ನಾಗಠಾಣ ವಿಧಾನಸಭಾ ಕ್ಷೇತ್ರ
ನಾಗಠಾಣ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ನಾಗಠಾಣ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ.
ಕ್ಷೇತ್ರದ ಇತಿಹಾಸ
ಬದಲಾಯಿಸಿಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರವು, ವಿಜಯಪುರ ಜಿಲ್ಲೆಯ ಒಂದು ಪ್ರಮುಖ ವಿಧಾನಸಭಾ ಕ್ಷೇತ್ರ. ವಿಜಯಪುರ-ಇಂಡಿ ರಸ್ತೆಯಲ್ಲಿ ಈ ಊರು ನೆಲೆಸಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವುದರಿಂದ ಈ ಊರಿನ ಮೇಲೆ ಮರಾಠಿ ಪ್ರಭಾವ ಸಾಕಷ್ಟಿದೆ. ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. ಮಾಜಿ ಶಾಸಕ ಆರ್.ಕೆ.ರಾಠೋಡ ಪಂಚಾಯಿತಿ ರಾಜಕಾರಣವನ್ನು ಮೆಟ್ಟಿಲಾಗಿಸಿಕೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಹೊರ್ತಿ ಜಿಪಂ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು. 2004ರಲ್ಲಿ ಜನತಾದಳದಿಂದ ಬಳ್ಳೊಳ್ಳಿ ಮೀಸಲು ಕ್ಷೇತ್ರದ (ಈಗಿನ ನಾಗಠಾಣ) ಶಾಸಕರಾಗಿ ಆಯ್ಕೆಯಾಗಿದ್ದರು. 2004ರ ಮುಂಚೆ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರವಾಗಿತ್ತು.1962ರಲ್ಲಿ ಬರಡೋಲ ವಿಧಾನಸಭಾ ಕ್ಷೇತ್ರವೆಂದು ನಾಮಕರಣಗೊಂಡಿತ್ತು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಈ ಕ್ಷೇತ್ರವನ್ನು 2013 ರಲ್ಲಿ ಕಾಂಗ್ರೆಸ್ ನ ಪ್ರೊ.ರಾಜು ಆಲಗೂರು ಪ್ರತಿನಿಧಿಸಿದ್ದರು.
ಕ್ಷೇತ್ರದ ವಿಶೇಷತೆ
ಬದಲಾಯಿಸಿ- ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು.
- ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರ.
- ರಾಜು ಆಲಗೂರುರವರು 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿಯ ಅಧ್ಯಕ್ಷ ಹಾಗೂ ಸಂಸದೀಯ ಕಾರ್ಯದರ್ಶಿಗಳಾಗಿದ್ದರು.
- ದೇವಾನಂದ ಚವ್ಹಾಣರವರು 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಜೆಡಿಎಸ್-ಕಾಂಗ್ರೇಸ್ ಸಮ್ಮಿಸ್ರ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಗಳಾಗಿದ್ದರು.
- ಜೆಟ್ಟೆಪ್ಪ ಕಬಾಡಿಯವರು ಇದೆ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದಾರೆ.
- ವಿಠ್ಠಲ ಕಟಕದೊಂಡ, ರಾಜು ಆಲಗೂರು ಮತ್ತು ಸಿದ್ಧಾರ್ಥ ಅರಕೇರಿಯವರು 2 ಬಾರಿ ಹಾಗೂ ರಮೇಶ್ ಜಿಗಜಿಣಗಿ 3 ಬಾರಿ ಆಯ್ಕೆಯಾಗಿದ್ದಾರೆ.
- ರಮೇಶ್ ಜಿಗಜಿಣಗಿಯವರು 1983ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದರಂತೆ 1984 -85ರಲ್ಲಿ ಅಬಕಾರಿ ಖಾತೆ ರಾಜ್ಯ ಸಚಿವರಾಗಿ, 1996-98ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
- ದೇವಾನಂದ ಚವ್ಹಾಣ, ಆರ್.ಕೆ.ರಾಠೋಡ ಮತ್ತು ಮನೋಹರ ಐನಾಪುರರವರು ಲಂಬಾಣಿ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ.
- ವಿಠ್ಠಲ ಕಟಕದೊಂಡರವರು 2008ರಲ್ಲಿ ಬಿಜೆಪಿಯಿಂದ ಹಾಗೂ 2023ರಲ್ಲಿ ಕಾಂಗ್ರೇಸ್ ನಿಂದ ಆಯ್ಕೆಯಾಗಿದ್ದಾರೆ.
ಜನಪ್ರತಿನಿಧಿಗಳ ವಿವರ
ಬದಲಾಯಿಸಿವರ್ಷ | ವಿಧಾನ ಸಭಾ ಕ್ಷೆತ್ರ | ವಿಜೇತ | ಪಕ್ಷ | ಮತಗಳು | ಉಪಾಂತ ವಿಜೇತ | ಪಕ್ಷ | ಮತಗಳು |
ನಾಗಠಾಣ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2023 | ನಾಗಠಾಣ ವಿಧಾನಸಭಾ ಕ್ಷೇತ್ರ | ವಿಠ್ಠಲ ಕಟಕದೊಂಡ | INC | 78990 | ಸಂಜೀವ ಐಹೊಳೆ | BJP | 48175 |
2018 | ನಾಗಠಾಣ ವಿಧಾನಸಭಾ ಕ್ಷೇತ್ರ | ದೇವಾನಂದ ಚವ್ಹಾಣ | JDS | 59709 | ವಿಠ್ಠಲ ಕಟಕದೊಂಡ | INC | 54108 |
2013 | ನಾಗಠಾಣ ವಿಧಾನಸಭಾ ಕ್ಷೇತ್ರ | ರಾಜು ಆಲಗೂರ | INC | 45570 | ದೇವಾನಂದ ಚವ್ಹಾಣ | JDS | 44903 |
2008 | ನಾಗಠಾಣ ವಿಧಾನಸಭಾ ಕ್ಷೇತ್ರ | ವಿಠ್ಠಲ ಕಟಕದೊಂಡ | BJP | 40225 | ರಾಜು ಆಲಗೂರ | INC | 36018 |
ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2004 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಆರ್.ಕೆ.ರಾಠೋಡ | JDS | 39915 | ರಾಜು ಆಲಗೂರ | INC | 28873 |
1999 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ರಾಜು ಆಲಗೂರ | INC | 27194 | ಆರ್.ಕೆ.ರಾಠೋಡ | JDS | 24667 |
1994 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | JD | 29018 | ಫೂಲಸಿಂಗ್ ಚವ್ಹಾಣ | INC | 17591 |
1989 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಮನೋಹರ ಐನಾಪುರ | INC | 27782 | ರಮೇಶ್ ಜಿಗಜಿಣಗಿ | JD | 23357 |
1985 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | JNP | 32360 | ದಯಾನಂದ ಕೊಂಡಗೂಳಿ | INC | 21311 |
1983 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | JNP | 24603 | ಸಿದ್ಧಾರ್ಥ ಅರಕೇರಿ | INC | 11876 |
1978 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಸಿದ್ಧಾರ್ಥ ಅರಕೇರಿ | JNP | 23023 | ಚಂದ್ರಶೇಖರ ಹೊಸಮನಿ | INC | 14204 |
ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಮೈಸೂರು ರಾಜ್ಯ | ||||||
1972 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಜೆಟ್ಟೆಪ್ಪ ಕಬಾಡಿ | INC(O) | 15537 | ಬಾಬುರಾವ್ ಹುಜರೆ | INC | 11204 |
1967 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಸಿದ್ಧಾರ್ಥ ಅರಕೇರಿ | RPI | 14653 | ಜೆಟ್ಟೆಪ್ಪ ಕಬಾಡಿ | INC | 10738 |
1962 | ಬರಡೋಲ ವಿಧಾನಸಭಾ ಕ್ಷೇತ್ರ | ಜೆಟ್ಟೆಪ್ಪ ಕಬಾಡಿ | INC | 9792 | ಶಿವಪ್ಪ ಕಾಂಬ್ಳೆ | RPI | 2623 |
1957 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಜೆಟ್ಟೆಪ್ಪ ಕಬಾಡಿ | INC | 17402 | ಲಚ್ಚಪ್ಪ ಸಂಧಿಮನಿ | SWA | 16390 |
ಇಂಡಿ ವಿಧಾನಸಭಾ ಕ್ಷೇತ್ರ-೧ | ಬಾಂಬೆ ರಾಜ್ಯ | ||||||
1951 | ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ | ಜೆಟ್ಟೆಪ್ಪ ಕಬಾಡಿ | INC | 30322 | ಬಾಬುರಾವ್ ಹುಜರೆ | SFC | 5457 |