ದಾವಣಗೆರೆ
ದಾವಣಗೆರೆ - ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಅಲ್ಲದೆ, ಬೆಣ್ಣೆದೋಸೆಗೆ ದಾವಣಗೆರೆ ಪ್ರಸಿದ್ಧವಾಗಿದೆ.
ದಾವಣಗೆರೆ
Davanagere | |
---|---|
Corporation City | |
ಸರಸ್ವತಿ ದೇವಿಯ ಪ್ರತಿಮೆ ಸರಸ್ವತಿ ಫೈನ್ ಆರ್ಟ್ಸ್ ಕಾಲೇಜಿನಲ್ಲಿ, ದಾವಣಗೆರೆ. | |
ದೇಶ | ![]() |
ರಾಜ್ಯ | ![]() |
ಜಿಲ್ಲೆ | ದಾವಣಗೆರೆ ಜಿಲ್ಲೆ |
ಸರ್ಕಾರ | |
• ಮಾದರಿ | ನಗರ ಪೌರಸಂಸ್ಥೆ |
• ಪಾಲಿಕೆ | ದಾವಣಗೆರೆ ಮಹಾನಗರ ಪಾಲಿಕೆ |
• ಮೇಯರ್ | ಎಸ್. ಟಿ. ವೀರೇಶ್ |
• MLA (North Davangere) | ಎಸ್ ಎ ರವೀಂದ್ರನಾಥ್ |
• MLA (South Davangere) | ಶಾಮನೂರು ಶಿವಶಂಕರಪ್ಪ |
• District Collector | ಮಹಾಂತೇಶ ಬೀಳಗಿ.ಭಾ.ಆ.ಸೇ |
Area | |
• Total | ೭೭ km೨ (೩೦ sq mi) |
Population (2011-12) | |
• Total | ೪,೩೫,೧೨೮ |
• ಶ್ರೇಣಿ | 6th(Karnataka) |
• ಸಾಂದ್ರತೆ | ೫,೭೦೦/km೨ (೧೫,೦೦೦/sq mi) |
ಭಾಷೆ | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ಪಿನ್ ಕೋಡ್ | 577001-577006 |
Telephone code | 91 8192 |
ವಾಹನ ನೋಂದಣಿ | KA-17 |
ಮಾತನಾಡುವ ಭಾಷೆಗಳು | ಕನ್ನಡ |
ಜಾಲತಾಣ | www |





ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿ/ಭತ್ತ, ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ.
ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ , ಎಂಜಿನಿಯರಿಂಗ್ (ಅಭಿಯಂತರ ಶಾಸ್ತ್ರ), ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.
ಆರು ತಾಲೂಕುಗಳನ್ನು ಹೊಂದಿದೆ
ದಾವಣಗೆರೆ
ಹರಿಹರ
ಜಗಳೂರು
ಹೊನ್ನಾಳಿ
ನ್ಯಾಮತಿ
ಚನ್ನಗಿರಿ
ಭೂಗೋಳ ಸಂಪಾದಿಸಿ
ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಚಿಕ್ಕಮಗಳೂರುಮತ್ತು ಬಳ್ಳಾರಿ ಜಿಲ್ಲೆಗಳಿಂದ ಸುತ್ತುವರೆದ ಈ ಊರು, ಪ್ರಮುಖ ಪ್ರದೇಶ. ಬೆಂಗಳೂರಿನಿಂದ ಮುಂಬೈಗೆ ಹೋಗುವ ಯಾತ್ರಿಕರು ದಾವಣಗೆರೆ ಮೂಲಕವೇ ಹೋಗಬೇಕು. ದಾವಣಗೆರೆಯು ಕರ್ನಾಟಕದ ಹೃದಯಭಾಗದಲ್ಲಿ 14° 28’ ರೇಖಾಂಶ ಮತ್ತು 75° 59’ ಅಕ್ಷಾಂಶದಲ್ಲಿದ್ದು ಸಮುದ್ರ ಮಟ್ಟದಿಂದ 602.5 ಮೀ ಎತ್ತರದಲ್ಲಿದೆ.
- ದಾವಣಗೆರೆ ಜಿಲ್ಲೆಯ ತಾಲೂಕುಗಳನ್ನು ತೋರಿಸುವ ನಕ್ಷೆ
ಇತಿಹಾಸ ಸಂಪಾದಿಸಿ
1997 ನೇ ಇಸವಿಯಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್, ದಾವಣಗೆರೆಯನ್ನು ಸ್ವತಂತ್ರ ಜಿಲ್ಲೆಯಾಗಿ ಮಾರ್ಪಡಿಸಿದರು. ಇದಕ್ಕೂ ಮೊದಲು ದಾವಣಗೆರೆಯು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕುಗಳಲ್ಲೊಂದಾಗಿತ್ತು. ದಾವಣಗೆರೆ ಜಿಲ್ಲೆಯು ಆರು ತಾಲ್ಲೂಕುಗಳಿಂದ ಕೂಡಿದ್ದು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.
ಪ್ರೇಕ್ಷಣೀಯ ಸ್ಥಳಗಳು ಸಂಪಾದಿಸಿ
- Gadde Rameshwara Temple Kuruva
- ಕುಂದವಾಡ ಕೆರೆ
- ಶಾಂತಿಸಾಗರ (ಸೂಳೆಕೆರೆ) - ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ.
- ಭಾರತದಲ್ಲಿಯೆ ಅತಿ ದೊಡ್ಡ ಗ್ಲಾಸ್ ಹೌಸ್
- ಹರಪನಹಳ್ಳಿ ತಾಲೂಕು ಬಾಗಳಿ ಕಲ್ಲೇಶ್ವರ ಸ್ವಾಮಿ ದೇವಾಲಯ.
- ನೀಲಗುಂದ ಭೀಮೇಶ್ವರ ದೇವಾಲಯ
- ಲಕ್ಕಮುತ್ತೇನಹಳ್ಳಿಯ ಹತ್ತಿರದ ನೀರ್ಥಡಿ ಶ್ರೀ ರಂಗನಾಥ ಸ್ವಾಮಿ ದೆವಾಲಯ(ಚಿತ್ರದುರ್ಗದ ಪಾಳೇಗಾರರ ಕಾಲದ್ದು ೧೬ನೇ ಶತಮಾನ)
- ಚಿಗಟೇರಿ ಶಿವನಾರದಮುನಿ ದೇವಸ್ತಾನ
- ಕೊಂಡಜ್ಜಿ ಕೆರೆ
- ಹರಿಹರ ಸಂಗಮ ಕ್ಷೇತ್ರ.
- ಹರಿಹರದ ಹರಿಹರೇಶ್ವರ ದೇವಾಲಯ (೧೨ನೇ ಶತಮಾನ, ಚಾಲುಕ್ಯರ ಕಾಲ)
- ಚನ್ನಗಿರಿಯ ಕೆಳದಿ ಚನ್ನಮ್ಮಾಜಿ ಕಟ್ಟಿದ ಕೋಟೆ
- ಚನ್ನಗಿರಿ ತಾಲ್ಲೂಕಿನ ಪುಣ್ಯಸ್ಥಳದ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ.
- ಚನ್ನಗಿರಿ ತಾಲೂಕಿನ ಹೋದಿಗೆರೆಯಲ್ಲಿ ಇರುವ ಷಾಜಿ ರಾಜೆ ಬೋಸ್ಲೆ ರವರ(ಶಿವಾಜಿ ಮಹಾರಾಜರ ತಂದೆ) ಸಮಾಧಿ.
- ಮಾಯಕೊಂಡದಲ್ಲಿನ ಶ್ರೀ ಹಿರೇಮದಕರಿ ನಾಯಕರ ಸಮಾಧಿ.
- ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯ.
- ನೀರ್ಥಡಿಯ ಪುರಾತನ ರಂಗನಾಥ ಸ್ವಾಮಿ ದೇವಸ್ಥಾನ -
- ನರಗನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನ
- ಶಾಬನೂರಿನ (ಶಾಮನೂರು) ಕೋಟೆ ಪ್ರದೇಶದ ಜೈನ ತೀರ್ಥಂಕರ ಬಸದಿ
- ಬೇತೂರಿನ ಹಳೆಯ ಶ್ರೀ ಕಲ್ಲೆಶ್ವರ ಸ್ವಾಮಿ ದೇವಸ್ಥಾನ
- ಬೇತೂರಿನ ಜೈನ ತೀರ್ಥಂಕರ ಮೂರ್ತಿಗಳು
- ಕೊಮಾರನಹಳ್ಳಿಯ ಪ್ರಸಿದ್ಧವಾದ ಹೆಳವನಕಟ್ಟೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ.
- ಚಿಗಟೆರಿ ಶಿವನಾರದಮುನಿ ದೇವಸ್ತಾನ
- . ಹರಿಹರದ ತುಂಗಭದ್ರೆ
- ಕೊಂಡಜ್ಜಿಯ ಅರಣ್ಯಧಾಮ
- ಉಕ್ಕಡಗಾತ್ರಿ ಕರಿಬಸವೇಶ್ವರ, ಅಜ್ಜಯ್ಯ ದೇವಾಲಯ,
- ನಂದಿಗುಡಿ ವೃಷಭಮಠ
- ಸಂತೇಬೆನ್ನೂರಿನ ಪುಷ್ಕರಿಣಿ.
- ದೊಡ್ಡಬಾತಿ ಪವಿತ್ರವನ.
- ನ್ಯಾಮತಿ ತಾಲೂಕು
- ತೀರ್ಥರಾಮೇಶ್ವರ
- ಗೋವಿನಕೋವಿ ಮಠ
- ಕಣಿವೆ ವೀರಭದ್ರೇಶ್ವರ ದೇವಸ್ಥಾನ
- ಸವಳಂಗ ಅತಿ ದೊಡ್ಡದಾದ ಕೆರೆ
- ನ್ಯಾಮತಿ ನಗರದ ಬನಶಂಕರಿ ದೇವಾಲಯ
- ನ್ಯಾಮತಿ ನಗರದ ಪೇಟೆ ಬಸವೇಶ್ವರ ದೇವಾಲಯ
- ಚಿನ್ನಿಕಟ್ಟೆ ರುದ್ರಸ್ವಾಮಿ ಮಠ
- ಕಂಚಿಕೆರೆ ಗ್ರಾಮದ ಶ್ರೀ ಕೋಡಿ ಸಿದ್ದೇಶ್ವರ ಮತ್ತು ಶ್ರೀ ಮದಗಾಂಭಿಕ ದೇವಿ
ಪ್ರಾದೇಶಿಕ ಸಂಪಾದಿಸಿ
ದಾವಣಗೆರೆ ಮೊದಲು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. ಆಗಸ್ಟ್ ೧೫, ೧೯೯೭ರಂದು ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಅವರ ನಿರ್ಧಾರದ ಮೇರೆಗೆ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ, ಹರಿಹರ, ಮತ್ತು ಜಗಳೂರು ತಾಲ್ಲೂಕುಗಳನ್ನು, ಶಿವಮೊಗ್ಗ ಜಿಲ್ಲೆಯಿಂದ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು, ಹಾಗೂ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲ್ಲೂಕುಗಳನ್ನು ಸೇರಿಸಿ ಹೊಸ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು. ೨೦೧೯ರಲ್ಲಿ ಹರಪನಹಳ್ಳಿ ತಾಲೂಕನ್ನು, ತಾಲೂಕಿನ ಜನರ ಆಶಯದ ಮೇರೆಗೆ ಬಳ್ಳಾರಿ ಜಿಲ್ಲೆಗೆ ಸೇರಿಸಲಾಯಿತು.
ದಾವಣಗೆರೆಯ ಆಹಾರ ವೈಶಿಷ್ಟ್ಯ ಸಂಪಾದಿಸಿ
ದಾವಣಗೆರೆ ಮಧ್ಯ ಕರ್ನಾಟಕದ ನಗರವಾಗಿರುವುದರಿಂದ ಇದು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಆಹಾರ ವೈಶಿಷ್ಟ್ಯಗಳ ಅನನ್ಯ ಸಂಗಮವಾಗಿದೆ. ದಾವಣಗೆರೆಯಲ್ಲಿ ಪ್ರಮುಖವಾಗಿ ಉತ್ತರ ಕರ್ನಾಟಕದ,ಜೋಳದ ರೊಟ್ಟಿ, ಶೇಂಗಾ ಚಟ್ನಿ ಪುಡಿ,ಕುರಶನಿ(ಗುರೆಳ್ಳು, ಹುಚ್ಚೆಳ್ಲು)ಪುಡಿ ಹೊಂದಿರುವ ಆಹಾರ ತಿನಿಸುಗಳೂ ದೊರೆಯುತ್ತವೆ.ಮತ್ತು ಬಳಸಲಾಗುತ್ತದೆ ಮತ್ತು ದಕ್ಷಿಣ ಕರ್ನಾಟಕದ(ಮೈಸೂರು ಪ್ರಾಂತ್ಯದ) ರಾಗಿ ಮುದ್ದೆಗಳೂ ಇಲ್ಲಿನ ಆಹಾರ ಪದಾರ್ಥಗಳಾಗಿವೆ. ರೊಟ್ಟಿಯೊಂದಿಗೆ ಅನ್ನವೂ ಬಳಸಲ್ಪಡುತ್ತದೆ. ದೋಸೆ(ಹಲವು ಪ್ರಕಾರಗಳನ್ನು ಕೆಳಗೆ ವರ್ಗೀಕರಿಸಲಾಗಿದೆ) ಒಂದು ವಿಶಿಷ್ಟ ತಿನಿಸಾಗಿದೆ. ದಾವಣಗೆರೆ ಬೆಣ್ಣೆ ದೋಸೆ ವಿಶ್ವದಲ್ಲೇ ಪ್ರಸಿದ್ಧಿ ಹೊಂದಿದೆ ಮತ್ತು ಇಲ್ಲಿನ ವಿಶಿಷ್ಟ. ಮಿರ್ಚಿ ಮಂಡಕ್ಕಿ ತವರೂರಾಗಿದೆ. ಸಿಹಿ ತಿನಿಸಾದ ಗುಳ್ಳಡಿಕಿ ಉಂಡಿ ದಾವಣಗೆರೆಯಲ್ಲಿ ಮಾತ್ರ ಮಾಡಲಾಗುತ್ತದೆ ಮತ್ತು ಇಲ್ಲಿ ಮಾತ್ರ ದೊರೆಯುತ್ತದೆ...
ದಾವಣಗೆರೆಯ ವಾಣಿಜ್ಯ ಸಂಪಾದಿಸಿ
ದಾವಣಗೆರೆ ಪಟ್ಟಣ ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಇದು ಅನೇಕ ಹತ್ತಿ ಗಿರಣಿಗಳು ಮತ್ತು ಬಟ್ಟೆ ವ್ಯಾಪಾರ ಸಂಸ್ಥೆಗಳು "ಕರ್ನಾಟಕದ ಮ್ಯಾಂಚೆಸ್ಟರ್" ಎಂದು ಶ್ಲಾಘಿಸಿದರು. ಇದು ರಾಜ್ಯ ಕೇಂದ್ರದಲ್ಲಿ ಭೌಗೋಳಿಕ ಸ್ಥಳ ಮತ್ತು ಉತ್ತಮ ರೈಲು, ರಸ್ತೆ ಸಂಪರ್ಕ ವಹಿವಾಟಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. . ದಾವಣಗೆರೆ ಜಿಲ್ಲಾ ಅರ್ಧದಷ್ಟು ಭದ್ರ ಜಲಾಶಯ ನೀರಾವರಿ. ಅಕ್ಕಿ, ಅಡಿಕೆ, ಮೆಕ್ಕೆಜೋಳ ಮತ್ತು ಹತ್ತಿ ಅನೇಕ ಶ್ರೀಮಂತ ನಗದು ಮತ್ತು ಆಹಾರ ಬೆಳೆಗಳನ್ನು. ಇಲ್ಲಿ ವ್ಯಾಪಾರ [8] ಪ್ರಸ್ತುತ ದಾವಣಗೆರೆ ಸುಮಾರು ಪ್ರಮುಖ ಕೃಷಿ ಕೈಗಾರಿಕಾ ಚಟುವಟಿಕೆ ಮತ್ತು ಈ ಪ್ರದೇಶದಲ್ಲಿ ಸುಮಾರು ಸಕ್ಕರೆ ಮಿಲ್ಲುಗಳು ಜೊತೆಗೆ, ಅಕ್ಕಿ ಮತ್ತು ಕಬ್ಬು ಬೆಳೆಸಬಹುದು. ದಾವಣಗೆರೆ ಬಳಿ ದುಗ್ಗಾವತಿ ಗ್ರಾಮದಲ್ಲಿದೆ. ಶುಗರ್ ಮಿಲ್ಸ್ ಅಸ್ತಿತ್ವದಲ್ಲಿವೆ ಮತ್ತು ದಾವಣಗೆರೆಯ ಪ್ರಮುಖ ಉದ್ಯಮವಾಗಿದೆ. ಅಕ್ಕಿ ಗಿರಣಿಗಳು ಅನೇಕ ಬೈಪಾಸ್ ರಸ್ತೆಯ ಬಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಮತ್ತು ಈ ಪಟ್ಟಣದ ಸುತ್ತ ಮಂಡಕ್ಕಿ ಸುತ್ತಿಸಿ ಅಕ್ಕಿ ಮಾಡುವ ಅನೇಕ ಅಕ್ಕಿ ಗಿರಣಿಗಳು ಇವೆ. ದಾವಣಗೆರೆ ಬಟ್ಟೆ ಗಿರಣ ಪ್ರಸಿದ್ಧವಾಗಿದೆ. ಶಂಕರ್ ಟೆಕ್ಸ್ಟೈಲ್ಸ್ ಮಿಲ್ಸ್, ಹತ್ತಿ ವುಲನ್ ಮತ್ತು ಸಿಲ್ಕ್ ಮಿಲ್ಸ್ ಲಿ, ಎಲ್ಲಾ ನಗರದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ. ಇಲ್ಲಿಯವರೆಗೆ ಅಸ್ತಿತ್ವದಲ್ಲಿರುವ ಹತ್ತಿ ಗಿರಣಿಗಳು: ಆಂಜನೇಯ ಕಾಟನ್ ಮಿಲ್, ಗಣೇಶ್ ಮಿಲ್, ಮತ್ತು ಸಿದ್ದೇಶ್ವರ ಕಾಟನ್ ಮಿಲ್. ದಾವಣಗೆರೆ 1980 ರವರೆಗೆ 1960 ರ ಪ್ರಮುಖ ಹತ್ತಿ ಬಟ್ಟೆಯ ರಫ್ತು. ಆದರೆ ಗಿರಣಿಗಳ 1990 ರ ಮುಚ್ಚಲಾಯಿತು. ದಾವಣಗೆರೆ ದೊಡ್ಡ ವಸ್ತ್ರ ಅಥವಾ ಬಟ್ಟೆ ಅಂಗಡಿ, ಅಂದರೆ ಬಿ.ಎಸ್ ಚನ್ನಬಸಪ್ಪ ಮತ್ತು ಸನ್ಸ್. ತನ್ನ ಶಾಖೆಗಳನ್ನು ನಗರದಲ್ಲಿ ಹರಡಿದೆ ಇದು ಮಧ್ಯ ಕರ್ನಾಟಕದ ದೊಡ್ಡ ಬಟ್ಟೆಯ ಅಂಗಡಿಯಲ್ಲಿ ಒಂದು.ಹರಿಹರ ನಲ್ಲಿ ವಿಸ್ಕೋಸ್ ಸ್ಟೇಪಲ್ ಫೈಬರ್ಸ್ (ಎಂಬ ಹರಿಹರ ಪಾಲಿ ಫೈಬರ್ಸ್ & Grasilene ವಿಭಾಗ) ವಿಶ್ವದ ಎರಡನೇ ದೊಡ್ಡ ತಯಾರಕ ಇದು ಆದಿತ್ಯ ಬಿರ್ಲಾ ಗ್ರೂಪ್ ಸಂಸ್ಥೆ ಗ್ರಾಸಿಮ್ ಇಂಡಸ್ಟ್ರೀಸ್ ತಯಾರಿಕಾ ಘಟಕವನ್ನು ಹೊಂದಿದೆ ಹಾಗೆಯೆ ಹರಿಹರ ಹತ್ತಿರ ಇರುವ ಬೆಳ್ಳೂಡಿ ಕೈಗಾರಿಕಾ ಪ್ರದೇಶದ ಹತ್ತಿರ ಕಾರ್ಗಿಲ್ ಇಂಡಿಯಾ ಸಂಸ್ಥೆಯು ಗ್ಲೂಕೋಸ್ ಮತ್ತು ಕೃಷಿ ಸಂಭಂದಿಸಿದ ವಸ್ತುಗಳ ತಯಾರಿಕಾ ಘಟಕವನ್ನು ಸ್ಥಾಪಿಸಿದೆ ಶೀಗ್ರದಲ್ಲೆ ಘಟಕವು ಕಾರ್ಯನಿರ್ವಹಿಸುವುದು.
ನ್ಯಾಮತಿ ಯಲ್ಲಿ ಅತಿ ಹೆಚ್ಚು ತರಕಾರಿ ಬೆಳೆಗಳನ್ನು ಬೆಳೆದು ಉಡುಪಿ ಮಂಗಳೂರು ಮಣಿಪಾಲ್ ಚಿಕ್ಕಮಂಗಳೂರು ಬಾಳೆಹೊನ್ನೂರು ಕಳಸ ಮುಂತಾದ ಸ್ಥಳಗಳಿಗೆ ರಫ್ತುು ಮಾಡಲಾಗುತ್ತದೆ.
ದಾವಣಗೆರೆಯ ವಿಶಿಷ್ಟ ತಿನಿಸುಗಳು ಸಂಪಾದಿಸಿ
ಬೆಣ್ಣೆದೋಸೆ, ಖಾರ ಮಂಡಕ್ಕಿ, ಓಪನ್ನ್ ಬೆಣ್ಣೆದೋಸೆ, ಮಸಾಲೆ ಬೆಣ್ಣೆದೋಸೆ, ಗುಳ್ಳಡಕಿ ಉಂಡೆ, ಅತ್ತಿಕಾಯಿ, ಹಿಟ್ಟು ಹಚ್ಚಿದ ಮೇಣಸಿನಕಾಯೆ, ನರ್ಗೀಸ್ ಮಂಡಕ್ಕಿ, ಮಸಾಲೆ ಮಂಡಕ್ಕಿ, ಮಸಾಲೆ ಅವಲಕ್ಕಿ ತಾಳಿಪೇಟ್ಟು.........
ಪ್ರಮುಖ ವಿದ್ಯಾಸಂಸ್ಥೆಗಳು ಸಂಪಾದಿಸಿ
- ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಸ್ನಾತಕೋತ್ತರ ಕೇಂದ್ರ
- ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ ತಾಂತ್ರಿಕ ಮಹಾವಿದ್ಯಾಲಯ(ಬಿ.ಡಿ.ಟಿ)
- ಲಲಿತಕಲಾ ಮಹಾವಿದ್ಯಾಲಯ,
- ಬಾಪೂಜಿ ವಿದ್ಯಾ ಸಂಸ್ಥೆ
- ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ(ಜೆ.ಜೆ.ಎಂ)
- ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ(ಬಿ.ಐ.ಇ.ಟಿ)
- ಜಿ ಮಲ್ಲಿಕಾರ್ಜುನಪ್ಪ ತಾಂತ್ರಿಕ ಮಹಾವಿದ್ಯಾಲಯ(ಜಿ.ಎಂ.ಐ.ಟಿ)
- ಎಸ್.ಎಸ್.ಮೆಡಿಕಲ್ ಕಾಲೇಜು
- ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ (Dental college)
- ದಂತವಿಜ್ಞಾನ ಮಹಾವಿದ್ಯಾಲಯ(C.O.D.S)
- ಕಲಾನೀಕೇತನ ವಸ್ತ್ರವಿನ್ಯಾಸ ಮಹಾವಿದ್ಯಾಲಯ(K.C.F.D)
- ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ಪಾಲಿಟೆಕ್ನಿಕ್(ಡಿ.ಆರ್.ಆರ್)
- ಧರ್ಮಪ್ರಕಾಶ ರಾಜನಹಳ್ಳಿ ಮದ್ದೂರಾಯಪ್ಪ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ(ಡಿ.ಆರ್.ಎಂ)
- ವಿಶ್ವವಿದ್ಯಾನಿಲಯ ಲಲಿತಕಲಾ ಮಹಾವಿದ್ಯಾಲಯ
- ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಕಾನೂನು ವಿದ್ಯಾಲಯ
- ಬಾಪೂಜಿ ವಿದ್ಯಾಸಂಸ್ಥೆಗಳು
- ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದಾವಣಗೆರೆ
- ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಗಳು
- ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ
- ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ
- ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್.
- ದಾವಣಗೆರೆ ವಿದ್ಯಾಸಂಸ್ಥೆ.
ಇತರ ತಾಣಗಳು ಸಂಪಾದಿಸಿ
- ದಾವಣಗೆರೆ ಮಹಾನಗರ ಪಾಲಿಕೆ Archived 2007-12-05 ವೇಬ್ಯಾಕ್ ಮೆಷಿನ್ ನಲ್ಲಿ.
- ದಾವಣಗೆರೆ ವಿಶ್ವವಿದ್ಯಾನಿಲಯ Archived 2011-06-25 ವೇಬ್ಯಾಕ್ ಮೆಷಿನ್ ನಲ್ಲಿ.
- ದಾವಣಗೆರೆ Archived 2006-12-05 ವೇಬ್ಯಾಕ್ ಮೆಷಿನ್ ನಲ್ಲಿ.
- ದಾವಣಗೆರೆ ಜಿಲ್ಲಾ ರಸ್ತೆ ನಕ್ಷೆ
- ದಾವಣಗೆರೆ ಜಿಲ್ಲೆಯ ನಕ್ಷೆ Archived 2005-11-03 ವೇಬ್ಯಾಕ್ ಮೆಷಿನ್ ನಲ್ಲಿ.