ಗಂಗಾವತಿ
India-locator-map-blank.svg
Red pog.svg
ಗಂಗಾವತಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೊಪ್ಪಳ
ನಿರ್ದೇಶಾಂಕಗಳು 15.43° N 76.53° E
ವಿಸ್ತಾರ
 - ಎತ್ತರ
16.53 km²
 - 406 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
93,249
 - 5641.2/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 583 227
 - +08533
 - KA-37

ಗಂಗಾವತಿಸಂಪಾದಿಸಿ

ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಇದು ಜಿಲ್ಲೆಯ ಒಂದು ದೊಡ್ಡ ವಾಣಿಜ್ಯ ನಗರ, ಅಕ್ಕಿ ಬೆಳೆಗಾರಿಕೆಗೆ ಬಹಳ ಪ್ರಸಿದ್ಧವಾದ ಸ್ಥಳ. ಕೊಪ್ಪಳ ಜಿಲ್ಲೆಯ ಯಾವುದೇ ಪಟ್ಟಣಗಳಿಗೆ ಹೋಲಿಸಿದರೆ ಇದು ವಿಸ್ತೀರ್ಣ ಮತ್ತು ಜನಸಂಖ್ಯೆ ದೃಷ್ಟಿಯಿಂದ ದೊಡ್ಡ ನಗರವಾಗಿದೆ.ಇದು ಒಂದು ವಾಣಿಜ್ಯ ಕೇಂದ್ರವಾಗಿ ಮತ್ತು ಸಾಮಾನ್ಯವಾಗಿ ಕರ್ನಾಟಕ ಅನ್ನದ ಪಾತ್ರೆ ನಗರವೆಂದು ಪರಿಚಿತವಾಗಿದೆ.


ಇತಿಹಾಸಸಂಪಾದಿಸಿ

ಸ್ವಾತಂತ್ರ್ಯ ಪೂರ್ವದಲ್ಲಿ ಈ ಪ್ರದೇಶವು ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪ್ಪಟ್ಟಿತ್ತು, ಭಾರತಕ್ಕೆ ಸ್ವಾತಂತ್ರ್ಯ ೧೫ ನೇ ಆಗಸ್ಟ್ ೧೯೪೭ ರಲ್ಲಿ ದೊರಕಿತು, ಕೊಪ್ಪಳ ಹೈದರಾಬಾದ್ ಪ್ರದೇಶದ ಭಾಗವಾಗಿದ್ದರಿಂದ ಪ್ರದೇಶದ ಜನರು ಹೈದರಾಬಾದ್ ನಿಜಾಮ್ ಹಿಡಿತದಿಂದ ಸ್ವಾತಂತ್ರ್ಯವನ್ನು ಗಳಿಸಲು ಮತ್ತಷ್ಟು ಹೋರಾಟ ಮಾಡಬೇಕಾಯಿತು. 17 ಸೆಪ್ಟೆಂಬರ್ ೧೯೪೮ ರಲ್ಲಿ, ಹೈದರಾಬಾದ್-ಕರ್ನಾಟಕಕ್ಕೆ ನಿಜಾಮರಿಂದ ಸ್ವಾತಂತ್ರ್ಯ ಸಿಕ್ಕಿತು. ೦೧-೦೪-೧೯೯೮ ರವರೆಗೆ ಗಂಗಾವತಿಯು ಗುಲ್ಬರ್ಗಾ ಕಂದಾಯ ವಿಭಾಗದ ಅವಿಭಜಿತ ರಾಯಚೂರು ಜಿಲ್ಲೆಯ ಭಾಗವಾಗಿತ್ತು.೦೧-೦೪-೧೯೯೮ ರಂದು ಕೊಪ್ಪಳವು ನಾಲ್ಕು ತಾಲ್ಲೂಕುಗಳನ್ನು ಒಳಗೊಂಡಿರುವ ಜಿಲ್ಲೆಯಾಗಿ ಬೆರ್ಪಟ್ಟಿತು. ಆ ಸಂದರ್ಭದಲ್ಲಿ ಗಂಗಾವತಿಯು ಕೊಪ್ಪಳದ ಒಂದು ತಾಲೂಕಾಯಿತು.

ಭೂಗೋಳಸಂಪಾದಿಸಿ

೨೦೧೦-೨೦೧೧ ರ ಪ್ರಕಾರ ೧೩೨,೧೩೧ ಹೆಕ್ಟೇರ್ ಭೂಪ್ರದೇಶ ಹೊಂದಿದ್ದು ೧೪,೪೮೨ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೊಂದಿದೆ. ೭,೭೧೦ ಹೆಕ್ಟೇರ್ ಕೃಷಿಯೇತರ ಹಾಗೂ ೪,೬೫೧ ಹೆಕ್ಟೇರ್ ಬರಡು ಭೂಮಿ ಹೊಂದಿದೆ. ೫೬೦ ಹೆಕ್ಟೇರ್ ಕೃಷಿ-ತ್ಯಾಜ್ಯ ಪ್ರದೇಶ. ೭,೧೯೩ ಹೆಕ್ಟೇರ್ ಹಸಿರು ಹುಲ್ಲು ಪ್ರದೇಶವನ್ನು ಹೊಂದಿದೆ. ೪೫ ಕಿ.ಮೀ ಉದ್ದ ಕಾಲುವೆ ೭೪೫೦೧ ಕಿ.ಮೀ ಒಟ್ಟು ನೀರಾವರಿ ಪ್ರದೇಶದ ಮತ್ತು ಹತ್ತಿರದಲ್ಲಿ ತುಂಗಭದ್ರ ಅಣೆಕಟ್ಟು ಸ್ಥಾಪಿತವಾಗಿದೆ.

ಆರ್ಥಿಕಸಂಪಾದಿಸಿ

ಗಂಗಾವತಿಯು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಭತ್ತದ ಬೆಳೆ ಪ್ರಮುಖವಾಗಿದೆ ಹಾಗೂ ಅಕ್ಕಿ ಉದ್ಯಮ ಸಕ್ಕರೆ ಉತ್ಪಾದನೆಗೆ ಪ್ರಸಿದ್ಧವಾಗಿದೆ. ಸಕ್ಕರೆ ಕಾರ್ಖಾನೆ ಗಂಗಾವತಿ ಶುಗರ್ ಲಿಮಿಟೆಡ್(ಈಗ ಸ್ಥಗಿತಗೊಳಿಸಿಲಾಗಿದೆ) ಗಂಗಾವತಿಯಿಂದ ೧೦ ಕಿ.ಮೀ ದೂರದಲ್ಲಿ ಇದೆ ಅದು ಏಷ್ಯಾದ ಎರಡನೇ ಅತಿ ದೊಡ್ಡ ಸಕ್ಕರೆ ಕಾರ್ಖಾನೆ ಆಗಿತ್ತು.

ಜನಸಂಖ್ಯೆಸಂಪಾದಿಸಿ

೨೦೦೧ ರ ಭಾರತೀಯ ಜನಗಣತಿಯ ಪ್ರಕಾರ,ಗಂಗಾವತಿ ೯೩,೨೪೯ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೧% ಮತ್ತು ಮಹಿಳೆಯರು ೪೯% .ಪುರುಷರ ಸಾಕ್ಷರತೆ ೬೭% ಮತ್ತು ಮಹಿಳೆಯರ ಸಾಕ್ಷರತೆ ೪೮%, ಒಟ್ಟು ೫೭% ರಾಷ್ಟ್ರೀಯ ಸರಾಸರಿ(೫೯.೫%)ಗಿಂತ ಕಡಿಮೆ ಸಾಕ್ಷರತಾ ಪ್ರಮಾಣವನ್ನು ಹೊಂದಿತ್ತು. ಗಂಗಾವತಿ ಜನಸಂಖ್ಯೆಯ ೧೫% ರಷ್ಟು ೬ ವರ್ಷ ವಯೋಮಿತಿಗಿಂತ ಕೆಳಗಿನವರು ಇದ್ದಾರೆ.

ಶಿಕ್ಷಣಸಂಪಾದಿಸಿ

ಇದು ಜಿಲ್ಲೆಯ ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಕೆ,ಎಲ್,ಇ ಸೊಸೈಟಿಯ ಪದವಿಪೂರ್ವ ವಿಜ್ಞಾನ ಕಾಲೇಜುಗಳು. ಕೆ,ಎಲ್,ಇ ವಾಣಿಜ್ಯ ಕಾಲೇಜ್(ಬಿ.ಕಾಮ್) ಕೊಪ್ಪಳ ರಸ್ತೆ ಗಂಗಾವತಿ. ಅಕ್ಷರ ಪಬ್ಲಿಕ್ ಸ್ಕೂಲ್, ಚೈತನ್ಯ ಟೆಕ್ನೋ ಸ್ಕೂಲ್, ಅಶ್ಫ಼ಕುಲ್ ಉಲೂಂ ಅಶ್ರಫ಼ಿಯ (ಅರೇಬಿಕ್ ಸ್ಕೂಲ್); ಬೆತಲ್ ಹೈಸ್ಕೂಲ್; ಸರ್ಕಾರಿ ಪ್ರಥಮ ದರ್ಜೆ ಕಾಲೇಜು; ಜಿ,ಹೆಚ್,ಎನ್. ಕಮ್ಯೂನಿಟಿ ಕಾಲೇಜ್; ಹೆಚ್,ಆರ್,ಎಸ್,ಎಮ್ ಕಾಲೇಜ್ ಆಫ್ ಆರ್ಟ್ಸ್; ಜ್ಞಾನ ಗಂಗೋತ್ರಿ ಕಾಲೇಜ್; ಜೆಎಸ್ಎಸ್ ವಿಜ್ಞಾನ ಕಾಲೇಜ್; ಕಲ್ಮಟ ಶ್ರಿ ಚನ್ನಬಸವ ಸ್ವಾಮಿ ಮಹಿಳೆಯರ ಆರ್ಟ್ಸ್ ಅಂಡ್ ಕಾಮರ್ಸ್ ಕಾಲೇಜ್; ಎಮ್,ಎನ್,ಎಮ್ ಸರ್ಕಾರಿ ಕಾಲೇಜ್; ಸರೋಜಮ್ಮ ಮಹಿಳಾ ಕಾಲೇಜ್; ಶ್ರೀ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಪ್ರಥಮ ದರ್ಜೆ ಸರ್ಕಾರಿ ಕಾಲೇಜು; ಟಿ,ಎಮ್,ಇ ಬಿಬಿಎಂ ಕಾಲೇಜ್; ವಿಶ್ವ ಭಾರತಿ ವಿದ್ಯಾ ಕೇಂದ್ರ ಇಂಗ್ಲೀಷ್ ಮಾಧ್ಯಮ ಶಾಲೆ; ಲಾಯನ್ಸ್ ಕ್ಲಬ್ ಪ್ರೌಢಶಾಲಾ ಗಂಗಾವತಿ; ಮತ್ತು ವೆಂಕಟರಾಮಣ್ಣ ಶೆಟ್ಟಿ ಪದ್ಮಾವತಮ್ಮ ಪ್ರಥಮ ದರ್ಜೆ ಸರ್ಕಾರಿ ಕಾಲೇಜು; ಎಮ್,ಎಸ್,ಎಮ್,ಎಸ್ ಗ್ರಾಮೀಣ ಕಾಲೇಜು; ವಿವೇಕ ಭಾರತಿ ವಿಧ್ಯಾ ಕೆಂದ್ರ ಪ್ರೌಢ ಶಾಲೆ.

ಐತಿಹಾಸಿಕ ಸ್ಥಳಗಳುಸಂಪಾದಿಸಿ

ಗಂಗಾವತಿಯ ಬಳಿ ಐತಿಹಾಸಿಕ ಮಹತ್ವವುಳ್ಳ ಪ್ರಸಿದ್ಧ ಸ್ಥಳಗಳಿವೆ. ವಿಜಯನಗರದ ರಾಜಧಾನಿಯಾಗಿದ್ದ ಹಂಪೆ, ಅ ಯುನೆಸ್ಕೊ ವರ್ಲ್ದ್ ಹಾರಿಟೆಜ್ ಸೈಟ್ ಗಂಗಾವತಿಯ ನೈಋತ್ಯ ದಿಕ್ಕಿನಿಂದ ೧೪ ಕಿಲೋಮೀಟರ್ ದೂರದಲ್ಲಿದೆ. ಹಂಪೆಯ ವಿರೂಪಾಕ್ಷ ದೇವಾಲಯ ಪ್ರಸ್ಸಿದ್ಧವಾಗಿದೆ, ಕನಕಗಿರಿಯ ವೆಂಕಟಛಲಪತಿ ದೇವಾಲಯ 'ದೇವಾಲಯದ ಚಕ್ರವರ್ತಿ' ಎಂದು ಕರೆಯುತ್ತಾರೆ. ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಪ್ರಾಗತಿಹಾಸಕಾಲದ ಅಂದರೆ ನವಶಿಲಾಯುಗ ಕಾಲದ ಕುರುಹುಗಳು ಪತ್ತೆಯಾಗಿವೆ. ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗುಂದಿ ಇದೇ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ಶ್ರೀ ಚನ್ನಬಸವಸ್ವಾಮಿ ಮಠ ಬಹಳ ಪ್ರಸಿದ್ಧವಾಗಿದೆ.ರಾಘವೇಂದ್ರ ದೇವರ ನವ ಬೃಂದಾವನ, ಹೇಮಗುಡ್ಡ 14 ನೇ ಶತಮಾನದ ಸುರಕ್ಷಿತ-ಧಾಮವಾದ ಕೋಟೆ ಮತ್ತು ದಸರಾ ಆಚರಣೆಗಳ ತಾಣವಾಗಿತ್ತು. ಕನ್ನಿಕ ಪರಮೇಶ್ವರಿ ದೇವಸ್ಥಾನ ಪಂಪಾಪತಿ, ಮುದ್ದಾನೆಶ್ವರಿ, ನೀಲಕಂಠೇಶ್ವರ ದೇವಸ್ಥಾನ ನಗರದ ವ್ಯಾಪ್ತಿಯೊಳಗೆ ಬರುತ್ತದೆ.

ಸಾರಿಗೆಸಂಪಾದಿಸಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ,ಎಸ್,ಆರ್,ಟಿ,ಸಿ) ಗಂಗಾವತಿಯನ್ನು ಅನೇಕ ಪ್ರಮುಖ ನಗರಗಳಿಗೆ ಸೇರಿಸುತ್ತದೆ, ಗಂಗಾವತಿಯ ಹತ್ತಿರದ ರೈಲು ನಿಲ್ದಾಣಗಳು ಹೊಸಪೇಟೆ ಹಾಗೂ ಕೊಪ್ಪಳದಲ್ಲಿವೆ ಮತ್ತು ಗಂಗಾವತಿ ತಾಲೂಕಿನ ಚಿಕ್ಕ ಬೇಣಕಲ್ಲ ಗ್ರಾಮದಲ್ಲಿ ನೂತನವಾಗಿದೆ(2016) ಮತ್ತು ಗಂಗಾವತಿ ಯಿಂದ ಹುಬ್ಬಳ್ಳಿ ಗೆ ರೈಲು ಮಾರ್ಗ ಹೊಂದಿದೆ (2019)

ಇದನ್ನೂ ನೋಡಿಸಂಪಾದಿಸಿ


ಉಲ್ಲೇಖಗಳುಸಂಪಾದಿಸಿ

  1. ಕೊಪ್ಪಳ ಜಿಲ್ಲೆ
  2. ಭಾರತ ಸರ್ಕಾರದ ಪಂಚಾಯತಿ ರಾಜ್ ಸಚಿವಾಲಯ
  3. ಭಾರತದ ಜನಗಣತಿ ಆಯೋಗ, ಮೂಲ ದಾಖಲೆಯನ್ನು 2004-06-16 ಹಾಗೂ 2008-11-01 ರಂದು ಮರುಸಂಪಾದಿಸಲಾಗಿದೆ.
  4. "ಕೆ,ಎಲ್,ಇ ಸೊಸೈಟಿಯ ಪದವಿಪೂರ್ವ ವಿಜ್ಞಾನ ಕಾಲೇಜು, ಕೊಪ್ಪಳ ರಸ್ತೆ,ಗಂಗಾವತಿ"
  5. "ಕೊಪ್ಪಳ ಜಿಲ್ಲೆಯಲ್ಲಿರುವ ಮಹಾವಿದ್ಯಾಲಯಗಳು"
  6. ಸೇಫ಼್ ಸಾಂಕ್ಟುರಿ ಡೆಕ್ಕನ್ ಹೆರಾಲ್ಡ್

ಭಾಹ್ಯ ಸಂಪರ್ಕಗಳುಸಂಪಾದಿಸಿ

  1. ಕರ್ನಾಟಕ ಸರ್ಕಾರ
  2. ಕೃಷಿ ಮತ್ತು ತೋಟಗಾರಿಕೆ
  3. ಗಂಗಾವತಿ ಪ್ರಾಣೇಶ್
"https://kn.wikipedia.org/w/index.php?title=ಗಂಗಾವತಿ&oldid=913059" ಇಂದ ಪಡೆಯಲ್ಪಟ್ಟಿದೆ