ಕಸ್ತೂರಿ ನಿವಾಸ
ಕಸ್ತೂರಿ ನಿವಾಸ |
---|
ಕಸ್ತೂರಿ ನಿವಾಸ
ಬದಲಾಯಿಸಿಈ ಚಿತ್ರವನ್ನು ೧೯೭೧ ರಲ್ಲಿ ತಯಾರಿಸಲಾಯ್ತು. ಜಿ. ಬಾಲಸುಬ್ರಮಣ್ಯಂ ಅವರ ಈ ಕತೆಯನ್ನು ಮೊದಲು ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಅವರಿಗೆ ಹೇಳಲಾಗಿತ್ತು. ಆದರೆ ಕೊನೆಯಲ್ಲಿ ನಾಯಕ ಸಾಯುವ ಈ ಕತೆಯನ್ನು ಚಿತ್ರ ಮಾಡಿದರೆ ಅದು ಓಡಲ್ಲ ಎಂದು ಹೇಳಿ ಅವರು ನಿರಾಕರಿಸಿದ್ದರಂತೆ. ನಂತರ ಅದೇ ಕತೆಯನ್ನು ದೊರೆ-ಭಗವಾನ್ ಜೋಡಿ ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಅವರನ್ನು ನಾಯಕರನ್ನಾಗಿ ಹಾಕಿಕೊಂಡು ಚಿತ್ರೀಕರಿಸಿದರು.
ಅಂದು ಈ ಚಿತ್ರಕ್ಕೆ ಸುಮಾರು ನಾಲ್ಕು ಲಕ್ಷ ರೂಪಾಯಿ ಮಾತ್ರ ವೆಚ್ಚವಾಗಿತ್ತು ಎಂದು ಹೇಳಲಾಗಿದೆ. ಬಿಡುಗಡೆಯಾದ ನಂತರ ೧೬ ಚಿತ್ರಮಂದಿರಗಳಲ್ಲಿ ಅಮೋಘ ನೂರು ದಿನ ಪೂರೈಸಿತು. ಇದನ್ನು ತಿಳಿದ ಶಿವಾಜಿ ಗಣೇಶನ್ ಬಂದು ರಾಜ್ ಅಭಿನಯವನ್ನು ನೋಡಿ ಕಣ್ಣೀರಾದರಂತೆ. ಮೊದಲು ತಾವು ಕತೆಯನ್ನು ನಿರಾಕರಿಸಿದ್ದನ್ನು ನೆನೆದು ನೊಂದುಕೊಂಡು ತಾವೇ ನಾಯಕರಾಗಿ ಈ ಕತೆಯನ್ನು ತಮಿಳಿನಲ್ಲಿ ತೆಗೆಯಲು ಬಯಸಿದರು. ಹಾಗೂ ಅವರ ನಟನೆಯ ತಮಿಳಿನ ಈ ಚಿತ್ರವೂ ಸಹ ಅಲ್ಲಿ ಅಮೋಘ ಯಶಸ್ಸನ್ನೂ ಪಡೆಯಿತು.
ಬಣ್ಣದಲ್ಲಿ
ಬದಲಾಯಿಸಿ೧೯೯೭೧ರ ಮೂಲ ಚಿತ್ರ ಕಪ್ಪು ಬಿಳುಪಿನದಾಗಿದ್ದು ಕನ್ನಡದ ಒಂದು ಅವಿಸ್ಮರಣೀಯ ಚಿತ್ರವಾಗಿ ಉಳಿದು ಬಂದಿದೆ. ಈ ಚಿತ್ರವನ್ನು ೨೦೧೪ರಲ್ಲಿ ನಿರ್ಮಾಪಕ ಕೆ.ಸಿ.ಎನ್. ಮೋಹನ್ (ಕೆ.ಸಿ.ಎನ್. ಗೌಡರ ಪುತ್ರ) ಸುಮಾರು ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿ ವರ್ಣಮಯಗೊಳಿಸಿ ಬಿಡುಗಡೆ ಮಾಡಿದ್ದಾರೆ. ಈ ವರ್ಣಮಯ ಕಸ್ತೂರಿನಿವಾಸಕ್ಕೂ ಸಹ ಜನರಿಂದ ಅಭೂತಪೂರ್ವ ಸ್ವಾಗತ ದೊರೆತಿದ್ದು ಈ ಬಾರಿಯೂ ಸಹ ನೂರು ದಿನ ಪೂರೈಸುವತ್ತ ಮುನ್ನಡೆದಿದೆ.