ನಿಡಗುಂದಿ
ನಿಡಗುಂದಿ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿದೆ. ನಿಡಗುಂದಿ ಪಟ್ಟಣವು ವಿಜಯಪುರ - ಸೋಲ್ಲಾಪೂರ ರಾಷ್ಟ್ರಿಯ ಹೆದ್ದಾರಿ - 13ರಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 60 ಕಿ. ಮಿ. ಇದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ನಗರವನ್ನು ಹೊಸ ತಾಲ್ಲೂಕೆಂದು ಘೋಷಿಸಲಾಗಿದೆ.
ನಿಡಗುಂದಿ | |
ರಾಜ್ಯ - ಜಿಲ್ಲೆ |
ಕರ್ನಾಟಕ - ವಿಜಯಪುರ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
೧೨೦೦ km² - 770 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೧೨) - ಸಾಂದ್ರತೆ |
15291 - ೫೦/ಚದರ ಕಿ.ಮಿ. |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೮೬೨೧೩ - + - ಕೆಎ - ೨೮ |
ಚರಿತ್ರೆಸಂಪಾದಿಸಿ
ನಿಡಗುಂದಿಯಲ್ಲಿ ಒಳ್ಳೆಯ ಶಿಕ್ಷಣ, ವ್ಯಾಪಾರ, ಹಣಕಾಸು, ಸಾರಿಗೆ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.
ಭೌಗೋಳಿಕಸಂಪಾದಿಸಿ
ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಹವಾಮಾನಸಂಪಾದಿಸಿ
- ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು
- ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
- ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
- ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
ಜನಸಂಖ್ಯೆಸಂಪಾದಿಸಿ
ಪಟ್ಟಣದಲ್ಲಿ ಜನಸಂಖ್ಯೆ(2011) ಸುಮಾರು 15,291 ಇದೆ. ಅದರಲ್ಲಿ ಸುಮಾರು 7,721 ಪುರುಷರು ಮತ್ತು 7,570 ಮಹಿಳೆಯರು ಇದ್ದಾರೆ.
ಸಾಂಸ್ಕೃತಿಕಸಂಪಾದಿಸಿ
ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ ಹಾಗೂ ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಕಲೆ ಮತ್ತು ಸಂಸ್ಕೃತಿಸಂಪಾದಿಸಿ
ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಧರ್ಮಸಂಪಾದಿಸಿ
ಭಾಷೆಸಂಪಾದಿಸಿ
ಪಟ್ಟಣದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
ದೇವಾಲಯಗಳುಸಂಪಾದಿಸಿ
- ಶ್ರೀ ಗೌರೀಶ್ವರ ದೇವಸ್ಥಾನ
- ಶ್ರೀ ವೀರಭದ್ರೇಶ್ವರ ದೇವಸ್ಥಾನ
- ಶ್ರೀ ಸಿದ್ರಾಮೇಶ್ವರ ದೇವಸ್ಥಾನ
- ಶ್ರೀ ದ್ಯಾಮವ್ವನ ದೇವಸ್ಥಾನ
- ಶ್ರೀ ಬನಶಂಕರಿ ದೇವಸ್ಥಾನ
- ಶ್ರೀ ದುಗಾ೯ದೇವಿ ದೇವಸ್ಥಾನ
- ಶ್ರೀ ಕರಭಾದೇವಿ ದೇವಸ್ಥಾನ
- ಶ್ರೀ ಮಹಾದೇವಪ್ಪನ ದೇವಸ್ಥಾನ
- ಶ್ರೀ ಪಾವಡ ಬಸವೇಶ್ವರ ದೇವಸ್ಥಾನ
- ಶ್ರೀ ರಾಮಲಿಂಗೇಶ್ವರ ದೇವಸ್ಥಾನ
- ಶ್ರೀ ಮಹಾಲಕ್ಷ್ಮಿ ದೇವಸ್ಥಾನ
- ಶ್ರೀ ಯಲ್ಲಮ್ಮನ ದೇವಸ್ಥಾನ
- ಶ್ರೀ ಮುಧ್ಘಲ ಪ್ರಭು ದೇವಸ್ಥಾನ
- ಶ್ರೀ ಗಣಪತಿ ದೇವಸ್ಥಾನ
- ಶ್ರೀ ಭೀಮಾಶಂಕರ ದೇವಸ್ಥಾನ
- ಶ್ರೀ ಪಾಂಡುರಂಗ - ವಿಠ್ಠಲ ದೇವಸ್ಥಾನ
- ಶ್ರೀ ಹಣಮಂತ ದೇವಸ್ಥಾನ
ಮಸೀದಿಸಂಪಾದಿಸಿ
ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿಸಂಪಾದಿಸಿ
ಪಟ್ಟಣದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕಾಲುವೆಸಂಪಾದಿಸಿ
ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
ಕೃಷಿ ಮತ್ತು ತೋಟಗಾರಿಕೆಸಂಪಾದಿಸಿ
ಪಟ್ಟಣದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.
ಆರ್ಥಿಕತೆಸಂಪಾದಿಸಿ
ಪಟ್ಟಣದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.
ಉದ್ಯೋಗಸಂಪಾದಿಸಿ
ಪಟ್ಟಣದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬೆಳೆಸಂಪಾದಿಸಿ
ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಸ್ಯಸಂಪಾದಿಸಿ
ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿಸಂಪಾದಿಸಿ
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ನಿಡಗುಂದಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳುಸಂಪಾದಿಸಿ
ಹಬ್ಬಸಂಪಾದಿಸಿ
ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಪಶು ಆಸ್ಪತ್ರೆಸಂಪಾದಿಸಿ
ಪಟ್ಟಣದಲ್ಲಿ ಸರಕಾರಿ ಪಶು ಆಸ್ಪತ್ರೆ ಇದೆ.
ಆರೋಗ್ಯಸಂಪಾದಿಸಿ
ಪಟ್ಟಣದಲ್ಲಿ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.
ಆರಕ್ಷಕ (ಪೋಲಿಸ್) ಠಾಣೆಸಂಪಾದಿಸಿ
ಪಟ್ಟಣದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.
ಪಟ್ಟಣ ಪಂಚಾಯತಿ ಕಾರ್ಯಾಲಯಸಂಪಾದಿಸಿ
ಪಟ್ಟಣ ಪಂಚಾಯತಿ ಕಾರ್ಯಾಲಯ, ನಿಡಗುಂದಿ.
ನಿಡಗುಂದಿ ಪಟ್ಟಣ ಪಂಚಾಯತಿ ಕಾರ್ಯಾಲಯದ ಅಂತರ್ಜಾಲ ತಾಣ Archived 2019-11-13 at the Wayback Machine.
ವಿದ್ಯುತ್ ಪರಿವರ್ತನಾ ಕೇಂದ್ರಸಂಪಾದಿಸಿ
೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಪೂರೈಸುತ್ತದೆ.
ಕೃಷಿ ಮಾರುಕಟ್ಟೆಸಂಪಾದಿಸಿ
- ಕೃಷಿ ಮಾರುಕಟ್ಟೆ , ನಿಡಗುಂದಿ
ನೆಮ್ಮದಿ ಕೇಂದ್ರ (ಹೋಬಳಿ)ಸಂಪಾದಿಸಿ
- ನೆಮ್ಮದಿ ಕೇಂದ್ರ, ನಿಡಗುಂದಿ
ಕಂದಾಯ ಕಚೇರಿಸಂಪಾದಿಸಿ
- ಕಂದಾಯ ಕಚೇರಿ, ನಿಡಗುಂದಿ
ಹೆದ್ದಾರಿಗಳುಸಂಪಾದಿಸಿ
ರಾಷ್ಟ್ರಿಯ ಹೆದ್ದಾರಿ - 13 => ಬಿಜಾಪುರ - ನಿಡಗುಂದಿ - ಇಳಕಲ್ಲ - ಹೊಸಪೇಟ್
ರಾಜ್ಯ ಹೆದ್ದಾರಿ - 135 => ಬಾಗಲಕೋಟ - ಆಲಮಟ್ಟಿ - ನಿಡಗುಂದಿ - ಮುದ್ದೇಬಿಹಾಳ
ಅಂಚೆ ಕಚೇರಿ ಮತ್ತು ಪಿನಕೋಡ್ ಸಂಕೇತಗಳುಸಂಪಾದಿಸಿ
- ನಿಡಗುಂದಿ - 586213 (ಅಬ್ಬಿಹಾಳ, ಬಳಬಟ್ಟಿ, ಬೂದಿಹಾಳ ಪಿ.ಎನ್., ಹೆಬ್ಬಾಳ, ಹುಲ್ಲೂರ, ಹುಲ್ಲೂರ ಎಲ್.ಟಿ., ಇಟಗಿ, ಕಾಳಗಿ, ಯಲಗೂರ).
ಬಿ.ಎಸ್.ಎನ್.ಎಲ್ ಸಂಕೇತಗಳುಸಂಪಾದಿಸಿ
- ನಿಡಗುಂದಿ - 08358
ಗ್ರಂಥಾಲಯಗಳು / ವಾಚನಾಲಯಗಳುಸಂಪಾದಿಸಿ
- ಗ್ರಾ.ಪಂ. ಗ್ರಂಥಾಲಯ, ನಿಡಗುಂದಿ.
ಉಚಿತ ಪ್ರಸಾದನಿಲಯಸಂಪಾದಿಸಿ
- ಮೆಟ್ರಿಕ್ ಪೂರ್ವ ಉಚಿತ ಪ್ರಸಾದನಿಲಯ, ನಿಡಗುಂದಿ
- ಮೆಟ್ರಿಕ್ ನಂತರ ಉಚಿತ ಪ್ರಸಾದನಿಲಯ, ನಿಡಗುಂದಿ
ಶಿಕ್ಷಣಸಂಪಾದಿಸಿ
- ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ನಿಡಗುಂದಿ
- ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ನಿಡಗುಂದಿ
- ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ನಿಡಗುಂದಿ
- ಬಸವ ಜ್ಯೋತಿ ಕಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
- ಜ್ಯೋತಿ ಕಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
- ಬಿ.ಎಮ್.ಎಸ್. ಕಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
- ಜಿ.ವಿ.ವಿ.ಎಸ್. ಕಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
- ಶ್ರೀ ರುದ್ರೇಶ್ವರ ಕಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
- ಬಿ.ಎಮ್.ಎಸ್. ಕಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
- ಜಿ.ವಿ.ವಿ.ಎಸ್. ಹಿರಿಯ ಪ್ರಾಥಮಿಕ ಶಾಲೆ, ನಿಡಗುಂದಿ
- ಜಿ.ವಿ.ವಿ.ಎಸ್. ಪ್ರೌಡ ಶಾಲೆ, ನಿಡಗುಂದಿ
- ನ್ಯೂ ಇಂಗ್ಲೀಷ ಪ್ರೌಡ ಶಾಲೆ, ನಿಡಗುಂದಿ
- ಜಿ.ವಿ.ವಿ.ಎಸ್ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನಿಡಗುಂದಿ
- ನ್ಯೂ ಇಂಗ್ಲೀಷ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನಿಡಗುಂದಿ
- ಜಿ.ವಿ.ವಿ.ಎಸ್. ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ನಿಡಗುಂದಿ
- ಜಿ.ವಿ.ವಿ.ಎಸ್. ಪ್ರೌಡ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ನಿಡಗುಂದಿ
- ಜಿ.ವಿ.ವಿ.ಎಸ್. ಮಹಿಳಾ ಪ್ರೌಡ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ನಿಡಗುಂದಿ
- ಶ್ರೀ ಎಮ್.ವಿ.ನಾಗಠಾಣ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನಿಡಗುಂದಿ
- ಎಸ್.ವಿ.ಪಾಟೀಲ ಸ್ಮಾರಕ ಕೈಗಾರಿಕಾ ತರಬೇತಿ ಕೇಂದ್ರ, ನಿಡಗುಂದಿ
- ಗ್ರಾಮೀಣ ಕೈಗಾರಿಕಾ ತರಬೇತಿ ಕೇಂದ್ರ, ನಿಡಗುಂದಿ
- ಸಂಗಪ್ಪ ಗೋನಾಳ ಸ್ಮಾರಕ ಕೈಗಾರಿಕಾ ತರಬೇತಿ ಕೇಂದ್ರ, ನಿಡಗುಂದಿ
- ಅಮರ ಶಿಲ್ಪಿ ಜಕಣಾಚಾರಿ ಚಿತ್ರಕಲಾ ಶಾಲೆ, ನಿಡಗುಂದಿ, ಬಸವನ ಬಾಗೇವಾಡಿ
ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳುಸಂಪಾದಿಸಿ
- ನ್ಯೂ ಸೂರ್ಯ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ನಿಡಗುಂದಿ, ಬಸವನಬಾಗೇವಾಡಿ, ಬಿಜಾಪುರ
- ಎಸ್.ವಾಯ್. ಇನ್ಪೋಟೇಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ನಿಡಗುಂದಿ, ಬಸವನಬಾಗೇವಾಡಿ, ಬಿಜಾಪುರ
ಬ್ಯಾಂಕಗಳುಸಂಪಾದಿಸಿ
- ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ನಿಡಗುಂದಿ.
- ಎಸ್.ಬಿ.ಐ.ಬ್ಯಾಂಕ್, ನಿಡಗುಂದಿ.
- ಕಾರ್ಪೊರೇಶನ್ ಬ್ಯಾಂಕ್, ನಿಡಗುಂದಿ.
- ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್, ನಿಡಗುಂದಿ.
- ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್, ನಿಡಗುಂದಿ
- ಸಿದ್ದಸಿರಿ ಸೌಹಾಧ೯ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
- ಬಸವೇಶ್ವರ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
- ರುದ್ರೇಶ್ವರ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
- ವೀರಮಹೇಶ್ವರ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
- ಕನಾ೯ಟಕ ಕೋ ಆಪರೇಟಿವ್ ಬ್ಯಾಂಕ್, ನಿಡಗುಂದಿ.
- ದಿ ನಿಡಗುಂದಿ ಕೋ ಆಪರೇಟಿವ್ ಸೊಸಯಟಿ ನಿಡಗುಂದಿ.
- ಮೀನುಗಾರರ ಪತ್ತಿನ ಸಹಕಾರಿ ಸಂಘ, ನಿಡಗುಂದಿ.
- ಲಕ್ಮೀ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
- ಬಾಪೂಜಿ ಪತ್ತಿನ ಸಹಕಾರಿ ಬ್ಯಾಂಕ್, ನಿಡಗುಂದಿ.
- ಕೃಷ್ಣಾ ಕಬ್ಬು ಬೆಳೆಗಾರರ ವಿವಿದ್ದೋದ್ದೇಶಗಳ ಸಹಕಾರಿ ಸಂಘ, ನಿಡಗುಂದಿ.
- ಶಾಕಾಂಬರಿ ಮಹಿಳಾ ಪತ್ತನ ಸಹಕಾರಿ ಬ್ಯಾಂಕ್, ನಿಡಗುಂದಿ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಸಂಪಾದಿಸಿ
- ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ, ನಿಡಗುಂದಿ.
ಖಜಾನೆ ಕಚೇರಿಸಂಪಾದಿಸಿ
ಗ್ರಾಮದಲ್ಲಿ ಖಜಾನೆ ಕಚೇರಿಯಿದೆ.
ಕೃಷಿ ಮಾರುಕಟ್ಟೆಸಂಪಾದಿಸಿ
- ಕೃಷಿ ಮಾರುಕಟ್ಟೆ, ನಿಡಗುಂದಿ
ಹಾಲು ಉತ್ಪಾದಕ ಸಹಕಾರಿ ಸಂಘಸಂಪಾದಿಸಿ
- ಹಾಲು ಉತ್ಪಾದಕ ಸಹಕಾರಿ ಸಂಘ, ನಿಡಗುಂದಿ
ಸರಕಾರಿ ವಾಹನ ನಿಲ್ದಾಣಸಂಪಾದಿಸಿ
- ಸರಕಾರಿ ವಾಹನ ನಿಲ್ದಾಣ, ನಿಡಗುಂದಿ