ಚಡಚಣ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ. ಪಟ್ಟಣವು ಶಿರಾಡೋಣ - ಇಂಡಿ ರಾಜ್ಯ ಹೆದ್ದಾರಿ-೪೧ ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೬೫ ಕಿ.ಮಿ. ಇದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ ಚಡಚಣ ಪಟ್ಟಣವನ್ನು ಹೊಸ ತಾಲ್ಲೂಕೆಂದು ರಚಿಸಿದೆ. ಹಾಗೂ ಚಡಚಣ ಗ್ರಾಮ ಪಂಚಾಯತಿನ್ನು ಪಟ್ಟಣ ಪಂಚಾಯತಿಯಾಗಿ ಮೆಲ್ದರ್ಜೆಗೆ ಏರಿಸಲಾಗಿದೆ. ಚಡಚಣ ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ

ಚಡಚಣ
India-locator-map-blank.svg
Red pog.svg
ಚಡಚಣ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ವಿಜಯಪುರ
ನಿರ್ದೇಶಾಂಕಗಳು 16.833° N 75.7000° E
ವಿಸ್ತಾರ
 - ಎತ್ತರ
 km²
 - 770 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.

ಚರಿತ್ರೆಸಂಪಾದಿಸಿ

ಚಡಚಣದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶೀಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ

ಇಂಡಿಯಿಂದ ಸುಮಾರು ೪೦ ಕಿ.ಮೀ. ದೂರದಲ್ಲಿರುವ ಚಡಚಣ ಗ್ರಾಮದಲ್ಲಿ ಜಾನಪದ ಜಂಗಮ, ವಿಶ್ವಕೋಶವೆನಿಸಿದ ಸಿಂಪಿ ಲಿಂಗಣ್ಣನವರು ೧೦ನೇ ಫೆಬ್ರುವರಿ, ೧೯೦೫ ರಲ್ಲಿ ಜನಿಸಿದರು. ಅರವಿಂದವಾಣಿಯನ್ನು ಮೊದಲು ಪ್ರತಿಧ್ವನಿಸಿದ ಹಲಸಂಗಿ ಬಳಗದ ಬಳ್ಳಿಗೆ ಸೇರಿದವರು. ಸೃಜನ ಸಾಹಿತ್ಯ, ಜಾನಪದ ಸಾಹಿತ್ಯ, ಅನುವಾದ ಸಾಹಿತ್ಯ, ಅನುಭಾವ ಸಾಹಿತ್ಯದಲ್ಲಿ ಸಿಂಪಿಯವರ ಪ್ರತಿಭೆ-ಪರಿಶ್ರಮ ಪಾಂಡಿತ್ಯಗಳ ತ್ರಿವೇಣಿಯನ್ನು ಕಾಣಬಹುದು. ಕಥೆ, ಕವನ, ನಾಟಕ, ಪ್ರಬಂಧ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ ರಚಿಸಿದ್ದಾರೆ. ರಾಮತೀರ್ಥರ ಅರವಿಂದ ಸಾಹಿತ್ಯವನ್ನು ಮರಾಠಿ, ಬಂಗಾಲಿ, ಹಿಂದಿಭಾಷೆಯಿಂದ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ. ಇವರು ಹಿಂದಿ, ಬಂಗಾಲಿ ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದರು. ಗರತಿಯಬಾಳು, ಜನಾಂಗದ ಜೀವಾಳ (ಸರಕಾರದಿಂದ ಬಹುಮಾನದ) ವೈಚಾರಿಕ ಕೃತಿಗಳು. ಇವರ ಸ್ವರ್ಗದೋಲೆಗಳು ಜನಪ್ರಿಯ ಗ್ರಂಥವೆನಿಸಿದೆ.

ಮಧುರಚೆನ್ನರ ಸಂಪರ್ಕದಲ್ಲಿ ಸಿಂಪಿಲಿಂಗಣ್ಣನವರು ಆಧ್ಯಾತ್ಮದೆಡೆ ಸೆಳೆತಕ್ಕೊಳಪಟ್ಟವರು. ಇವರು ರಾಷ್ಟ್ರಪ್ರಶಸ್ತಿ ಶಿಕ್ಷಕ ಪ್ರಶಸ್ತಿ, ಜೊತೆಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ, ಕೊಪ್ಪಳದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದದ್ದು ಸ್ಮರಣೀಯವಾಗಿದೆ.

ಭೌಗೋಳಿಕಸಂಪಾದಿಸಿ

ಪಟ್ಟಣವು ಭೌಗೋಳಿಕವಾಗಿ ೧೬* ೩೨' ೧೦" ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನಸಂಪಾದಿಸಿ

 • ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. ಬೇಸಿಗೆ - ೩೫°C-೪೨°C ಡಿಗ್ರಿ ಸೆಲ್ಸಿಯಸ್, ಚಳಿಗಾಲ ಮತ್ತು ಮಳೆಗಾಲ - ೧೮°C-೨೮°Cಡಿಗ್ರಿ ಸೆಲ್ಸಿಯಸ್.
 • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.

ಜನಸಂಖ್ಯೆಸಂಪಾದಿಸಿ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು ೨೫,೦೦೦ ಇದೆ. ಅದರಲ್ಲಿ ೧೫,೦೦೦ ಪುರುಷರು ಮತ್ತು ೧೦,೦೦೦ ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕಸಂಪಾದಿಸಿ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿಸಂಪಾದಿಸಿ

 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ನಾಟಕಸಂಪಾದಿಸಿ

ಪಟ್ಟಣದಲ್ಲಿ ಪ್ರತಿವರ್ಷ ಹಬ್ಬದ ದಿನ ಪೌರಾಣಿಕ ಅಥವಾ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಾರೆ.

ಧರ್ಮಗಳುಸಂಪಾದಿಸಿ

ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳುಸಂಪಾದಿಸಿ

ಪಟ್ಟಣದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯಗಳುಸಂಪಾದಿಸಿ

ಶ್ರೀ ಸಂಗಮೇಶ್ವರ ದೇವಸ್ಥಾನ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಮಸೀದಿಗಳುಸಂಪಾದಿಸಿ

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿಸಂಪಾದಿಸಿ

ಪಟ್ಟಣದ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ(ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಹಬ್ಬಗಳುಸಂಪಾದಿಸಿ

ಪ್ರತಿವರ್ಷ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣಸಂಪಾದಿಸಿ

ಪ್ರಮುಖ ಶಿಕ್ಷಣ ಸಂಸ್ಥೆಗಳು

ಕಿರಿಯ ಪ್ರಾಥಮಿಕ ಶಾಲೆಗಳು

 • ಅಂಜಲ್ಸ್ ಕಿರಿಯ ಪ್ರಾಥಮಿಕ ಶಾಲೆ, ಚಡಚಣ
 • ಓಂ ಕಿರಿಯ ಪ್ರಾಥಮಿಕ ಶಾಲೆ, ಚಡಚಣ
 • ಸ್ವಾಮಿ ವಿವೇಕಾನಂದ ಕಿರಿಯ ಪ್ರಾಥಮಿಕ ಶಾಲೆ, ಚಡಚಣ
 • ವಿದ್ಯಾಭಾರತಿ ಕಿರಿಯ ಪ್ರಾಥಮಿಕ ಶಾಲೆ, ಚಡಚಣ
 • ಕಲ್ಮೇಶ್ವರ ಕಿರಿಯ ಪ್ರಾಥಮಿಕ ಶಾಲೆ, ಚಡಚಣ
 • ಸರಕಾರಿ ಆಶ್ರಮ ಶಾಲೆ, ಚಡಚಣ

ಹಿರಿಯ ಪ್ರಾಥಮಿಕ ಶಾಲೆಗಳು

 • ಎಮ್.ಈ.ಎಸ್ ಹಿರಿಯ ಪ್ರಾಥಮಿಕ ಶಾಲೆ, ಚಡಚಣ
 • ಶ್ರೀ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಚಡಚಣ

ಪ್ರೌಢ ಶಾಲೆಗಳು

 • ಶ್ರೀ ಸಂಗಮೇಶ್ವರ ಪ್ರೌಢ ಶಾಲೆ, ಚಡಚಣ
 • ಎನ್.ಎಮ್.ಬಿ.ಆರ್.ಎಸ್. ಪ್ರೌಢ ಶಾಲೆ, ಚಡಚಣ
 • ಎಸ್.ಎಸ್. ಬಾಲಕಿಯರ ಪ್ರೌಢ ಶಾಲೆ, ಚಡಚಣ
 • ಎಸ್.ಎಸ್.ಎಮ್. ಪ್ರೌಢ ಶಾಲೆ, ಚಡಚಣ
 • ಎಮ್.ಈ.ಎಸ್ ಪ್ರೌಢ ಶಾಲೆ, ಚಡಚಣ (ಆಂಗ್ಲ ಮಾಧ್ಯಮ)

ಪದವಿ ಪೂರ್ವ ಮಹಾವಿದ್ಯಾಲಯಗಳು

 • ಎಮ್.ಈ.ಎಸ್ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಡಚಣ
 • ಶ್ರೀ ಸಂಗಮೇಶ್ವರ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಡಚಣ

ಪದವಿ ಮಹಾವಿದ್ಯಾಲಯಗಳು

 • ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಚಡಚಣ

ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು

 • ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಚಡಚಣ

ಕೈಗಾರಿಕಾ ತರಬೇತಿ ಕೇಂದ್ರಗಳು

 • ಮೋಹನ ಕೈಗಾರಿಕಾ ತರಬೇತಿ ಕೇಂದ್ರ, ಚಡಚಣ
 • ಮಂಜುನಾಥ ಕೈಗಾರಿಕಾ ತರಬೇತಿ ಕೇಂದ್ರ, ಚಡಚಣ
 • ಸರ್ವೋದಯ ಕೈಗಾರಿಕಾ ತರಬೇತಿ ಕೇಂದ್ರ, ಚಡಚಣ

ಸಹಾಯಕ ವೈದ್ಯಕೀಯ (ಪ್ಯಾರಾಮೆಡಿಕಲ್) ವಿಜ್ಞಾನ ಸಂಸ್ಥೆ

 • ಎಸ್.ಎಸ್.ಆರ್.ಬಿ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಡಚಣ

ಸ್ನಾತಕೋತ್ತರ ಮಹಾವಿದ್ಯಾಲಯ

 • ಶ್ರೀ ಸಂಗಮೇಶ್ವರ ವಾಣಿಜ್ಯ ಮಹಾವಿದ್ಯಾಲಯ(M.Com), ಚಡಚಣ

ರಾಜಕೀಯಸಂಪಾದಿಸಿ

ಚಡಚಣ ಪಟ್ಟಣವು ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರ ದ ವ್ಯಾಪ್ತಿಯಲ್ಲಿ ಬರುತ್ತದೆ.

ಸಾಹಿತ್ಯಸಂಪಾದಿಸಿ

 
೧೯೬೦ರಲ್ಲಿ ಆದರ್ಶ ಶಿಕ್ಷಕರೆಂದು ರಾಷ್ಟ್ರಾಧ್ಯಕ್ಷ ಡಾ. ರಾಜೇಂದ್ರ ಪ್ರಸಾದರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಸಿಂಪಿ ಲಿಂಗಣ್ಣನವರು

ಪಟ್ಟಣದ ಹಿರಿಯರಾದ ಸಿಂಪಿ ಲಿಂಗಣ್ಣರವರು ಸಾಹಿತಿಗಳಾಗಿದ್ದಾರೆ.

 • ಸಂಗಮೇಶ ಹೂಗಾರ

ನೀರಾವರಿಸಂಪಾದಿಸಿ

ಪಟ್ಟಣದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆಗಳುಸಂಪಾದಿಸಿ

ಕೃಷ್ಣಾ ಹಾಗೂ ಭೀಮಾ ನದಿಯಿಂದ ನೀರಾವರಿ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಉದ್ಯೋಗಸಂಪಾದಿಸಿ

ಪಟ್ಟಣದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆಗಳುಸಂಪಾದಿಸಿ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಅಕ್ಕಿ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ(ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಾಕ್ಷರತೆಸಂಪಾದಿಸಿ

ಪಟ್ಟಣದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೭% ಪುರುಷರು ಹಾಗೂ ೫೬% ಮಹಿಳೆಯರು ಸಾಕ್ಷರತೆ ಹೊಂದಿದೆ.

ಅಂಚೆ ಕಚೇರಿಗಳುಸಂಪಾದಿಸಿ

ಚಡಚಣ ಪಟ್ಟಣದ ಪಿನ್ ಕೋಡ ಸಂಖ್ಯೆ - ೫೮೬೨೦೫.

 • ಚಡಚಣ - ೫೮೬೨೦೫ (ಚಡಚಣ ಹೊರವಲಯ, ಹಾಲಳ್ಳಿ, ಹತ್ತಳ್ಳಿ(ಹತ್ತಹಳ್ಳಿ), ಹಾವಿನಾಳ, ನಿವರಗಿ, ರೇವತಗಾಂವ, ಸಂಖ, ಶಿರಾಡೋಣ, ಉಮರಜ, ಉಮರಾಣಿ).

ಮೆಟ್ರಿಕ್ ಪೂರ್ವ ಉಚಿತ ಪ್ರಸಾದನಿಲಯಸಂಪಾದಿಸಿ

ಪಟ್ಟಣದಲ್ಲಿ ಬಾಲಕರ ಮೆಟ್ರಿಕ್ ಪೂರ್ವ ಉಚಿತ ಪ್ರಸಾದನಿಲಯವಿದೆ.

ಬಿ.ಎಸ್.ಎನ್.ಎಲ್ ಸಂಕೇತಗಳುಸಂಪಾದಿಸಿ

ಚಡಚಣ ಗ್ರಾಮದ ಬಿ.ಎಸ್.ಎನ್.ಎಲ್ ಸಂಕೇತ ಸಂಖ್ಯೆ - ೦೮೪೨೨.

ನೆಮ್ಮದಿ ಕೇಂದ್ರಗಳು / ಹೋಬಳಿ ಕೇಂದ್ರಗಳುಸಂಪಾದಿಸಿ

ಚಡಚಣ ಗ್ರಾಮದಲ್ಲಿ ನೆಮ್ಮದಿ ಕೇಂದ್ರ /ಹೋಬಳಿ ಕೇಂದ್ರಯಿದೆ.

ಕೆರೆಗಳುಸಂಪಾದಿಸಿ

ಚಡಚಣ ಗ್ರಾಮದ ಹತ್ತಿರ ಕೆರೆಯಿದೆ.

ಕೈಗಾರಿಕೆಗಳುಸಂಪಾದಿಸಿ

ಮೀನುಗಾರಿಕೆ ಸಹಕಾರ ಸಂಘಸಂಪಾದಿಸಿ

 • ಮೀನುಗಾರಿಕೆ ಸಹಕಾರ ಸಂಘ, ಚಡಚಣ

ಕಂದಾಯ ಕಚೇರಿಸಂಪಾದಿಸಿ

 • ಕಂದಾಯ ಕಚೇರಿ, ಚಡಚಣ

ನೇಕಾರರ ಸಹಕಾರ ಸಂಘಸಂಪಾದಿಸಿ

 • ನೇಕಾರರ ಸಹಕಾರ ಸಂಘ, ಚಡಚಣ

ಕಟ್ಟಡ ನಿರ್ಮಾಣ ಸಹಕಾರ ಸಂಘಸಂಪಾದಿಸಿ

 • ಕಟ್ಟಡ ನಿರ್ಮಾಣ ಸಹಕಾರ ಸಂಘ, ಚಡಚಣ

ಖಾದಿ ಗ್ರಾಮೋದ್ಯೋಗಸಂಪಾದಿಸಿ

 • ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘ, ಚಡಚಣ

ರೈತ ಸಂಪರ್ಕ ಕೇಂದ್ರಸಂಪಾದಿಸಿ

 • ರೈತ ಸಂಪರ್ಕ ಕೇಂದ್ರ, ಚಡಚಣ

ಪಶು ಚಿಕಿತ್ಸಾಲಯಸಂಪಾದಿಸಿ

 • ಪಶು ಚಿಕಿತ್ಸಾಲಯ, ಚಡಚಣ

ಹಾಲು ಉತ್ಪಾದಕ ಸಹಕಾರಿ ಸಂಘಸಂಪಾದಿಸಿ

ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘಯಿದೆ.

ರಾಜ್ಯ ಹೆದ್ದಾರಿಸಂಪಾದಿಸಿ

ಸರಕಾರಿ ವಾಹನ ನಿಲ್ದಾಣಸಂಪಾದಿಸಿ

 • ಸರಕಾರಿ ವಾಹನ ನಿಲ್ದಾಣ, ಚಡಚಣ

ಚಿತ್ರ ಮಂದಿರಸಂಪಾದಿಸಿ

 • ಸಂಗಮೇಶ್ವರ ಚಿತ್ರ ಮಂದಿರ, ಚಡಚಣ

ಮಳೆ ಮಾಪನ ಕೇಂದ್ರಸಂಪಾದಿಸಿ

 • ಮಳೆ ಮಾಪನ ಕೇಂದ್ರ, ಚಡಚಣ

ಆರೋಗ್ಯಸಂಪಾದಿಸಿ

ಪಟ್ಟಣದಲ್ಲಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರವಿದೆ.

ಆರಕ್ಷಕ (ಪೋಲಿಸ್) ಠಾಣೆಸಂಪಾದಿಸಿ

ಪಟ್ಟಣದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.

ವಿದ್ಯುತ್ ಪರಿವರ್ತನಾ ಕೇಂದ್ರಸಂಪಾದಿಸಿ

೧೧೦ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ.

ಬ್ಯಾಂಕಗಳುಸಂಪಾದಿಸಿ

 • ಸಿಂಡಿಕೇಟ್ ಬ್ಯಾಂಕ್, ಚಡಚಣ
 • ಎಸ್.ಬಿ.ಐ. ಬ್ಯಾಂಕ್, ಚಡಚಣ
 • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಚಡಚಣ
 • ಕರ್ನಾಟಕ ಬ್ಯಾಂಕ್, ಚಡಚಣ
 • ಚಡಚಣ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ
 • ಇಂಡಿ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ
 • ಡಿ.ಸಿ.ಸಿ.ಬ್ಯಾಂಕ, ಚಡಚಣ
 • ಖಜಾನೆ ಕಚೇರಿ, ಚಡಚಣ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಸಂಪಾದಿಸಿ

ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಿದೆ.

ಕೃಷಿ ಮಾರುಕಟ್ಟೆಸಂಪಾದಿಸಿ

 • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಚಡಚಣ

ಪಟ್ಟಣ ಪಂಚಾಯತಿಸಂಪಾದಿಸಿ

 • ಪಟ್ಟಣ ಪಂಚಾಯತಿ ಕಾರ್ಯಾಲಯ, ಚಡಚಣ

ಚಡಚಣ ಪಟ್ಟಣ ಪಂಚಾಯತಿಯ ಅಂತರ್ಜಾಲ ತಾಣ Archived 2018-11-05 at the Wayback Machine.

"https://kn.wikipedia.org/w/index.php?title=ಚಡಚಣ&oldid=1093011" ಇಂದ ಪಡೆಯಲ್ಪಟ್ಟಿದೆ