ಸೌತೆಕಾಯಿ
The lead section of this article may need to be rewritten. (December 2010) |
Cucumber | |
---|---|
Cucumbers grow on vines | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. sativus
|
Binomial name | |
Cucumis sativus |
ಸೌತೆಕಾಯಿ ಬಳ್ಳಿಯು (ಕ್ಯುಕಮಿಸ್ ಸಟೈವಸ್ ) ಗಡುಸಾದ ಸಿಪ್ಪೆ ಮತ್ತು ಹೇರಳ ತಿರುಳಿರುವ ದೊಡ್ಡಕಾಯಿಯ ವಂಶವಾದ ಕ್ಯುಕರ್ಬಿಟೇಸಿಗೆ ಸೇರಿರುವ ಒಂದು ವ್ಯಾಪಕವಾಗಿ ಬೆಳೆಯಲಾಗುವ ಸಸ್ಯವಾಗಿದೆ, ಮತ್ತು ಕರ್ಬೂಜದ ರೀತಿಯಲ್ಲಿಯೇ ಅದೇ ಕುಲದಲ್ಲಿರುವ ಸಸ್ಯವಾಗಿದೆ; ಕ್ಯುಕರ್ಬಿಟೇಸಿ ವಂಶವು ಕುಂಬಳದ ಗಿಡವನ್ನೂ ಒಳಗೊಂಡಿದೆ.
ಸಸ್ಯಶಾಸ್ತ್ರ
ಬದಲಾಯಿಸಿ(ಸೌತೆಕಾಯಿ ಬಳ್ಳಿಯು ಒಂದು ಹಬ್ಬುವ ಬಳ್ಳಿಯಾಗಿದ್ದು, ಅದು ನೆಲದಲ್ಲಿ ಬೇರುಬಿಡುತ್ತದೆ. ತೆಳುವಾದ, ಸುರುಳಿ ಸುತ್ತಿಕೊಳ್ಳುವ ಲತಾತಂತುಗಳ ನೆರವಿನೊಂದಿಗೆ ಬೆನ್ನುಪಟ್ಟಿಯಂಥ ರಚನೆಯ ಸುತ್ತಲೂ ಸುತ್ತಿಕೊಳ್ಳುವ ಮೂಲಕ ಈ ಬಳ್ಳಿಯು ಜಾಲಂಧ್ರದ ಮೇಲೆ ಅಥವಾ ಆಧಾರವಾಗಿರುವ ಇತರ ಚೌಕಟ್ಟುಗಳ ಮೇಲೆ ಬೆಳೆಯುತ್ತದೆ. ಈ ಸಸ್ಯವು ದೊಡ್ಡ ಎಲೆಗಳನ್ನು ಹೊಂದಿದ್ದು, ಅವು ಹಣ್ಣಿನ ಮೇಲೆ ಒಂದು ಮೇಲಾವರಣವನ್ನು ರೂಪಿಸುತ್ತವೆ.)
(ಸೌತೆಕಾಯಿಯು ಸ್ಥೂಲವಾಗಿ ಉರುಳೆಯಂಥ ಆಕಾರವನ್ನು ಹೊಂದಿದ್ದು, ಕ್ರಮೇಣ ಚೂಪಾಗುತ್ತಾ ಹೋಗುವ ತುದಿಗಳೊಂದಿಗೆ ನೀಳವಾಗಿರುತ್ತದೆ ಮತ್ತು ಇದು 60 ಸೆಂ.ಮೀ.ನಷ್ಟು ಉದ್ದ ಮತ್ತು 10 ಸೆಂ.ಮೀ.ನಷ್ಟು ವ್ಯಾಸವನ್ನು ಒಳಗೊಂಡ ಗಾತ್ರದಲ್ಲಿ ಇರಬಹುದಾಗಿದೆ. ತಾಜಾ ಆಗಿ ತಿನ್ನಲೆಂದು ಸೌತೆಕಾಯಿಗಳನ್ನು ಬೆಳೆಯಲಾಗುತ್ತದೆ)(ಇಂಥವನ್ನು ಬಿಲ್ಲೆಗಾರ ಸೌತೆಕಾಯಿಗಳು (ಸ್ಲೈಸರ್ಸ್) ಎಂದು ಕರೆಯಲಾಗುತ್ತದೆ). ಉಪ್ಪಿನಕಾಯಿ ಹಾಕುವಿಕೆಗಾಗಿ ಉದ್ದೇಶಿಸಲಾದ (ಉಪ್ಪಿನಕಾಯಿಯ ಸೌತೆಕಾಯಿಗಳು (ಪಿಕ್ಲರ್ಸ್) ಎಂದು ಇವನ್ನು ಕರೆಯಲಾಗುತ್ತದೆ) (ಸೌತೆಕಾಯಿಗಳು ಇದೇ ರೀತಿಯ ಚರ್ಯೆಯನ್ನು ಹೊಂದಿರುತ್ತವೆ. ಹಣ್ಣಾಗಿಲ್ಲದ ಹಸಿರು ಸ್ವರೂಪದಲ್ಲಿರುವಾಗ ಸೌತೆಕಾಯಿಗಳನ್ನು ಮುಖ್ಯವಾಗಿ ತಿನ್ನಲಾಗುತ್ತದೆ.) ಮಾಗಿದ ಹಳದಿ ಸ್ವರೂಪದ ಸೌತೆಕಾಯಿ ಸಾಮಾನ್ಯವಾಗಿ ತೀರಾ ಕಹಿಯಾಗುತ್ತದೆ ಮತ್ತು ಹುಳಿಯಾಗುತ್ತದೆ.( ಸೌತೆಕಾಯಿಗಳು ಸಾಮಾನ್ಯವಾಗಿ 90%ಗಿಂತಲೂ ಹೆಚ್ಚಿನ ಭಾಗದಷ್ಟು ನೀರನ್ನು ಹೊಂದಿರುತ್ತವೆ.)
ಸಸ್ಯಶಾಸ್ತ್ರೀಯವಾಗಿ ಮಾತನಾಡುವುದಾದರೆ, ಒಂದು ಆವರಿಸಲ್ಪಟ್ಟ ಬೀಜವನ್ನು ಹೊಂದಿರುವ ಮತ್ತು ಒಂದು ಹೂವಿನಿಂದ ಬೆಳವಣಿಗೆಯನ್ನು ಹೊಂದುವ ಸೌತೆಕಾಯಿಗಳು ಹಣ್ಣುಗಳಾಗಿ ವರ್ಗೀಕರಿಸಲ್ಪಟ್ಟಿವೆ. ಆದಾಗ್ಯೂ, ಟೊಮೆಟೋಗಳು ಮತ್ತು ಕುಂಬಳದ ಗಿಡವನ್ನು ಬಹುಪಾಲು ಹೋಲುವ ರೀತಿಯಲ್ಲಿ ಅವನ್ನು ತರಕಾರಿಗಳಾಗಿ ಸಾಮಾನ್ಯವಾಗಿ ಗ್ರಹಿಸಲಾಗುತ್ತದೆ, ಆಹಾರ ಪದಾರ್ಥವನ್ನು ಅವುಗಳಿಂದ ತಯಾರಿಸಲಾಗುತ್ತದೆ ಮತ್ತು ತಿನ್ನಲಾಗುತ್ತದೆ.[೧]
ಹೂ ಬಿಡುವಿಕೆ ಮತ್ತು ಪರಾಗಸ್ಪರ್ಶ
ಬದಲಾಯಿಸಿಸೌತೆಕಾಯಿಯ ಕೆಲವೊಂದು ಪ್ರಭೇದಗಳು ಪಾರ್ಥೆನೋಕಾರ್ಪಿಕ್ ಎನಿಸಿಕೊಂಡಿದ್ದು, ಕಾಯಾಗುವ ಹೂವುಗಳು ಪರಾಗಸ್ಪರ್ಶವಿಲ್ಲದೆಯೇ ಬೀಜರಹಿತ ಹಣ್ಣನ್ನು ಸೃಷ್ಟಿಸುತ್ತವೆ. ಈ ಪ್ರಭೇದಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಪರಾಗಸ್ಪರ್ಶವು ಗುಣಮಟ್ಟವನ್ನು ಕೆಳಮಟ್ಟಕ್ಕಿಳಿಸುತ್ತದೆ. USನಲ್ಲಿ, ಜೇನ್ನೊಣಗಳು ಹೊರಗಿಡಲ್ಪಟ್ಟಿರುವ ಹಸಿರುಮನೆಗಳಲ್ಲಿ ಇವನ್ನು ಸಾಮಾನ್ಯವಾಗಿ ಬೆಳೆಯಲಾಗುತ್ತದೆ. ಯುರೋಪ್‌ನಲ್ಲಿ, ಕೆಲವೊಂದು ವಲಯಗಳಲ್ಲಿ ಅವನ್ನು ಹೊರಾಂಗಣಗಳಲ್ಲಿ ಬೆಳೆಯಲಾಗುತ್ತದೆ, ಮತ್ತು ಈ ಪ್ರದೇಶಗಳಿಂದ ಜೇನ್ನೊಣಗಳು ಹೊರಗಿಡಲ್ಪಟ್ಟಿರುತ್ತವೆ. ಆದಾಗ್ಯೂ, ಬಹುಪಾಲು ಸೌತೆಕಾಯಿ ಪ್ರಭೇದಗಳು ಬೀಜವನ್ನು ಹೊಂದಿರುತ್ತವೆ ಮತ್ತು ಇವಕ್ಕೆ ಪರಾಗಸ್ಪರ್ಶವು ಅಗತ್ಯವಾಗಿರುತ್ತದೆ. ಇದೇ ಉದ್ದೇಶಕ್ಕಾಗಿಯೇ, ಮೊಗ್ಗು ಅರಳುವುದಕ್ಕೆ ಸ್ವಲ್ಪವೇ ಮುಂಚಿತವಾಗಿ ಜೇನುನೊಣಗಳ ಸಾವಿರಾರು ಜೇನುಗೂಡುಗಳನ್ನು ಪ್ರತಿವರ್ಷವೂ ಸೌತೆಕಾಯಿ ಹೊಲಗಳಿಗೆ ಒಯ್ಯಲಾಗುತ್ತದೆ. ಹೆಜ್ಜೇನುಗಳು ಮತ್ತು ಜೇನುನೊಣದ ಇತರ ಹಲವಾರು ಜಾತಿಗಳಿಂದಲೂ ಸೌತೆಕಾಯಿಗಳು ಪರಾಗಸ್ಪರ್ಶಕ್ಕೊಳಗಾಗಬಹುದು.
ಹಣ್ಣಿನ ಕುಂಠಿತ ಬೆಳವಣಿಗೆ ಮತ್ತು ಆಕಾರಗೆಟ್ಟ ಹಣ್ಣು ಇವು ಸಾಕಷ್ಟಿಲ್ಲದ ಪರಾಗಸ್ಪರ್ಶದ ಕುರುಹುಗಳಲ್ಲಿ ಸೇರಿವೆ. ಆಂಶಿಕವಾಗಿ ಪರಾಗಸ್ಪರ್ಶಕ್ಕೊಳಗಾದ ಹೂವುಗಳು ಹಸಿರು ಬಣ್ಣದಲ್ಲಿರುವ ಹಣ್ಣುಗಳನ್ನು ಬೆಳೆಸಿಕೊಳ್ಳಬಹುದು ಮತ್ತು ಸಾಮಾನ್ಯವಾಗಿ ಕಾಂಡದ ತುದಿಯ ಸಮೀಪ ಬೆಳೆಸಬಹುದು, ಆದರೆ ಮಸುಕಾದ ಹಳದಿ ಮತ್ತು ಸುರುಟಿಕೊಂಡಿರುವ ಹಣ್ಣುಗಳನ್ನು ಕಾಯಾಗುವ ಹೂವು ತುದಿಯಲ್ಲಿ ಬೆಳೆಸಬಹುದು.
ಸಾಂಪ್ರದಾಯಿಕ ಪ್ರಭೇದಗಳು ಗಂಡು ಹೂವುಗಳನ್ನು ಮೊದಲು ಉತ್ಪತ್ತಿಮಾಡುತ್ತವೆ, ಆಮೇಲೆ ಹೆಣ್ಣು ಹೂವುಗಳನ್ನು ಸುಮಾರು ಸಮನಾದ ಸಂಖ್ಯೆಗಳಲ್ಲಿ ಉತ್ಪತ್ತಿಮಾಡುತ್ತವೆ. ಸ್ತ್ರೀಕೇಸರಗಳ ಸಮೂಹದ ಹೊಸ ಸಂಕರ ತಳಿಗಳು ಬಹುಮಟ್ಟಿಗೆ ಹೆಣ್ಣು ಹೂವುಗಳನ್ನು ಉತ್ಪತ್ತಿಮಾಡುತ್ತವೆ. ಆದಾಗ್ಯೂ, ಈ ಪ್ರಭೇದಗಳು ಪರಾಗರೇಣುವನ್ನು ಒದಗಿಸುವುದಿಲ್ಲವಾದ್ದರಿಂದ, ಅವುಗಳ ಮಧ್ಯದಲ್ಲಿ ಒಂದು ಪರಾಗರೇಣುಕಾರಕ ಪ್ರಭೇದವನ್ನು ನೆಡುವುದು ಅಗತ್ಯವಾಗಿರುತ್ತದೆ ಮತ್ತು ತಲಾ ಏಕಮಾನ ವಿಸ್ತೀರ್ಣದಲ್ಲಿರುವ ಜೇನುಗೂಡುಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಕೀಟ ಪರಾಗಸ್ಪರ್ಶಕಗಳ ಸಾಯಿಸುವಿಕೆಯನ್ನು ತಪ್ಪಿಸಲು, ಕೀಟದ ಪಿಡುಗುಗಳಿಗೆ ಸಂಬಂಧಿಸಿದಂತೆ ಮಾಡಲಾಗುವ ಕೀಟನಾಶಕ ಪ್ರಯೋಗಗಳನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.
ಸೌತೆಕಾಯಿಯ ಜೀನೋಮ್
ಬದಲಾಯಿಸಿ2009ರಲ್ಲಿ, ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು ತಾನು ಸೌತೆಕಾಯಿ ಜೀನೋಮ್‌ನ್ನು (ಚೈನೀಸ್ ಲಾಂಗ್' 9930) ಅನುಕ್ರಮಕ್ಕೊಳಪಡಿಸಿದ್ದಾಗಿ ಪ್ರಕಟಿಸಿತು.[೨]
ರುಚಿ
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(April 2008) |
ಮಾನವರು ಸೌತೆಕಾಯಿಗಳೆಡೆಗೆ ಹೊಂದಿರುವ ಘ್ರಾಣಸಂಬಂಧಿ ಪ್ರತಿಸ್ಪಂದನದಲ್ಲಿ ವ್ಯತ್ಯಯನೀಯತೆಯಿರುವುದು ಕಂಡುಬರುತ್ತದೆ. ಸೌತೆಕಾಯಿಯು ಒಂದು ಲಘುವಾದ, ಹೆಚ್ಚೂಕಮ್ಮಿ ನೀರಸವಾದ ಪರಿಮಳವನ್ನು ಅಥವಾ ಒಂದು ನವಿರಾದ ಕಲ್ಲಂಗಡಿಯ ರುಚಿಯನ್ನು ಹೊಂದಿದೆ ಎಂದು ಬಹುಪಾಲು ಜನರು ತಿಳಿಸಿದರೆ, ಇನ್ನು ಕೆಲವರು ಹೇಳುವ ಪ್ರಕಾರ ಇದು ಅತೀವವಾಗಿ ಅಸಮಂಜಸವಾದ ರುಚಿಯನ್ನು ಹೊಂದಿದೆ, ಇನ್ನು ಕೆಲವರು ಹೇಳುವ ಪ್ರಕಾರ ಇದರ ರುಚಿ ಹೆಚ್ಚೂಕಮ್ಮಿ ಸುಗಂಧ ದ್ರವ್ಯದಂತಿದೆ.
ಸೌತೆಕಾಯಿಗಳಿಂದ ಕಹಿಯನ್ನು ಹೇಗೆ ತೆಗೆದುಹಾಕಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಹಲವಾರು ಪರಿಪಾಠಗಳು ಹುಟ್ಟಿಕೊಂಡಿವೆ. ಇವುಗಳ ಪೈಕಿ ಭಾರತದಲ್ಲಿ ಜನಪ್ರಿಯವಾಗಿರುವ ಒಂದು ಅತ್ಯಂತ ಸಾಮಾನ್ಯ ಪರಿಪಾಠವು ಹೀಗಿದೆ: ಸೌತೆಕಾಯಿಯೊಂದರ ತುದಿಗಳನ್ನು ಕತ್ತರಿಸಿ ತೆಗೆಯುವುದು, ಒಂದಷ್ಟು ಉಪ್ಪನ್ನು ಚಿಮುಕಿಸುವುದು, ಮತ್ತು ಸದರಿ ಸೌತೆಕಾಯಿಯ ಈಗ-ತೆರೆದುಕೊಂಡಿರುವ ತುದಿಗಳನ್ನು ಕತ್ತರಿಸಿ-ತೆಗೆದ ತುದಿಗಳಿಂದ ಉಜ್ಜುವುದು ಹಾಗೂ ತುದಿಗಳ ಭಾಗದಿಂದ ನೊರೆಯು ಕಾಣಿಸುವರೆಗೂ ಉಜ್ಜುತ್ತಾ ಹೋಗುವುದು. ಮತ್ತೊಂದು ಇಂಥ ನಗರ ಪ್ರದೇಶದ ನಂಬಿಕೆಯು ತಿಳಿಸುವ ಪ್ರಕಾರ, ಬಳ್ಳಿಯೊಂದಕ್ಕೆ ಒಂದೊಮ್ಮೆ ಅಂಟಿಕೊಂಡಿದ್ದ ತುದಿಯಿಂದ ಓರ್ವರು ಸೌತೆಕಾಯಿಯೊಂದರ ಸಿಪ್ಪೆಯನ್ನು ತೆಗೆಯಬೇಕು; ಇಲ್ಲದೇ ಹೋದರೆ ಸೌತೆಕಾಯಿಯ ಉದ್ದಕ್ಕೂ ಕಹಿಯು ಹರಡುವಂತಾಗುವ ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ.[೩]
ಉಪ್ಪಿನಕಾಯಿ ಹಾಕುವಿಕೆ
ಬದಲಾಯಿಸಿಪರಿಮಳ ಮತ್ತು ಸುದೀರ್ಘ ಬಡು-ಅವಧಿಗಾಗಿ ಸೌತೆಕಾಯಿಗಳನ್ನು ಬಳಸಿ ಉಪ್ಪಿನಕಾಯಿ ಹಾಕಬಹುದು. ತಿನ್ನುವ ಸೌತೆಕಾಯಿಗಳಿಗೆ ಹೋಲಿಸಿದಾಗ, ಉಪ್ಪಿನಕಾಯಿ ಹಾಕುವ ಸೌತೆಕಾಯಿಗಳು ಮೊಟಕಾಗಿರುತ್ತವೆ, ದಪ್ಪನಾಗಿರುತ್ತವೆ, ಕಡಿಮೆ ಕ್ರಮಬದ್ಧವಾದ-ಆಕಾರವನ್ನು ಹೊಂದಿರುತ್ತವೆ. ಅಷ್ಟೇ ಅಲ್ಲ, ಪುಟ್ಟದಾಗಿರುವ ಬಿಳಿಯ ಅಥವಾ ಕಪ್ಪು ಚುಕ್ಕೆಯ ಚೂಪಾದ ಏಣುಗಳೊಂದಿಗಿನ ಉಬ್ಬುತಗ್ಗಾಗಿರುವ ಸಿಪ್ಪೆಯನ್ನು ಅವು ಹೊಂದಿರುತ್ತವೆ. ಅವು ಎಂದಿಗೂ ಮೇಣ ಲೇಪಿತವಾಗಿರುವುದಿಲ್ಲ. ಬಣ್ಣವು ಕೆನೆಯಂಥ ಹಳದಿಯಿಂದ ಮಸುಕಾದ ಅಥವಾ ಗಾಢ ಹಸಿರಿನವರೆಗೆ ವೈವಿಧ್ಯಮಯವಾಗಿರಬಹುದು. ಉಪ್ಪಿನಕಾಯಿ ಹಾಕುವ ಸೌತೆಕಾಯಿಗಳು “ಕಿರ್ಬಿ” ಅಥವಾ “ಸ್ವಚ್ಛಂದ” ಸೌತೆಕಾಯಿಗಳಾಗಿ ತಾಜಾ ಸ್ವರೂಪದಲ್ಲಿ ಕೆಲವೊಮ್ಮೆ ಮಾರಲ್ಪಡುತ್ತವೆ. ಉಪ್ಪಿನಕಾಯಿ ಹಾಕುವ ಪ್ರಕ್ರಿಯೆಯು ಪೌಷ್ಟಿಕ ದ್ರವ್ಯವನ್ನು ತೆಗೆದುಹಾಕುತ್ತದೆ ಅಥವಾ ಅದರ ಬಹುಭಾಗವನ್ನು, ಅದರಲ್ಲೂ ವಿಶೇಷವಾಗಿ C ಜೀವಸತ್ವದ ಬಹುಭಾಗವನ್ನು ಕೆಳಮಟ್ಟಕ್ಕಿಳಿಸುತ್ತದೆ. ಉಪ್ಪಿನಕಾಯಿ ಹಾಕಿದ ಸೌತೆಕಾಯಿಗಳನ್ನು ಕಡು ಉಪ್ಪಿನ ನೀರಿನಲ್ಲಿ ಅಥವಾ ವಿನೆಗಾರ್ ಮತ್ತು ಕಡು ಉಪ್ಪಿನ ನೀರಿನ ಒಂದು ಮಿಶ್ರಣದಲ್ಲಿ ನೆನೆಸಿಡಲಾಗುತ್ತದೆ. ವಿನೆಗಾರ್ ಮಾತ್ರವೇ ಅಲ್ಲದೇ, ಅನೇಕವೇಳೆ ಹಲವಾರು ಮಸಾಲೆಗಳ ಜೊತೆಯಲ್ಲೂ ಅವನ್ನು ನೆನೆಸಿಡಲಾಗುತ್ತದೆ. ಉಪ್ಪಿನಕಾಯಿ ಹಾಕಿದ ಸೌತೆಕಾಯಿಗಳನ್ನು U.S.ನಲ್ಲಿ ಅನೇಕವೇಳೆ "ಉಪ್ಪಿನಕಾಯಿಗಳು" ಎಂಬುದಾಗಿ ಸರಳವಾಗಿ ಉಲ್ಲೇಖಿಸಿದರೆ, U.K.ಯಲ್ಲಿ "ಗರ್ಕಿನ್‌ಗಳು" ಅಥವಾ "ವ್ಯಾಲೀಸ್" ಎಂದು ಕರೆಯಲಾಗುತ್ತದೆ. "ವ್ಯಾಲೀಸ್" ಎಂಬ ಹೆಸರು ಇಂಗ್ಲೆಂಡ್‌ನ ಉತ್ತರ ಭಾಗದಲ್ಲಿ ಹೆಚ್ಚು ಸಾಮಾನ್ಯವಾಗಿದ್ದು, ಅಲ್ಲಿ ಇದು ಮೀನು & ಉಪ್ಪೇರಿ ಮಳಿಗೆಗಳಲ್ಲಿ ಸಾಮಾನ್ಯವಾಗಿ ಮಾರಲ್ಪಡುವ, ವಿನೆಗಾರ್ ಜೊತೆಯಲ್ಲಿ ಉಪ್ಪಿನಕಾಯಿ ಹಾಕಿದ ದೊಡ್ಡ ಸೌತೆಕಾಯಿಗಳಿಗೆ ಉಲ್ಲೇಖಿಸಲ್ಪಡುತ್ತದೆ. (ಗರ್ಕಿನ್ ಎಂಬುದು ಸೌತೆಕಾಯಿಯಂತೆಯೇ ಅದೇ ಜಾತಿಗೆ ಸೇರಿದೆಯಾದರೂ, ಇದು ಸಂಪೂರ್ಣವಾಗಿ ವಿಭಿನ್ನವಾಗಿರುವ ಒಂದು ತಳಿಗೆ ಸೇರಿದೆ.)
ಪ್ರಭೇದಗಳು
ಬದಲಾಯಿಸಿ- ಇಂಗ್ಲಿಷ್ ಸೌತೆಕಾಯಿಗಳು 2 feet (0.61 m)ನಷ್ಟು ಉದ್ದವಾಗಿ ಬೆಳೆಯಬಲ್ಲವು. ಅವು ಹೆಚ್ಚೂಕಮ್ಮಿ ಬೀಜರಹಿತವಾಗಿದ್ದು ಒಂದು ನವಿರಾದ ಸಿಪ್ಪೆಯನ್ನು ಹೊಂದಿರುತ್ತವೆ. ಈ ಸಿಪ್ಪೆಯನ್ನು ತಿನ್ನುವುದು ಆಹ್ಲಾದಕರವಾಗಿರುತ್ತದೆ. ಈ ಬಗೆಯ ಸೌತೆಕಾಯಿಗಳನ್ನು ಕೆಲವೊಮ್ಮೆ “ತೇಗುರಹಿತ” ಪ್ರಭೇದಗಳ ಹಣೆಪಟ್ಟಿಯಲ್ಲಿ ಮಾರುಕಟ್ಟೆ ಮಾಡಲಾಗುತ್ತದೆ; ಏಕೆಂದರೆ ಸೌತೆಕಾಯಿಗಳ ಇತರ ಪ್ರಭೇದಗಳ ಬೀಜಗಳು ಮತ್ತು ಸಿಪ್ಪೆಯು ಕೆಲವೊಂದು ಜನರಿಗೆ ಜಠರದುರಿತದ[ಸೂಕ್ತ ಉಲ್ಲೇಖನ ಬೇಕು] ಸಮಸ್ಯೆಯನ್ನು ಉಂಟುಮಾಡುತ್ತವೆ ಎಂದು ಹೇಳಲಾಗುತ್ತದೆ. ಹಸಿರುಮನೆಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಬೆಳೆಯಲಾಗುವ ಈ ಪಾರ್ಥೆನೋಕಾರ್ಪಿಕ್ ಸೌತೆಕಾಯಿಗಳು ಪ್ಲಾಸ್ಟಿಕ್‌ನಲ್ಲಿ ಕುಗ್ಗಿಸಿ-ಪಟ್ಟಿಯಿಂದ ಸುತ್ತಿದ ಸ್ವರೂಪದಲ್ಲಿ ಕಿರಾಣಿ ಮಾರುಕಟ್ಟೆಗಳಲ್ಲಿ ಅನೇಕವೇಳೆ ಕಂಡುಬರುತ್ತವೆ.
- ಪೂರ್ವ ಏಷ್ಯಾದ ಸೌತೆಕಾಯಿಗಳು ಲಘುವಾಗಿ, ಸಣಕಲಾಗಿದ್ದು, ಗಾಢ ಹಸಿರು ಬಣ್ಣದಿಂದ ಕೂಡಿರುತ್ತವೆ, ಮತ್ತು ಉಬ್ಬುತಗ್ಗಾಗಿರುವ, ಏಣುಗಳಿರುವ ಒಂದು ಸಿಪ್ಪೆಯನ್ನು ಹೊಂದಿರುತ್ತವೆ. ಕತ್ತರಿಸಿ ಸೇವಿಸುವುದಕ್ಕಾಗಿ, ಪಚ್ಚಡಿಗಳು, ಉಪ್ಪಿನಕಾಯಿಗಳನ್ನು ತಯಾರಿಸುವುದಕ್ಕಾಗಿ ಅವನ್ನು ಬಳಸಬಹುದು ಮತ್ತು ಈ ಸೌತೆಕಾಯಿಗಳು ವರ್ಷ-ಪೂರ್ತಿ ಲಭ್ಯವಿರುತ್ತವೆ. ಅವು ಸಾಮಾನ್ಯವಾಗಿ ತೇಗುರಹಿತ ಸೌತೆಕಾಯಿಗಳೂ ಆಗಿರುತ್ತವೆ.
- ಲೆಬನನ್ ಮೂಲದ ಸೌತೆಕಾಯಿಗಳು ಸಣ್ಣದಾಗಿದ್ದು, ನವಿರು-ಸಿಪ್ಪೆಯನ್ನು ಹೊಂದಿರುತ್ತವೆ ಮತ್ತು ಕಟುವಲ್ಲದ ರುಚಿಯನ್ನು ಹೊಂದಿರುತ್ತವೆ. ಇಂಗ್ಲಿಷ್ ಸೌತೆಕಾಯಿಗಳ ರೀತಿಯಲ್ಲಿಯೇ, ಲೆಬನನ್ ಮೂಲದ ಸೌತೆಕಾಯಿಗಳು ಹೆಚ್ಚೂಕಮ್ಮಿ ಬೀಜರಹಿತವಾಗಿರುತ್ತವೆ.
- 'ಆರ್ಮೇನಿಯಾದ ಸೌತೆಕಾಯಿಗಳು' (ಇವನ್ನು ಗಜ ಉದ್ದವಿರುವ ಸೌತೆಕಾಯಿಗಳೆಂದೂ ಕರೆಯಲಾಗುತ್ತದೆ) ಸುದೀರ್ಘವಾದ ಏಣುಗಳಿಂದ ಕೂಡಿರುತ್ತವೆ. ಇವುಗಳ ಸಿಪ್ಪೆಯು ಎಷ್ಟು ತೆಳುವಾಗಿರುತ್ತದೆಯೆಂದರೆ, ಸಿಪ್ಪೆತೆಗೆಯುವ ಅಗತ್ಯವೇ ಕಂಡುಬರುವುದಿಲ್ಲ; ಆದರೆ ಈ ಪ್ರಭೇದಗಳು ವಾಸ್ತವವಾಗಿ ಪಕ್ವವಾಗಿರದ ಕಲ್ಲಂಗಡಿಗಳಾಗಿರುತ್ತವೆ. ಮಧ್ಯ-ಪ್ರಾಚ್ಯದ ಮಾರುಕಟ್ಟೆಗಳಲ್ಲಿ ಈ ಪ್ರಭೇದವು "ಉಪ್ಪಿನಕಾಯಿ ಹಾಕಲಾಗಿರುವ ಕಾಡು ಸೌತೆಕಾಯಿ" ಎಂಬ ಹಣೆಪಟ್ಟಿಯಡಿಯಲ್ಲಿ ಮಾರಲ್ಪಡುತ್ತದೆ.[೪] ಉತ್ತರ ಅಮೆರಿಕಾದಲ್ಲಿ, "ಕಾಡು ಸೌತೆಕಾಯಿ" ಎಂಬ ಶಬ್ದವನ್ನು ಮನುಷ್ಯಬೇರು (ಮ್ಯಾನ್‌ರೂಟ್) ಎಂಬುದಕ್ಕೆ ಉಲ್ಲೇಖಿಸಲಾಗುತ್ತದೆ.
- ಬೀಜರಹಿತ ಪುಟ್ಟ ಸೌತೆಕಾಯಿಗಳು ಎಂದೇ ಸುಪರಿಚಿತವಾಗಿರುವ ಪರ್ಷಿಯಾದ ಸೌತೆಕಾಯಿಗಳು ಬೇಸಿಗೆಯ ಅವಧಿಯಲ್ಲಿ ಕೆನಡಾದಿಂದ ಲಭ್ಯವಾಗುತ್ತವೆ, ಮತ್ತು ವರ್ಷ-ಪೂರ್ತಿ ಡಾಮಿನಿಕನ್‌ನಿಂದ ಲಭ್ಯವಾಗುತ್ತವೆ. ಇವು ಪ್ರತಿವರ್ಷವೂ ತಮ್ಮ ಜನಪ್ರಿಯತೆಯನ್ನು 30ರಿಂದ 40%ನಷ್ಟು ಹೆಚ್ಚಿಸಿಕೊಳ್ಳುತ್ತಿವೆ. ಸರಾಸರಿ 5-8 ಇಂಚುಗಳಷ್ಟು ಉದ್ದವಾಗಿ ಇವನ್ನು ಕತ್ತರಿಸುವುದು ಸುಲಭ. ಬಳ್ಳಿಗಳು ಪಾರ್ಥೆನೋಕಾರ್ಪಿಕ್ ಲಕ್ಷಣವನ್ನು ಹೊಂದಿದ್ದು, ಹಣ್ಣಿನ ಸಜ್ಜಿಕೆಗೆ ಯಾವುದೇ ಪರಾಗಸ್ಪರ್ಶಕಗಳ ಅಗತ್ಯ ಕಂಡುಬರುವುದಿಲ್ಲ.
- ಬೀಟ್ ಆಲ್ಫಾ ಸೌತೆಕಾಯಿಗಳು ಸಣ್ಣ ಗಾತ್ರದ, ಸಿಹಿಯಾದ ಪಾರ್ಥೆನೋಕಾರ್ಪಿಕ್ ಸೌತೆಕಾಯಿಗಳಾಗಿದ್ದು, ಇವು ಮಧ್ಯಪ್ರಾಚ್ಯದ ಶುಷ್ಕ ಹವಾಮಾನಕ್ಕೆ ಅನುಸಾರವಾಗಿ ಹೊಂದಿಕೊಂಡಿರುತ್ತವೆ.
- ಸೇಬು ಸೌತೆಕಾಯಿಗಳು ಗಿಡ್ಡನೆಯ, ದುಂಡನೆಯ ಸೌತೆಕಾಯಿಗಳಾಗಿದ್ದು, ನ್ಯೂಜಿಲೆಂಡ್ ಮತ್ತು ಯುರೋಪ್‌ನ ಭಾಗಗಳಲ್ಲಿ ಇವನ್ನು ಬೆಳೆಯಲಾಗುತ್ತದೆ; ತಮ್ಮ ನವಿರು ಹಳದಿ-ಹಸಿರು ಬಣ್ಣ ಮತ್ತು ಲಘುವಾಗಿ ಸಿಹಿಯಿರುವ ಪರಿಮಳದಿಂದ ಇವು ಹೆಸರುವಾಸಿಯಾಗಿವೆ. ಹಣ್ಣುಗಳು ಪಕ್ವವಾದಾಗ ಚೂಪಾದ ಪುಟ್ಟ ಏಣುಗಳನ್ನು ಅವು ಬೆಳೆಸಿಕೊಳ್ಳಬಹುದು. ಖಾದ್ಯಯೋಗ್ಯವಾದ ಹಲವಾರು ಹಸಿರು ಬೀಜಗಳನ್ನು ಇವು ತಮ್ಮೊಳಗೆ ಹೊಂದಿರುತ್ತವೆ. ಈ ಹಣ್ಣನ್ನು ಸಾಮಾನ್ಯವಾಗಿ ಸಿಪ್ಪೆಯೊಂದಿಗೆ ಕಚ್ಚಾ ಸ್ವರೂಪದಲ್ಲಿಯೇ ತಿನ್ನಲಾಗುತ್ತದೆ.[೫]
- ಉಪ್ಪಿನಕಾಯಿ ಹಾಕುವ ಸೌತೆಕಾಯಿಗಳು: ಯಾವುದೇ ಸೌತೆಕಾಯಿಯನ್ನು ಉಪ್ಪಿನಕಾಯಿ ಹಾಕಬಹುದಾದರೂ, ವಿಶೇಷವಾಗಿ ಸಂಕರಿಸಿದ ಸೌತೆಕಾಯಿಗಳಿಂದ ವಾಣಿಜ್ಯೋದ್ದೇಶದ ಉಪ್ಪಿನಕಾಯಿಗಳನ್ನು ತಯಾರಿಸಲಾಗುತ್ತದೆ; ಉದ್ದದಿಂದ ವ್ಯಾಸಕ್ಕಿರುವ ಅನುಪಾತದ ಏಕರೂಪತೆಗಾಗಿ ಮತ್ತು ತಿರುಳಿನಲ್ಲಿ ಖಾಲಿಜಾಗಗಳು ಇಲ್ಲದಿರುವಂತೆ ನೋಡಿಕೊಳ್ಳಲು ಈ ಸೌತೆಕಾಯಿಗಳನ್ನು ಹೀಗೆ ಸಂಕರಿಸಲಾಗಿರುತ್ತದೆ.
- ಉತ್ತರ ಅಮೆರಿಕಾದ ಮಾರುಕಟ್ಟೆಗಾಗಿ ವಾಣಿಜ್ಯ ಸ್ವರೂಪದಲ್ಲಿ ಬೆಳೆಯಲಾಗುವ ಬಿಲ್ಲೆಗಾರ ಸೌತೆಕಾಯಿಗಳು ಸಾಮಾನ್ಯವಾಗಿ ಉದ್ದವಾಗಿದ್ದು ನವಿರಾಗಿರುತ್ತವೆ, ಅವುಗಳ ಬಣ್ಣದಲ್ಲಿ ಹೆಚ್ಚು ಏಕರೂಪತೆಯಿರುತ್ತದೆ, ಮತ್ತು ಸಾಕಷ್ಟು ಗಡುಸಾಗಿರುವ ಸಿಪ್ಪೆಯನ್ನು ಇವು ಹೊಂದಿರುತ್ತವೆ. ಇತರ ದೇಶಗಳಲ್ಲಿ ಕಂಡುಬರುವ ಬಿಲ್ಲೆಗಾರ ಸೌತೆಕಾಯಿಗಳು ಸಣ್ಣದಾಗಿರುತ್ತವೆ ಮತ್ತು ತೆಳುವಾಗಿರುವ, ಹೆಚ್ಚು ನವಿರಾಗಿರುವ ಒಂದು ಸಿಪ್ಪೆಯನ್ನು ಹೊಂದಿರುತ್ತವೆ.
- ದೋಸಾಕಾಯಿ ಎಂಬುದು ಒಂದು ಹಳದಿ ಸೌತೆಕಾಯಿಯಾಗಿದ್ದು, ಭಾರತದ ಕೆಲವೊಂದು ಭಾಗಗಳಲ್ಲಿ ಅದು ಲಭ್ಯವಿದೆ. ಈ ಹಣ್ಣುಗಳು ಸಾಮಾನ್ಯವಾಗಿ ಗೋಲಾಕಾರದಲ್ಲಿರುತ್ತವೆ. ಇದನ್ನು ಪಲ್ಯವಾಗಿ ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ, ಸಾಂಬಾರ್/ಸೂಪ್, ದಾಲ್‌ಗಳಲ್ಲಿ ಸೇರಿಸಲಾಗುತ್ತದೆ ಮತ್ತು ದೋಸಾ-ಆವಕಾಯ (ಭಾರತೀಯ ಉಪ್ಪಿನಕಾಯಿ) ಹಾಗೂ ಚಟ್ಣಿಯ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.
- ಕೆಕಿರಿ ಎಂಬುದು ನವಿರು ಸಿಪ್ಪೆಯನ್ನು ಹೊಂದಿರುವ ಒಂದು ಸೌತೆಕಾಯಿಯಾಗಿದ್ದು, ಇದು ತುಲನಾತ್ಮಕವಾಗಿ ಗಡಸಾಗಿರುತ್ತದೆ ಮತ್ತು ಇದನ್ನು ಪಚ್ಚಡಿಗಳಿಗಾಗಿ ಬಳಸಲಾಗುವುದಿಲ್ಲ. ಒಂದು ಮಸಾಲೆಯುಕ್ತ ಪಲ್ಯವಾಗಿ ಇದನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಶ್ರೀಲಂಕಾದ ಶುಷ್ಕ ವಲಯದಲ್ಲಿ ಇದು ಕಂಡುಬರುತ್ತದೆ. ಹಣ್ಣು ಪಕ್ವಗೊಂಡಾದ ಅದು ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ.
- 2008ರ ಮೇ ತಿಂಗಳಲ್ಲಿ, 'ಸಿ-ಥ್ರೂ-ಕಂಬರ್' ಎಂಬ ಪ್ರಭೇದವನ್ನು ಬ್ರಿಟಿಷ್ ಸೂಪರ್ ಮಾರುಕಟ್ಟೆ ಸರಣಿಯಾದ ಸೈನ್ಸ್‌ಬರಿ'ಸ್ ಅನಾವರಣಗೊಳಿಸಿತು; ಇದು ತೆಳುವಾದ-ಸಿಪ್ಪೆಯನ್ನು ಹೊಂದಿರುವ ಒಂದು ಪ್ರಭೇದವಾಗಿದ್ದು, ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಇದರ ಸಿಪ್ಪೆತೆಗೆಯುವ ಅಗತ್ಯವು ಕಂಡುಬರುವುದಿಲ್ಲ.[೬]
ಇತಿಹಾಸ
ಬದಲಾಯಿಸಿಸೌತೆಕಾಯಿಗಳು ಭಾರತದಲ್ಲಿ ಜನ್ಮತಳೆದವು.[೭][೮] ಸೌತೆಕಾಯಿಯ ದೊಡ್ಡ ತಳೀಯ ಪ್ರಭೇದವು ಭಾರತದ ವಿಭಿನ್ನ ಭಾಗಗಳಲ್ಲಿ ಕಂಡುಬಂದಿದೆ.[೮] ಪಶ್ಚಿಮ ಏಷ್ಯಾದಲ್ಲಿ ಇದನ್ನು ಕನಿಷ್ಟಪಕ್ಷ 3,000 ವರ್ಷಗಳಿಂದಲೂ ಬೆಳೆಯಲಾಗುತ್ತಿದ್ದು, ಪ್ರಾಯಶಃ ರೋಮನ್ನರು ಇದನ್ನು ಯುರೋಪ್‌ನ ಇತರ ಭಾಗಗಳಿಗೆ ಪರಿಚಯಿಸಿದರೆಂದು ತೋರುತ್ತದೆ. ಸೌತೆಕಾಯಿಯನ್ನು ಬೆಳೆಯುವ ಪರಿಪಾಠವು ಫ್ರಾನ್ಸ್‌ನಲ್ಲಿ 9ನೇ ಶತಮಾನದಲ್ಲಿಯೂ, ಇಂಗ್ಲೆಂಡ್‌ನಲ್ಲಿ 14ನೇ ಶತಮಾನದಲ್ಲಿಯೂ, ಮತ್ತು ಉತ್ತರ ಅಮೆರಿಕಾದಲ್ಲಿ 16ನೇ ಶತಮಾನದ-ಮಧ್ಯಭಾಗದ ವೇಳೆಗೂ ಅಸ್ತಿತ್ವದಲ್ಲಿತ್ತೆಂದು ದಾಖಲೆಗಳು ತಿಳಿಸುತ್ತವೆ.
ಪ್ರಾಚೀನ ಕೃಷಿ
ಬದಲಾಯಿಸಿಪಶ್ಚಿಮದ ಏಷ್ಯಾದಲ್ಲಿ ಸುಮಾರು 3,000 ವರ್ಷಗಳಿಂದಲೂ ಸೌತೆಕಾಯಿಯನ್ನು ಬೆಳೆಯಲಾಗುತ್ತಿದೆ ಎಂಬ ಅಂಶವನ್ನು ಪುರಾವೆಯು ಸೂಚಿಸುತ್ತದೆ. ಪ್ರಾಚೀನ ಉರ್‌ನ ಆಹಾರಗಳ ಪೈಕಿ ಸೌತೆಕಾಯಿಯೂ ಸಹ ಪಟ್ಟಿಮಾಡಲ್ಪಟ್ಟಿದೆ ಮತ್ತು ಸೌತೆಕಾಯಿಗಳನ್ನು ತಿನ್ನುತ್ತಿದ್ದ ಜನರನ್ನು ಗಿಲ್ಗಮೆಶ್‌ನ ಐತಿಹ್ಯವು ವಿವರಿಸುತ್ತದೆ. ಸೌತೆಕಾಯಿಯು ಪ್ರಾಚೀನ ಥ್ರೇಸ್‌ನಲ್ಲಿ ಬೆಳೆಯಲ್ಪಡುತ್ತಿತ್ತು ಎಂದೂ ಸಹ ಕೆಲವೊಂದು ಮೂಲಗಳು ತಿಳಿಸುತ್ತವೆ. ಅಷ್ಟೇ ಅಲ್ಲ, ಇದು ನಿಶ್ಚಿತವಾಗಿಯೂ ಬಲ್ಗೇರಿಯಾ ಮತ್ತು ಟರ್ಕಿಯಲ್ಲಿ ಚಾಲ್ತಿಯಲ್ಲಿರುವ ಆಧುನಿಕ ಪಾಕಶಾಸ್ತ್ರದಲ್ಲಿನ ಭಾಗವಾಗಿದೆ; ಬಲ್ಗೇರಿಯಾ ಮತ್ತು ಟರ್ಕಿ ಪ್ರದೇಶಗಳ ಭಾಗಗಳು ಆ ಪ್ರಾಚೀನ ಸಂಸ್ಥಾನವನ್ನು ರೂಪಿಸುತ್ತವೆ. ಭಾರತದಿಂದ ಇದು ಗ್ರೀಸ್‌ಗೆ (ಇಲ್ಲಿ ಇದನ್ನು “σίκυον”, ಸಿಕ್ಯೋನ್ ಎಂದು ಕರೆಯಲಾಗುತ್ತಿತ್ತು) ಮತ್ತು ಇಟಲಿಗೆ (ಇಲ್ಲಿ ರೋಮನ್ನರು ಈ ಬೆಳೆಯನ್ನು ವಿಶೇಷವಾಗಿ ಇಷ್ಟಪಟ್ಟಿದ್ದರು), ಹಾಗೂ ನಂತರದಲ್ಲಿ ಚೀನಾಗೆ ಹರಡಿತು.
ಪ್ಲೈನಿ ದಿ ಎಲ್ಡರ್ (ದಿ ನ್ಯಾಚುರಲ್ ಹಿಸ್ಟರಿ, ಪುಸ್ತಕ XIX, ಅಧ್ಯಾಯ 23) ಎಂಬಾತನ ಅನುಸಾರ, ಪ್ರಾಚೀನ ಗ್ರೀಕರು ಸೌತೆಕಾಯಿಗಳನ್ನು ಬೆಳೆದರು, ಮತ್ತು ಇಟಲಿ, ಆಫ್ರಿಕಾ, ಹಾಗೂ ನವಕಾಲೀನ ಸರ್ಬಿಯಾದಲ್ಲಿ ಸೌತೆಕಾಯಿಯ ವಿಭಿನ್ನ ಪ್ರಭೇದಗಳಿದ್ದವು.
ರೋಮನ್ ಸಾಮ್ರಾಜ್ಯ
ಬದಲಾಯಿಸಿಪ್ಲೈನಿ ದಿ ಎಲ್ಡರ್ ಎಂಬಾತ ಬರೆದಿರುವ ದಿ ನ್ಯಾಚುರಲ್ ಹಿಸ್ಟರಿ ಆಫ್ ಪ್ಲೈನಿ (ಪುಸ್ತಕ XIX, ಅಧ್ಯಾಯ 23) ಕೃತಿಯ ಅನುಸಾರ, ರೋಮನ್ ಚಕ್ರವರ್ತಿಯಾದ ಟಿಬೆರಿಯಸ್ ಬೇಸಿಗೆ ಮತ್ತು ಚಳಿಗಾಲದ ಅವಧಿಯಲ್ಲಿ ಪ್ರತಿದಿನವೂ ತನ್ನ ಮೇಜಿನ ಮೇಲೆ ಸೌತೆಕಾಯಿಯನ್ನು ಹೊಂದಿರುತ್ತಿದ್ದ. ಆತನ ಮೇಜಿನ ಮೇಲೆ ಸೌತೆಕಾಯಿಯು ವರ್ಷದ ಪ್ರತಿದಿನವೂ ಲಭ್ಯವಾಗುವಂತೆ ಮಾಡಲು, ಇದನ್ನು ಬೆಳೆಯುವ ಕೃತಕ ವಿಧಾನಗಳನ್ನು (ಹಸಿರುಮನೆ ಪದ್ಧತಿಯನ್ನು ಹೋಲುವಂಥವು) ರೋಮನ್ನರು ಬಳಸಿದರು ಎಂದು ತಿಳಿದುಬಂದಿದೆ. ಈ ಕುರಿತು ಪ್ಲೈನಿ ಹೀಗೆ ಹೇಳಿದ್ದಾನೆ: "ನಿಜಕ್ಕೂ ಹೇಳಬೇಕೆಂದರೆ, ಅದಿಲ್ಲದೆ ಅವನು ಇರುತ್ತಲೇ ಇರಲಿಲ್ಲ; ಇದಕ್ಕಾಗಿಯೇ ಆತ ಚಕ್ರಗಳ ಮೇಲೆ ಕೂರಿಸಲಾದ ಚೌಕಟ್ಟುಗಳಲ್ಲಿ ಮಾಡಲಾದ ಎತ್ತರಿಸಲಾದ ನೆಲಪೀಠಗಳನ್ನು ಹೊಂದಿದ್ದ, ಅದರ ನೆರವಿನಿಂದ ಸೌತೆಕಾಯಿಗಳು ಚಾಲಿಸಲ್ಪಡುತ್ತಿದ್ದವು ಮತ್ತು ಸೂರ್ಯನ ಪೂರ್ಣತಾಪಕ್ಕೆ ಅವನ್ನು ಒಡ್ಡಲಾಗುತ್ತಿತ್ತು; ಚಳಿಗಾಲದಲ್ಲಿ ಅವನ್ನು ಹಿಂತೆಗೆದುಕೊಂಡು, ಪ್ರತಿಬಿಂಬಿಸುವ ಕಲ್ಲಿನ ನೆರವಿನಿಂದ ಹೊಳಪು ಕೊಟ್ಟಿರುವ ಚೌಕಟ್ಟುಗಳ ರಕ್ಷಣೆಯ ಅಡಿಯಲ್ಲಿ ಇರಿಸಲಾಗುತ್ತಿತ್ತು. ತಿಳಿದು ಬಂದಿರುವ ಮಾಹಿತಿಯಂತೆ, 'ಸ್ಪೆಕ್ಯುಲೇರಿಯಾ' ಎಂದು ಕರೆಯಲ್ಪಡುವ ತೈಲಯುಕ್ತ ಬಟ್ಟೆಯಿಂದ ಹೊಳಪು ಕೊಟ್ಟಿರುವ ಸೌತೆಕಾಯಿ ಗೃಹಗಳಲ್ಲಿಯೂ ಅವನ್ನು ಬೆಳೆಯಲಾಗುತ್ತಿತ್ತು".
ಅತ್ಯಂತ ಸಣ್ಣದಾಗಿರುವ, ಪ್ರಾಯಶಃ ಒಂದು ಗರ್ಕಿನ್ ರೀತಿಯಲ್ಲಿರುವ ಹಣ್ಣು ಎಂಬುದಾಗಿ ಇಟಲಿಯ ಹಣ್ಣನ್ನು ಪ್ಲೈನಿ ದಿ ಎಲ್ಡರ್ ವಿವರಿಸುತ್ತಾ, ಇದು ಬೆಳೆದಿರುವ ಸೌತೆಕಾಯಿಗಿಂತ ಗಮನಾರ್ಹವಾಗಿ ಸಣ್ಣದಾಗಿರುವ ಒಂದು ಕಾಡು ಸೌತೆಕಾಯಿ ಎಂಬುದಾಗಿ ವರ್ಣಿಸುತ್ತಾನೆ. 'ಎಲಾಟೇರಿಯಂ' ಎಂದು ಕರೆಯಲಾಗುವ ಔಷಧವಸ್ತುವೊಂದರ ತಯಾರಿಕೆಯನ್ನೂ ಪ್ಲೈನಿ ವಿವರಿಸುತ್ತಾನಾದರೂ, ಸಾಮಾನ್ಯ ಸೌತೆಕಾಯಿಯಿಂದ ವಿಭಿನ್ನವಾಗಿರುವ ಕ್ಯುಕಮಿಸ್ ಸಿಲ್ವೆಸ್ಟ್ರಿಸ್ ಅಸಿನಿನಸ್ ಎಂಬ ಒಂದು ಜಾತಿಯನ್ನು ಅವನು ಉಲ್ಲೇಖಿಸುತ್ತಾನೆ ಎಂದು ಕೆಲವೊಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.[೯] ಬೆಳೆಯಲ್ಪಟ್ಟ ಸೌತೆಕಾಯಿಯೂ[೧೦] ಸೇರಿದಂತೆ ಸೌತೆಕಾಯಿಯ ಇತರ ಹಲವಾರು ಪ್ರಭೇದಗಳ ಕುರಿತಾಗಿಯೂ, ಮತ್ತು ವಿಭಿನ್ನ ಬಗೆಗಳಿಂದ (ಬೆಳೆದ ಸೌತೆಕಾಯಿಗಳಿಗೆ ಸೇರಿದ 9 ಬಗೆಗಳು, 'ಸರ್ಪಸದೃಶ' ಸೌತೆಕಾಯಿಗೆ ಸೇರಿದ 5 ಬಗೆಗಳು, ಮತ್ತು 'ಕಾಡು ಸೌತೆಕಾಯಿ'ಗೆ ಸೇರಿದ 26 ಬಗೆಗಳು) ದೊರೆಯುವ ಪರಿಹಾರಗಳ ಕುರಿತಾಗಿಯೂ ಪ್ಲೈನಿ ಬರೆಯುತ್ತಾನೆ. ಚೇಳಿನ ಕಡಿತಗಳು, ಕಳಪೆಯಾಗಿರುವ ಕಣ್ಣಿನ ದೃಷ್ಟಿಯನ್ನು ಉಪಚರಿಸಲು ಹಾಗೂ ಇಲಿಗಳನ್ನು ಹೆದರಿಸಿ ಓಡಿಸಲು ರೋಮನ್ನರು ಸೌತೆಕಾಯಿಗಳನ್ನು ಬಳಸುತ್ತಿದ್ದರು ಎಂದು ತಿಳಿದುಬಂದಿದೆ. ಮಕ್ಕಳಾಗಬೇಕೆಂದು ಬಯಸುತ್ತಿದ್ದ ಪತ್ನಿಯರು ಸೌತೆಕಾಯಿಗಳನ್ನು ತಮ್ಮ ಸೊಂಟಗಳ ಸುತ್ತಲೂ ಧರಿಸುತ್ತಿದ್ದರು. ಸೌತೆಕಾಯಿಗಳನ್ನು ಒಯ್ಯುತ್ತಿದ್ದ ಸೂಲಗಿತ್ತಿಯರು, ಮಗುವಿನ ಜನನವಾದ ನಂತರ ಅವನ್ನು ಹೊರಗೆಸೆಯುತ್ತಿದ್ದರು.
ಮಧ್ಯಕಾಲೀನ ಯುಗ
ಬದಲಾಯಿಸಿಒಂಬತ್ತನೇ-ಶತಮಾನದ ಅವಧಿಯ ಫ್ರಾನ್ಸ್‌ನಲ್ಲಿ, ಚಾರ್ಲ್‌ಮ್ಯಾಗ್ನೆ ಎಂಬಾತ ತನ್ನ ತೋಟಗಳಲ್ಲಿ ಸೌತೆಕಾಯಿಳನ್ನು ಬೆಳೆಸುತ್ತಿದ್ದ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ, 14ನೇ ಶತಮಾನದ ಆರಂಭಿಕ ಭಾಗದಲ್ಲಿ ಅವು ಇಂಗ್ಲೆಂಡ್‌ನೊಳಗೆ ಪರಿಚಯಿಸಲ್ಪಟ್ಟು, ಕಳೆದು ಹೋದವು; ನಂತರ ಸರಿಸುಮಾರಾಗಿ 250 ವರ್ಷಗಳ ನಂತರ ಅವು ಮರು-ಪರಿಚಯಿಸಲ್ಪಟ್ಟವು. 1494ರಲ್ಲಿ ಸ್ಪೇನ್ ದೇಶದವರು (ಕ್ರಿಸ್ಟಫರ್ ಕೊಲಂಬಸ್ ರೂಪದಲ್ಲಿ) ಸೌತೆಕಾಯಿಗಳನ್ನು ಹೈಟಿಗೆ ತಂದರು. 1535ರಲ್ಲಿ ಜಾಕ್ವೆಸ್ ಕಾರ್ಟಿಯರ್ ಎಂಬ ಓರ್ವ ಫ್ರೆಂಚ್ ಪರಿಶೋಧಕನು, ಈಗ ಮಾಂಟ್ರಿಯಲ್ ಎಂದು ಕರೆಯಲ್ಪಡುವ ತಾಣದಲ್ಲಿ 'ಅತ್ಯಂತ ಮಹಾನ್ ಸೌತೆಕಾಯಿ'ಗಳನ್ನು ಬೆಳೆದಿರುವುದನ್ನು ಕಂಡುಕೊಂಡ.
ದಾರ್ಶನಿಕ ಚಳವಳಿಯ ನಂತರದ ಅವಧಿ
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(June 2008) |
16ನೇ ಶತಮಾನದ ಉದ್ದಕ್ಕೂ, ಐರೋಪ್ಯ ವಲಯಗಳಿಗೆ ಸೇರಿದವರಾದ ಕಾಡುಪ್ರಾಣಿಗಳನ್ನು ಹಿಡಿಯುವವರು, ವರ್ತಕರು, ಕಾಡುಕೋಣದ ಬೇಟೆಗಾರರು, ಮತ್ತು ಪರಿಶೋಧಕರು ಅಮೆರಿಕಾದ ಮೂಲನಿವಾಸಿಗಳ ಕೃಷಿ ಉತ್ಪನ್ನಗಳಿಗಾಗಿ ಪದಾರ್ಥ-ವಿನಿಮಯ ಮಾಡಿಕೊಂಡರು. ಮಹಾನ್ ಬಯಲು ಪ್ರದೇಶಗಳು ಮತ್ತು ರಾಕಿ ಪರ್ವತಗಳ ಬುಡಕಟ್ಟು ಜನಾಂಗದವರು ಐರೋಪ್ಯ ಬೆಳೆಗಳನ್ನು ಬೆಳೆಯುವುದು ಹೇಗೆಂಬುದನ್ನು ಸ್ಪೇನಿನ ಜನರಿಂದ ಕಲಿತರು. ಮಂಡಾನ್ ಇಂಡಿಯನ್ನರು ಮಹಾನ್ ಬಯಲು ಪ್ರದೇಶದಲ್ಲಿನ ಅತ್ಯುತ್ತಮ ಕೃಷಿಕರಾಗಿದ್ದರು ಮತ್ತು ಈ ಪ್ರದೇಶದಲ್ಲಿಯೇ ಈಗಿನ ಉತ್ತರ ಮತ್ತು ದಕ್ಷಿಣ ಡಕೋಟಾ ಇವೆ. ಸ್ಪೇನಿನ ಜನರಿಂದ ಅವರು ಸೌತೆಕಾಯಿಗಳು ಮತ್ತು ನೀರುಕಲ್ಲಂಗಡಿಗಳನ್ನು ಗಳಿಸಿದರು, ಮತ್ತು ಅವನ್ನು ಅಷ್ಟುಹೊತ್ತಿಗಾಗಲೇ ಬೆಳೆಯುತ್ತಿದ್ದ ತಮ್ಮ ಬೆಳೆಗಳೊಂದಿಗೆ ಸೇರ್ಪಡೆ ಮಾಡಿಕೊಂಡರು; ಮೆಕ್ಕೆಜೋಳ ಮತ್ತು ಬೀಜಗಳು (ಬೀನ್ಸ್), ಕುಂಬಳಕಾಯಿಗಳು, ಕುಂಬಳದ ಗಿಡ, ಮತ್ತು ಗಡುಸಾದ ಸಿಪ್ಪೆ ಮತ್ತು ಹೇರಳ ತಿರುಳಿರುವ ದೊಡ್ಡಕಾಯಿಯ ಸಸ್ಯಗಳ ಹಲವಾರು ಪ್ರಭೇದಗಳು ಅವುಗಳಲ್ಲಿ ಸೇರಿದ್ದವು. ಮೊದಲ ಯುರೋಪಿಯನ್ನರು ಇರೋಕ್ವಿಸ್ ಜನರನ್ನು ಭೇಟಿಮಾಡಿದಾಗ, ಅವರೂ ಸಹ ಅವನ್ನು ಬೆಳೆಯುತ್ತಿದ್ದರು.
1630ರಲ್ಲಿ, "ನ್ಯೂ ಇಂಗ್ಲೆಂಡ್’ಸ್ ಪ್ಲಾಂಟೇಷನ್" ಎಂಬ ಹೆಸರಿನ ಪುಸ್ತಕವೊಂದನ್ನು ರೆವರೆಂಡ್ ಫ್ರಾನ್ಸಿಸ್ ಹಿಗ್ಗಿನ್ಸನ್ ರೂಪಿಸಿದ. ಇದರಲ್ಲಿ "ದಿ ಗವರ್ನರ್'ಸ್ ಗಾರ್ಡನ್" ಎಂದು ಕರೆಯಲ್ಪಡುತ್ತಿದ್ದ ಬಾಸ್ಟನ್ ಬಂದರಿನ ಬಳಿಯಿದ್ದ ಕೊನಾಂಟ್ಸ್ ಐಲೆಂಡ್ ಎಂಬಲ್ಲಿದ್ದ ತೋಟವೊಂದನ್ನು ವರ್ಣಿಸುತ್ತಾ ಅವನು ಹೀಗೆನ್ನುತ್ತಾನೆ: "ಮಹತ್ತರವಾದ ಪ್ರಭೇದಗಳ ಮತ್ತು ತಿನ್ನಲು ಉತ್ತಮವಾಗಿರುವ ಕಂದಮೂಲಗಳ ಸಂಗ್ರಹದಿಂದಾಗಿ ಈ ಪ್ರದೇಶವು ಸ್ವಾಭಾವಿಕ ಸಮೃದ್ಧಿಯಿಂದ ಕೂಡಿದೆ. ಟರ್ನಿಪ್ ಗೆಡ್ಡೆಗಳು, ಪಾರ್ಸ್‌ನಿಪ್ ಗೆಡ್ಡೆಗಳು, ಮತ್ತು ಗಜ್ಜರಿಗಳು ಇಂಗ್ಲೆಂಡ್‌ನಲ್ಲಿ ಕಂಡುಬರುವ ಸಾಧಾರಣವಾದವುಗಳಿಗಿಂತ ಇಲ್ಲಿ ದೊಡ್ಡ ಪ್ರಮಾಣದಲ್ಲೂ ಇವೆ ಮತ್ತು ಸಿಹಿಯಾಗೂ ಇವೆ. ಕುಂಬಳಕಾಯಿಗಳು, ಸೌತೆಕಾಯಿಗಳು, ಮತ್ತು ನನಗೆ ತಿಳಿದಿರದ ಪ್ರಕೃತಿಯ ಇತರ ವಸ್ತುಗಳ ಸಂಗ್ರಹಗಳು ಇಲ್ಲಿವೆ..."
ವಿಲಿಯಂ ವುಡ್ ಎಂಬಾತನೂ ಸಹ 1629ರಲ್ಲಿ ಅಮೆರಿಕಾದಲ್ಲಿ ತಾನು ಮಾಡಿದ ವೀಕ್ಷಣೆಗಳನ್ನು, 1633ರಲ್ಲಿ ಪ್ರಕಟಿಸಿದ ನ್ಯೂ ಇಂಗ್ಲೆಂಡ್ ಪ್ರಾಸ್ಪೆಕ್ಟ್ (ಇಂಗ್ಲೆಂಡ್‌ನಲ್ಲಿ ಇದು ಪ್ರಕಟಿಸಲ್ಪಟ್ಟಿತು) ಎಂಬ ಕೃತಿಯಲ್ಲಿ ಹೀಗೆ ವಿವರಿಸಿದ: "ಟರ್ನಿಪ್ ಗೆಡ್ಡೆಗಳು, ಪಾರ್ಸ್‌ನಿಪ್ ಗೆಡ್ಡೆಗಳು, ಗಜ್ಜರಿಗಳು, ಮೂಲಂಗಿಗಳು, ಮತ್ತು ಕುಂಬಳಕಾಯಿಗಳು, ಕರ್ಬೂಜಗಳು, ಇಸ್ಕೋಟರ್-ಕುಂಬಳದ ಗಿಡಗಳು, ಸೌತೆಕಾಯಿಗಳು, ಈರುಳ್ಳಿಗಳಿಗೆ ಸಂಬಂಧಿಸಿರುವ ಅತಿ ಉತ್ತಮ ಅಡುಗೆಮನೆ ತೋಟಗಳನ್ನು ಇಲ್ಲಿನ ನೆಲವು ಸಮರ್ಥವಾಗಿ ನಿಭಾಯಿಸಬಲ್ಲದು; ಅಷ್ಟೇ ಅಲ್ಲ, ಇಂಗ್ಲೆಂಡ್‌ನಲ್ಲಿ ಏನೆಲ್ಲಾ ಚೆನ್ನಾಗಿ ಬೆಳೆಯುತ್ತವೆಯೋ ಅವೆಲ್ಲವೂ ಇಲ್ಲಿ ಬೆಳೆಯುತ್ತವೆ, ಅನೇಕ ವಸ್ತುಗಳು ಇಲ್ಲಿ ಇನ್ನೂ ಉತ್ತಮವಾಗಿರುತ್ತವೆ ಮತ್ತು ದೊಡ್ಡದಾಗಿರುತ್ತವೆ."
17ನೇ ಶತಮಾನದ ಅಂತ್ಯಭಾಗದಲ್ಲಿ, ಬೇಯಿಸದ ತರಕಾರಿಗಳು ಮತ್ತು ಹಣ್ಣುಗಳ ವಿರುದ್ಧವಾಗಿ ಒಂದು ಪೂರ್ವಗ್ರಹವು ಬೆಳೆಯಿತು. ಸಮಕಾಲೀನ ಆರೋಗ್ಯ ಪ್ರಕಟಣೆಗಳಲ್ಲಿ ಕಂಡುಬರುವ ಅನೇಕ ಲೇಖನಗಳು ವ್ಯಕ್ತಪಡಿಸುವ ಅಭಿಪ್ರಾಯದ ಪ್ರಕಾರ, ಬೇಯಿಸದ ಸಸ್ಯಗಳು ಬೇಸಿಗೆ ಕಾಯಿಲೆಗಳನ್ನು ಉಂಟುಮಾಡುತ್ತವೆ, ಹೀಗಾಗಿ ಇವನ್ನು ಮಕ್ಕಳು ಸೇವಿಸದಂತೆ ನಿಷೇಧಿಸಬೇಕು. ಸೌತೆಕಾಯಿಯು ಈ ನಿಕೃಷ್ಟ ಕೀರ್ತಿಯನ್ನು ಒಂದು ಅತಿಯಾದ ಕಾಲಾವಧಿಯವರೆಗೆ ಇಟ್ಟುಕೊಂಡಿತು, ಅಂದರೆ, "ಕೇವಲ ಹಸುಗಳು ಮಾತ್ರವೇ ತಿನ್ನಲು ಯೋಗ್ಯವಾದವು" ಎಂಬ ಅಭಿಪ್ರಾಯ ಸೌತೆಕಾಯಿಯ ಕುರಿತು ಮೂಡಿತ್ತು; ಈ ಕಾರಣಕ್ಕಾಗಿಯೇ "ಕೌಕಂಬರ್" ("ಕ್ಯುಕಂಬರ್-ಸೌತೆಕಾಯಿ”) ಎಂಬ ಹೆಸರನ್ನು ಅದು ಗಳಿಸಿತು ಎಂಬುದು ಕೆಲವರ ಅಭಿಪ್ರಾಯ.
1772 ಮತ್ತು 1793ರ ನಡುವೆ ಮ್ಯಾಡಲೆನಾ ಬೌಚಾರ್ಡ್ ವತಿಯಿಂದ ಸೃಷ್ಟಿಸಲ್ಪಟ್ಟಿರುವ ಒಂದು ತಾಮ್ರದ ಎಚ್ಚಣೆಯು, ಸಣ್ಣದಾಗಿರುವ, ಹೆಚ್ಚೂಕಮ್ಮಿ ಬೀನ್-ಆಕಾರದಲ್ಲಿರುವ ಹಣ್ಣುಗಳು, ಮತ್ತು ಸಣ್ಣ ಹಳದಿ ಹೂವುಗಳನ್ನು ಈ ಸಸ್ಯವು ಹೊಂದಿರುವುದನ್ನು ತೋರಿಸುತ್ತದೆ. ಸೌತೆಕಾಯಿಯ ಸಣ್ಣ ಸ್ವರೂಪವು 16ನೇ ಶತಮಾನದ ಔಷಧಿ ಗ್ರಂಥಗಳಲ್ಲಿ ಚಿತ್ರಿಸಲ್ಪಟ್ಟಿದೆಯಾದರೂ, "ಕಾಯಾಗುವ ಹೂವಿನ ಹಂತದಲ್ಲಿರುವಾಗ ಅದನ್ನು ಒಂದುವೇಳೆ ಕೊಳವೆಯೊಂದರಲ್ಲಿ ನೇತುಹಾಕಿದರೆ, ಒಂದು ಅತ್ಯಂತ ಆಶ್ಚರ್ಯಕರವೆನಿಸುವ ಉದ್ದದವರೆಗೆ ಸೌತೆಕಾಯಿಯು ಬೆಳೆಯುತ್ತದೆ ಎಂಬುದಾಗಿ ಅದು ತಿಳಿಸುತ್ತದೆ.
1663ರ ಸೆಪ್ಟೆಂಬರ್ 22ರಂದು ಸ್ಯಾಮ್ಯುಯೆಲ್ ಪೆಪಿಸ್ ಎಂಬಾತ ತನ್ನ ದಿನಚರಿಯಲ್ಲಿ ಹೀಗೆ ಬರೆದ: "ಈ ದಿನ ಸರ್ W. ಬ್ಯಾಟನ್ ನನ್ನೊಂದಿಗೆ ಮಾತನಾಡುತ್ತಾ, ಶ್ರೀಮಾನ್ ನ್ಯೂಹೌಸ್ ಹೊಟ್ಟೆಹುಣ್ಣಾಗುವಷ್ಟು ಸೌತೆಕಾಯಿಗಳನ್ನು ತಿಂದ ಎಂದು ತಿಳಿಸಿದ, ಈ ಕುರಿತಾಗಿ ಮತ್ತೊಂದು ದಿನ ಮತ್ತೊಬ್ಬರ ಕುರಿತಾಗಿ ನಾನು ಕೇಳಿದೆ ಎಂದು ನನಗನ್ನಿಸುತ್ತಿದೆ."
ಫ್ರೆಡ್ರಿಕ್ ಹ್ಯಾಸೆಲ್‌ಕ್ವಿಸ್ಟ್ ಎಂಬಾತ 18ನೇ ಶತಮಾನದಲ್ಲಿ ಏಷ್ಯಾ ಮೈನರ್, ಈಜಿಪ್ಟ್, ಸೈಪ್ರಸ್ ಮತ್ತು ಪ್ಯಾಲೆಸ್ಟೀನ್‌ಗಳಲ್ಲಿ ಕೈಗೊಂಡ ತನ್ನ ಪರ್ಯಟನೆಗಳ ಸಂದರ್ಭದಲ್ಲಿ ಕ್ಯುಕಮಿಸ್ ಚೇಟ್ ಎಂದು ಕರೆಯಲ್ಪಡುವ ಈಜಿಪ್ಟಿನ ಸೌತೆಕಾಯಿ ಅಥವಾ ರೋಮಭರಿತ ಸೌತೆಕಾಯಿಯನ್ನು ಕಂಡ. ಹ್ಯಾಸೆಲ್‌ಕ್ವಿಸ್ಟ್ ಎಂಬಾತ ಇದನ್ನು "ಸೌತೆಕಾಯಿಗಳ ರಾಣಿ, ಆಹ್ಲಾದಕರವಾದ, ಸಿಹಿಯಾದ, ಘನವಾದ, ಮತ್ತು ಆರೋಗ್ಯಕರವಾದ ಕಾಯಿ" ಎಂದೆಲ್ಲಾ ವರ್ಣಿಸಿದ್ದಾನೆ. ಅವನು ತನ್ನ ಅಭಿಪ್ರಾಯವನ್ನು ಮುಂದುವರೆಸುತ್ತಾ, "ಸೌತೆಕಾಯಿಗಳು ಈಗಲೂ ಸಹ ಈಜಿಪ್ಟ್‌ನಲ್ಲಿನ ಕೆಳ-ವರ್ಗದ ಜನರ ಆಹಾರದ ಮಹತ್ತರ ಭಾಗವಾಗಿದ್ದು, ಅವರಿಗಾಗಿ ಮಾಂಸ, ಪಾನೀಯ ಮತ್ತು ಔಷಧದ ಪಾತ್ರವನ್ನು ಅವು ವಹಿಸುತ್ತಿವೆ" ಎಂದು ತಿಳಿಸಿದ್ದಾನೆ. ಜಾರ್ಜ್ E. ಪೋಸ್ಟ್ ಎಂಬಾತ ಹೇಸ್ಟಿಂಗ್ಸ್' ಡಿಕ್ಷ್‌ನರಿ ಆಫ್ ದಿ ಬೈಬಲ್‌ನಲ್ಲಿ ಹೀಗೆ ಹೇಳುತ್ತಾನೆ: "ಸಾಮಾನ್ಯ ಸೌತೆಕಾಯಿಗಿಂತ ಇದು ಉದ್ದನೆಯದಾಗಿದ್ದು ಮತ್ತು ಹೆಚ್ಚು ಸಣಕಲಾಗಿದ್ದು, ಅನೇಕವೇಳೆ ಒಂದು ಅಡಿಗಿಂತ ಹೆಚ್ಚು ಉದ್ದವಿರುತ್ತದೆ ಮತ್ತು ಕೆಲವೊಮ್ಮೆ ಒಂದು ಇಂಚಿಗಿಂತ ಕಡಿಮೆ ದಪ್ಪವಿರುತ್ತದೆ, ಹಾಗೂ ಎರಡೂ ತುದಿಗಳಲ್ಲಿ ಚೂಪಾಗಿರುತ್ತದೆ."
ಉದ್ಯಮ
ಬದಲಾಯಿಸಿFAOನ ಅನುಸಾರ, 2005ರಲ್ಲಿನ ಸೌತೆಕಾಯಿ ಮತ್ತು ಗರ್ಕಿನ್‌ನ ಜಾಗತಿಕ ಉತ್ಪತ್ತಿಯ ಪೈಕಿ ಕನಿಷ್ಟಪಕ್ಷ 60%ನಷ್ಟು ಭಾಗವನ್ನು ಚೀನಾ ಉತ್ಪತ್ತಿಮಾಡಿತು; ಈ ಸಾಧನೆಯ ಬಹುದೂರದ ಸ್ಥಾನದಲ್ಲಿ ರಷ್ಯಾ, ಇರಾನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಇದ್ದವು.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (June 2009) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಬೆಳೆಯುವಿಕೆಯ ಅಧ್ಯಯನಗಳು
ಬದಲಾಯಿಸಿಸೌತೆಕಾಯಿಯನ್ನು ಬೆಳೆಯುವುದರ ವಾಣಿಜ್ಯೋದ್ದೇಶದ ವಾಡಿಕೆಯ ವಿಧಾನವು ಅಜೈವಿಕ (ತಯಾರಿಸಲ್ಪಟ್ಟ) ರಸಗೊಬ್ಬರದ ಬಳಕೆಯನ್ನು ಒಳಗೊಳ್ಳುತ್ತದೆ.
ಉಲ್ಲೇಖಗಳು
ಬದಲಾಯಿಸಿಟಿಪ್ಪಣಿಗಳು
ಬದಲಾಯಿಸಿ- ↑ Daily Mail
- ↑ doi:10.1038/ng.475
This citation will be automatically completed in the next few minutes. You can jump the queue or expand by hand - ↑ "www.practicallyedible.com". Archived from the original on 2010-03-22. Retrieved 2011-01-10.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ articles.sfgate.com Archived 2012-01-19 ವೇಬ್ಯಾಕ್ ಮೆಷಿನ್ ನಲ್ಲಿ. ವೈಲ್ಡ್ ಕ್ಯುಕಂಬರ್ಸ್ ಗಾಟ್ ಯು ಇನ್ ಎ ಪಿಕಲ್?
- ↑ [೧] Archived 2011-07-24 ವೇಬ್ಯಾಕ್ ಮೆಷಿನ್ ನಲ್ಲಿ. ಸೇಬು ಸೌತೆಕಾಯಿ
- ↑ Daily Mail - ದಿ 'ಸೀ-ಥ್ರೂ' ಕ್ಯುಕಂಬರ್ಸ್ ವಿತ್ ನೋ ಸ್ಕಿನ್ ಟು ಎನ್‌ಕಂಬರ್ ದೆಮ್
- ↑ ಕ್ಯುಕಂಬರ್, ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಇನ್‌ಕಾರ್ಪೊರೇಟೆಡ್, 2008.
- ↑ ೮.೦ ೮.೧ ಡಾಯ್‌ಜೋಡ್ 2001: 281
- ↑ ಪ್ಲೈನಿ ದಿ ಎಲ್ಡರ್, ಪುಸ್ತಕ XX. ರೆಮಿಡೀಸ್ ಡಿರೈವ್ಡ್ ಫ್ರಂ ದಿ ಗಾರ್ಡನ್ ಪ್ಲ್ಯಾಂಟ್ಸ್ ಅಧ್ಯಾಯ 2. (1.) -- ದಿ ವೈಲ್ಡ್ ಕ್ಯುಕಂಬರ್; ಟ್ವೆಂಟಿ-ಸಿಕ್ಸ್ ರೆಮಿಡೀಸ್.
- ↑ ಪ್ಲೈನಿ ದಿ ಎಲ್ಡರ್, ಪುಸ್ತಕ XX, ಅಧ್ಯಾಯ 5, ದಿ "ಆಂಗ್ವಿನ್ ಆರ್ ಎರಾಟಿಕ್ ಕ್ಯುಕಂಬರ್" (ಪುಸ್ತಕ XX, ಅಧ್ಯಾಯ 4. (2.))
ಆಕರ ಮೂಲಗಳು
ಬದಲಾಯಿಸಿwidth="33%" valign="top" | * ಎ ವೆರಿ ಬ್ರೀಫ್ ಹಿಸ್ಟರಿ ಆಫ್ ದಿ ಕ್ಯುಕಂಬರ್ ಇನ್ ಅಮೆರಿಕಾ
|
width="33%" valign="top" |
|
width="33%" valign="top" |
|
width="33%" valign="top" |
|
ಬಾಹ್ಯ ಕೊಂಡಿಗಳು
ಬದಲಾಯಿಸಿ- "Cucumis sativus". Integrated Taxonomic Information System. Retrieved January 30, 2006.
- ಪ್ಲ್ಯಾಂಟ್ ಪ್ರೊಫೈಲ್ ಅಟ್ ದಿ ಪ್ಲ್ಯಾಂಟ್ಸ್ ಡೇಟಾಬೇಸ್ - US ಸಂಸ್ಥಾನದ ವತಿಯಿಂದ ಕೈಗೊಳ್ಳಲಾದ ವರ್ಗೀಕರಣ ಮತ್ತು ವಿತರಣೆಯ ಕುರಿತು ತೋರಿಸುತ್ತದೆ.
- ದಿ ಆರ್ಟ್ ಆಫ್ ಪ್ರಮೋಟಿಂಗ್ ದಿ ಗ್ರೋತ್ ಆಫ್ ದಿ ಕ್ಯುಕಂಬರ್ ಅಂಡ್ ಮೆಲನ್ ; ಥಾಮಸ್ ವ್ಯಾಟ್ಕಿನ್ಸ್ ಬರೆದಿರುವಂಥದ್ದು
- ಕ್ಯುಕಂಬರ್ ನ್ಯೂಟ್ರಿಷನ್ ಇನಫರ್ಮೇಷನ್ Archived 2015-06-10 ವೇಬ್ಯಾಕ್ ಮೆಷಿನ್ ನಲ್ಲಿ.; USDA SR22 ದತ್ತಾಂಶ ಸಂಗ್ರಹದಿಂದ ಪಡೆದಿರುವಂಥದ್ದು