ಶಿವಾನಂದ ಪಾಟೀಲ
ಶಿವಾನಂದ ಪಾಟೀಲರು ಪ್ರಸ್ತುತ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕರು. ಇವರು ಮಾಜಿ ನಗರ ಸಭೆ ಅಧ್ಯಕ್ಷರು, ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು, ಉದ್ಯಮಿಗಳು ಹಾಗೂ ರಾಜಕೀಯ ಧುರೀಣರು.
ಶಿವಾನಂದ ಪಾಟೀಲ | |
---|---|
ಜನನ | ವಿಜಯಪುರ, ಕರ್ನಾಟಕ |
ವೃತ್ತಿ | ರಾಜಕೀಯ |
ರಾಷ್ಟ್ರೀಯತೆ | ಭಾರತೀಯ |
ಶಿಕ್ಷಣ
ಬದಲಾಯಿಸಿಶಿವಾನಂದ ಪಾಟೀಲರು ಬೆಳಗಾವಿಯ ಕೆ.ಎಲ್.ಈ. ಸಂಸ್ಥೆಯ ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯದಿಂದ 1981ರಲ್ಲಿ D.Pharm ಪದವಿ ಪಡೆದಿದ್ದಾರೆ.
ರಾಜಕೀಯ
ಬದಲಾಯಿಸಿ- ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು.
- ಶಿವಾನಂದ ಪಾಟೀಲ ನಂತರ 1991ರಲ್ಲಿ ನಡೆದ ತಿಕೋಟಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಜನತಾ ದಳದಿಂದ ಸ್ಪರ್ಧಿಸಿ ಸೋಲುಂಡಿದ್ದರು.
- 1992ರಲ್ಲಿ ವಿಜಯಪುರ ನಗರಸಭೆಯ ಅಧ್ಯಕ್ಷರಾಗಿದ್ದರು.
- 1994ರಲ್ಲಿ ತಿಕೋಟಾ ವಿಧಾನಸಭೆ ಕ್ಷೇತ್ರದಿಂದ ಜನತಾ ದಳದಿಂದ ಆಯ್ಕೆಯಾಗಿದ್ದರು.
- 1999ರಲ್ಲಿ ತಿಕೋಟಾ ವಿಧಾನಸಭೆ ಕ್ಷೇತ್ರದಿಂದ ಪಕ್ಷ ಬದಲಿಸಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದರು.
- 2004ರ ಚುನಾವಣೆಯಲ್ಲಿ ಪಕ್ಷಾಂತರ ಅಷ್ಟೇ ಅಲ್ಲ, ಕ್ಷೇತ್ರಾಂತರವನ್ನೂ ಮಾಡಿ ತಿಕೋಟಾ ವಿಧಾನಸಭೆ ಕ್ಷೇತ್ರವನ್ನು ಬಿಟ್ಟು ಅಲ್ಲದೇ, ಬಿಜೆಪಿಯನ್ನೂ ತೊರೆದು ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಆಯ್ಕೆಯಾದರು.
- 2008ರಲ್ಲಿ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ಸಿನಂದ ಪುನರಾಯ್ಕೆ ಬಯಸಿ, ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಬೆಳ್ಳುಬ್ಬಿ ವಿರುದ್ಧ ಸೋಲುಂಡರು.
- 2013ರಲ್ಲಿ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸನಿಂದ ಮತ್ತೆ ಸ್ಪರ್ಧಿಸಿ ಆಯ್ಕೆಯಾದರು.
- 2018ರಲ್ಲಿ ಬಸವನ ಬಾಗೇವಾಡಿಯಿಂದ ಕಾಂಗ್ರೆಸ್ನಿಂದ ಪುನರಾಯ್ಕೆಯಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.[೧]
ಸಚಿವರು
ಬದಲಾಯಿಸಿಬಸವಣ್ಣನ ತವರು ಬಸವನ ಬಾಗೇವಾಡಿ ಕ್ಷೇತ್ರದಿಂದ 3ನೇ ಬಾರಿಗೆ ಶಾಸಕರಾಗಿರುವ ಶಿವಾನಂದ ಪಾಟೀಲರು 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.[೨]
ವೈಯಕ್ತಿಕ ಜೀವನ
ಬದಲಾಯಿಸಿಶ್ರೀಯುತರು ಭಾಗ್ಯಶ್ರೀ ಪಾಟೀಲರನ್ನು ಮದುವೆಯಾಗಿದ್ದು ಸತ್ಯಜೀತ್, ಸಂಯುಂಕ್ತಾ ಮತ್ತು ಸಂಪ್ರದಾ ಮೂವರು ಮಕ್ಕಳಿದ್ದು ವಿಜಯಪುರ ನಗರದಲ್ಲಿ ವಾಸವಾಗಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2018-04-18. Retrieved 2018-08-15.
- ↑ https://m.dailyhunt.in/news/india/kannada/allindiannews+com-epaper-allindia/siem+samputadalli+sachivaraadha+shaasaka+shivaanandha+paatila-newsid-89475250