ಪಿ.ಬಿ.ಶ್ರೀನಿವಾಸ್

ಭಾರತೀಯ ಹಿನ್ನೆಲೆ ಗಾಯಕ, ಗೀತರಚನೆಕಾರ


ಪಿ.ಬಿ. ಶ್ರೀನಿವಾಸ್ (ಸೆಪ್ಟೆಂಬರ್ ೨೨,೧೯೩೦ - ಏಪ್ರಿಲ್ ೧೪, ೨೦೧೩) ಚಲನಚಿತ್ರರಂಗದ ಶ್ರೇಷ್ಠ ಗಾಯಕರಲ್ಲೊಬ್ಬರು.

ಪಿ. ಬಿ. ಶ್ರೀನಿವಾಸ್
Pbs.jpg
ಜನ್ಮನಾಮ
ಪ್ರತಿವಾದಿ ಭಯಂಕರ ಶ್ರೀನಿವಾಸ್

ಸೆಪ್ಟೆಂಬರ್ ೨೨, ೧೯೩೦
ಮರಣಏಪ್ರಿಲ್ ೧೪, ೨೦೧೩
ಚೆನ್ನೈ, ತಮಿಳುನಾಡು
ಬೇರೆ ಹೆಸರುಗಳುಪಿ. ಬಿ. ಎಸ್
ವೃತ್ತಿಚಲನಚಿತ್ರ ಹಿನ್ನೆಲೆ ಗಾಯಕರು
ಸಕ್ರಿಯ ವರ್ಷಗಳು೧೯೫೧-೨೦೧೩

ಜೀವನಸಂಪಾದಿಸಿ

 • ಅವರ ಪೂರ್ಣ ಹೆಸರು 'ಪ್ರತಿವಾದಿ ಭಯಂಕರ ಶ್ರೀನಿವಾಸ್' ಆಂದ್ರ ಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. 'ಪ್ರತಿವಾದಿ ಭಯಂಕರ' ಎನ್ನುವುದು ಇವರ ಮನೆತನಕ್ಕೆ ಇದ್ದ ಹೆಸರು. ಇವರ ವಂಶಸ್ಥರು ವಾದ ಮಾಡುವುದರಲ್ಲಿ ತುಂಬಾ ಪ್ರಸಿದ್ಧರಾಗಿದ್ದರಂತೆ. ಪಿ. ಬಿ. ಎಸ್ ಎಂದು ಪ್ರಖ್ಯಾತರಾದ ಪಿ. ಬಿ. ಶ್ರೀನಿವಾಸರು ಕನ್ನಡ ಚಿತ್ರರಂಗ ಕಂಡಿರುವ ಜನಪ್ರಿಯ ಹಿನ್ನೆಲೆ ಗಾಯಕರುಗಳಲ್ಲೊಬ್ಬರು. ಇವರು ಹಾಡಿರುವ ಕನ್ನಡ ಚಿತ್ರಗೀತೆಗಳು ಅಪಾರ ಜನಪ್ರಿಯತೆಗಳಿಸಿವೆ.
 • ಅವರು ತಮಿಳು, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲೂ ಜನಪ್ರಿಯರಾಗಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಉರ್ದು, ಹಿಂದಿ, ಸಂಸ್ಕೃತ ಈ ಎಂಟು ಭಾಷೆಗಳಲ್ಲೂ ಅವರಿಗೆ ಸಂಪೂರ್ಣ ಪಾಂಡಿತ್ಯವಿತ್ತು.ಶಾಲಾ ದಿನಗಳಲ್ಲೇ ಸಂಗೀತದಲ್ಲಿ ಅಪಾರ ಆಸಕ್ತಿ.ಬಿಕಾಂ ಪದವಿ ಪಡೆದು,ಕಾನೂನು ವ್ಯಾಸಂಗ ಮಾಡುತ್ತಿರುವಾಗ ಪರಿಚಯವಾದ ಗೋವರ್ಧನ್ ಅವರ ಸಲಹೆಯಂತೆ ಜೆಮಿನಿ ಸ್ಟುಡಿಯೊದಲ್ಲಿ ವಾದ್ಯವೃಂದ ನೋಡಿಕೊಳ್ಳುತ್ತಾ ಸಂಗೀತ ಕಲಿಯಲು ಪ್ರಾರಂಭಿಸಿದರು.

ಚಿತ್ರರಂಗಕ್ಕೆ ಪರಿಚಯಸಂಪಾದಿಸಿ

ಪಿ. ಬಿ. ಶ್ರೀನಿವಾಸರು ಹಾಡಿದ್ದು ಜೆಮಿನಿ ಸಂಸ್ಥೆ ತಯಾರಿಸಿದ ಹಿಂದಿ ಚಿತ್ರ 'ಮಿಸ್ಟರ್ ಸಂಪತ್'. ಪಿ.ಬಿ. ಶ್ರೀನಿವಾಸ್‌ರವರನ್ನು ಕನ್ನಡಕ್ಕೆ ಪರಿಚಯಿಸಿದವರು ಹೆಸರಾಂತ ನಿರ್ಮಾಪಕರೂ, ನಿರ್ದೇಶಕರೂ, ಕಲಾವಿದರೂ ಆಗಿದ್ದ ಆರ್. ನಾಗೇಂದ್ರರಾಯರು. ಅವರು ಹಾಡಿದ ಮೊದಲ ಕನ್ನಡ ಹಾಡು ಜಾತಕಫಲ(೧೯೫೩) ಚಿತ್ರಕ್ಕೆ. ನಂತರ ಓಹಿಲೇಶ್ವರ, ಭಕ್ತ ಕನಕದಾಸ...ಹೀಗೆ ಮುಂದುವರೆಯುತ್ತಾ ಹೋಯಿತು.

ರಾಜ್ ಕುಮಾರ್ ಅವರಿಗೆ ಹೊಂದಿದ್ದ ಧ್ವನಿಸಂಪಾದಿಸಿ

 • ಕನ್ನಡದ ಮುಖ್ಯ ನಾಯಕ ನಟರಾಗಿದ್ದ ಡಾ.ರಾಜ್‍ಕುಮಾರ್ ಅವರಿಗೆ ಪಿ.ಬಿ. ಶ್ರೀನಿವಾಸ್ ಅವರ ಕಂಠ ಬಹಳ ಸೂಕ್ತವಾಗಿ ಹೊಂದುತ್ತಿತ್ತು. ಡಾ.ರಾಜಕುಮಾರ್ ಸ್ವತ: ಹಾಡಲು ಪ್ರಾರಂಭಿಸುವವರೆಗೆ , ಅವರ ಬಹುತೇಕ ಚಿತ್ರಗಳಿಗೆ ಪಿ.ಬಿ.ಶ್ರೀನಿವಾಸ್ ಧ್ವನಿ ನೀಡಿದ್ದರು.
 • ಡಾ.ರಾಜ್ ಕುಮಾರ್ ಅವರಿಗೆ ಪಿ.ಬಿ. ಶ್ರೀನಿವಾಸ್ ಅವರ ಕಂಠ ಬಹಳ ಸೂಕ್ತವಾಗಿ ಹೊಂದುತ್ತಿತ್ತು. ಒಮ್ಮೆ ರಾಜ್ ಹೇಳಿದ್ದರು: “ಪಿ.ಬಿ. ಶ್ರೀನಿವಾಸ್ ಧ್ವನಿ ನನಗೆ ಆತ್ಮವಿದ್ದಂತೆ”. ಸುಮಾರು ಇನ್ನೂರಕ್ಕೂ ಹೆಚ್ಚು ಹಾಡುಗಳನ್ನು ರಾಜ್ ಕುಮಾರ್ ಅವರಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ.

ಕೆಲವೊಂದು ಜನಪ್ರಿಯ ಗೀತೆಗಳುಸಂಪಾದಿಸಿ

 • ಭಕ್ತ ಕನಕದಾಸ ಚಿತ್ರದ "ಬದುಕಿದೆನು ಬದುಕಿದೆನು ಭವ ಎನಗೆ ಇಂಗಿತು..." ಹಾಡು ಅವರಿಗೆ ಬಹಳ ಮೆಚ್ಚುಗೆಯಾದ ಗೀತೆಯಂತೆ. ಅದೇ ಚಿತ್ರದ 'ಕುಲ, ಕುಲ ಕುಲವೆಂದು ಹೊಡೆದಾಡದಿರಿ', 'ಶೃಂಗಾರ ಶೀಲ' ಮುಂತಾದ ಹಾಡುಗಳಲ್ಲದೆ, ನಗು ನಗುತಾ ನಲಿ, ಬಾರೆ ಬಾರೆ, ಜನುಮ ಜನುಮದ ಅನುಬಂಧ, ನಾವಾಡುವ ನುಡಿಯೇ, ಕಣ್ಣಂಚಿನ ಈ ಮಾತಲಿ, ಇಳಿದು ಬಾ ತಾಯಿ, ಹಾಡೊಂದ ಹಾಡುವೆ, ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ, ಆಕಾಶವೆ ಬೀಳಲಿ ಮೇಲೆ, ನಿಲ್ಲು ನೀ ನಿಲ್ಲು ನೀ ನೀಲವೇಣಿ, ಆಹಾ ಮೈಸೂರು ಮಲ್ಲಿಗೆ, ವೇದಾಂತಿ ಹೇಳಿದನು, ದೀನ ನಾ ಬಂದಿರುವೆ, ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು, ಒಲುಮೆಯ ಹೂವೇ ನೀ ಹೋದೆ ಎಲ್ಲಿಗೆ, ಎಲ್ಲಿ ಮರೆಯಾದೆ ವಿಠ್ಠಲ, ಕಂಡೆ ಹರಿಯ ಕಂಡೆ, ನಾನು ನೀನು ನೆಂಟರಯ್ಯ, ಹರಿನಾಮವೇ ಚೆಂದ, ಬೆಳದಿಂಗಳಿನ ನೊರೆ ಹಾಲು ಕೊಡದಲಿ ತುಂಬಿ ತಂದವಳೆ, ಒಲವೆ ಜೀವನ ಸಾಕ್ಷಾತ್ಕಾರ, ಜಗದೀಶನಾಡುವ ಜಗವೇ ನಾಟಕ ರಂಗ, ಮನವೇ ಮಂದಿರ, ನನ್ನವಳು ನನ್ನೆದೆಯ ಹೊನ್ನಾಡನಾಳುವಳು, ರವಿವರ್ಮನ ಕುಂಚದ ಕಲೆ ಬಲೆ, ದಿವ್ಯ ಗಗನ ವನವಾಸಿನಿ ಹೀಗೆ ಅವರ ಹಾಡುಗಳ ಕುರಿತಾದ ಕನ್ನಡಿಗರ ಪ್ರೀತಿಯ ಪಟ್ಟಿಗೆ ಕೊನೆಯೇ ಇಲ್ಲ.

ಇತರ ಭಾಷೆಗಳಲ್ಲಿಸಂಪಾದಿಸಿ

ತಮಿಳಿನ ಜೆಮಿನಿ ಗಣೇಶನ್ ಅವರಿಗೂ ಪಿ.ಎ.ಎಸ್ ಅವರೇ ಬೇಕಿತ್ತು. ತಮಿಳಿನಲ್ಲೂ ಅವರ ಪ್ರತಿ ಹಾಡುಗಳು ಅಷ್ಟೇ ರೋಮಾಂಚನದ ಅನುಭವ ನೀಡುತ್ತವೆ. ಸ್ವತ ಪಿ.ಬಿ.ಎಸ್ ತೆಲುಗಿನವರಾದರೂ, ತೆಲುಗಿನಲ್ಲಿ ಘಂಟಸಾಲ ಮತ್ತು ಎಸ್.ಪಿ.ಬಿ ಅವರ ಹಾಡುಗಳೇ ಕಿವಿಗೆ ಬಿದ್ದದ್ದು ಹೆಚ್ಚು.

ಭಕ್ತಿ ಗೀತೆಗಳಲ್ಲಿಸಂಪಾದಿಸಿ

ಅವರ ಮುಕುಂದ ಮಾಲ, ಶಾರದಾ ಸ್ತೋತ್ರ ಮುಂತಾದ ಸಂಸ್ಕೃತ ಶ್ಲೋಕಗಳನ್ನು ಕೇಳುವಾಗ ಉಂಟಾಗುವ ಆನಂದ ಅವರ್ಣನೀಯ. ಭಕ್ತಿ ಗೀತೆಗಳಲ್ಲಿ ಎದ್ದೇಳು ಮಂಜುನಾಥ ಹಾಡು, ಪ್ರಕೃತಿಯನ್ನೂ, ಭಕ್ತರನ್ನೂ, ದೇವರನ್ನೂ ಒಮ್ಮೆಲೆ ಮುದದಿಂದ ಸುಪ್ರಭಾತಿಸುತ್ತದೆ. ಅವರ ಭಾದ್ರಪದ ಶುಕ್ಲದ ಚೌತಿಯಂದು, ಶರಣು ಶರಣಯ್ಯ ಶರಣು ಬೆನಕ ಮುಂತಾದ ಗೀತೆಗಳಿಲ್ಲದೆ ಗಣಪತಿ ಹಬ್ಬ ಆಗುವುದಾದರೂ ಎಂತು.

ಬರಹಗಾರರಾಗಿಸಂಪಾದಿಸಿ

 • ಪಿ ಬಿ ಶ್ರೀನಿವಾಸರು ಹಿನ್ನೆಲೆ ಗಾಯಕರಲ್ಲದೆ ಸಹಸ್ರಾರು ಹಾಡುಗಳನ್ನು ಸುಮಾರು ಎಂಟು ಭಾಷೆಗಳಲ್ಲಿ ಬರೆದಿದ್ದಾರಂತೆ. ನೀಲ್ ಆರ್ಮ್ ಸ್ಟ್ರಾಂಗ್ ಅವರು ಪ್ರಥಮ ಬಾರಿಗೆ ಚಂದ್ರಯಾನದ ಯಶಸ್ಸನ್ನು ಕುರಿತು, ಅವರು ಬರೆದಿರುವ ಇಂಗ್ಲಿಷ್ ಗೀತೆಯನ್ನು ಅಮೆರಿಕದ ಅಧ್ಯಕ್ಷರೇ ಪ್ರಶಂಸಿಸಿದ್ದಾರಂತೆ. ಅವರು ಅಮೆರಿಕದಲ್ಲಿದ್ದ ಸಂದರ್ಭದಲ್ಲಿದ್ದಾಗ ಒಂದು ಸಮಾರಂಭದಲ್ಲಿ ಈ ಹಾಡನ್ನು ಕೇಳಿದ ಪ್ರಸಿದ್ಧ ವಿಶ್ವವಿದ್ಯಾಲಯದ ಮುಖ್ಯಸ್ಥರು ಅವರನ್ನು ಡಾಕ್ಟರೇಟ್ ಪದವಿಗೆ ಶಿಫಾರಸ್ಸು ಮಾಡಿದರು.
 • ಹೀಗಾಗಿ ಪಿ ಬಿ ಎಸ್ ಅವರಿಗೆ ದೊರೆತ ಮೊದಲ ಡಾಕ್ಟರೇಟ್ ಗೌರವ ಅಮೆರಿಕದ ವಿಶ್ವವಿದ್ಯಾಲಯದ್ದು.. ಅವರು ಹಲವಾರು ಗಝಲ್‌ಗಳನ್ನು ಕನ್ನಡದಲ್ಲಿ ಬರೆದಿದ್ದಾರಂತೆ. ಭಾಗ್ಯಜ್ಯೋತಿ ಚಿತ್ರಕ್ಕೆ ಅವರು ವಾಣಿ ಜಯರಾಂ ಅವರೊಂದಿಗೆ ಹಾಡಿರುವ "ದಿವ್ಯಗಗನ ವನವಾಸಿನಿ." ಎಂಬ ಸಂಸ್ಕೃತ ಗೀತೆ ಅವರ ಸ್ವಂತ ರಚನೆ. "ನವನೀತ ಸುಮಸುಧಾ" ಎಂಬ ರಾಗ ಅವರ ಸ್ವಯಂ ಸೃಷ್ಟಿ. 'ಶ್ರೀನಿವಾಸ ಗಾಯತ್ರಿ ವ್ರತ', 'ಗಾಯಕುಡಿ ಗೇಯಲು', ‘ಪ್ರಣವಂ’ ಎನ್ನುವ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.
 • ಕನ್ನಡ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಪಿ ಬಿ ಶ್ರೀನಿವಾಸರು ತಮ್ಮ ಜೇಬಿನಲ್ಲಿ ಹಲವು ಪೆನ್ನುಗಳು, ಅವರೊಂದಿಗಿದ್ದ ಹಲವು ಪುಸ್ತಕಗಳು ಹಾಗೂ ಅವರು ರಚಿಸಿದ ಹಾಡುಗಳ ಬಗ್ಗೆ ಮಾತನಾಡಿ, ಪಿ ಬಿ ಎಸ್‌ ಎಂದರೆ ಪ್ಲೇ ಬ್ಯಾಕ್‌ ಸಿಂಗರ್‌' ಅಲ್ಲದೆ 'ಪೆನ್ಸ್‌, ಬುಕ್ಸ್ ಅಂಡ್‌ ಸಾಂಗ್ಸ್‌' (ಪೆನ್ನುಗಳು, ಪುಸ್ತಕಗಳು ಮತ್ತು ಹಾಡುಗಳು) ಎಂದೂ ಅರ್ಥ ನೀಡಬಲ್ಲದು ಎಂದು ಹೇಳಿದ್ದರು.

ಪ್ರಶಸ್ತಿಗಳುಸಂಪಾದಿಸಿ

 1. ಆರಿಝೋನ ಯುನಿವೆರ್ಸಿಟಿ ಇಂದ ಡಾಕ್ಟರೇಟ್
 2. ೧೯೯೮ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
 3. ವಿದ್ವತ್ ಶಿರೋಮಣಿ ಪ್ರಶಸ್ತಿ
 4. ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿ
 5. ರಾಜ್ ಕುಮಾರ್ ಸೌಹಾರ್ಧ ಪ್ರಶಸ್ತಿ

ವಿದಾಯಸಂಪಾದಿಸಿ

 • ಕೆಲವು ಕಾಲ ಅನಾರೋಗ್ಯದಿಂದಿದ್ದ ಡಾ. ಪಿ. ಬಿ. ಶ್ರೀನಿವಾಸರು ಏಪ್ರಿಲ್ ೧೪, ೨೦೧೩ರಂದು ಚೆನ್ನೈನಲ್ಲಿ ನಿಧನರಾದರು. ಅವರ ಪ್ರೀತಿಯ ಅಭಿಮಾನಿಗಳ ಹೃದಯದಲ್ಲಿ ಅವರ ಇಂಪಾದ ದನಿ ಎಂದೂ ಝೇಂಕರಿಸುತ್ತಿರುತ್ತದೆ. ಡಾ||ಪಿ.ಬಿ.ಶ್ರೀನಿವಾಸ್ ಅವರ ಜೀವನ ಸಾಧನೆ ಕುರಿತಂತೆ ಸಂಶೋಧನಾತ್ಮಕವಾದ ಕೃತಿ 'ಮಾಧುರ್ಯ ಸಾರ್ವಭೌಮ -ಡಾ||ಪಿ.ಬಿ.ಶ್ರೀನಿವಾಸ್ - ನಾದಯೋಗಿಯ ಸುನಾದಯಾನ' (ಲೇಖಕ - ಆರ್.ಶ್ರೀನಾಥ್) ಮೇ ೭, ೨೦೧೩ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಡುಗಡೆಯಾಯಿತು.
 • ಚಲನಚಿತ್ರ ಹಿನ್ನೆಲೆಗಾಯನ ಕ್ಷೇತ್ರದ ದಿಗ್ಗಜರಾದ ಡಾ||ಕೆ.ಜೆ. ಯೇಸುದಾಸ್, ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಂ ಅವರುಗಳು ಆ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಈ ಕೃತಿಗೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ, ನಟ, ಗಾಯಕ, ಕೆ.ಎಸ್.ಎಲ್. ಸ್ವಾಮೀ (ರವೀ) ಅವರ ಮುನ್ನುಡಿ ಮತ್ತು ಹಿರಿಯ ಪತ್ರಕರ್ತೆ, ಸಾಹಿತಿ, ಡಾ|| ವಿಜಯಾ ಅವರ ಬೆನ್ನುಡಿಯಿದೆ. ಅಮರ ಗಾಯಕನ ಕುರಿತಾದ ಈ ಮಹತ್ವದ ಕೃತಿಗೆ ೨೦೧೩ರ ಸಾಲಿನ "ಅತ್ಯುತ್ತಮ ಚಲನಚಿತ್ರ ಸಾಹಿತ್ಯಕೃತಿ" ರಾಜ್ಯ ಪ್ರಶಸ್ತಿ ಲಭಿಸಿದೆ.

ಪಿ.ಬಿ.ಶ್ರೀನಿವಾಸ್ ಹಾಡಿರುವ ಕೆಲವು ಚಿತ್ರಗಳುಸಂಪಾದಿಸಿ

 • ಜಾತಕಫಲ
 • ಶ್ರೀಕೃಷ್ಣಗಾರುಡಿ
 • ಮಹಿಷಾಸುರ ಮರ್ದಿನಿ
 • ಕನ್ಯಾರತ್ನ
 • ಶ್ರೀಶೈಲ ಮಹಾತ್ಮೆ
 • ಸತಿಸಾವಿತ್ರಿ
 • ಸಂಧ್ಯಾರಾಗ
 • ರತ್ನಮಂಜರಿ
 • ರಾಜದುರ್ಗದ ರಹಸ್ಯ
 • ಪಾರ್ವತಿ ಕಲ್ಯಾಣ
 • ನಂದಾದೀಪ
 • ನವಜೀವನ
 • ರಣಧೀರ ಕಂಠೀರವ
 • ನಮ್ಮ ಊರು
 • ನಮ್ಮ ಮಕ್ಕಳು
 • ನಾಂದಿ
 • ನಕ್ಕರೆ ಅದೇ ಸ್ವರ್ಗ
 • ಪ್ರತಿಧ್ವನಿ
 • ಪ್ರತಿಜ್ಞೆ
 • ರೌಡಿರಂಗಣ್ಣ
 • ರಾಣಿ ಹೊನ್ನಮ್ಮ
 • ಸರ್ವಮಂಗಳ
 • ಸತಿಸುಕನ್ಯ
 • ಸಂತ ತುಕಾರಾಂ
 • ಶ್ರೀ ರಾಮಾಂಜನೇಯ ಯುದ್ಧ.........ಹೀಗೆ ಹಲವಾರು. ಹಿಗೆ

ಪಿ.ಬಿ.ಶ್ರೀನಿವಾಸ್ ಹಾಡಿರುವ ಕೆಲವು ಮಧುರ ಗೀತೆಗಳುಸಂಪಾದಿಸಿ

 1. ನಾವಾಡುವ ನುಡಿಯೇ ಕನ್ನಡನುಡಿ - ಗಂಧದ ಗುಡಿ
 2. ನಗು ನಗುತ ನಲಿ ನಲಿ - ಬಂಗಾರದ ಮನುಷ್ಯ
 3. ವೈದೇಹಿ ಏನಾದಳು? - ದಶಾವತಾರ
 4. ಇಳಿದು ಬಾ ತಾಯೆ ಇಳಿದು ಬಾ - ಅರಿಶಿನ ಕುಂಕುಮ
 5. ಕಲ್ಲಾದೆ ಏಕೆಂದು ಬಲ್ಲೆ, ಶಿವನೇ - ಭಲೇ ಹುಚ್ಚ
 6. ಹಾರುತಿರುವ ಹಕ್ಕಿಗಳೇ - ಪ್ರತಿಧ್ವನಿ
 7. ಇವಳು ಯಾರು ಬಲ್ಲೆರೇನು - ಗೌರಿ
 8. ಒಲವಿನ ಪ್ರಿಯಲತೆ ಅವಳದೆ ಚಿಂತೆ - ಕುಲವಧು
 9. ಹಾಡೊಂದ ಹಾಡುವೆ ನೀ ಕೇಳು - ನಾಂದಿ
 10. ಬಾರೆ ಬಾರೆ ಚಂದದ ಚೆಲುವಿನ ತಾರೆ - ನಾಗರಹಾವು
 11. ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ - ಕಸ್ತೂರಿ ನಿವಾಸ
 12. ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು - ಕಸ್ತೂರಿ ನಿವಾಸ
 13. ಕನ್ನಡ ನಾಡಿನ ವೀರ ರಮಣಿಯ ಗಂಡು ಭೂಮಿಯ ವೀರ ನಾರಿಯ -ನಾಗರಹಾವು
 14. ಸಂಗಮ ಸಂಗಮ ಅನುರಾಗ ತಂದ ಸಂಗಮ - ನಾಗರಹಾವು
 15. ಕಮಲದ ಹೂವಿಂದ ಕೆನ್ನೆಯ ಮಾಡಿದನು - ಬಾಳು ಬೆಳಗಿತು
 16. ಉತ್ತರ ಧ್ರುವದಿಂ ದಕ್ಶಿಣ ಧ್ರುವಕೂ - ಶರಪಂಜರ
 17. ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ - ಎರಡು ಕನಸು
 18. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ - ಎರಡು ಕನಸು
 19. ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲದೆ - ಎರಡು ಕನಸು
 20. ಎಂದು ನಿನ್ನ ನೋಡುವೆ... - ಎರಡು ಕನಸು
 21. ಬಿಂಕದ ಸಿಂಗಾರಿ ಮೈ ಡೊಂಕಿನ ವಯ್ಯಾರಿ - ಕನ್ಯಾರತ್ನ
 22. ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ - ಗಾಂಧಿ ನಗರ
 23. ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವಿಗೆ - ದೂರದ ಬೆಟ್ಟ
 24. ಕಣ್ಣಂಚಿನ ಈ ಮಾತಲಿ ಏನೇನು ತುಂಬಿದೆ - ದಾರಿತಪ್ಪಿದ ಮಗ
 25. ಆಕಾಶವೆ ಬೀಳಲಿ ಮೇಲೆ ನಾ ನಿನ್ನ ಕೈ ಬಿಡೆನು - ನ್ಯಾಯವೇ ದೇವರು
 26. ಗೋಧೋಳಿ ಹಾರುವ ಹೊತ್ತು, ಹೆಗಲಲ್ಲಿ ನೇಗಿಲ ಹೊತ್ತು - ಪುನರ್ ಜನ್ಮ
 27. ಕನ್ನಡತಿ ನಮ್ಮೊಡತಿ, ನೀ ಕಣ್ಣು ತೆರೆದು ನೋಡಿ - ಪುನರ್ ಜನ್ಮ
 28. ಒಲಮೆಯ ಹೂವೇ ನೀ ಎಲ್ಲಿ ಹೋದೆ - ಪುನರ್ ಜನ್ಮ
 29. ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ - ಭಕ್ತ ಕನಕದಾಸ
 30. ಕುಲ ಕುಲ ಕುಲವೆಂದು ಹೊಡೆದಾಡದಿರಿ- ಭಕ್ತ ಕನಕದಾಸ
 31. ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ - ಸ್ವಯಂವರ
 32. ನಿಲ್ಲು ನೀ ನಿಲ್ಲು ನೀ ನೀಲವೇಣಿ - ಅಮರಶಿಲ್ಪಿ ಜಕ್ಕಣಾಚಾರಿ
 33. ಕಣ್ಣು ರೆಪ್ಪೆ ಒಂದನೊಂದು ಮರೆವುದೆ -
 34. ಆಗದು ಎಂದು ಕೈಲಾಗದು ಎಂದು ಕೈಕಟ್ಡಿ ಕುಳಿತರೆ -ಬಂಗಾರದ ಮನುಷ್ಯ
 35. ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ -ಬಂಗಾರದ ಮನುಷ್ಯ
 36. ಮೈಸೂರು ದಸರಾ ಎಷ್ಟೊಂದು ಸುಂದರ - ಕರುಳಿನಕರೆ
 37. ಯಾರು ಏನು ಮಾಡುವರು ನನಗೇನು ಕೇಡು ಮಾಡುವರು - ಕ್ರಾಂತಿವೀರ
 38. ನಿದಿರೆಯು ಸದಾ ಏಕೊ ದೂರ - ಸಿಪಾಯಿರಾಮು
 39. ಆಡುತಿರುವ ಮೋಡಗಳೆ ಹಾರುತಿರುವ ಹಕ್ಕಿಗಳೆ - ಬೆಟ್ಟದ ಹುಲಿ
 40. ವೇದಾಂತಿ ಹೇಳಿದನು ಮಣ್ಣೆಲ್ಲ ಹೊನ್ನು ಹೊನ್ನು - ಮಾನಸ ಸರೋವರ
 41. ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ - ಸಂಧ್ಯಾರಾಗ
 42. ಆ ಮೊಗವು ಎಂಥ ಚೆಲುವು - ಬಂಗಾರದ ಹೂ
 43. ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು - ಪ್ರೇಮದ ಕಾಣಿಕೆ
 44. ಭಗವಂತ ಕೈ ಕೊಟ್ಟ ದುಡಿಯೋಕಂತ - ಮಣ್ಣಿನ ಮಗ
 45. ಆಡೋಣ ನೀನು ನಾನು, ನನ್ನ ಆಸೆ ತಾರೆ ನೀನು - ಕಸ್ತೂರಿ ನಿವಾಸ
 46. ಬಂದೆ ನೀ ಬಂದೆ ಮನದ ಮನೆಯ ಅತಿಥಿಯಾಗಿ - ಗಂಡೊಂದು ಹೆಣ್ಣಾರು
 47. ಬಾರೇ ನೀ ಚೆಲುವೆ, ನಿನ್ನಂದ ಚೆಂದ ಮಕರಂದ - ಸ್ವರ್ಣಗೌರಿ
 48. ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು - ವಿಜಯನಗರದ ವೀರಪುತ್ರ
 49. ಒಲುಮೆಯ ಹೊವೇ ನೀ ಹೋದೆ ಎಲ್ಲಿಗೆ?
 50. ಮೌನವೇ ಆಭರಣ,ಮುಗುಳ್ನಗೇ ಶಶಿಕಿರಣ
 51. ಅಮ್ಮಾ,ಅಮ್ಮಾ ನೀ ಅಮ್ಮಾ ಎಂದಾಗ ಎಂಥ ಸಂತೊಷವು
 52. ಎಲ್ಲಿ ಮರೆಯಾದೆ ವಿಠ್ಠಲ, ಏಕೇ ದೂರಾದೆ? - ಭಕ್ತ ಕುಂಬಾರ
 53. ಬೆಳದಿಂಗಳಿನ ನೊರೆ ಹಾಲು ಕೊಡದಲಿ ತುಂಬಿ ತಂದವಳೆ
 54. ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ, ನಿಜ ಹೇಳಲೇನು - ಎರಡು ಕನಸು
 55. ಒಲವೆ ಜೀವನ ಸಾಕ್ಷಾತ್ಕಾರ - ಸಾಕ್ಷಾತ್ಕಾರ
 56. ರಂಗಿ ನಿನ್ ಮೇಲೆ ನನ್ನ ಮನಸೈತೆ ಕಣ್ ತುಂಬ ನಿನ್ ಗೊಂಬೆ ತುಂಬೈತೆ
 57. ನಿನದೆ ನೆನಪು ದಿನವು ಮನದಲ್ಲಿ - ರಾಜ ನನ್ನ ರಾಜ
 58. ನೂರು ಜನ್ಮ ಸಾಲದು ಈ ನಿನ್ನ ನೋಡಲು- ರಾಜ ನನ್ನ ರಾಜ
 59. ಬ್ರಹ್ಮಚಾರಿ ಮರುಳಾದ ಪ್ರೇಮ ದೇವಿಗೆ ಶರಣಾದ
 60. ಜಗದೀಶನಾಡುವ ಜಗವೇ ನಾಟಕ ರಂಗ
 61. ಜನ್ಮ ಜನ್ಮದ ಅನುಬಂಧ,ಹೃದಯ ಹೃದಯಗಳ ಪ್ರೇಮಾನುಬಂಧ - ಸಾಕ್ಷಾತ್ಕಾರ
 62. ಈ ದಿನ ಮಜ ಕಂಡೆನು ನಿಜ, ಆದೆನು ರಾಜ
 63. ಮನವೇ ಮಂದಿರ, ನ್ಯಾಯ ದೇಗುಲ - ತೂಗುದೀಪ
 64. ನನ್ನವಳು ನನ್ನೆದೆಯ, ಹೊನ್ನಾಡನಾಳುವಳು
 65. ಕನಸಿನ ದೇವಿಯಾಗಿ, ಮನಸಿನ ನಲ್ಲೆಯಾಗಿ
 66. ಶುಭಮಂಗಳ, ಸುಮಹೂರ್ತವೇ, ಸುಖವೇ
 67. ಸಿಹಿಮುತ್ತು,ಸಿಹಿಮುತ್ತು ಎನ್ನೊಂದು, ಕೆನ್ನೆಗೆ ಗಲ್ಲಕೆ ಮತ್ತೊಂದು- ನಾ ನಿನ್ನ ಮರೆಯಲಾರೆ
 68. ಒಂದು ಒಂದು ಮಾತು ನಾನು ಹೇಳಲೆ
 69. ರವಿವರ್ಮನ ಕುಂಚದ ಕಲೆ ಬಲೆ - ಸೊಸೆ ತಂದ ಸೌಭಾಗ್ಯ
 70. ಮಾನವ ದೇಹವು, ಮೂಳೆ ಮಾಂಸದ ತಡಿಕೆ - ಭಕ್ತ ಕುಂಬಾರ
 71. ಎಲ್ಲೂ ಹೋಗೊಲ್ಲ ಮಾಮ, ಎಲ್ಲೂ ಹೋಗೊಲ್ಲ - ಗಂಧದ ಗುಡಿ
 72. ಕಲ್ಲು ಸಕ್ಕರೆ ಕೊಳ್ಳಿರೋ, ನೀವೆಲ್ಲರೂ
 73. ಹಾಡೊಂದ ಹಾಡುವೆ ನೀ ಕೇಳು ಮಗುವೇ - ನಾಂದಿ
 74. ಹಳ್ಳಿಯಾದರೇನು ಶಿವ.... - ಮೇಯರ್ ಮುತ್ತಣ್ಣ
 75. ವೇದಾಂತಿ ಹೇಳಿದನು... - ಮಾನಸ ಸರೋವರ

ಇತರೆ ವಿಕಿಮೀಡಿಯ ಯೋಜನೆಗಳಲ್ಲಿ ಪಿ.ಬಿ.ಶ್ರೀನಿವಾಸ್ಸಂಪಾದಿಸಿ