ ಈ ಮೂವರು ಸೋದರರು ತಮಿಳಿನ ಹೆಸರಾಂತ ನಿರ್ದೇಶಕ ಮಣಿರತ್ನಂ ಅವರ ನಾಯಗನ್ ಚಿತ್ರದಲ್ಲಿ ಅಣ್ಣ ತಮ್ಮಂದಿರಾಗಿಯೇ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಗಳಸ್ಯ ಕಂಟಸ್ಯ ಮಿತ್ರರಾಗಿದ್ದ ಆರ್ ಜಯಗೋಪಾಲ್ ಮತ್ತು ಚಿ.ಉದಯಶಂಕರ್ ಅವರ ಹಲವು ಹಾಡುಗಳು ಅದಲು ಬದಲಾಗಿದ್ದಾವಂತೆ. ಆದರೆ ಅದು ಅವರ ಮಿತ್ರತ್ವಕ್ಕೆ ಎಂದೂ ಭಂಗ ತರಲಿಲ್ಲವಂತೆ. "ನಮನ"

ಆರ್.ಎನ್. ಜಯಗೋಪಾಲ್
R. N. Jayagopal
Jayagopal.jpg
ಜನನ(೧೯೩೫-೦೮-೧೭)೧೭ ಆಗಸ್ಟ್ ೧೯೩೫
ಮೈಸೂರು, ಕಿಂಗ್ಡಮ್ ಆಫ್ ಮೈಸೂರು, ಬ್ರಿಟಿಷ್ ಭಾರತ ,
ಮರಣ19 May 2008(2008-05-19) (aged 72)
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುಆರ್ ಏನ್ ಜೆ
ಉದ್ಯೋಗLyricist, film director
ಸಕ್ರಿಯ ವರ್ಷಗಳು೧೯೫೭–೨೦೦೮
ಜೀವನ ಸಂಗಾತಿಲಲಿತಾ ಜಯಗೋಪಾಲ್
ಮಕ್ಕಳು
ಪೋಷಕರುಆರ್ ನಾಗೇಂದ್ರ ರಾವ್
Ratnabai
ಕುಟುಂಬಕುಟುಂಬ ಆರ್ ಎನ್ ಸುದರ್ಶನ್ (ಸಹೋದರ)
ಆರ್ ಎನ್ ಕೃಷ್ಣ ಪ್ರಸಾದ್ (ಸಹೋದರ)
ಜಾಲತಾಣwww.rnjayagopal.com

ನಿರ್ದೇಶಕರಾಗಿ ಆರ್.ಎನ್.ಜಯಗೋಪಾಲ್ಸಂಪಾದಿಸಿ

ಆರ್.ಎನ್. ಜಯಗೋಪಾಲ್ ಅವರು ೧೯೬೮ರಲ್ಲಿ ಧೂಮಕೇತು ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಕಲ್ಯಾಣ್ ಕುಮಾರ್, ಅಶೋಕ್, ರೂಪಾದೇವಿ ಮುಂತಾದವರ ತಾರಾಗಣವಿರುವ ಅವಳ ಅಂತರಂಗ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜನನಿ ಧಾರಾವಾಹಿಯ ಮೂಲಕ ಕಿರುತೆರೆ ನಿರ್ದೇಶನ ಪ್ರಾರಂಭಿಸಿದ ಜಯಗೋಪಾಲ್ ೨೦ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.

ಚಿತ್ರಸಾಹಿತಿ ಆರ್.ಎನ್.ಜಯಗೋಪಾಲ್ಸಂಪಾದಿಸಿ

ಆರ್.ಎನ್.ಜಯಗೋಪಾಲ್ ರಚಿಸಿರುವ ನೀರಿನಲ್ಲಿ ಅಲೆಯ ಉಂಗುರ - ಚಿತ್ರ:ಬೇಡಿ ಬಂದವಳು. ಬೆಳ್ಳಿಮೋಡದ ಆಚೆಯಿಂದ- ಚಿತ್ರ :ಬೆಳ್ಳಿ ಮೋಡ, ನೀಬಂದು ನಿಂತಾಗ - ಚಿತ್ರ: ಕಸ್ತೂರಿ ನಿವಾಸ, ಗಗನವು ಎಲ್ಲೋ ಭೂಮಿಯು ಎಲ್ಲೋ - ಚಿತ್ರ:ಗೆಜ್ಜೆ ಪೂಜೆ, ಹೂವು ಚೆಲುವೆಲ್ಲಾ ತಂದೆಂದಿತು - ಚಿತ್ರ: ಹಣ್ಣೆಲೆ ಚಿಗುರಿದಾಗ, ಒಲವಿನ ಉಡುಗೊರೆ ಕೊಡಲೇನು -ಚಿತ್ರ: ಒಲವಿನ ಉಡುಗೊರೆ ಮುಂತಾದ ಹಾಡುಗಳು ಜನಮಾನಸದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿಕೊಂಡಿವೆ. ಚಿತ್ರಗೀತೆಗಳ ಕಾಪಿರೈಟ್ ಹಕ್ಕುಗಳನ್ನು ರಕ್ಷಿಸಲು ಸ್ಥಾಪನೆಯಾದ ಇಂಡಿಯನ್ ಪರ್ಫಾಮಿಂಗ್ ರೈಟ್ ಸೊಸೈಟಿ ಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಎರಡು ಅವಧಿಗೆಂದು ಈ ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು.

ಗೀತೆರಚನೆ ಒದಗಿಸಿರುವ ಚಿತ್ರಗಳುಸಂಪಾದಿಸಿ

 • ಚಕ್ರತೀರ್ಥ
 • ವಿಜಯನಗರದ ವೀರಪುತ್ರ
 • ಸೀತಾ
 • ಪುನರ್ಜನ್ಮ
 • ಮಧುರ ಸಂಗಮ
 • ಕಪ್ಪು ಬಿಳುಪು
 • ಬಾಳುಜೇನು
 • ನಮ್ಮ ಮಕ್ಕಳು
 • ನಾಂದಿ
 • ಮರೆಯದ ಹಾಡು
 • ಹಸಿರುತೋರಣ
 • ನಾ ಮೆಚ್ಚಿದ ಹುಡುಗ
 • ಹಣ್ಣೆಲೆ ಚಿಗುರಿದಾಗ
 • ಗೆಜ್ಜೆಪೂಜೆ
 • ಪರೋಪಕಾರಿ
 • ಬೆಳ್ಳಿಮೋಡ
 • ಉಪಾಸನೆ
 • ಸಂಪತ್ತಿಗೆ ಸವಾಲ್
 • ಸಿಪಾಯಿರಾಮು
 • ಬಂಗಾರದ ಮನುಷ್ಯ
 • ಎಡಕಲ್ಲು ಗುಡ್ಡದ ಮೇಲೆ
 • ಪಲ್ಲವಿ ಅನುಪಲ್ಲವಿ
 • ಟೋನಿ
 • ಚಿನ್ನಾ ನಿನ್ನ ಮುದ್ದಾಡುವೆ
 • ಚಿರಂಜೀವಿ
 • ಪ್ರೇಮಕ್ಕು ಪರ್ಮಿಟ್ಟೆ
 • ಸಾಹಸ ಸಿಂಹ
 • ಅರ್ಚನ
 • ಕಿಲಾಡಿ ಕಿಟ್ಟು
 • ರಾಜ ನನ್ನ ರಾಜ
 • ಸವತಿಯ ನೆರಳು
 • ನೀ ಬರೆದ ಕಾದಂಬರಿ
 • ಜೀವನದಿ
 • ಅಂಜದ ಗಂಡು
 • ಹೃದಯ ಪಲ್ಲವಿ
 • ಜನನಾಯಕ
 • ಸ್ವಾಭಿಮಾನ
 • ವಸಂತ ಲಕ್ಷ್ಮಿ
 • ಬೇಡಿ ಬಂದವಳು

ಆರ್.ಎನ್.ಜೆ. ನಿರ್ದೇಶನದ ಚಲನಚಿತ್ರಗಳುಸಂಪಾದಿಸಿ

ವರ್ಷ ಚಿತ್ರ
೧೯೬೮ ಧೂಮಕೇತು
೧೯೭೨ ನಾ ಮೆಚ್ಚಿದ ಹುಡುಗ
೧೯೭೩ ಕೆಸರಿನ ಕಮಲ
೧೯೭೯ ಮುತ್ತು ಒಂದು ಮುತ್ತು
೧೯೮೧ ಮರೆಯದ ಹಾಡು
೧೯೮೩ ಮಕ್ಕಳೇ ದೇವರು
೧೯೮೪ ಅವಳ ಅಂತರಂಗ
೧೯೮೭ ಹೃದಯ ಪಲ್ಲವಿ

ಪ್ರಶಸ್ತಿಗಳುಸಂಪಾದಿಸಿ

 • ೩ ಬಾರಿ ರಾಜ್ಯ ಪ್ರಶಸ್ತಿ
 • ರಾಜ್ಯೋತ್ಸವ ಪ್ರಶಸ್ತಿ
 • ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿ

ನಿಧನಸಂಪಾದಿಸಿ

ಆರ್. ಎನ್. ಜಯಗೋಪಾಲ್ ಅವರು ಚೆನ್ನೈ‌ನಲ್ಲಿ, ಮೇ.೧೯.೨೦೦೮ರ ಸೋಮವಾರದಂದು ನಿಧನರಾದರು.

ಹೊರಗಿನ ಸಂಪರ್ಕಗಳುಸಂಪಾದಿಸಿ

ಮಾಹಿತಿ ನೆರವು - ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ,ಲೇಖಕರು :ಎನ್.ಎಸ್.ಶ್ರೀಧರ ಮೂರ್ತಿ