ಪರಸಂಗದ ಗೆಂಡೆತಿಮ್ಮ

ಕನ್ನಡದ ಒಂದು ಚಲನಚಿತ್ರ

ಪರಸಂಗದ ಗೆಂಡೆತಿಮ್ಮ - ೧೯೭೮ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಹಾಸ್ಯ-ನಾಟಕ ಚಿತ್ರವಾಗಿದೆ. ಮಾರುತಿ ಶಿವ್ರಾಮ್ ನಿರ್ದೇಶಿಸಿದ ಚಿತ್ರವಿದು. ಶ್ರೀ ಕೃಷ್ಣ ಆಲನಹಳ್ಳಿ ಬರೆದ 'ಪರಸಂಗದ ಗೆಂಡೆತಿಮ್ಮ' ಕಾದಂಬರಿಯಿಂದ ಆಧಾರಿತವಾಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಲೋಕೇಶ್ ನಟಿಸಿದ್ದಾರೆ ಮತ್ತು ರೀತಾ ಅಂಚನ್, ಬಿ.ಆರ್ ಜಯರಾಮ್ ಮತ್ತು ರಾಮಕೃಷ್ಣ ತಾರಾಬಳಗವನ್ನು ಹೊಂದಿದೆ.

ಪರಸಂಗದ ಗೆಂಡೆತಿಮ್ಮ
ಪರಸಂಗದ ಗೆಂಡೆತಿಮ್ಮ
ನಿರ್ದೇಶನಮಾರುತಿ ಶಿವರಾಂ
ನಿರ್ಮಾಪಕಮಣಿ
ಪಾತ್ರವರ್ಗಲೋಕೇಶ್ ರೀತಾ ಅಂಚನ್ ಶ್ಯಾಮಲ, ಮಾನು, ಜೈರಾಮ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು೧೯೭೮
ಚಿತ್ರ ನಿರ್ಮಾಣ ಸಂಸ್ಥೆಕಲಾಕ್ಷೇತ್ರ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಇತರೆ ಮಾಹಿತಿಶ್ರೀಕೃಷ್ಣ ಆಲನಹಳ್ಳಿಯವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ.

ಈ ಚಿತ್ರವು ೧೯೭೮-೭೯ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು - ಮೂರನೇ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ (ಲೋಕೇಶ್) ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ (ರಾಜನ್-ನಾಗೇಂದ್ರ). ಚಿತ್ರ 'Rosaappo Ravikkai Kaari' ತಮಿಳಿನಲ್ಲಿ ಮರುರೂಪಿಸಲಾಗಿದೆ ಮಾಡಲಾಯಿತು.

  • ಲೋಕೇಶ್ - ಗೆಂಡೆತಿಮ್ಮ
  • ಬಿ.ಆರ್.ಜಯರಾಮ್
  • ರೀಟಾ ಅಂಚನ್
  • ರಾಮಕೃಷ್ಣ
  • ಮನು
  • ಶ್ಯಾಮಲಾ