ಬೇರು
ಗಿಡದ ಒಂದು ಭಾಗ
ನಾಳೀಯ ಸಸ್ಯಗಳಲ್ಲಿ, ಬೇರು ಸಾಮಾನ್ಯವಾಗಿ ಮಣ್ಣಿನ ಮೇಲ್ಮೈ ಕೆಳಗೆ ಇರುವ ಸಸ್ಯದ ಅಂಗ. ಬೇರುಗಳು ವಾಯವೀಯ ಅಥವಾ ಗಾಳಿಗೊಡ್ಡಲ್ಪಟ್ಟವು ಕೂಡ ಆಗಿರಬಲ್ಲವು, ಅಂದರೆ ನೆಲದ ಮೇಲೆ ಬೆಳೆಯುವಂಥ ಅಥವಾ ವಿಶೇಷವಾಗಿ ನೀರಿನ ಮೇಲೆ ಬೆಳೆಯುವಂಥ. ಇದಲ್ಲದೆ, ಸಾಮಾನ್ಯವಾಗಿ ನೆಲದ ಕೆಳಗೆ ಕಂಡುಬರುವ ಕಾಂಡವೂ ಅಸಾಧಾರಣವಲ್ಲ (ಬೇರುಕಾಂಡ ನೋಡಿ). ಹಾಗಾಗಿ, ಬೇರನ್ನು ಅತ್ಯುತ್ತಮವಾಗಿ ಸಸ್ಯ ಕಾಯದ ಎಲೆಗಳು, ಗೆಣ್ಣುಗಳನ್ನು ಬಿಡದ ಭಾಗಗಳು ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ, ಕಾಂಡಗಳು ಮತ್ತು ಬೇರುಗಳ ನಡುವೆ ಪ್ರಮುಖ ಆಂತರಿಕ ರಾಚನಿಕ ವ್ಯತ್ಯಾಸಗಳಿವೆ.
ಬೇರಿನ ನಾಲ್ಕು ಪ್ರಮುಖ ಕಾರ್ಯಗಳೆಂದರೆ 1) ನೀರು ಮತ್ತು ಅಜೈವಿಕ ಪೋಷಕಾಂಶಗಳ ಹೀರಿಕೆ, 2) ಸಸ್ಯ ಕಾಯವನ್ನು ನೆಲದಲ್ಲಿ ಭದ್ರವಾಗಿ ನಿಲ್ಲಿಸುವುದು, ಮತ್ತು ಅದನ್ನು ಆಧರಿಸುವುದು, 3) ಆಹಾರ ಮತ್ತು ಪೋಷಕಾಂಶಗಳ ಶೇಖರಣೆ, 4) ಸಸ್ಯಕ ಸಂತಾನೋತ್ಪತ್ತಿ ಮತ್ತು ಇತರ ಸಸ್ಯಗಳೊಂದಿಗೆ ಸ್ಪರ್ಧೆ.