ಎಚ್.ಎಸ್.ವೆಂಕಟೇಶಮೂರ್ತಿ
ಎಚ್.ಎಸ್.ವೆಂಕಟೇಶಮೂರ್ತಿ , ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ತಮ್ಮ ಕೊಡುಗೆಯನ್ನು ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರವನ್ನು , ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರು. (ಜನನ:ಜೂನ್,೨೩,೧೯೪೪), ಈಗ ಮಕ್ಕಳ, ಯುವಕರ, ಮತ್ತು ಮಹಿಳೆಯರಿಗೆ ಬೇಕಾದ ಗೀತೆಗಳನ್ನು ರಚಿಸಿ, ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು.
ಡಾ. ಎಚ್.ಎಸ್.ವೆಂಕಟೇಶಮೂರ್ತಿ | |
---|---|
ಪ್ರೊ.ವೆಂಕಟೇಶ ಮೂರ್ತಿ, | |
ಜನನ | ಶ್ರೀನಿವಾಸ |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರುಗಳು | ಡಾ.ಎಚ್ಚೆಸ್ವಿ |
ವಿದ್ಯಾರ್ಹತೆ | ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ; ಬೆಂಗಳೂರು ವಿಶ್ವವಿದ್ಯಾಲಯದಿಂದ ಎಮ್.ಎ; ಪದವಿಗಳು |
ಹಳೆ ವಿದ್ಯಾರ್ಥಿ | ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜ್ |
ಉದ್ಯೋಗ | ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ , ಬೆಂಗಳೂರು ವಿಶ್ವವಿದ್ಯಾಲಯ |
ಇದಕ್ಕೆ ಖ್ಯಾತರು | ಕವಿ,ಅಂಕಣಕಾರ,ವಿಮರ್ಶಕ,ನಾಟಕಕಾರ,ಚಿತ್ರಕಲಾವಿದ, ಅವರ ಪೆರ್ಬರಹ :'ಬುದ್ಧಚರಣ'-ಮಹಾಕಾವ್ಯ,ಕಥನ ರೂಪದಲ್ಲಿ ರಚಿಸಿದ್ದಾರೆ. |
ಜೀವನ ಸಂಗಾತಿ | ಪತ್ನಿ,ರಾಜಲಕ್ಷ್ಮಿ ವೆಂಕಟೇಶ ಮೂರ್ತಿ (ನಿಧನ) |
ಮಕ್ಕಳು | ನಾಲ್ಕುಜನ ಗಂಡುಮಕ್ಕಳು. |
ಪೋಷಕರು | ನಾರಾಯಣ ಭಟ್ಟ, ನಾಗರತ್ನಮ್ಮ. |
ಜನನ, ಜೀವನಸಂಪಾದಿಸಿ
- ಬಾಲ್ಯದ ಹೆಸರು 'ಶ್ರೀನಿವಾಸ' ಎಂದು. 'ವೆಂಕಟೇಶಮೂರ್ತಿಯವರು', ೧೯೪೪ ಜೂನ್ ೨೩ರಂದು ಶಿವಮೊಗ್ಗ ಜಿಲ್ಲೆಯ 'ಹೊದಿಗ್ಗೆರೆ' ಗ್ರಾಮದಲ್ಲಿ ಜನಿಸಿದರು. ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ. ನಾಗರತ್ನಮ್ಮನವರು ಶಿಕ್ಷಕಿಯಾಗಿದ್ದರು.
- ಅಲ್ಲಿಯ ಕನ್ನಡ ಅಧ್ಯಾಪಕರಾಗಿದ್ದ ನರಸಿಂಹ ಶಾಸ್ತ್ರಿಗಳು ಮೂರ್ತಿಯವರ ಸೃಜನ ಶೀಲ ಶಕ್ತಿಗೆ ಒಂದು ಮೂರ್ತ ರೂಪ ನೀಡಿದಂಥವರು.ತಮ್ಮ ಬಳಿಯಿದ್ದ ಕುವೆಂಪು, ಬೇಂದ್ರೆ, ಗೋರೂರು, ಮಾಸ್ತಿ, ಕಾರಂತ ಮೊದಲಾದವರ ಕೃತಿಗಳನ್ನು ಮೂರ್ತಿಯವರಿಗೆ ಪರಿಚಯಿಸಿದರು. ತಮ್ಮ ಚಿಂತನಾ ಕ್ರಮವನ್ನೇ ಬದಲಾಯಿಸಿಕೊಂಡು ಮೂರ್ತಿಯವರು ಹೋದಿಗ್ಗೆರೆಯ ಜಗತ್ತಿನಿಂದ ಹೊಸ ವಿಸ್ತಾರ ಪ್ರಪಂಚಕ್ಕೆ ಪ್ರವೇಶ ಪಡೆದರು.
- ವೆಂಕಟೇಶ ಮೂರ್ತಿಯವರು ತಮ್ಮ ಮೊದಲ ಕವನ ಸಂಕಲನ 'ಪರಿವೃತ್ತ'ವನ್ನು ನರಸಿಂಹ ಶಾಸ್ತ್ರಿಗಳಿಗೇ ಅರ್ಪಿಸಿದ್ದಾರೆ.
- ಇಲ್ಲಿಯೇ ಅವರ ಸಾಹಿತ್ಯಾಸಕ್ತ ಮನಸ್ಸು ಕೋಟೆ, ಬೆಟ್ಟ, ಪೇಟೆ, ಇವುಗಳ ಅಲೆದಾಟದಲ್ಲಿ ಪ್ರಕೃತಿಯ ಸೊಬಗಿನಲ್ಲಿ ಮುದನೀಡತೊಡಗಿ ಮುಂದಿನ ಕಾವ್ಯದಲ್ಲಿ
- ನಿಸಾರ್ ಅಹಮದ್ ರವರ ಗಮನಕ್ಕೆ ಬಿದ್ದರು. ಅವರ ಒಡನಾಟ ಪ್ರೀತಿಯ ಪ್ರೋತ್ಸಾಹ ಮೂರ್ತಿಯವರಲ್ಲಿ ಒಂದು ಬಗೆಯ ವಿಶ್ವಾಸ ಮೂಡಿಸಿತು. ನಿಸಾರ್ ತಮ್ಮ ಮೊದಲ ಕಾವ್ಯ ಗುರು ಎಂದು ಈಗಲೂ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.
- ವ್ಯಾಸಂಗದ ಆಸಕ್ತಿಯಿಂದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ.,ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. “ಕನ್ನಡದಲ್ಲಿ ಕಥನ ಕವನಗಳು” ಮಹಾಪ್ರಬಂಧ ಮಂಡಿಸಿ, ಪಿಎಚ್.ಡಿ. ಪದವಿ. ಸುಮಾರು ಮೂವತ್ತು ವರ್ಷ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ.
- ಮೂರ್ತಿಯವರು ಮಲ್ಲಾಡಿ ಹಳ್ಳಿಯ ಶಾಲೆಯಲ್ಲಿ ಬಹು ಬೇಗ ಜನಪ್ರಿಯರಾದರು. ಇಲ್ಲಿಯೇ ಅವರ ಸಾಹಿತ್ಯದ ಓದಿಗೂ ರಚನೆಗೂ ಉತ್ತಮ ಪರಿಸರವಿತ್ತು. ರಾಮಚಂದ್ರ ಮೂರ್ತಿಯವರ ಆಸಕ್ತಿಯಿಂದಾಗಿ ಕನ್ನಡ ಸಾಹಿತ್ಯದ ಅತ್ಯುತ್ತಮ ಕೃತಿಗಳೆಲ್ಲವೂ ಅಲ್ಲಿಯ ಲೈಬ್ರೆರಿಯಲ್ಲಿ ಸಿಗುತ್ತಿದ್ದವು. ಹಾಗೂ ಹಿರಿಯ ಅಧ್ಯಾಪಕರಾಗಿದ್ದ ಜಿ.ಎಲ್.ರಾಮಪ್ಪನವರು ಕಥೆಗಾರ ಎನ್.ಎಸ್.ಚಿದಂಬರ ರಾವ್ ಅವರೂ ಗಂಭೀರ ಸಾಹಿತ್ಯ ಚರ್ಚೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಷ್ಟು ಅಧ್ಯಯನ ಶೀಲರಾಗಿದ್ದರು.
- ಎಚ್.ಎಸ್.ವಿ. ರಚಿಸುತ್ತಿದ್ದ ರಚನೆಗಳನ್ನು ಪ್ರೀತಿಯಿಂದ ಓದಿ ಪ್ರೋತ್ಸಾಹಿಸುತ್ತಿದ್ದರು. ಈ ಹಂತದಲ್ಲಿಯೆ ಮೂರ್ತಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ ಎ ಪಡೆದದ್ದು. ಇದೊಂದು ರೀತಿ ಇವರ ಬದುಕಿನಲ್ಲೊಂದು ತಿರುವು ನೀಡಿತು. ತಾಂತ್ರಿಕ ಶಿಕ್ಷಣದಿಂದ ಇವರು ಕಲಾ ವಿಭಾಗಕ್ಕೆ ತನಗೆ ಪ್ರಿಯವಾದ ವಿಷಯದ ಕಡೆಗೆ ಹೊರಳುವ ಗಂಭೀರ ಪ್ರಯತ್ನ ಮಾಡಿದರು.
- ಇದೇ ವೇಳೆಗೆ ಮೂರ್ತಿಯವರು ಪರಿವೃತ್ತ ಸಂಕಲನ ಪ್ರಕಟಿಸಿ ಕವಿಯಾಗಿ ತಮ್ಮನು ಸಾಹಿತ್ಯ ಜಗತ್ತಿನಲ್ಲಿ ಗುರ್ತಿಸಿಕೊಂಡರು. ಎಮ್.ಎ. ಮಾಡಬೇಕೆಂಬ ಅವರ ತುಡಿತ ಬಲವಾಗುತ್ತಲೇ ಇತ್ತು.
- ಒಮ್ಮೆ ಜಿ ಎಲ್ ರಾಮಪ್ಪನವರು ಬೆಂಗಳೂರಿಗೆ ಬಂದಿದ್ದಾಗ ತಮ್ಮ ಶಿಷ್ಯ,ಕೆ.ಮರುಳ ಸಿದ್ದಪ್ಪನವನ್ನು ಕಾಣಲು ಕನ್ನಡ ಅಧ್ಯಯನ ಕೇಂದ್ರಕ್ಕೆ ಹೋಗಿದ್ದರು. ಪ್ರಾಸಂಗಿಕವಾಗಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರೊಂದಿಗೆ ಪ್ರಸ್ತಾಪಿಸಿದಾಗ, ಭಟ್ಟರು ಪರಿವೃತ್ತ ಸಂಕಲನವನ್ನು ಓದಿರುವುದಾಗಿಯೂ ಒಳ್ಳೆಯ ಕವಿಯಾದ ಮೂರ್ತಿಗೆ, ಎಮ್.ಎ. ಓದಲು ತೊಂದರೆಯಾಗಬಾರದು; ತಾವು ಶಿವರುದ್ರಪ್ಪನವರಿಗೆ ಹೇಳಿ ಸೀಟು ಕೊಡಿಸಲು ಪ್ರಯತ್ನಿಸುವುದಾಗಿಯೂ ಆಶ್ವಾಸನೆ ನೀಡಿ ಅದರಂತೆಯೇ ಮೂರ್ತಿಯವರಿಗೆ ಸೀಟು ದೊರಕಿಸಿಕೊಟ್ಟರು.
- ಹೋದಿಗೆರೆಯ ಹಳ್ಳಿಯ ಪರಿಸರವೇ ಇವರ ವ್ಯಕ್ತಿತ್ವವನ್ನು ರೂಪಿಸಿ, ಅವರ ಸೃಜನ ಶೀಲತೆಯ ಸ್ವರೂಪದ ಮೇಲೆ ಗಾಢವಾದ ಪ್ರಭಾವ ಬೀರಿದೆ. ಹೊದಿಗೆರೆಯ ಕೆರೆ, ಕೆರೆಕೋಡಿ, ಅದರಾಚೆಯ ಈಚಲುವನ, ನಂತರದ ಜೋಳದಹಾಳು ಕಾಡು, ಕಂತರಂಗಮಟ್ಟಿ ಇವೆಲ್ಲಾ ವೆಂಕಟೇಶ ಮೂರ್ತಿಯವರ ಚಿಕ್ಕಂದಿನ ದಿನಗಳಲ್ಲಿ ಗಾಢಪ್ರಭಾವ ಬೀರಿದಂಥವು.
- ಊರಿನ ಜನರ ಬದುಕನ್ನೇ ಅವರಿಸಿರುವ ಉತ್ಸವಗಳು ಬದುಕಿನ ಉಲ್ಲಾಸವನ್ನು ಸಹಬಾಳ್ವೆಯ ಪರಿಕಲ್ಪನೆಯನ್ನು ಜೀವಂತವಾಗಿರಿಸುವ ಸಾಧನೆಗಳಾಗಿದ್ದುವೆಂದು ಮೂರ್ತಿಯವರು ನೆನಪಿಸಿಕೊಳ್ಳುತ್ತಾರೆ. ಇವರ ಕಥನ ಕಾವ್ಯದಲ್ಲಿ ನಾವು ಕಣುವ ಜೀವೋಲ್ಲಾಸದ ಅನೇಕ ಅಂಶಗಳ ಬೇರುಗಳು ಈ ಉತ್ಸವಗಳಲ್ಲಿವೆ.ಮೂರ್ತಿಯವರ ಮುತ್ತಜ್ಜ ಕೆಲ್ಲೋಡು ಪುಟ್ಟಪ್ಪ ಪ್ರಸಿದ್ಧ ಗಮಕಿಗಳಾಗಿದ್ದರಂತೆ.
- ಅಜ್ಜ ಭೀಮರಾಯರು ಮೃದಂಗ ವಾದಕರಾಗಿದ್ದು ನಾಟಕದಲ್ಲಿ ಅವರಿಗೆ ವಿಶೇಷ ಆಸಕ್ತಿ ಇದ್ದಿತಂತೆ. ಈ ಎಲ್ಲವೂ ಅವರನ್ನು ಪ್ರಭಾವಿಸಿವೆ. ಅಲ್ಲಿನ ಭಜನೆ, ನಾಟಕ ,ಗಮಕ ವಾಚನ, ಯಕ್ಷಗಾನ, ಬೊಂಬೆಯಾಟ , ಇವೆಲ್ಲವುಗಳ ಧಾರ್ಮಿಕ ಸ್ಪರ್ಷವೂ ಕೂಡಾ ಕಾವ್ಯ ಸಂಸ್ಕಾರದ ಅವರ ವ್ಯಕ್ತಿತ್ವದ ಅಂಶವೇ ಅಗಿ ಬಿಡುತ್ತಿತ್ತು. ಶ್ಯಾನುಭೋಗರಾಗಿದ್ದ ಭೀಮರಾಯರು ಊರವರ ಕಣ್ಣಲ್ಲಿ ಧರ್ಮಾತ್ಮರು. ತಮಗಿದ್ದ ತಿಳುವಳಿಕೆ ಅಧಿಕಾರಗಳನ್ನು ಜನರಿಗೆ ಉಪಕಾರ ಮಾಡುವುದಕ್ಕೇ ಬಳಸುತ್ತಿದ್ದರಂತೆ. ಇವರ ಪ್ರಭಾವವೂ ಮೂರ್ತಿಯವರ ಮೇಲೆ ಬೀರಿದೆ..
- ಖಾಸಗಿಯಾಗಿ ಎಲ್.ಎಸ್.ಮುಗಿಸಿ ನಾಗರತ್ನಮ್ಮ ಅಧ್ಯಾಪಕಿಯಾಗಿ ಉದ್ಯೋಗ ದೊರಕಿಸಿಕೊಂಡು ಈ ಕುಟುಂಬಕ್ಕೆ ದುಡಿಯುವ ಆಸರೆಯಾದರು.ಮುಂದೆ ಬದುಕಿನುದ್ದಕ್ಕೂ ರತ್ನ ಮೇಡಮ್ ಆಗಿ ಜನಪ್ರಿಯ ಅಧ್ಯಾಪಕಿಯಾಗಿ ದುಡಿಮೆಯನ್ನೇ ಬಾಳ ಉಸಿರಾಗಿಸಿಕೊಂಡರು.
ಕವನ ಬರೆಯಲು ಪ್ರೇರಣೆಸಂಪಾದಿಸಿ
ತಾಯಿಯ ತೌರುಮನೆಯಲ್ಲಿ ನಡೆಯುತ್ತಿದ್ದ ಗಮಕವಾಚನ, ನಾಟಕ, ಸಾಂಸ್ಕೃತಿಕ ಕಾರ‍್ಯಕ್ರಮಗಳು ಮನಸ್ಸಿನ ಮೇಲೆ ಮಾಡಿದ ಪ್ರಭಾವದಿಂದ ಕವನ ಬರೆಯಲು ಪ್ರೇರಣೆ.
ವೃತ್ತಿ ಬದುಕುಸಂಪಾದಿಸಿ
- ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರಾಗಿ ಉದ್ಯೋಗ ಪ್ರಾರಂಭ.
- ೧೯೬೬ರಿಂದ ೧೯೭೧ರ ವರೆಗೆ ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಲ್ಲಿ ಅಧ್ಯಾಪಕ ವೃತ್ತಿ
- ೧೯೭೧ರಿಂದ ೧೯೭೩-ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ಅಧ್ಯಯನ
- ೧೯೭೩ರಿಂದ ೨೦೦೦ದ ವರೆಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ, ಅಲ್ಲೇ ಪ್ರಾಧ್ಯಾಪಕನಾಗಿ ನಿವೃತ್ತಿ.
- ೨೦೦೦ದಿಂದ ಬೆಂಗಳೂರಿನಲ್ಲಿ ನಿವೃತ್ತ ಜೀವನ.
ಪರಿವಾರಸಂಪಾದಿಸಿ
ಎಚ್ಚೆಸ್ವಿಯರಿಗೆ ನಾಲ್ಕುಜನ ಗಂಡುಮಕ್ಕಳು.
ಡಾ.ಡಿ.ಎಸ್.ಕರ್ಕಿ ಕಾವ್ಯ ಪುರಸ್ಕಾರಸಂಪಾದಿಸಿ
ಡಾ.ಎಚ್.ಎಸ್.ವೆಂಕಟೇಶ ಮೂರ್ತಿಯವರಿಗೆ, ಸನ್.೨೦೧೨ ರ, ನವೆಂಬರ್, ೧೮ ರಂದು, 'ಡಾ. ಡಿ.ಎಸ್.ಕರ್ಕಿಯವರ ಜನ್ಮ ಶತಮಾನೋತ್ಸವದ ಶುಭಸಮಾರಂಭ'ದಂದು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 'ಚಂದ್ರವದನ ದೇಸಾಯಿ ಸಭಾಗೃಹ'ದಲ್ಲಿ ಡಾ. ಕರ್ಕಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಡಾ. ಕರ್ಕಿಯವರ ಸಮಗ್ರ ಸಾಹಿತ್ಯ ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಪುರಸ್ಕಾರ, ಎಚ್ಚೆಸ್ವಿಯವರಿಗೆ ಅವರು ಬರೆದ 'ಕನ್ನಡಿಯ ಸೂರ್ಯ' ಎಂಬ ಕೃತಿಗೆ ಲಭಿಸಿದೆ.
ಕವನ ಸಂಕಲನಗಳುಸಂಪಾದಿಸಿ
- 'ಪರಿವೃತ್ತ'(೧೯೬೮)
- 'ಬಾಗಿಲು ಬಡಿವ ಜನಗಳು'(೧೯೭೧)
- 'ಮೊಖ್ತಾ'(೧೯೭೪)
- 'ಸಿಂದಬಾದನ ಆತ್ಮಕಥೆ'(೧೯೭೭)
- 'ಒಣ ಮರದ ಗಿಳಿಗಳು' (೧೯೮೧)
- 'ಮರೆತ ಸಾಲುಗಳು'(೧೯೮೩)
- 'ಸೌಗಂಧಿಕ'(೧೯೮೪)
- 'ಇಂದುಮುಖಿ'(೧೯೮೫)
- 'ಹರಿಗೋಲು'(೧೯೮೫)
- 'ವಿಸರ್ಗ'(೧೯೮೮)
- 'ಎಲೆಗಳು ನೂರಾರು'(೧೯೮೯)
- 'ಅಗ್ನಿಸ್ತಂಭ'(೧೯೯೦)
- 'ಎಷ್ಟೊಂದು ಮುಖ'(೧೯೯೦)
- 'ಅಮೆರಿಕದಲ್ಲಿ ಬಿಲ್ಲುಹಬ್ಬ'(೧೯೯೭)
- 'ವಿಮುಕ್ತಿ'(೧೯೯೮)
- 'ಭೂಮಿಯೂ ಒಂದು ಆಕಾಶ'(೨೦೦೦)
- 'ಮೂವತ್ತು ಮಳೆಗಾಲ'(೨೦೦೧)
ಕಥಾ ಸಂಕಲನಗಳುಸಂಪಾದಿಸಿ
- 'ಬಾನಸವಾಡಿಯ ಬೆಂಕಿ'(೧೯೮೦)
- 'ಪುಟ್ಟಾರಿಯ ಮತಾಂತರ'(೧೯೯೦);
ಕಾದಂಬರಿಗಳುಸಂಪಾದಿಸಿ
- 'ತಾಪಿ'(೧೯೭೮)
- 'ಅಮಾನುಷರು'(೧೯೮೦)
- 'ಕದಿರನ ಕೋಟೆ'(೧೯೮೫)
- 'ಅಗ್ನಿಮುಖಿ'(೧೯೮೬)
ಸಾಹಿತ್ಯಚರಿತ್ರೆಸಂಪಾದಿಸಿ
- 'ಕೀರ್ತನಕಾರರು'(೧೯೭೫)
ಸಾಹಿತ್ಯ ವಿಮರ್ಶೆಸಂಪಾದಿಸಿ
- 'ನೂರು ಮರ, ನೂರು ಸ್ವರ'(೧೯೮೩)
- 'ಮೇಘದೂತ'(೧೯೮೯)
- 'ಕಥನ ಕವನ'(೧೯೯೦)
- 'ಆಕಾಶದ ಹಕ್ಕು'(೨೦೦೧)
ಅನುಭವ ಕಥನಸಂಪಾದಿಸಿ
- 'ಕ್ರಿಸ್ಮಸ್ ಮರ'(೨೦೦೦)
ಸಂಪಾದನೆಸಂಪಾದಿಸಿ
- 'ಶತಮಾನದ ಕಾವ್ಯ'(೨೦೦೧)
ನಾಟಕಗಳುಸಂಪಾದಿಸಿ
- 'ಹೆಜ್ಜೆಗಳು'(೧೯೮೧)
- 'ಒಂದು ಸೈನಿಕ ವೃತ್ತಾಂತ'(೧೯೯೩)
- 'ಕತ್ತಲೆಗೆ ಎಷ್ಟು ಮುಖ'(೧೯೯೯)
- 'ಚಿತ್ರಪಟ'(೧೯೯೯)
- 'ಉರಿಯ ಉಯ್ಯಾಲೆ'(೧೯೯೯)
- 'ಅಗ್ನಿವರ್ಣ'(೧೯೯೯)
- 'ಸ್ವಯಂವರ'(ಅಪ್ರಕಟಿತ);
ಅನುವಾದಸಂಪಾದಿಸಿ
- 'ಋತುವಿಲಾಸ'(ಕಾಳಿದಾಸನ ಋತುಸಂಹಾರದ ಅನುವಾದ: ೧೯೮೮)
ಸಂಶೋಧನ ಪ್ರಬಂಧಸಂಪಾದಿಸಿ
- 'ಕನ್ನಡದಲ್ಲಿ ಕಥನ ಕವನಗಳು'('ಪಿ.ಎಚ್.ಡಿ'ಗಾಗಿ ಪ್ರಬಂಧ:೧೯೮೭)
ಮಕ್ಕಳ ಸಾಹಿತ್ಯಸಂಪಾದಿಸಿ
- ಹಕ್ಕಿಸಾಲು.(೧೯೮೭).
- ಹೂವಿನ ಶಾಲೆ (೧೯೯೭).
- ಸೋನಿ ಪದ್ಯಗಳು (೨೦೦೧).
- ಉತ್ತರಾಯಣ ಮತ್ತು.....(೨೦೦೮).
ಜೀವನ ಚರಿತ್ರೆಸಂಪಾದಿಸಿ
- 'ಸಿ.ವಿ.ರಾಮನ್'(೧೯೭೪)
- 'ಹೋಮಿ ಜಹಾಂಗೀರ ಭಾಭಾ'(೧೯೭೫)
- 'ಸೋದರಿ ನಿವೇದಿತಾ'(೧೯೯೫)
- 'ಬಾಹುಬಲಿ'(೨೦೦೦)
- ಆತ್ಮ ಕಥನ-'ಎಚ್ಚೆಸ್ವಿ ಅನಾತ್ಮ ಕಥನ' (೨೦೧೦)[೧]
ಚಲನಚಿತ್ರ ಮತ್ತು ರಂಗಭೂಮಿಸಂಪಾದಿಸಿ
ಬಿಡುವಿಲ್ಲದ ಬರವಣಿಗೆಯ ನಡುವೆ ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕ. ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಕೊಟ್ಟ, ಮತದಾನ ಚಲನಚಿತ್ರಗಳಿಗೆ ರಚಿಸಿದ ಹಾಡುಗಳು, ಕೆಲವಕ್ಕೆ ಸಂಭಾಷಣೆ. ದೂರದರ್ಶನ ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ. ಬಣ್ಣದ ಹಕ್ಕಿ, ಮಕ್ಕಳ ಗೀತೆಗಳು, ಅನಂತ ನಮನ, ತೂಗುಮಂಚ, ಸುಳಿಮಿಂಚು, ಅಪೂರ್ವ ರತ್ನ, ಭಾವಭೃಂಗ-ಭಾವಗೀತೆಗಳ ಧ್ವನಿ ಸುರಳಿಗಳು.
ಯಶಸ್ವೀ ಅಧ್ಯಾಪಕರಾಗಿಸಂಪಾದಿಸಿ
ಮುಂದೆ ಸುಮಾರು ಮೂರು ದಶಕಗಳ ಕಾಲ ಎಚ್ ಎಸ್ ವಿ ಅತ್ಯಂತ ಯಶಸ್ವೀ ಅಧ್ಯಾಪಕರಾಗಿ ವಿದ್ಯಾರ್ಥಿಗಳ ಅಪಾರ ಪ್ರೀತಿಗೆ ಪಾತ್ರರಾಗಿ ಅನೇಕ ಪ್ರತಿಭೆಗಳು ಅರಳಲು ಕಾರಣವಾದದ್ದು ಈಗ ಇತಿಹಾಸ. ಅಧ್ಯಾಪಕರಾಗಿ ಮೂರ್ತಿಯವರು ರೂಪಿಸಿದ ಅನುಷ್ಠಾನಕ್ಕೆ ತಂದ ಅನೇಕ ಯೋಜನೆಗಳು ಯಾವ ಅಧ್ಯಾಪಕರಿಗೂ ಮಾದರಿಯಾಗಬಲ್ಲಂತಹವು. ಕಾಮರ್ಸ್ ಕಾಲೆಜೊಂದರಲ್ಲಿ ಇವರು ಹಮ್ಮಿಕೊಂಡ ಕಾರ್ಯಕ್ರಮಗಳು ನಾಡಿನಾದ್ಯಂತ ಮೆಚ್ಚುಗೆಗೆ ಪಾತ್ರವಾದುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದೆನ್ನುತ್ತಾರೆ ನರಹಳ್ಳಿಯವರು.
೭೫ ರ ಹುಟ್ಟುಹಬ್ಬದ ಸಮಾರಂಭಸಂಪಾದಿಸಿ
ಎಚ್ಛೆಸ್ವಿಯವರ ಅಪಾರ ಸಾಹಿತ್ಯಪ್ರಿಯರು, ಆಪ್ತಗೆಳೆಯರು ಮತ್ತು ಬಂಧುಗಳೆಲ್ಲಾ ಸೇರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ೨೦೧೯ ರ ಜೂನ್ ೩೦ ರಂದು ಅವರ ಜನುಮದಿನವನ್ನು ವಿಜೃಂಭಣೆಯಿಂದ ಆಚರಿಸಿದರು.[೨]
'ಬುದ್ಧ ಚರಣ',ಒಂದು ಮಹಾಕಾವ್ಯ,ಕಥನರೂಪದಲ್ಲಿಸಂಪಾದಿಸಿ
[೩] ಡಾ.ಎಚ್.ಎಸ್. ವೆಂಕಟೇಶ ಮೂರ್ತಿಯವರ ಬುದ್ಧಚರಣ ಮಹಾಕೃತಿಯನ್ನು ಅವರ ಪತ್ನಿ, ಸಾಯುವ ಮೊದಲು ತಮ್ಮ ನೆನಪಿನ ಕಾಣಿಕೆಯನ್ನಾಗಿ ಕೊಡಬೇಕೆಂದು ಬಿನ್ನವಿಸಿಕೊಂಡಿದ್ದರು. [೪]
ಪ್ರಶಸ್ತಿಗಳುಸಂಪಾದಿಸಿ
- ೧೯೭೭: 'ಸಿಂದಬಾದನ ಆತ್ಮಕಥೆ'-'ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ'
- ೧೯೭೮: 'ತಾಪಿ'-'ದೇವರಾಜ ಬಹಾದ್ದೂರ ಪ್ರಶಸ್ತಿ'
- ೧೯೮೦: 'ಅಮಾನುಷರು'-“ಸುಧಾ ಬಹುಮಾನ"
- ೧೯೮೧: 'ಹೆಜ್ಜೆಗಳು'-“ ರಂಗಸಂಪದ” ಬಹುಮಾನ
- ೧೯೮೫: 'ಇಂದುಮುಖಿ'-'ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ'
- ೧೯೮೫: 'ಹರಿಗೋಲು'-'ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ'
- ೧೯೮೬: 'ಅಗ್ನಿಮುಖಿ'-'ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ'
- ೧೯೮೮: 'ಋತುವಿಲಾಸ': 'ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ'
- ೧೯೯೦: 'ಎಷ್ಟೊಂದು ಮುಗಿಲು': 'ಬಿ.ಎಚ್.ಶ್ರೀಧರ ಪ್ರಶಸ್ತಿ'
- ೧೯೯೩: 'ಒಂದು ಸೈನಿಕ ವೃತ್ತಾಂತ'-'ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ'
- ೧೯೯೭: 'ಹೂವಿನ ಶಾಲೆ'-'ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ'
- 'ಸ್ವಯಂವರ'(ಅಪ್ರಕಟಿತ)-“ಉಡುಪಿ ರಂಗಭೂಮಿ ಪುರಸ್ಕಾರ".
- ೨೦೧೩: "ಬಾಲ ಸಾಹಿತ್ಯ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾದೆಮಿ[೫],[೬]
- ೨೦೧೪: "ಅನಕೃ ನಿರ್ಮಾಣ್ ಪ್ರಶಸ್ತಿ"[೭]
ಉಲ್ಲೇಖಗಳುಸಂಪಾದಿಸಿ
- ↑ ಎಚ್. ಎಸ್.ವಿ.ಯವರ ಅನಾತ್ಮ ಕಥನ
- ↑ ಡಾ. ಎಚ್ಚೆಸ್ವಿಯವರ ಹುಟ್ಟುಹಬ್ಬವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ ೩೦,ರಂದು ನೆರವೇರಿಸಲಾಯಿತು
- ↑ ಡಾ.ಎಚ್ಚೆಸ್ವಿ ಯವರ ೨೦ ವರ್ಷಗಳ ಅವಿರತ ತಪಸ್ಸಿನ ಫಲವಾಗಿ ಬುದ್ಧ ಚರಣ ಸಿದ್ಧವಾಗಿದೆ. 'ಭಗವಾನ್ ಬುದ್ಧನ ಕತೆ'ಯನ್ನು ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.ಇದನ್ನು ವರ್ಚುಯಲ್ ಪದ್ಧತಿಯ ಮುಖಾಂತರ ಅಕ್ಟೋಬರ್,೧೮,೨೦೨೦ ರಂದು ಬಿಡುಗಡೆಯಾಗಿದೆ
- ↑ "'ಬುದ್ಧಚರಣ–ಲಲಿತ ಛಂದೋಲಯದ ಮಹಾಕಾವ್ಯ',ವಿಶ್ವವಾಣಿ, Sunday, October 18th, 2020". Archived from the original on 2021-08-28. Retrieved 2021-08-28.
- ↑ "ಆರ್ಕೈವ್ ನಕಲು" (PDF). Archived from the original (PDF) on 2016-03-04. Retrieved 2015-05-26.
- ↑ "ಆರ್ಕೈವ್ ನಕಲು". Archived from the original on 2015-06-30. Retrieved 2015-05-26.
- ↑ http://vijaykarnataka.indiatimes.com/district/bengalurucity/nirman-award/articleshow/47301601.cms
ಬಾಹ್ಯ ಸಂಪರ್ಕಗಳುಸಂಪಾದಿಸಿ
- ಎಚ್.ಎಸ್.ವಿ.ಹೊಸಪುಸ್ತಕ,'ಬರ್ತಾ ಇದೆ ಅಕ್ಕಚ್ಛುವಿನ ಅರಣ್ಯ ಪರ್ವ', ಅವಧಿ-ಇ-ಪತ್ರಿಕೆ
- 'ಚುಕ್ಕು-ಬುಕ್ಕು',೦೫, ಜನವರಿ,೨೦೧೩, 'ಕವಿಯ ಋಣಭಾರ',ಒಂದೊಂದೇ-೪ Archived 2014-04-27 ವೇಬ್ಯಾಕ್ ಮೆಷಿನ್ ನಲ್ಲಿ.
- ಎಚ್ ಎಸ್ ವೆಂಕಟೇಶಮೂರ್ತಿಯವರ ’ಕುಮಾರವ್ಯಾಸ ಕಥಾಂತರ’Avadhi
- ಮೈಸೂರು ಅಸೋಸಿಯೇಷನ್ ದತ್ತಿ ಉಪನ್ಯಾಸಮಾಲೆಯ ಪ್ರಮುಖ ಉಪನ್ಯಾಸಕರಾಗಿ ಭಾಗವಹಿಸಿದ್ದರು,ಜನವರಿ,೨೦,೨೦೧೩, ವಿಷಯ : 'ನಾನು ಮತ್ತು ನನ್ನ ಸಮಕಾಲೀನರು'
- ನಮ್ಮ ಹೊಳಲ್ಕೆರೆ ಹೈದ, ನಮ್ಮೆಲ್ಲರ ಪ್ರೀತಿಯ ಡಾ. ಎಚ್ಚೆಸ್ವಿ !
- ಕಣಜದಲ್ಲಿ ಎಚ್.ಎಸ್.ವಿ.ಬಗ್ಗೆ ಲೇಖನ Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ.
- ಕಲಬುರ್ಗಿಯಲ್ಲಿ 2020ರ ೮೫ನೇ ಸಾಹಿತ್ಯಸಮ್ಮೇಳನದ ಸಮಯದ ಸಂದರ್ಶನ:ಏಕಾಂತದ ಮೂರ್ತಿ ಲೋಕಾಂತದ ಜೊತೆಗೆ. d: 26 ಜನವರಿ 2020
- ಕಲಬುರಗಿ ಜನರ ಕನ್ನಡ ಪ್ರೇಮಕ್ಕೆ ಮನ ಸೋತಿದ್ದೇನೆ: ಎಚ್ಚೆಸ್ವಿ.Suvarna news.-By Kannadaprabha news,9,Feb, 2020
- ಅವಧಿ-ಎಚ್-ಎಸ್-ವಿ-ಕಾಲಂ-ಮತ್ತೆ-ಮರೆತ/ ಎಚ್.ಎಸ್.ವಿ. ಕಾಲಂ,ಮತ್ತೆ ಮರೆತ ಇತಿಹಾಸದ ಮರುಗಳಿಗೆ
- ಶ್ರೀ ಸಂಸಾರಿ, ಎಚ್ಚೆಸ್ವಿಗೆ 76 ವಯಸ್ಸು, ಅವರು ಪ್ರೀತಿ ಆತ್ಮೀಯತೆಗಳ ಓಯಸಿಸ್ಸು ! Prasad Naik | Vijaya KarnatakaUpdated: 23 Jun 2020
- ನನಗೇನು ಅರ್ಪಣೆಮಾಡಿದಿರಿ ? ಎಂದ ಪತ್ನಿಗೆ 'ಬುದ್ಧಚರಣ' ಅರ್ಪಿಸಿದ ಎಚ್.ಎಸ್.ವಿ, ವಿಜಯವಾಣಿ, ಅಕ್ಟೋಬರ್,೧೮,೨೦೨೦