ಇಲಕಲ

ಕರ್ನಾಟಕ ರಾಜ್ಯದ ತಾಲೂಕು ಕೇಂದ್ರ.
(ಇಳಕಲ್ಲ ಇಂದ ಪುನರ್ನಿರ್ದೇಶಿತ)

ಇಳಕಲ ಅಥವಾ ಇಳಕಲ್ಲು ಕರ್ನಾಟಕಬಾಗಲಕೋಟೆ ಜಿಲ್ಲೆಯ ಒಂದು ನಗರ. ಇಳಕಲ್ಲು ಬಾಗಲಕೋಟೆ ಜಿಲ್ಲೆಯ ಒಂದು ತಾಲ್ಲೂಕ ಕೇಂದ್ರವಾಗಿದೆ.}ಇಳಕಲ್ಲ.ಕರಡಿ.ಅಮಿನಗಡ ಆಯ್ದ ಗ್ರಾಮಗಳನ್ನು ಹೋಬಳಿಯ ಗ್ರಾಮಗಳನ್ನು ಒಳಗೊಂಡಿದೆ ಬಾಗಲಕೋಟೆಯಿಂದ 60.ಕಿ.ಮಿ.ಗಳ ದೂರದಲ್ಲಿದೆ.

ಇಳಕಲ್ಲ
India-locator-map-blank.svg
Red pog.svg
ಇಳಕಲ್ಲ
ರಾಜ್ಯ
 - ಜಿಲ್ಲೆ
[[ಕರ್ನಾಟಕ]]
 - ಬಾಗಲಕೋಟೆ
ನಿರ್ದೇಶಾಂಕಗಳು 15.9598° N 76.1156° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
80.000
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 587125.587154
 - +08351
 - 

ಸನ್ನಿವೇಶಸಂಪಾದಿಸಿ

ಇಳಕಲ್ ಪಟ್ಟಣವು 15°58′N 76°08′E / 15.97°N 76.13°E / 15.97; 76.13.[೧] ಅಕ್ಷಾಂಶ ರೇಖಾಂಶಗಳಲ್ಲಿ ಸ್ಥಿತವಾಗಿದೆ.ಸಮುದ್ರ ಮಟ್ಟದಿಂದ ೫೮೫ ಮೀಟರ್ ಎತ್ತರದಲ್ಲಿದೆ.

ಪ್ರಸಿದ್ಧಿಸಂಪಾದಿಸಿ

ಇಲ್ಲಿನ ಸೀರೆಗಳು ಬಹಳ ಪ್ರಸಿದ್ಧ, ನೇಯ್ಗೆಯ ಹಾಗೂ ಬಣ್ಣಹಾಕುವ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿದೆ.ಇಲ್ಲಿ ದೊರೆಕುವ ಕೆಂಪು ಶಿಲೆಯು ವಿಶ್ವದೆಲ್ಲೆಡೆ ಮಾರಾಟವಾಗುತ್ತದೆ.pink granite(ruby red),

ಪ್ರೇಕ್ಷಣೀಯ ಸ್ಥಳಗಳುಸಂಪಾದಿಸಿ

ಈ ಊರಿನಲ್ಲಿ ಬನಶಂಕರಿ, ಬಸವಣ್ಣ, ಮತ್ತು ವೆಂಕೋಬ ದೇವಸ್ಥಾನಗಳಿವೆ. ಕೊನೆಯದು ಪೂರ್ವಕಾಲದ ಶಿಲ್ಪಕಲೆಯಿಂದ ಕೂಡಿದೆ. ಇಲ್ಲಿ ಬಳಸಲಾಗಿರುವ ಇಲ್ಲಿನ ಕಂಬಗಳನ್ನು ಐಹೊಳೆಯಿಂದ ತಂದಿರಬಹುದೆಂದು ನಂಬಿಕೆ. ದೇವಸ್ಥಾನದ ಕಲ್ಲಿನ ಚಾವಣಿಯಲ್ಲಿ ದೂಲ ಮತ್ತು ಅಡ್ಡಪಟ್ಟಿಗಳನ್ನು ಕೆತ್ತಲಾಗಿದೆ. ಮಹಂತಸ್ವಾಮಿಗಳೆಂಬ ವಿರಕ್ತ ಸ್ವಾಮಿಗಳೊಬ್ಬರು ಇಲ್ಲಿ ಒಂದು ಲಿಂಗಾಯತ ಶ್ರೀ ವಿಜಯ ಮಹಾಂತೇಶ ಮಠವನ್ನು ಸ್ಥಾಪಿಸಿದ್ದಾರೆ. ಇದನ್ನು ಈ ಸ್ಥಳದ ಎಲ್ಲ ವಿಭಾಗದ ಜನರೂ ಆಧರಿಸುತ್ತಾರೆ.ಕರಡಿಗ್ರಾಮದಲ್ಲಿ ಪ್ರಸಿದ್ದ ವಿಜಯನಗರ ಕಾಲದ ಶ್ರೀ ಬಸವಣ್ಣ ದೇವರ ದೇವಾಲಯವಿದೆ.ಬ್ರಿಟಿಷ್ ಕಾಲದ ಸಂತ ಜೋಸೆಫ್ ಚರ್ಚ್ ಇದೆ

ಆಡಳಿತಸಂಪಾದಿಸಿ

ಇಲ್ಲಿನ ಪೌರಸಭೆ 1867ರಲ್ಲಿ ಸ್ಥಾಪಿತವಾಯಿತು. ಅದರ 21 ಜನ ಸದಸ್ಯ ಸ್ಥಾನಗಳಲ್ಲಿ 2 ಮಹಿಳೆಯರಿಗಾಗಿ ಮೀಸಲಿವೆ. ಸದಸ್ಯರನ್ನು ನಾಲ್ಕು ವರ್ಷಗಳಿಗೊಂದಾವರ್ತಿ ಚುನಾಯಿಸಲಾಗುತ್ತದೆ.ಈಗ ನಗರಸಭೆಯಾಗಿದೆ.ವಾರ್ಡ ೩೧ಇವೆ

ಶಿಕ್ಷಣಸಂಪಾದಿಸಿ

ಇಲ್ಲಿ ಎರಡು ಪ್ರೌಢಶಾಲೆಗಳು, ಒಂದು ಕಾಲೇಜು ಹಾಗೂ ಒಂದು ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜು ಇವೆ.

ಆಕರಗಳುಸಂಪಾದಿಸಿ

AMS Maps of India and Pakistan

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಇಲಕಲ&oldid=1026912" ಇಂದ ಪಡೆಯಲ್ಪಟ್ಟಿದೆ