ವಿ.ಸೀತಾರಾಮಯ್ಯ
೧೯೨೩ ರಿಂದ ೧೯೨೮ ರವರೆಗೆ ಮೈಸೂರಿನಶಾರದಾವಿಲಾಸ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ೧೯೨೮ ರಿಂದ ೧೯೫೫ ರವರೆಗೆ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ೧೯೫೬ರಿಂದ ೧೯೫೮ರ ವರೆಗೆ ಬೆಂಗಳೂರು ಆಕಾಶವಾಣಿ ನಿಲಯದ ಭಾಷಣ ವಿಭಾಗದ ಮುಖ್ಯಸ್ಥರಾಗಿದ್ದರು. ೧೯೬೪ರಿಂದ ೧೯೬೮ರವರೆಗೆ ಹೊನ್ನಾವರ ಕಾಲೇಜಿನ ಪ್ರಾಂಶುಪಾಲರಾಗಿದ್ದರು.[೧]
ಜನನ ಹಾಗೂ ಬಾಲ್ಯ
ಬದಲಾಯಿಸಿವಿ.ಸೀ. ಎಂದೆ ಖ್ಯಾತರಾದ ಶ್ರೀ ವಿ.ಸೀತಾರಾಮಯ್ಯನವರು ೧೮೯೯ರ ಅಕ್ಟೋಬರ ೨ರಂದು ಬೆಂಗಳೂರು ಜಿಲ್ಲೆಯ ಬೂದಿಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ, ವೆಂಕಟರಾಮಯ್ಯ, ತಾಯಿ ದೊಡ್ಡವೆಂಕಟಮ್ಮ. ಮೈಸೂರು ಮಹಾರಾಜಾ ಕಾಲೇಜಿನಿಂದ ೧೯೨೦ರಲ್ಲಿ ಬಿ.ಏ. ಪದವಿಯನ್ನೂ, ೧೯೨೨ರಲ್ಲಿ ಎಮ್.ಎ. ಪದವಿಯನ್ನೂ ಪಡೆದರು.
ವಿ.ಸೀ.ರವರು ಬರೆದ ಕವನಸಂಗ್ರಹಗಳು
ಬದಲಾಯಿಸಿ- ದೀಪಗಳು,
- ಗೀತಗಳು,
- ನೆಳಲು-ಬೆಳಕು,
- ದ್ರಾಕ್ಷಿ-ದಾಳಿಂಬೆ,
- ಹೆಜ್ಜೆ ಪಾಡು,
- ಅರಲು-ಬರಲು.
- (ಅರಲು-ಬರಲು ಕೃತಿಗೆ ೧೯೭೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.)
'ಲಲಿತ ಪ್ರಬಂಧಗಳು
ಬದಲಾಯಿಸಿ- ಬೆಳದಿಂಗಳು,
- ಸೀಕರಣೆ
ನಾಟಕಗಳು
ಬದಲಾಯಿಸಿ- ಆಗ್ರಹ,
- ಸೊಹ್ರಾಬ್ ರುಸ್ತುಮ್,
- ಶ್ರೀಶೈಲ ಶಿಖರ ( ಈ ನಾಟಕವು
- ‘ ಪಾಪ ಪುಣ್ಯ’ ಹೆಸರಿನ ಚಲನಚಿತ್ರವಾಗಿದೆ.)
ಸೃಜನಾತ್ಮಕ ರಚನೆಗಳು
ಬದಲಾಯಿಸಿ- ಮಹನೀಯರು,
- ಕಾಲೇಜ ದಿನಗಳು.
- ಅಶ್ವತ್ಥಾಮನ್.
- ಕವಿ ಕಾವ್ಯ ದೃಷ್ಟಿ(ವಿಮರ್ಶೆ).
- ಹಣಪ್ರಪಂಚ.
- ಅರ್ಥ ಮತ್ತು ಮೌಲ್ಯ(ಐ.ಎ.ರಿಚರ್ಡ್ಸನ ಕೃತಿ).
- ಸಾಹಿತ್ಯಾವಲೋಕನ.
- ಕಲಾನುಭವ (ಇದು ವಿ.ಸೀ.ಯವರ ಕೆಲವು ಉಪನ್ಯಾಸಗಳ ಸಂಗ್ರಹ).
ಅನುವಾದಿತ ಕೃತಿಗಳು
ಬದಲಾಯಿಸಿ- 'ಪಿಗ್ಮ್ಯಾಲಿಯನ್',
- 'ಮೇಜರ ಬಾರ್ಬರ',
- 'ಬಂಗಾಳಿ ಸಾಹಿತ್ಯ ಚರಿತ್ರೆ
ವಿ.ಸೀ. ಅವರ ಸಂಪಾದಿತ ಕೃತಿಗಳು
ಬದಲಾಯಿಸಿ- 'ಕವಿರಾಜಮಾರ್ಗ',
- 'ವಡ್ಡಾರಾಧನೆ',
- 'ವ್ಯಾಕರಣಗಳು',
- 'ಯಕ್ಷಗಾನ',
- 'ಜನಪದ ಸಾಹಿತ್ಯ'.
ಉಲ್ಲೇಖಗಳು
ಬದಲಾಯಿಸಿ- ↑ "ವಿ. ಸೀತಾರಾಮಯ್ಯ". kanaja.in , 6 August 2017. Archived from the original on 22 ಸೆಪ್ಟೆಂಬರ್ 2020. Retrieved 6 ಆಗಸ್ಟ್ 2017.