ಬೆಳ್ಳಾವೆ ವೆಂಕಟನಾರಣಪ್ಪ

ರಾಜಸೇವಾಸಕ್ತ ಬೆಳ್ಳಾವೆ ವೆಂಕಟನಾರಣಪ್ಪನವರು ತುಮಕೂರು ತಾಲೂಕಿನ ಬೆಳ್ಳಾವೆಯಲ್ಲಿ ೧೦-೨-೧೮೭೨ರಲ್ಲಿ ಜನಿಸಿದರು.ಇವರ ತಂದೆ ವೆಂಕಟ ಕೃಷ್ಣಯ್ಯ ಮತ್ತು ತಾಯಿ ಲಕ್ಷ್ಮೀದೇವಿ.

ವಿದ್ಯಾಭ್ಯಾಸ ಬದಲಾಯಿಸಿ

ವಿದ್ಯಾಭ್ಯಾಸ ಪ್ರಾರಂಭವಾದುದು ಕೂಲಿ ಮಠದಲ್ಲಿ. ತುಮಕೂರು ಹಾಗು ಬೆಂಗಳೂರುಗಳಲ್ಲಿ ವ್ಯಾಸಂಗ ಮಾಡಿ, ಎಮ್.ಎ. ಪದವಿ ಪಡೆದರು.

ಕೆಲಸ ಬದಲಾಯಿಸಿ

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು .[೧] ಮುಲಕನಾಡು ಸಂಘದ ಅಧ್ಯಕ್ಷರಾಗಿ, ಅಗ್ರಿಕಲ್ಚರ್ ಅಂಡ್ ಎಕ್ಟಿವ್‌ಮೆಂಟ್ ಯೂನಿಯನ್ ಸದಸ್ಯರಾಗಿ, ಮೈಸೂರು-ತಮಿಳುನಾಡಿನ ಕಾವೇರಿ ನೀರಿನ ಹಂಚಿಕೆಯ ನಿಷ್ಪಕ್ಷಪಾತ ತೀರ್ಪು ಕೊಡಲು ನೇಮಿಸಿದ ಸಮಿತಿಯ ಸದಸ್ಯರಾಗಿ, ಬೆಂಗಳೂರಿನ ಸಿಟಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.ಇವರು ೧೯೩೭ರಲ್ಲಿ ಜಮಖಂಡಿಯಲ್ಲಿ ಜರುಗಿದ ೨೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ವಿಶೇಷ ಸಾಧನೆ ಬದಲಾಯಿಸಿ

ಕನ್ನಡದ ಮೊದಲ ವಿಜ್ಞಾನ ಪತ್ರಿಕೆ “ವಿಜ್ಞಾನ”ವನ್ನು ಹೊರತಂದ ಹೆಗ್ಗಳಿಕೆ ಇವರದು. ಕನ್ನಡ ಸಾಹಿತ್ಯ ಪರಿಷತ್ತಿನ “ಪರಿಷತ್ ಪತ್ರಿಕೆ’’ಯಲ್ಲಿ ಸಹ ಇವರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಕೆಳಕಂಡ ಪ್ರಾಚೀನ ಕೃತಿಗಳ ಸಂಪಾದನೆಯಲ್ಲಿ ಇವರು ಸಲ್ಲಿಸಿದ ಸೇವೆ ಅಪಾರ.

  • ಪಂಪರಾಮಾಯಣ
  • ಪಂಪಭಾರತ
  • ಚಾವುಂಡರಾಯ ಪುರಾಣ
  • ಸೋಮೇಶ್ವರ ಶತಕ
  • ಕುಸುಮಾವಳಿ ಕಾವ್ಯ
  • ಶಬ್ದಮಣಿ ದರ್ಪಣ

ನಿಧನ ಬದಲಾಯಿಸಿ

ಬೆಳ್ಳಾವೆ ವೆಂಕಟನಾರಣಪ್ಪನವರು ೩-೮-೧೯೪೩ರಲ್ಲಿ ನಿಧನರಾದರು.

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2016-06-10. Retrieved 2021-08-10.