ಮೂಲಂಗಿ
Radish 3371103037 4ab07db0bf o.jpg
Radishes
Scientific classification
Kingdom:
(unranked):
(unranked):
Eudicots
(unranked):
Order:
Family:
Genus:
Species:
R. sativus
Binomial name
Raphanus sativus

ಮೂಲಂಗಿ (ರ್‍ಯಾಫ಼್ಯಾನಸ್ ಸ್ಯಾಟೀವಸ್) ಯೂರೋಪ್‍ನಲ್ಲಿ ಪೂರ್ವ-ರೋಮನ್ ಕಾಲದಲ್ಲಿ ಒಗ್ಗಿಸಲಾದ ಬ್ರ್ಯಾಸಿಕೇಸಿಯಿ ಕುಟುಂಬದ ಒಂದು ತಿನ್ನಬಹುದಾದ ಗಡ್ಡೆತರಕಾರಿ.[೧][೨] ಇದನ್ನು ವಿಶ್ವಾದ್ಯಂತ ಬೆಳೆಸಲಾಗುತ್ತದೆ ಮತ್ತು ಸೇವಿಸಲಾಗುತ್ತದೆ. ಮೂಲಂಗಿ ಗಾತ್ರ, ಬಣ್ಣ ಮತ್ತು ಬೇಕಾಗುವ ಬೇಸಾಯ ಸಮಯಾವಧಿಯಲ್ಲಿ ಬದಲಾಗುವ ಅನೇಕ ಬಗೆಗಳನ್ನು ಹೊಂದಿದೆ. ಇದು ಯುರೋಪ್ ಹಾಗೂ ಏಷ್ಯದ ಮೂಲವಾಸಿ. ಇಂದು ಪ್ರಪಂಚಾದ್ಯಂತ ಕೃಷಿಯಲ್ಲಿದೆ.

ಮೂಲಂಗಿ ಸಸ್ಯಾಹಾರಿಗಳ ಬಹು ಬಳಕೆಯ ತರಕಾರಿ. ಸಲಾಡ್ ಒಂದೇ ಅಲ್ಲ ಬಗೆ ಬಗೆಯಲ್ಲಿ ಇದನ್ನು ಸೇವಿಸಲಾಗುತ್ತದೆ. ಮೂಲಂಗಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿದೆ. ಮೂಲಂಗಿ ಕೇವಲ ರುಚಿಯೊಂದೇ ಅಲ್ಲ, ಇದರಲ್ಲಿ ರೋಗನಿರೋಧಕ ಶಕ್ತಿ ಇದೆ.[೩]

ಸಸ್ಯ ವಿವರಣೆಸಂಪಾದಿಸಿ

ಇದೊಂದು ಏಕವಾರ್ಷಿಕ ಅಥವಾ ದ್ವೈವಾರ್ಷಿಕ ಮೂಲಿಕೆ ಗಿಡ. ಬಿಳಿಯ ಇಲ್ಲವೆ ಕೆಂಪು ಬಣ್ಣದ ಉರುಳೆಯಾಕಾರದ ಚೂಪು ತುದಿಯ ತಾಯಿಬೇರು ಇದರ ಪ್ರಮುಖ ಲಕ್ಷಣಗಳಲ್ಲೊಂದು. ಇದೇ ತರಕಾರಿಯಾಗಿ ಬಳಕೆಯಾಗುವ ಭಾಗ. ಗಿಡ ಚಿಕ್ಕದಿರುವಾಗ ಬೇರಿನ ಬುಡದಿಂದ (ಅಂದರೆ ಮಣ್ಣಿನ ಪಾತಳಿಯ ಕಡೆಗಿರುವ ಭಾಗ) ಹತ್ತಾರು ಎಲೆಗಳು ಮೇಲ್ಮುಖವಾಗಿ ಬೆಳೆಯುತ್ತವೆ. ಸುಮಾರು 20 ಸೆಂಮೀ ಉದ್ದವಿರುವ ಇವು ಬುಡಭಾಗದಿಂದ ತುದಿಯೆಡೆಗೆ ಹೋದಂತೆ ಅಗಲವಾಗುತ್ತ ಹೋಗುವ ಎಲೆಯಲಗನ್ನು ಪಡೆದಿವೆ. ಎಲೆಯಂಚು ಹಲವಾರು ಹಾಲೆಗಳಾಗಿ ಸೀಳಿದೆ. ಗಿಡ ಬೆಳೆದಂತೆ ಸರಳವಾದ ಇಲ್ಲವೆ ಕೊಂಚ ಕವಲೊಡೆದ ಕಾಂಡ ಮೇಲಕ್ಕೆ ವರ್ಧಿಸುತ್ತದೆ. ಇದರ ಮೇಲೂ ಸರಳವಾದ ಮತ್ತು ರೇಖೀಯ ಆಕಾರದ ಎಲೆಗಳು ಹುಟ್ಟುತ್ತವೆ. ಹೂಗಳು ಕಾಂಡ ಕವಲುಗಳ ತುದಿಯಲ್ಲಿ ಸ್ಥಿತವಾಗಿರುವ ಅಸೀಮಾಕ್ಷಿ (ರೇಸಿಮೋಸ್) ಹೂಗೊಂಚಲುಗಳಲ್ಲಿ ಅರಳುತ್ತವೆ. ಇವುಗಳ ಬಣ್ಣ ಬಿಳಿ ಇಲ್ಲವೆ ತಿಳಿಪಾಟಲ. ಫಲಗಳು 25-90 ಸೆಂಮೀ ಉದ್ದ ಇದ್ದು ಚೂಪಾದ ತುದಿಯನ್ನು ಪಡೆದಿವೆ. ಒಳಗೆ 2-8 ಬೀಜಗಳುಂಟು. ಬೀಜಗಳಿರುವ ಭಾಗ ಗುಂಡಗೆ ಉಬ್ಬಿದ್ದು ಉಳಿದಭಾಗ ತೆಳ್ಳಗಿರುವುದರಿಂದ, ಕಾಯಿ ಮಣಿಸರದಂತೆ ಕಾಣುತ್ತದೆ.

ಮೂಲಂಗಿ ಬಗೆಗಳುಸಂಪಾದಿಸಿ

ಮೂಲಂಗಿಯಲ್ಲಿ ಹಲವಾರು ಬಗೆಗಳಿವೆ. ಇವುಗಳ ಬೇರಿನ ಬಣ್ಣ, ಆಕಾರ, ಗಾತ್ರಗಳಲ್ಲೂ, ಬಲಿಯಲು ಹಿಡಿಯುವ ಕಾಲಾವಧಿಯಲ್ಲೂ, ರುಚಿಯಲ್ಲೂ ಗಮನಾರ್ಹ ವ್ಯತ್ಯಾಸಗಳುಂಟು. ಅಂತೆಯೇ ಮೂಲತಃ ಯಾವ ಪ್ರದೇಶದಿಂದ ಇವು ಬಂದವು ಎನ್ನುವುದರ ಆಧಾರದ ಮೇಲೆ ಇವುಗಳಲ್ಲಿ ಯುರೋಪಿಯನ್, ಜಪಾನೀ ಹಾಗೂ ಭಾರತೀಯ ಎಂಬ ಮೂರು ಪ್ರಧಾನ ಗುಂಪುಗಳನ್ನು ಗುರುತಿಸಬಹುದು. ಇವನ್ನು ಸ್ಥೂಲವಾಗಿ ರ‍್ಯಾಫನಿಸ್ಟ್ರಮ್, ರ‍್ಯಾಫನಿಸ್ಟ್ರಾಯ್‌ಡಿಸ್ ಮತ್ತು ಇಂಡಿಕಸ್ ಬಗೆಗಳು ಎಂದು ನಿರ್ದೇಶಿಸಲಾಗುತ್ತದೆ. ಇವು ಕೂಡ ಶುದ್ಧಬಗೆಗಳಾಗಿರದೆ ಹಲವಾರು ಕಾಡುಬಗೆಯ ಮೂಲಂಗಿ ತಳಿಗಳ (ಮ್ಯಾರಿಟಿಮಸ್, ಲ್ಯಾಂಡ್ರ, ರಾಸ್ಟ್ರೇಟಸ್ ಮುಂತಾದವು) ವರ್ಣಸಂಕರದಿಂದ ಸ್ವಾಭಾವಿಕವಾಗಿ ರೂಪಿತವಾದವು ಎಂದು ತಿಳಿಯಲಾಗಿದೆ. ಆದ್ದರಿಂದ ಇವೆಲ್ಲವನ್ನೂ ರ‍್ಯಾ. ಸೇಟಿವಸ್ ಎಂಬ ಒಂದೇ ಗುಂಪಿನ ವಿಭಿನ್ನ ತಳಿಗಳೆಂದೇ ಪರಿಗಣಿಸಬೇಕು ಎಂಬುದು ಬಹುತೇಕ ತಜ್ಞರ ಅಭಿಪ್ರಾಯ. ಅಲ್ಲದೆ ಮೂಲಂಗಿಯನ್ನು ಕೋಸು ಮತ್ತು ಬ್ರಸೆಲ್ಸ್ ಸ್ಟ್ರೌಟ್‌ಗಳೊಂದಿಗೆ ಅಂತರಜಾತೀಯ ಅಡ್ಡತಳಿ ಎಬ್ಬಿಸಿ ಪಡೆದಿರುವಂಥ ಸಂಕರ ತಳಿಗಳೂ ಇವೆ. ಆದರೆ ಇವು ವಾಣಿಜ್ಯದೃಷ್ಟಿಯಿಂದ ಮುಖ್ಯವಲ್ಲ.

ಕೃಷಿಯಲ್ಲಿ ಮುಖ್ಯವೆನಿಸಿರುವ ಮೂಲಂಗಿ ಬಗೆಗಳು ಇವು : ಜೋನ್‌ಪುರಿ, ಬಡಾಮಾಸಿ, ಪೂಸಾದೇಸಿ ಬಿಳಿ, ಚೈನಾ ರೋಸ್, ಚೈನಿಸ್ ಪಿಂಕ್, ಜಪಾನೀ ಬಿಳಿ, ಫ್ರೆಂಚ್ ಬ್ರೆಕ್‌ಫಾಸ್ಟ್, ಸ್ಕಾರ್ಲೆಟ್ ಗ್ಲೋಬ್, ಹ್ವೈಟ್ ಐಸಿಕಲ್, ಪರ್ಪಲ್ ಟಾಪ್ ಹ್ವೈಟ್ ಮತ್ತು ಮಿಯಾಶೀಗೆ.

ಬೇಸಾಯಸಂಪಾದಿಸಿ

ಭಾರತದಲ್ಲಿ ಕರಾವಳಿ ಮೈದಾನಗಳಿಂದ ಹಿಡಿದು ಹಿಮಾಲಯದ 3000 ಮೀ ಎತ್ತರದ ಪ್ರದೇಶಗಳವರೆಗೆ ಮೂಲಂಗಿ ಬೇಸಾಯದಲ್ಲಿದೆ. ಪ್ರಧಾನವಾಗಿ ಇದು ತಂಪು ಹವೆಯ ಬೆಳೆಯಾದರೂ ವರ್ಷವಿಡೀ ಬೆಳೆಯಬಹುದು. ಮರಳುಮಿಶ್ರಿತ ಗೋಡುಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬಿತ್ತನೆ ಬೀಜಗಳ ಮೂಲಕ ನೇರವಾಗಿ ಜಮೀನಿನಲ್ಲೊ ಇಲ್ಲವೆ ಒಟ್ಲು ಪಾತಿಗಳಲ್ಲೊ ಬೀಜ ಬಿತ್ತಬಹುದು.

ಮೂಲಂಗಿಗೆ ರೋಗರುಜಿನಗಳ ಬಾಧೆ ಕಡಿಮೆ. ಬೀಜ ಬಿತ್ತಿದ 30-50 ದಿವಸಗಳ ತರುವಾಯ ಬೇರು ಕೀಳಲು ಸಿದ್ಧವಾಗುತ್ತದೆ. ಇಳುವರಿಯಲ್ಲಿ ಬಗೆಗಳನ್ನು ಅನುಸರಿಸಿ ವ್ಯತ್ಯಾಸವುಂಟು. ಭಾರತದಲ್ಲಿ ಯುರೋಪಿಯನ್ ತಳಿಗಳು ಹೆಕ್ಟೇರಿಗೆ 7500 ಕೆಜಿ ಇಳುವರಿ ಕೊಟ್ಟರೆ ಸ್ಥಳೀಯ ತಳಿಗಳು 15,000-20,000 ಕೆಜಿ ಕೊಡುತ್ತವೆ.

ಪೋಷಕಾಂಶಗಳುಸಂಪಾದಿಸಿ

೧೦೦ ಗ್ರಾಂ ಮೂಲಂಗಿಯಲ್ಲಿರುವ ಪೋಷಕಾಂಶಗಳು

ಸಾರಜನಕ ೦.೭ ಗ್ರಾಂ
ಪಿಷ್ಟ ೩.೪ ಗ್ರಾಂ
ಮೇದಸ್ಸು ೦.೧ ಗ್ರಾಂ
ಖನಿಜಾಂಶ ೦.೬ ಗ್ರಾಂ
ನಾರಿನಾಂಶ ೦.೮ ಗ್ರಾಂ
ರಂಜಕ ೨೨ ಗ್ರಾಂ
ಸೋಡಿಯಂ ೩೩ ಮಿಲಿಗ್ರಾಂ
ಪೊಟ್ಯಾಷಿಯಂ ೧೩೮ ಮಿಲಿಗ್ರಾಂ
ರೈಬೋಫ್ಲೆವಿನ್ ೦.೦೨ ಮಿಲಿಗ್ರಾಂ
ಆಕ್ಸಾಲಿಕ್ ಆಮ್ಲ ಮಿಲಿಗ್ರಾಂ
ಎ ಜೀವಸತ್ವ ಐ. ಯು.
ಸಿ ಜೀವಸತ್ವ ೧೫ ಮಿಲಿಗ್ರಾಂ
ಸುಣ್ಣ ೫೦ ಮಿಲಿಗ್ರಾಂ
ಕಬ್ಬಿಣ ೦.೪ ಮಿಲಿಗ್ರಾಂ
ಥಯಾಮಿನ್ ೦.೪ ಮಿಲಿಗ್ರಾಂ

ಪೌಷ್ಟಿಕಾಂಶಸಂಪಾದಿಸಿ

ಇದು ಹಲವಾರು ಪೌಷ್ಟಿಕಾಂಶಗಳಿಂದ ಕೂಡಿದ್ದು, ವಿವರ ಇಲ್ಲಿದೆ.

Radishes, raw
Nutritional value per 100 g (3.5 oz)
ಆಹಾರ ಚೈತನ್ಯ 66 kJ (16 kcal)
ಶರ್ಕರ ಪಿಷ್ಟ 3.4 g
- ಸಕ್ಕರೆ 1.86 g
- ಆಹಾರ ನಾರು 1.6 g
ಕೊಬ್ಬು 0.1 g
Protein 0.68 g
Thiamine (vit. B1) 0.012 mg (1%)
Riboflavin (vit. B2) 0.039 mg (3%)
Niacin (vit. B3) 0.254 mg (2%)
Pantothenic acid (B5) 0.165 mg (3%)
Vitamin B6 0.071 mg (5%)
Folate (vit. B9) 25 μg (6%)
Vitamin C 14.8 mg (18%)
ಕ್ಯಾಲ್ಸಿಯಂ 25 mg (3%)
ಕಬ್ಬಿಣ ಸತ್ವ 0.34 mg (3%)
ಮೆಗ್ನೇಸಿಯಂ 10 mg (3%)
ಮ್ಯಾಂಗನೀಸ್ 0.069 mg (3%)
ರಂಜಕ 20 mg (3%)
ಪೊಟಾಸಿಯಂ 233 mg (5%)
ಸತು 0.28 mg (3%)
Fluoride 6 µg
Link to USDA Database entry
Percentages are roughly approximated
using US recommendations for adults.
Source: USDA Nutrient Database

ಉಪಯೋಗಗಳುಸಂಪಾದಿಸಿ

ಮೂಲಂಗಿಯನ್ನು ಹಸಿತರಕಾರಿಯಾಗಿ ಇಲ್ಲವೆ ಬೇಯಿಸಿ ತಿನ್ನುವುದಿದೆ. ಇದರ ಎಲೆಗಳನ್ನು ಸಹ ಹಸಿಯಾಗಿ ಅಥವಾ ಬೇಯಿಸಿ ಸೇವಿಸುವುದುಂಟು. ಎಲೆಗಳು ಕಾಲ್ಸಿಯಮ್, ಕಬ್ಬಿಣ, ಆಸ್ಕಾರ್ಬಿಕ್ ಆಮ್ಲ ಹಾಗೂ A ವಿಟಮಿನ್ನಿನ ಒಳ್ಳೆಯ ಆಕರಗಳೆನಿಸಿವೆ. ಬೇರಿನಲ್ಲಿ ಕೂಡ ಹೇರಳ ಮೊತ್ತದಲ್ಲಿ ಆಸ್ಕಾರ್ಬಿಕ್ ಆಮ್ಲ ಇದೆ. ಮೂಲಂಗಿಗೆ ಒಂದು ಬಗೆಯ ಘಾಟು ರುಚಿಯಿದೆಯಷ್ಟೆ ಇದಕ್ಕೆ ಕಾರಣ ಇದರೊಳಗೆ ಇರುವ ಹಲವಾರು ಬಗೆಯ ಐಸೊತಯೊಸಯಸೇಟ್ ಎಂಬ ಚಂಚಲ ತೈಲಗಳು (ಮಸ್ಟರ್ಡ್ ಆಯಿಲ್ಸ್). ಅಲ್ಲದೆ ಎಲೆಗಳಲ್ಲಿ ಸುಮಾರು 22 ಬಗೆಯ ಅಮೈನೋ ಆಮ್ಲಗಳಿವೆಯೆನ್ನಲಾಗಿದೆ. ಮೂಲಂಗಿಯ ಕಾಯಿಗಳನ್ನು ಸಹ ತರಕಾರಿಯಾಗಿ ಬಳಸುವುದಿದೆ. ದನಗಳಿಗೆ ಮೂಲಂಗಿ ಒಳ್ಳೆಯ ಮೇವು.[೪] ಬೀಜದ ಹಿಂಡಿಯನ್ನು ಗೊಬ್ಬರವಾಗಿ ಬಳಸಬಹುದೆನ್ನಲಾಗಿದೆ.

ಹೋಮಿಯೋಪತಿ ಪದ್ಧತಿಯಲ್ಲಿ ತಲೆನೋವು, ನಿದ್ರಾರಾಹಿತ್ಯ, ದೀರ್ಘಕಾಲದ ಅತಿಸಾರ ಮುಂತಾದ ರೋಗಚಿಕಿತ್ಸೆಗೆ ಉಪಯೋಗಿಸುತ್ತಾರೆ. ಜಠರಶೂಲೆಗಳಿಗೆ ಬೇರು ಒಳ್ಳೆಯ ಮದ್ದು. ಹಸಿಯ ಎಲೆಗಳ ರಸ ಮೂತ್ರೋತ್ತೇಜಕ ಹಾಗೂ ಭೇದಿಕಾರಕ. ಬೀಜಗಳಿಗೆ ಕಫಹರ, ಮೂತ್ರೋತ್ತೇಜಕ, ವಾತಹರ ಮತ್ತು ಜೀರ್ಣಕ ಗುಣಗಳಿವೆ.

  • ಮೂಲಂಗಿ ಸೇವನೆಯಿಂದ ಅದರಲ್ಲಿರುವ ವಿಟಿಮಿನ್ ಸಿ ನಮ್ಮ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದಲ್ಲದೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದು ಕ್ಯಾನ್ಸರ್ ಬರುವುದನ್ನೂ ತಡೆಯಬಲ್ಲದು.
  • ಕೆಂಪು ರಕ್ತಕಣಗಳ ಬೆಳವಣಿಗೆ ಹಾಗೂ ಕಾಮಾಲೆ ರೋಗದ ಚಿಕಿತ್ಸೆಗೆ ಸಹಕಾರಿ. ಮೂಲಂಗಿಯ ಬೇರಿನ ಭಾಗ ಮಾತ್ರವಲ್ಲ, ಅದರ ಸೊಪ್ಪಿನ ಬಳಕೆ ಕೂಡ ಉಪಯುಕ್ತ.
  • ಮೂಲಂಗಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಅನುಭವವವನ್ನೇ ನೀಡುತ್ತದೆ. ಅಂದರೆ ಅದು ದೇಹದ ತೂಕವನ್ನು ನಿಯಂತ್ರಿಸುತ್ತದೆ. ತೆಳ್ಳಗಾಗಬೇಕು ಎನ್ನುವವರು, ತಮ್ಮ ತಿನ್ನುವ ಚಟವನ್ನು ನಿಯಂತ್ರಿಸಿಕೊಳ್ಳಬೇಕು ಎಂಬುವವರಿಗೆ ಮೂಲಂಗಿ ಸಹಕಾರಿಯಾಗುತ್ತದೆ.
  • ಇನ್ನು ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಬಳಸಲು ವೈದ್ಯರೇ ಸಲಹೆ ನೀಡುತ್ತಾರೆ.
  • ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುಚೀಕರಿಸಲು ಸಹಕಾರಿಯಾದ ಮೂಲಂಗಿ ಸೇವನೆಯಿಂದ ಉರಿಮೂತ್ರ ಮುಂತಾದ ಮೂತ್ರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಹೊಂದಲು ಅನುವಾಗುತ್ತದೆ.
  • ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಕಾರಿ.
  • ಅಸ್ತಮ ಮುಂತಾದ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಸೇವನೆ ಒಳ್ಳೆಯದು.
  • ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.
  • ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.
  • ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
  • ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು, ಮೂಗು, ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿದರೆ ಒಳ್ಳೆಯದು.

ಛಾಯಾಂಕಣಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. Britannica, The Editors of Encyclopaedia. "radish". Encyclopedia Britannica, 24 Mar. 2023, https://www.britannica.com/plant/radish. Accessed 25 May 2023.
  2. Feliks, Jehuda "Radish ." Encyclopaedia Judaica. . Encyclopedia.com. 5 May. 2023 <https://www.encyclopedia.com>.
  3. ಮೂಲಂಗಿ: ಮೂಗು ಮುರಿಯದಿರಿ
  4. Fitzgerald, J. J.; Black, W. J. M. (1984). "Finishing Store Lambs on Green Forage Crops: 1. A Comparison of Rape, Kale and Fodder Radish as Sources of Feed for Finishing Store Lambs in Autumn". Irish Journal of Agricultural Research. 23 (2/3): 127–136. JSTOR 25556085.

ಬಾಹ್ಯ ಸಂಪರ್ಕಗಳುಸಂಪಾದಿಸಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೂಲಂಗಿ&oldid=1170936" ಇಂದ ಪಡೆಯಲ್ಪಟ್ಟಿದೆ