ವೈ.ನಾಗೇಶ ಶಾಸ್ತ್ರಿ

ವೈ.ನಾಗೇಶ ಶಾಸ್ತ್ರಿಗಳು ೧೮೯೩ರಲ್ಲಿ ಬಳ್ಳಾರಿ ಜಿಲ್ಲೆಯ ಏಳು ಬೆಂಚೆ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ನೀಲಾಂಬಿಕೆ ; ತಂದೆ ನಯನಯ್ಯ.

ಬದಲಾಯಿಸಿ

ಇವರ ಕೆಲವು ಪ್ರಮುಖ ಕೃತಿಗಳು ಇಂತಿವೆ:

  • ಅಭಿನವ ಗೀತೆ
  • ವಿದ್ಯಾ ವಿನೋದಿನಿ
  • ಗವಿ ಸಿದ್ಧೇಶ್ವರ ಪುರಾಣ
  • ಮರಿಯೋಗೀಶ್ವರ ಪುರಾಣ
  • ಶ್ರೀ ಪಾಲಾಕ್ಷ ಶಿವಯೋಗೀಶ್ವರ ಪುರಾಣ

ಇವರು ೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ಜರುಗಿದ ೧೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರಿಗೆ ಕೋಲಕತ್ತಾ ವಿಶ್ವವಿದ್ಯಾಲಯದಿಂದ ‘ಸರ್ವದರ್ಶನ ತೀರ್ಥ’ ಪ್ರಶಸ್ತಿ ದೊರೆಕಿದೆ.

ವಿದ್ವಾನ್ ವೈ. ನಾಗೇಶ ಶಾಸ್ತ್ರಿಗಳು ೧೯೭೪ರಲ್ಲಿ ನಿಧನರಾದರು.

ಸ್ಮರಣಾರ್ಥ

ಬದಲಾಯಿಸಿ

ಸರ್ವದರ್ಶನತೀರ್ಥ ಶ್ರೀ ವಿದ್ವಾನ್ ಪಂಡಿತ್ ವೈ. ನಾಗೇಶ್ ಶಾಸ್ತ್ರಿಯವರ ಸ್ಮರಣಾರ್ಥವಾಗಿ ಇವರ ಹುಟ್ಟೂರಾದ ಏಳುಬೆಂಚಿ ಗ್ರಾಮದಲ್ಲಿ ಕಲಾಭವನ ನಿರ್ಮಿಸಿ 2021 ಆಗಸ್ಟ್ 29ರಂದು ಉದ್ಘಾಟಿಸಲಾಯಿತು.