ಆರ್.ಎನ್.ಸುದರ್ಶನ್
ರಟ್ಟಿಹಳ್ಳಿ ನಾಗೇಂದ್ರ ಸುದರ್ಶನ್ (೨ ಮೇ ೧೯೩೯ - ೮ ಸೆಪ್ಟೆಂಬರ್ ೨೦೧೭) ಒಬ್ಬ ಹಿರಿಯ ಭಾರತೀಯ ನಟ, ಕಂಠದಾನ ಕಲಾವಿದ, ಗಾಯಕ ಹಾಗೂ ಸಿನೆಮಾ ನಿರ್ಮಾಪಕ. ಕನ್ನಡ, ತೆಲುಗು, ತಮಿಳು, ಹಾಗೂ ಮಲಯಾಳಂ ಭಾಷೆಯ 250ಕ್ಕೂ ಅಧಿಕ ಸಿನೆಮಾಗಳಲ್ಲಿ ಅಭಿನಯಸಿದ್ದಾರೆ. [೧][೨]
ಆರ. ಎನ. ಸುದರ್ಶನ R. N. Sudarshan | |
---|---|
Born | ಕರ್ನಾಟಕ, ಬ್ರಿಟಿಷ್ ಭಾರತ | ೨ ಮೇ ೧೯೩೯
Died | 8 September 2017 | (aged 78)
Nationality | ಭಾರತೀಯ |
Occupation(s) | ನಟ, ಗಾಯಕ, ನಿರ್ಮಾಪಕ |
Years active | 1961–2017 |
Spouse | ಶೈಲಶ್ರೀ |
Parent(s) | ಆರ್.ನಾಗೇಂದ್ರರಾವ್, ರತ್ನಾಬಾಯಿ |
Family | ಆರ್.ಎನ್.ಕೃಷ್ಣ ಪ್ರಸಾದ್(ಸಹೋದರ), ಆರ್.ಎನ್.ಜಯಗೋಪಾಲ್ (ಸಹೋದರ), ಆರ್. ಅರುಣ್ ಕುಮಾರ್ (ಮಗ) |
ಜನನ, ಕುಟುಂಬ
ಬದಲಾಯಿಸಿಮೇ 2, 1939ರಲ್ಲಿ ಜನಿಸಿದ ಸುದರ್ಶನ್ ಅವರ ತಂದೆ ದಿವಂಗತ ಆರ್.ನಾಗೇಂದ್ರರಾವ್ ಕೂಡ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಸಂಗೀತ ಸಂಯೋಜಕರಾಗಿದ್ದರು. ಸುದರ್ಶನ್ ಅವರ ಸಹೋದರರಾದ ಆರ್.ಎನ್.ಜಯಗೋಪಾಲ್ ಹಾಗೂ ಆರ್.ಎನ್.ಕೃಷ್ಣ ಪ್ರಸಾದ್ ಕೂಡ ಚಿತ್ರರಂಗದಲ್ಲಿ ತೊಡಗಿಕೊಂಡವರು. ಪತ್ನಿ ಶೈಲಶ್ರೀ ಕೂಡ ಕಲಾವಿದೆಯಾಗಿದ್ದು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಸಿನೆಮಾ ಜೀವನ
ಬದಲಾಯಿಸಿಸುದರ್ಶನ ೫ ದಶಕಗಳ ಕಾಲ ಸಿನೆಮಾರಂಗದಲ್ಲಿ ಇದ್ದವರು. ೨೫೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಪಾತ್ರಗಳನ್ನು ಮಾಡಿದ್ದಾರೆ. ನಾಯಕನಾಗಿ ಹಾಗೂ ಖಳನಾಯಕನಾಗಿ ಪ್ರಸಿದ್ಧರಾಗಿದ್ದರು. ೬೦ ಸಿನೆಮಾಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ.[೩] 1961ರಲ್ಲಿ ಅವರ ೨೧ನೇ ವಯಸ್ಸಿನಲ್ಲಿ ನಟಿಸಿದ ವಿಜಯನಗರದ ವೀರಪುತ್ರ ಅವರ ಮೊದಲ ಚಿತ್ರ. ಅದಕ್ಕೆ ಅವರ ತಂದೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದರು, ಜೊತೆಗೆ ಸಿನೆಮಾದಲ್ಲಿ ಅಭಿನಯಿಸಿದ್ದರು. ಕತೆ ಚಿತ್ರಕತೆ, ಸಾಹಿತ್ಯ ಸಹೋದರ ಜಯಗೋಪಾಲ್ ಹಾಗೂ ಕ್ಯಾಮರಾ ಕೆಲಸ ಮತ್ತೊಬ್ಬ ಸಹೋದರ ಕೃಷ್ಣಪ್ರಸಾದ್ ಮಾಡಿದ್ದರು. ಬಿ. ಸರೋಜಾದೇವಿ ಈ ಚಿತ್ರದಲ್ಲಿ ನಾಯಕನಟಿಯಾಗಿದ್ದರು. "ಅಪಾರ ಕೀರ್ತಿ ಮೆರೆದ ಭವ್ಯ ನಾಡಿದು..." ಎಂಬ ಹಾಡು ಪ್ರಸಿದ್ಧವಾಗಿ ಸುದರ್ಶನರಿಗೂ ಒಳ್ಳೆಯ ಹೆಸರು ತಂದುಕೊಟ್ಟಿತು. ನಂತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. 2006ರಲ್ಲಿ ತೆರೆಕಂಡ ಮಠ ಚಿತ್ರದಲ್ಲಿ ಸುದರ್ಶನ್ ಅವರ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಇದಾದ ಬಳಿಕ ಉಪೇಂದ್ರ ಅಭಿನಯದ ಸೂಪರ್ ಚಿತ್ರದಲ್ಲಿ ಉಪೇಂದ್ರರ ತಂದೆಯ ಪಾತ್ರದಲ್ಲಿ ಅಭಿನಯಿಸಿದರು. 2012ರಲ್ಲಿ ತೆರೆಕಂಡ ’ಚಾರುಲತಾ’ ಚಿತ್ರ ಸುದರ್ಶನ್ ರವರ ಕೊನೆಯ ಚಿತ್ರ.
ಅವರ ಅಭಿನಯದ ಸಿನೆಮಾಗಳು (ಅಪೂರ್ಣ ಪಟ್ಟಿ):
ನಾಯಕನಾಗಿ
ಬದಲಾಯಿಸಿ- ವಿಜಯನಗರದ ವೀರಪುತ್ರ [೪]
- ನಗುವ ಹೂವು,
- ಮರೆಯದ ದೀಪಾವಳಿ
- ಲಕ್ಷ್ಮೀ-ಸರಸ್ವತಿ,
- ಕಾಡಿನ ರಹಸ್ಯ,
- ತಂದೆ-ಮಕ್ಕಳು,
- ನಾಡಿನ ಭಾಗ್ಯ,
ಖಳನಟ ಮತ್ತು ಪೋಷಕ ನಟ
ಬದಲಾಯಿಸಿ- ಚಾಣಕ್ಯ
- ಕರ್ತವ್ಯ
- ಬ್ರಹ್ಮ ವಿಷ್ಣು ಮಹೇಶ್ವರ
- ಪ್ರಚಂಡ ಕುಳ್ಳ
- ಗುರು ಜಗದ್ಗುರು
- ಹೃದಯ ಪಲ್ಲವಿ
- ಸೂಪರ್
- ಮಠ
- ದಶಮುಖ
- ಚಾರುಲತಾ
ಇತರ
ಬದಲಾಯಿಸಿ- ಮರಿಯಾ ಮೈಡಾರ್ಲಿಂಗ್
- ಪಗಡೈ ಪಮಿರೆಂಡು
- ನಾಯಗನ್
ಧಾರಾವಾಹಿಗಳು
ಬದಲಾಯಿಸಿ- ಅಗ್ನಿಸಾಕ್ಷಿ
- ಮರಗತ ವೀಣೈ
- ಮೈ ಡಿಯರ್ ಭೂತಂ
- ಮಾಯಾ ಮಚ್ಚಿಂದ್ರ
- ವೇಲನ್
ಪ್ರಶಸ್ತಿ, ಗೌರವಗಳು
ಬದಲಾಯಿಸಿ- ೨೦೦೯-೧೦ ನೇ ಸಾಲಿನ ಕರ್ನಾಟಕ ಸರ್ಕಾರದ ’ಡಾ. ರಾಜಕುಮಾರ್’ ಪ್ರಶಸ್ತಿ.[೫]
ನಿಧನ
ಬದಲಾಯಿಸಿ೦೮ ಸೆಪ್ಟೆಂಬರ್ ೨೦೧೭ರಂದು ನಿಧನರಾದರು. ಅವರಿಗೆ ೭೮ ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ತಿಲಕನಗರದ ಸಾಗರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.[೬]
ಉಲ್ಲೇಖಗಳು
ಬದಲಾಯಿಸಿ- ↑ ದಕ್ಷಿಣ ಭಾರತದ ಖ್ಯಾತ ಹಿರಿಯ ನಟ ಸುದರ್ಶನ್ ವಿಧಿವಿಶ www.kannadaprabha.com
- ↑ http://m.imdb.com/name/nm5676808/
- ↑ http://www.udayavani.com/kannada/news/state-news/235735/actor-and-producer-rn-sudarshan-dies-at-78
- ↑ https://chiloka.com/celebrity/r-n-sudarshan
- ↑ ಅಪಾರ ಕೀರ್ತಿ ಮೆರೆದು ಅಗಲಿದ ಪ್ರತಿಭೆ Archived 2018-02-22 ವೇಬ್ಯಾಕ್ ಮೆಷಿನ್ ನಲ್ಲಿ., ವಿಜಯವಾಣಿ, ೯ ಸೆಟ್ಟೆಂಬರ್ ೨೦೧೭
- ↑ ಹಿರಿಯ ನಟ ಆರ್.ಎನ್.ಸುದರ್ಶನ್ ನಿಧನ - ಉದಯವಾಣಿ, Sep 09, 2017