ಮಣಿ
ಮಣಿಯು ನಾನಾಬಗೆಯ ಆಕಾರಗಳು ಮತ್ತು ಗಾತ್ರದಲ್ಲಿ ರೂಪಿಸಲಾದ ಚಿಕ್ಕ, ಅಲಂಕಾರಿಕ ವಸ್ತು. ಇವುಗಳನ್ನು ಕಲ್ಲು, ಮೂಳೆ, ಚಿಪ್ಪು, ಗಾಜು, ಪ್ಲಾಸ್ಟಿಕ್, ಕಟ್ಟಿಗೆ ಅಥವಾ ಮುತ್ತಿನಂತಹ ವಸ್ತುವಿನಿಂದ ರೂಪಿಸಲಾಗುತ್ತದೆ ಮತ್ತು ಇವುಗಳನ್ನು ದಾರದಲ್ಲಿ ಪೋಣಿಸಲು ಸಣ್ಣ ರಂಧ್ರವನ್ನು ಮಾಡಿರುತ್ತರೆ. ಮಣಿಗಳು ಗಾತ್ರದಲ್ಲಿ ೧ ಮಿಲಿಮೀಟರ್‌ಗಿಂತ ಚಿಕ್ಕ ಗಾತ್ರದಿಂದ ಹಿಡಿದು ೧ ಸೆಂಟಿಮೀಟರ್‌ಗಿಂತ ಹೆಚ್ಚಿನ ವ್ಯಾಸದವರೆಗೆ ವ್ಯಾಪಿಸುತ್ತವೆ. ಸರಿಸುಮಾರು ೧೦೦,೦೦೦ ವರ್ಷಗಳಷ್ಟು ಹಳೆಯದಾದ ನಾಸಾರಿಯಸ್ ಕಡಲ ಬಸವನ ಹುಳು ಚಿಪ್ಪುಗಳಿಂದ ತಯಾರಿಸಲಾದ ಜೋಡಿಮಣಿಗಳು ಪರಿಚಿತವಾದ ಆಭರಣಗಳ ಅತ್ಯಂತ ಮುಂಚಿನ ಉದಾಹರಣೆಗಳೆಂದು ಭಾವಿಸಲಾಗಿದೆ.[೧][೨] ಮಣಿಗೆಲಸವು ಮಣಿಗಳಿಂದ ವಸ್ತುಗಳನ್ನು ತಯಾರಿಸುವ ಕಲೆ ಅಥವಾ ಕೌಶಲವಾಗಿದೆ. ಮಣಿಗಳನ್ನು ವಿಶೇಷೀಕೃತ ದಾರದಿಂದ ಒಟ್ಟಾಗಿ ಹೆಣೆಯಬಹುದು, ದಾರ ಅಥವಾ ಮೃದು, ಮೆತುವಾದ ತಂತಿಯಲ್ಲಿ ಪೋಣಿಸಬಹುದು, ಅಥವಾ ಒಂದು ಮೇಲ್ಮೈಗೆ (ಉದಾ. ಬಟ್ಟೆ, ಜೇಡಿಮಣ್ಣು) ಅಂಟಿಸಬಹುದು.
ಉಲ್ಲೇಖಗಳು
ಬದಲಾಯಿಸಿ- ↑ "News in Science - Shell beads suggest new roots for culture - 23/06/2006". Abc.net.au. Retrieved 23 October 2017.
- ↑ Bouzouggar, Abdeljalil; Barton, Nick; Vanhaeren, Marian; d'Errico, Francesco; Collcutt, Simon; Higham, Tom; Hodge, Edward; Parfitt, Simon; Rhodes, Edward (12 June 2007). "82,000-year-old shell beads from North Africa and implications for the origins of modern human behavior". Proceedings of the National Academy of Sciences. 104 (24): 9964–9969. doi:10.1073/pnas.0703877104. PMC 1891266. PMID 17548808. Retrieved 23 October 2017.