ಅತಿ ರಕ್ತದೊತ್ತಡ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಕ ರಕ್ತದೊತ್ತಡ‌ವನ್ನು ನೋಡಿ.

ರಕ್ತದೊತ್ತಡ (BP)ಎಂದರೆ ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡ (ಪ್ರತಿಭಾಗಕ್ಕೆ ರಕ್ತ ಹರಿಯುವ ವೇಗ) ಮತ್ತು ಇದು ಜೈವಿಕಕ್ರಿಯೆಯ ಪ್ರಧಾನ ಗುಣವೂ ಹೌದು.ಅಪಧಮನಿಗಳು ಮತ್ತು ಲೋಮನಾಳಗಳ ಮೂಲಕ ಹೃದಯದಿಂದ ದೇಹದ ಇತರ ಭಾಗಗಳಿಗೆ ಮತ್ತು ಅಭಿಧಮನಿಗಳ ಮೂಲಕ ಹೃದಯದ ಕಡೆಗೆ ರಕ್ತ ಹರಿಯುವಾಗ ರಕ್ತಪರಿಚಲನೆ ಒತ್ತಡ ಕಡಿಮೆಯಾಗುತ್ತಾ ಬರುತ್ತದೆ.ರಕ್ತದೊತ್ತಡ ಪದಕ್ಕೆ ಸಾಮಾನ್ಯನಾಗಿ ತೋಳಿನ ಅಪಧಮನಿ ಒತ್ತಡ ಎಂಬರ್ಥವೂ ಇದೆ; ಅದು ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತವನ್ನು ಸಾಗಿಸುವ ಎಡ ತೋಳಿನ ಮೇಲ್ಭಾಗ ಅಥವಾ ಬಲ ಭಾಗದಲ್ಲಿರುವ ಪ್ರಮುಖ ರಕ್ತನಾಳ. ಕೆಲವೊಮ್ಮೆ ರಕ್ತದೊತ್ತಡವನ್ನು ದೇಹದ ಇತರ ಭಾಗಗಳಿಂದ ಅಳೆಯುತ್ತಾರೆ, ಉದಾಹರಣೆಗೆ ಕಾಲಿನ ಹಿಮ್ಮಡಿಯ ಗಂಟು. ತೋಳಿನ ರಕ್ತದೊತ್ತಡದ ಜೊತೆ ಹಿಮ್ಮಡಿಯ ಗಂಟಿನ ಮುಖ್ಯ ಅಪಧಮನಿಯ ರಕ್ತದೊತ್ತಡದ ಮಾಪನದ ಅನುಪಾತ ಹಿಮ್ಮಡಿ ತೋಳಿನ ಒತ್ತಡ ಸೂಚಿಕೆ (ABPI) ಯಾಗಿದೆ.

ಸ್ಪಿಗ್ಮೋಮಾನಾಮೀಟರ್ , ಅಪಧಮನಿಯ ಒತ್ತಡವನ್ನು ಅಳೆಯುವ ಉಪಕರಣ

ಮಾಪನ ಬದಲಾಯಿಸಿ

 
ವೈದ್ಯಕೀಯ ವಿದ್ಯಾರ್ಥಿಯೊಬ್ಬನು ಸ್ಪಿಗ್ಮೋಮಾನಾಮೀಟರ್ ಮತ್ತು ಸ್ಟೆತೊಸ್ಕೋಪ್ ಬಳಸಿ ರಕ್ತದೊತ್ತಡ ತಪಾಸಣೆ ಮಾಡುತ್ತಾನೆ.

ಅಪಧಮನಿಯ ಒತ್ತಡವನ್ನು ಸರ್ವೇ ಸಾಮಾನ್ಯವಾಗಿ ಸ್ಪಿಗ್ಮೋಮಾನಾಮೀಟರ್ ನಿಂದ ಅಳೆಯುತ್ತಾರೆ, ಪಾದರಸ ಹೊಂದಿರುವ ಸ್ತಂಭಾಕಾರದ ಈ ಉಪಕರಣ ರಕ್ತ ಪರಿಚಲನೆಯ ಒತ್ತಡವನ್ನು ಪ್ರತಿಬಿಂಬಿಸಲು ಐತಿಹಾಸಿಕ ಕಾಲದಿಂದಲೂ ಬಳಕೆಯಲ್ಲಿತ್ತು(ಅಷ್ಟೇನೂ ತೀವ್ರತೆ ಹೊಂದಿರದ ಮಾಪನ) . ಪ್ರಸ್ತುತ ನಿರ್ದ್ರವ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳು ಪಾದರಸವನ್ನು ಬಳಸದೇ ಇದ್ದರೂ, ರಕ್ತದೊತ್ತಡದ ಮೌಲ್ಯಗಳನ್ನು ಪಾದರಸದ ಮಿಲಿಮೀಟರ್‌ (mmHg)ಗಳಲ್ಲೇ ಹೇಳಲಾಗುತ್ತಿದೆ.

ಪ್ರತಿಬಾರಿ ಹೃದಯ ಬಡಿಯುವಾಗ, ಸಂಕೋಚನದ ಮತ್ತು ವ್ಯಾಕೋಚನದ ಒತ್ತಡಗಳ ನಡುವೆ ರಕ್ತದೊತ್ತಡ ವ್ಯತ್ಯಾಸವಾಗುತ್ತದೆ. ಸಂಕೋಚನದ ಒತ್ತಡವೆಂದರೆ ಅಪಧಮನಿಗಳಲ್ಲಿ ಕಾಣಿಸಿಕೊಳ್ಳುವ ಗರಿಷ್ಠ ಒತ್ತಡ , ಹೃತ್ಕುಹರಗಳು ಕುಗ್ಗಿಕೊಂಡು ಹೃದಯ ಆವರ್ತನದ ಕೊನೆಯ ಹಂತದಲ್ಲಿ ಇದು ಸಂಭವಿಸುತ್ತದೆ. ವ್ಯಾಕೋಚನದ ಒತ್ತಡವೆಂದರೆ ಅಪಧಮನಿಗಳಲ್ಲಿ ಕಾಣಿಸಿಕೊಳ್ಳುವ ಕನಿಷ್ಠ ಒತ್ತಡ, ಹೃತ್ಕುಹರಗಳಲ್ಲಿ ರಕ್ತ ತುಂಬಿಕೊಂಡು ಹೃದಯ ಆವರ್ತನದ ಪ್ರಕ್ರಿಯೆ ಆರಂಭವಾದಾಗ ಇದು ಸಂಭವಿಸುತ್ತದೆ. ನಿದ್ರಾ ಸ್ಥಿತಿಯಲ್ಲಿ ರಕ್ತದೊತ್ತಡದ ಸಾಮಾನ್ಯ ಪ್ರಮಾಣ ಎಷ್ಟಿರಬೇಕೆಂಬುದಕ್ಕೆ ಒಂದು ಉದಾಹರಣೆಯೆಂದರೆ, ಆರೋಗ್ಯಪೂರ್ಣ ವಯಸ್ಕ ವ್ಯಕ್ತಿಯ ಸಂಕೋಚನ 115 mmHg ಇರಬೇಕು ಮತ್ತು 75 mmHg ವ್ಯಾಕೋಚನವಿರಬೇಕು. (115/75 mmHg ಬರೆಯಲಾಗಿದೆ, ಮತ್ತು "ವನ್ ಫಿಫ್ಟೀನ್ ಓವರ್ ಸೆವೆಂಟಿ-ಫೈವ್" ಎಂದು [US ನಲ್ಲಿ]ಹೇಳಲಾಗುತ್ತದೆ) ಸಂಕೋಚನ ಮತ್ತು ವ್ಯಾಕೋಚನ ಒತ್ತಡಗಳ ನಡುವಣ ವ್ಯತ್ಯಾಸವನ್ನು ನಾಡಿ ಒತ್ತಡವೆನ್ನುತ್ತಾರೆ.

ಅಪಧಮನಿಯ ಸಂಕೋಚನದ ಮತ್ತು ವ್ಯಾಕೋಚನದ ರಕ್ತದೊತ್ತಡಗಳು ಸ್ಥಿರವಲ್ಲ, ಆದರೆ ಒಂದು ಹೃದಯ ಬಡಿತದಿಂದ ಇನ್ನೊಂದಕ್ಕೆ ಅದು ಸ್ವಾಭಾವಿಕವಾಗಿ ಬದಲಾಗುತ್ತವೆ ಮತ್ತು ದಿನದುದ್ದಕ್ಕೂ ಇರುತ್ತದೆ (ಮರುಕಳಿಸುವ ಲಯಗಳಲ್ಲಿ) ಒತ್ತಡ, ಪೌಷ್ಟಿಕತೆಯ ಅಂಶಗಳು, ಔಷಧಿಗಳು, ರೋಗ, ವ್ಯಾಯಾಮ, ಮತ್ತು ನಿಂತುಕೊಂಡ ನಂತರದ ಒಂದು ಕ್ಷಣಕ್ಕೆ ತಕ್ಕಂತೆ ಅವು ಬದಲಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಬದಲಾವಣೆಗಳು ದೊಡ್ಡ ಪ್ರಮಾಣದಲ್ಲಿರಬಹುದು.ಅಪಧಮನಿಯ ಒತ್ತಡ ಹೆಚ್ಚಾಗಿ ಅತಿರೇಕದ ಸ್ಥಿತಿಗೆ ತಲುಪುವುದನ್ನು ಅಧಿಕ ರಕ್ತದೊತ್ತಡವೆನ್ನುತ್ತಾರೆ, ಅಂತೆಯೇ ಅಪಧಮನಿಯ ಒತ್ತಡ ಕನಿಷ್ಠ ಹಂತಕ್ಕೆ ತಲುಪಿದಾಗ ಅದನ್ನು ತೀರಾ ಕಡಿಮೆ ರಕ್ತದೊತ್ತಡವೆನ್ನುತ್ತಾರೆ. ದೇಹದ ಉಷ್ಣತೆ ಮತ್ತು ನಾಡಿ ಪ್ರಮಾಣದ ಜೊತೆಗೆ, ಸಾಮಾನ್ಯವಾಗಿ ರಕ್ತದೊತ್ತಡದ ಮಾಪನಗಳನ್ನು ಮಾನಸಿಕ ಮಾನದಂಡಗಳ ಮೇಲೆ ನಡೆಸುತ್ತಾರೆ.

ಅಪಧಮನಿಯ ಒತ್ತಡಗಳನ್ನು ಆಕ್ರಮಣಶೀಲವಾಗಿ (ಸೂಕ್ಷ್ಮಗ್ರಾಹಿ ಚರ್ಮಕ್ಕೆ ಸೂಜಿಯನ್ನು ಚುಚ್ಚಿ ಆ ಮೂಲಕ ರಕ್ತನಾಳಗಳನ್ನು ತಲುಪಿ ಅಳೆಯುವುದು) ಅಥವಾ ಇದಕ್ಕೆ ಹೊರತಾಗಿ ಅಳೆಯಲು ಸಾಧ್ಯವಿದೆ.ಮೊದಲಿನ ವಿಧಾನ ಆಸ್ಪತ್ರೆಗಳಿಗೆ ಸೀಮಿತವಾಗಿದೆ.

ಏಕಮಾನಗಳು ಬದಲಾಯಿಸಿ

ರಕ್ತದೊತ್ತಡ ಮಾಪನಗೆ ಗುಣಮಟ್ಟದ ಏಕಮಾನ mmHg (ಪಾದರಸದ ಮಿಲಿಮೀಟರ್). ಉದಾಹರಣೆಗೆ, ಸಾಮಾನ್ಯ ಒತ್ತಡ 80ರಿಂದ 120 ಎಂದು ಹೇಳಬಹುದು, ಅಲ್ಲಿ 120 ಸಂಕೋಚನ ಮಾಪನವಾಗಿದ್ದರೆ, , 80 ವ್ಯಾಕೋಚನದ ಮಾಪನ.

ಆಕ್ರಮಣಶೀಲತೆಯಿಲ್ಲದ ಮಾಪನ ಬದಲಾಯಿಸಿ

ಆಕ್ರಮಣಶೀಲತೆಯಿಲ್ಲದ ಶ್ರಾವಕ (ಆಲಿಸುವುದು ಪದಕ್ಕಿರುವ ಲ್ಯಾಟಿನ್ ಪದ) ಮತ್ತು ಅಸ್ಸಿಲೊಮೆಟ್ರಿಕ್ (ರಕ್ತದೊತ್ತಡ ಅಳೆಯುವ ಉಪಕರಣ) ಮಾಪನಗಳು ಆಕ್ರಮಣಕಾರಿ ಉಪಕರಣಗಳಿಗಿಂತ ಸರಳ ಹಾಗೂ ಕ್ಷಿಪ್ರವಾಗಿದೆ, ಅವುಗಳನ್ನು ಹೊಂದಿಸಲು ವಿಶೇಷ ಪರಿಣತರ ಅಗತ್ಯವಿಲ್ಲ, ವಾಸ್ತವಿಕವಾಗಿ ಯಾವುದೇ ತೊಡಕುಗಳೂ ಇಲ್ಲ, ಮತ್ತು ರೋಗಿಗೂ ನೋವಾಗದು ಅಲ್ಲದೆ ಅಹಿತಕರ ಎನಿಸದು. ಆದಾಗ್ಯೂ, ಆಕ್ರಮಣಶೀಲತೆ ಹೊಂದಿರದ ಈ ಮಾಪನಗಳಿಂದ ಕೆಲವೊಮ್ಮೆ ನಿಖರ ಫಲಿತಾಂಶಗಳು ಸಿಗುವ ಸಾಧ್ಯತೆಗಳು ಕಡಿಮೆ ಮತ್ತು ಅಂಕಿಗಳಲ್ಲಿ ಸಣ್ಣ ಪ್ರಮಾಣದ ವ್ಯವಸ್ಥಿತ ವ್ಯತ್ಯಾಸಗಳಾಗಬಹುದು. ಆಕ್ರಮಣಶೀಲತೆ ಹೊಂದಿರದ ಮಾಪನ ವಿಧಾನಗಳನ್ನು ಸಾಮಾನ್ಯವಾಗಿ ನಿತ್ಯದ ತಪಾಸಣೆ ಮತ್ತು ಪರೀಕ್ಷೆಗಳಲ್ಲಿ ಬಳಸಲಾಗುತ್ತದೆ.

ಸ್ಪರ್ಶ ಪರೀಕ್ಷೆಯ ವಿಧಾನಗಳು ಬದಲಾಯಿಸಿ

ಯಾವುದೇ ಉಪಕರಣಗಳ ಸಹಾಯವಿಲ್ಲದೆ ಸ್ಪರ್ಶ ಪರೀಕ್ಷೆಯ ಮೂಲಕ ಸಂಕೋಚನದ ಕನಿಷ್ಠ ಮೌಲ್ಯಗಳನ್ನು ಸ್ಥೂಲವಾಗಿ ಅಂದಾಜು ಮಾಡಬಹುದು, ತುರ್ತು ಸಂದರ್ಭಗಳಲ್ಲಿ ಹೆಚ್ಚಾಗಿ ಈ ವಿಧಾನವನ್ನು ಬಳಸಲಾಗುತ್ತದೆ. ಪ್ರಧಾನ‌ ನಾಡಿಯ ಸ್ಪರ್ಶ ಪರೀಕ್ಷೆ ಕನಿಷ್ಠ 80 mmHg ರಕ್ತದೊತ್ತಡವನ್ನು ಸೂಚಿಸುತ್ತದೆ, ತೊಡೆಯೆಲುಬಿಗೆ ಸಂಬಂಧಿಸಿದ ನಾಡಿ ಕನಿಷ್ಠ ಪಕ್ಷ 70 mmHg ಸೂಚಿಸುತ್ತದೆ, ಮತ್ತು ಶೀರ್ಷಧಮನಿಯ ನಾಡಿ ಕನಿಷ್ಠ 60 mmHg ಸೂಚಿಸುತ್ತದೆ. ಆದಾಗ್ಯೂ, ಈ ವಿಧಾನ ಸಾಕಷ್ಟು ನಿಖರವಾಗಿಲ್ಲ ಮತ್ತು ಅನೇಕ ಬಾರಿ ರೋಗಿಗಳ ಸಂಕೋಚನದ ರಕ್ತದೊತ್ತಡವನ್ನು ಅತಿಯಾಗಿ ಅಂದಾಜು ಮಾಡಿದೆ ಎಂದು ಅಧ್ಯಯನವೊಂದು ಹೇಳಿದೆ.[೧] ಸ್ಪಿಗ್ಮೋಮಾನಾಮೀಟರ್ ಬಳಸಿ ಮತ್ತು ಪ್ರಧಾನ ನಾಡಿಯನ್ನು ಕೈ ಮುಟ್ಟಿ ಪರೀಕ್ಷಿಸಿದಾಗ ಸಂಕೋಚನದ ರಕ್ತದೊತ್ತಡದ ಮೌಲ್ಯಗಳನ್ನು ಹೆಚ್ಚು ನಿಖರವಾಗಿ ಪಡೆಯಬಹುದು.[೨] ವ್ಯಾಕೋಚನದ ರಕ್ತದೊತ್ತಡವನ್ನು ಈ ವಿಧಾನದಿಂದ ಅಂದಾಜು ಮಾಡಲು ಸಾಧ್ಯವಿಲ್ಲ.[೩]

ಶ್ರಾವಕ ವಿಧಾನಗಳು ಬದಲಾಯಿಸಿ

 
ಸ್ಟೆತೊಸ್ಕೋಪ್ ಜೊತೆಗೆ ಶ್ರಾವಕ ವಿಧಾನ ನಿರ್ದ್ರವ ಸ್ಪಿಗ್ಮೋಮಾನೊ ಮೀಟರ್
 
ಪಾದರಸ ಮಾನಾಮೀಟರ್ ಅಥವಾ ಒತ್ತಡ ಮಾಪಕ

ಶ್ರಾವಕ ವಿಧಾನ ಸ್ಟೆತೊಸ್ಕೋಪ್ ಮತ್ತು ಸ್ಪಿಗ್ಮೋಮಾನಾಮೀಟರ್ ಅನ್ನು ಬಳಸುತ್ತದೆ. ಊದಿ ಉಬ್ಬಿಸಬಹುದಾದ ರಬ್ಬರಿನ ವಸ್ತು(ರಿವಾ-ರಾಕ್ಕಿ ), ಎದೆಯ ಎತ್ತರಕ್ಕೆ ಸಮಾನಾಗಿ ತೋಳಿನ ಮೇಲ್ಭಾಗಕ್ಕೆ ಕಟ್ಟಿರುವ ಪಟ್ಟಿ, ಮತ್ತು ಪಾದರಸದ ಅಥವಾ ನಿರ್ದ್ರವಮಾನಮೀಟರ್‌ ಅನ್ನು ಇದು ಹೊಂದಿರುತ್ತದೆ. ಪಾದರಸದ ಮಾನಮೀಟರ್ ಸ್ತಂಭಾಕಾರದ ನಳಿಕೆಯಲ್ಲಿರುವ ಪಾದರಸದ ಎತ್ತರವನ್ನು ಅಳೆದು ಪರಿಪೂರ್ಣ ಫಲಿತಾಂಶ ನೀಡುವುದು, ಅಲ್ಲಿ ಮಾಪನಾಂಕದ ಅಗತ್ಯ ಬರದು, ಇದರಲ್ಲಿ ತಪ್ಪುಗಳಾಗುವ ಸಾಧ್ಯತೆಗಳು ಕಡಿಮೆ ಮತ್ತು ಮಾಪನಾಂಕ ದಿಕ್ಕು ತಪ್ಪುವುದರಿಂದ ಇತರ ವಿಧಾನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳುಂಟು. ಪ್ರಾಯೋಗಿಕ ಪರೀಕ್ಷೆಗಳು ಮತ್ತು ಗರ್ಭಿಣಿ ಮಹಿಳೆಯಂತಹ ಹೆಚ್ಚು ಅಪಾಯಕಾರಿ ಸನ್ನಿವೇಶಗಳಲ್ಲಿ ಅಧಿಕ ರಕ್ತದೊತ್ತಡವನ್ನು ಪ್ರಾಯೋಗಿಕವಾಗಿ ಅಳೆಯಲು ಪಾದರಸದ ಮಾನಮೀಟರ್ ‌ಗಳ ಬಳಕೆ ಹೆಚ್ಚು ಅಗತ್ಯವಿರುತ್ತದೆ.

ಸೂಕ್ತ ಗಾತ್ರದ ಪಟ್ಟಿಯನ್ನು ತೋಳಿನ ಮೇಲ್ಭಾಗಕ್ಕೆ ಸಲೀಸಾಗಿ ಮತ್ತು ಹಿತವಾಗಿ ಕಟ್ಟಿ, ರಬ್ಬರಿನ ಬಲ್ಬ್ ಅನ್ನು ಹಿಸುಕಿ ಪಟ್ಟಿಯನ್ನು ಉಬ್ಬಿಸಬೇಕು, ಅಪಧಮನಿಗಳು ಮುಚ್ಚುವವರೆಗೂ ಈ ಪ್ರಕ್ರಿಯೆ ಮುಂದುವರಿಯುತ್ತದೆ. ವೈದ್ಯನು ಮೊಣಕೈಯ ಮೇಲ್ಬಾಗ ಸ್ಟೆತೊಸ್ಕೋಪ್ ಅನ್ನು ಇಟ್ಟು ತೋಳಿನ ಅಪಧಮನಿಯ ಬಡಿತವನ್ನು ಆಲಿಸುವುದರ ಜೊತೆ ಜೊತೆಗೆಯೇ, ತೋಳಿಗೆ ಕಟ್ಟಿರುವ ಪಟ್ಟಿಯ ಮೇಲಿನ ಒತ್ತಡವನ್ನು ನಿಧಾನವಾಗಿ ಬಿಡುಗಡೆ ಮಾಡುತ್ತಾ ಹೋಗುತ್ತಾನೆ. ಅಪಧಮನಿಗೆ ರಕ್ತ ಹರಿಯಲು ಆರಂಭವಾಗುತ್ತಿದ್ದಂತೆಯೇ, ಕ್ರಮರಹಿತ ಹರಿಯುವಿಕೆ ಸರ ಸರ ಅಥವಾ 'ವುಷ್' ಎಂಬ ಶಬ್ದವನ್ನು ಹೊರಡಿಸುತ್ತದೆ(ಮೊದಲು ಕೊರೊತ್ಕೋಫ್‌ ಶಬ್ದ). ಮೊದಲು ಕೇಳಿದ ಶಬ್ದ ಹೊರಡುವ ಸ್ಥಳದ ಒತ್ತಡವನ್ನು ಸಂಕೋಚನದ ಒತ್ತಡವೆನ್ನುತ್ತಾರೆ. ವ್ಯಾಕೋಚನದ ಅಪಧಮನಿಯ ಒತ್ತಡ ಅಳೆಯುವ ಸಂದರ್ಭದಲ್ಲಿ ಶಬ್ಬ ನಿಲ್ಲುವವರೆಗೂ(ಐದನೆಯ ಕೊರೊತ್ಕೋಫ್ ಶಬ್ದ) ಪಟ್ಟಿ ಮೇಲಿನ ಒತ್ತಡವನ್ನು ಬಿಡುಗಡೆ ಮಾಡುತ್ತಾ ಹೋಗಲಾಗುತ್ತದೆ. ಕೆಲವೊಮ್ಮೆ, ಸ್ಟೆತೊಸ್ಕೋಪ್ ಉಪಯೋಗಿಸುವ ಮೊದಲು ಸ್ಪರ್ಶ ಪರೀಕ್ಷೆ (ಕೈಮುಟ್ಟಿ)ಮೂಲಕವೂ ಒತ್ತಡದ ಅಂದಾಜು ಮಾಡಲಾಗುತ್ತದೆ.

ಆಸಿಲೋಮೆಟ್ರಿಕ್ ವಿಧಾನಗಳು ಬದಲಾಯಿಸಿ

ಆಸಿಲೋಮೆಟ್ರಿಕ್ ವಿಧಾನಗಳನ್ನು ಕೆಲವೊಮ್ಮೆ ದೀರ್ಘ-ಕಾಲದ ಮಾಪನಗಳಲ್ಲಿ ಮತ್ತು ಸಾಮಾನ್ಯ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ. ಈ ಉಪಕರಣದ ಕಾರ್ಯನಿರ್ವಹಣೆ ಶ್ರಾವಕ ವಿಧಾನದಂತೆಯೇ ಇದೆ, ಆದರೆ ಇಲ್ಲಿ ರಕ್ತದ ಹರಿಯುವಿಕೆಯನ್ನು ಪತ್ತೆ ಮಾಡಲು ಸ್ಟೆತೊಸ್ಕೋಪ್ ಮತ್ತು ತಜ್ಞರ ಕಿವಿಗಳ ಬದಲಿಗೆ ಇಲೆಕ್ಟ್ರಾನಿಕ್ ಒತ್ತಡ ಸಂವೇದಕ(ಟ್ರ್ಯಾನ್ಸ್‌ಡ್ಯೂಸರ್ ‌ ಅಥವಾ ಸಂಜ್ಞಾಪರಿವರ್ತಕ)ಗಳನ್ನು ಅಳವಡಿಸಲಾಗಿರುತ್ತದೆ. ಬಳಕೆಯಲ್ಲಿರುವಂತೆ, ರಕ್ತದೊತ್ತಡವನ್ನು ಅಂಕಿಗಳಿಂದ ವಿವರಿಸುವ ಮಾಪನಾಂಕ ಇಲೆಕ್ಟ್ರಾನಿಕ್ ಉಪಕರಣವನ್ನು ಒತ್ತಡ ಸಂವೇದಕವೆನ್ನುತ್ತಾರೆ. ನಿಖರತೆಯನ್ನು ಉಳಿಸಿಕೊಳ್ಳುವುದಕ್ಕಾಗಿ, ಮಾಪನಾಂಕಗಳನ್ನು ನಿಯತಕಾಲಿಕವಾಗಿ ಪರಿಶೀಲಿಸುತ್ತಿರಬೇಕು, ಪಾದರಸದ ಮಾನಮೀಟರ್‌ನ ಮೂಲಸ್ವರೂಪಕ್ಕೆ ನಿಷ್ಠವಾಗಿ ಅಲ್ಲ. ಬಹುತೇಕ ಪ್ರಕರಣಗಳಲ್ಲಿ, ವಿದ್ಯುತ್ ಪಂಪ್ ಮತ್ತು ಕವಾಟ ಬಳಸಿ ಪಟ್ಟಿಯನ್ನು ಉಬ್ಬಿಸಲಾಗುತ್ತದೆ ಮತ್ತು ಒತ್ತಡವನ್ನು ಬಿಡುಗಡೆ ಮಾಡಲಾಗುತ್ತದೆ. ಪಟ್ಟಿಯನ್ನು ಸಾಮಾನ್ಯವಾಗಿ ತೋಳಿನ ಮೇಲ್ಭಾಗಕ್ಕೇ ಕಟ್ಟುವುದು ರೂಢಿ, ಆದರೆ ಈ ಉಪಕರಣವನ್ನು ಹೆಚ್ಚಾಗಿ ಮಣಿಕಟ್ಟಿಗೆ(ಎದೆ ಎತ್ತಿದಾಗ) ಕಟ್ಟುತ್ತಾರೆ. ಅವುಗಳ ನಿಖರತೆಯಲ್ಲಿ ಹೆಚ್ಚಾಗಿ ವ್ಯತ್ಯಾಸಗಳಾಗುತ್ತವೆ, ಆದ್ದರಿಂದ ನಿರ್ದಿಷ್ಟ ಮಧ್ಯಂತರಗಳಲ್ಲಿ ಪರೀಕ್ಷಿಸುತ್ತಿರಬೇಕು ಮತ್ತು ಅಗತ್ಯ ಬಿದ್ದಲ್ಲಿ ಪುನರ್ ಮಾಪನಾಂಕ ಮಾಡಬೇಕು.

ಆಸಿಲೋಮೆಟ್ರಿಕ್ ಮಾಪನಕ್ಕೆ ಶ್ರಾವಕ ತಂತ್ರಜ್ಞಾನಕ್ಕೆ ಬೇಕಾಗುವಷ್ಟು ಪರಿಣತಿ ಬೇಡ, ಮತ್ತು ತರಬೇತಿ ಪಡೆಯದ ಸಿಬ್ಬಂದಿ ಕೂಡ ಬಳಸಬಹುದು ಮತ್ತು ರೋಗಿಯು ಮನೆಯಲ್ಲಿದ್ದುಕೊಂಡೇ ತನ್ನನ್ನು ತಾನು ಪರೀಕ್ಷಿಸಿಕೊಳ್ಳಬಹುದು.

ಸಂಕೋಚನದ ಅಪಧಮನಿಯ ಒತ್ತಡ ಮಿತಿಮೀರಿದರೆ, ಆರಂಭದಲ್ಲಿ ಒತ್ತಡಕ್ಕೆ ತಕ್ಕಂತೆ ಪಟ್ಟಿಯನ್ನು ಉಬ್ಬಿಸಲಾಗುತ್ತದೆ, ಮತ್ತು ಆ ನಂತರದ 30 ಕ್ಷಣಗಳಲ್ಲಿ ವ್ಯಾಕೋಚನದ ಒತ್ತಡದಿಂದಲೂ ಕೆಳಕ್ಕೆ ಇಳಿಸಲಾಗುತ್ತದೆ. ರಕ್ತದ ಹರಿಯುವಿಕೆ ನಿಂತಾಗ(ಪಟ್ಟಿಯ ಒತ್ತಡ ಸಂಕೋಚನದ ಒತ್ತಡವನ್ನು ಮೀರಿದಾಗ) ಅಥವಾ ತಡೆಯಿಲ್ಲದಿದ್ದಾಗ (ಪಟ್ಟಿಯ ಒತ್ತಡ ವ್ಯಾಕೋಚನದ ಒತ್ತಡಕ್ಕಿಂತ ಕೆಳಗಿದ್ದಾಗ), ಪಟ್ಟಿಯ ಒತ್ತಡ ಅತ್ಯಾವಶ್ಯವಾಗಿ ಸ್ಥಿರವಾಗಿರಬೇಕು. ಆದ್ದರಿಂದ ಪಟ್ಟಿಯ ಗಾತ್ರ ಸರಿಯಾಗಿರುವುದು ಅತ್ಯವಶ್ಯ: ಚಿಕ್ಕ ಗಾತ್ರದ ಪಟ್ಟಿಗಳು ಅತಿ ಒತ್ತಡಕ್ಕೆ ಕಾರಣವಾಗಬಹುದು, ಅಂತೆಯೇ ದೊಡ್ಡ ಗಾತ್ರದ ಪಟ್ಟಿಗಳು ಕಡಿಮೆ ಒತ್ತಡಕ್ಕೆ ಕಾರಣವಾಗಬಹುದು.ರಕ್ತದ ಹರಿಯುವಿಕೆಯಿದ್ದು, ಆದರೆ ನಿರ್ಬಂಧಿಸಲ್ಪಟ್ಟಿದ್ದಲ್ಲಿ, ಒತ್ತಡ ಸಂವೇದಕದ ನಿಯಂತ್ರಣದಲ್ಲಿರುವ ಪಟ್ಟಿಯ ಒತ್ತಡ, ನಿಯತಕಾಲಿಕವಾಗಿ ಬದಲಾಗುತ್ತಾ ಆವರ್ತದ ವಿಸ್ತರಣೆ ಜೊತೆಗೆ ಸಮನ್ವಯಗೊಳ್ಳುತ್ತದೆ ಮತ್ತು ತೋಳಿನ ಅಪಧಮನಿಯ ಕುಗ್ಗುವಿಕೆ, i.e., ಅದು ಅನಿಶ್ಚಿತವಾಗಿರುತ್ತದೆ. ಸಂಕೋಚನದ ಮತ್ತು ವ್ಯಾಕೋಚನದ ಒತ್ತಡಗಳ ಮೌಲ್ಯಗಳನ್ನು ಗಣಕೀಕರಿಸಲಾಗಿದೆ, ಕಚ್ಚಾ ವಿವರಗಳಿಂದ ನಿಜವಾಗಿ ಮಾಪನ ಮಾಡುವುದಲ್ಲ, ಆಲ್ಗೊರಿದಂ ಬಳಸಿಕೊಂಡು; ಗಣಕೀಕೃತ ಫಲಿತಾಂಶಗಳನ್ನು ಕಾಣಿಸಲಾಗುತ್ತದೆ.

ರೋಗಿಗಳ ಹೃದಯ ಮತ್ತು ಪರಿಚಲನೆ ಸಮಸ್ಯೆಗಳ ಕುರಿತು ಆಸಿಲೋಮೆಟ್ರಿಕ್ ಮಾನಿಟರ್‌ಗಳು ತಪ್ಪಾದ ವಿವರಗಳನ್ನು ನೀಡುವ ಸಾಧ್ಯತೆಗಳೂ ಇವೆ, ಅಪಧಮನಿಯ ಸ್ಕ್ಲೆರೋಸಿಸ್, ಎರಿತ್ಮಿಯಾ, ಪ್ರೀಎಕ್ಲಾಂಪ್ಸಿಯಾ, ಪಲ್ಸಸ್ ಆಲ್ಟರ್ನನ್ಸ್ , ಮತ್ತು ಪಲ್ಸಸ್ ಪಾರಾಡಾಕ್ಸಸ್ ಇವುಗಳಲ್ಲಿ ಸೇರಿವೆ.

ಬಳಕೆಯಲ್ಲಿರುವ ವಿವಿಧ ವಿಧಾನಗಳು ಏಕರೀತಿಯ ಫಲಿತಾಂಶಗಳನ್ನು ನೀಡುವುದಿಲ್ಲ; ನೀಡಿರುವ ವಿವರಗಳ ಜೊತೆ ಆಸಿಲೋಮೆಟ್ರಿಕ್ ಫಲಿತಾಂಶಗಳನ್ನು ಹೊಂದಿಸಲು ಆಲ್ಗೊರಿದಂ ಮತ್ತು ಪ್ರಾಯೋಗಿಕವಾಗಿ ಪಡೆದ ಸಹಕರ್ತೃಗಳನ್ನು ಬಳಸಲಾಗುತ್ತದೆ. ಇವು ಶ್ರಾವಕ ಫಲಿತಾಂಶಗಳಿಗೆ ಸರಿಸಾಟಿಯಾಗುತ್ತವೆ ಮತ್ತು ಇದು ಸಾಧ್ಯ. ಕೆಲವು ಉಪಕರಣಗಳು ಸಂಕೋಚನದ, ಸರಾಸರಿ, ಮತ್ತು ವ್ಯಾಕೋಚನದ ಅಂಶಗಳನ್ನು ನಿರ್ಣಯಿಸಲು ಗಣಕದ ನೆರವಿನಿಂದ ಪಡೆದ ತತ್ ‌ಕ್ಷಣದ ಅಪಧಮನಿಯ ಒತ್ತಡದ ತರಂಗರೂಪದ ವಿಶ್ಲೇಷಣೆಯನ್ನು ಬಳಸುತ್ತವೆ. ಅನೇಕ ಆಸಿಲೋಮೆಟ್ರಿಕ್ ಉಪಕರಣಗಳನ್ನು ಊರ್ಜಿತಗೊಳಿಸದೇ ಇರುವುದರಿಂದಾಗಿ, ಮತ್ತು ಹೆಚ್ಚಿನವುಗಳು ಪ್ರಾಯೋಗಿಕವಾಗಿ ಮತ್ತು ಜಾಗರೂಕತೆ ದೃಷ್ಟಿಯಿಂದ ಸೂಕ್ತವಲ್ಲದ ಕಾರಣ ಎಚ್ಚರಿಕೆ ನೀಡಬೇಕಾದ್ದು ಅಗತ್ಯ.

ಆಕ್ರಮಣಶೀಲತೆಯಿಲ್ಲದ ರಕ್ತದೊತ್ತಡಕ್ಕಿರುವ ಪದ NIBP ಯನ್ನು , ಹೆಚ್ಚಾಗಿ ಆಸಿಲೋಮೆಟ್ರಿಕ್ ಮಾನಿಟರ್‌ ಉಪಕರಣವನ್ನು ವಿವರಿಸಲು ಬಳಸಲಾಗಿದೆ.

ಆಕ್ರಮಣಶೀಲ ಮಾಪನ ಬದಲಾಯಿಸಿ

ಆಕ್ರಮಣಶೀಲ ವಿಧಾನದಿಂದ ಅಪಧಮನಿಯ ರೇಖೆಯ ಮೂಲಕ ಹೆಚ್ಚು ನಿಖರವಾಗಿ ಅಪಧಮನಿಯ ರಕ್ತದೊತ್ತಡ(BP)ವನ್ನು ಅಳೆಯಬಹುದು. ಅಂತರ್‌ನಾಳೀಯ ತೂರುನಳಿಗೆ(ಕ್ಯಾನ್ಯುಲ) ಜೊತೆ ಅಪಧಮನಿಯ ಒತ್ತಡದ ಆಕ್ರಮಣಶೀಲ ಮಾಪನ, ಅಪಧಮನಿಯಲ್ಲಿ ತೂರುನಳಿಗೆಯ ಸೂಜಿಯನ್ನು ಚುಚ್ಚುವ ಮೂಲಕ ಅಪಧಮನಿಯ ಒತ್ತಡವನ್ನು ನೇರವಾಗಿ ಅಳೆಯುವುದನ್ನು ಒಳಗೊಂಡಿದೆ,(ಸಾಮಾನ್ಯವಾಗಿ ಪ್ರಧಾನ, ತೊಡೆಯೆಲುಬಿನ, ದೋರ್ಸಾಲಿಸ್ ಪೆಡಿಸ್ ಅಥವಾ ತೋಳಿನ). ಈ ಪ್ರಕ್ರಿಯೆಯನ್ನು ಪರವಾನಗಿ ಹೊಂದಿದ ಯಾವುದೇ ವೈದ್ಯ ಅಥವಾ ಉಸಿರಾಟದ ಚಿಕಿತ್ಸಾಶಾಸ್ತ್ರಜ್ಞನು ಮಾಡಬಹುದು.

ಶುಷ್ಕ, ದ್ರವ ತುಂಬಿದ ವ್ಯವಸ್ಥೆ ಜೊತೆ ಕ್ಯಾನ್ಯುಲವನ್ನು ಸೇರಿಸಿರಬೇಕು, ಅದನ್ನು ಇಲೆಕ್ಟ್ರಾನಿಕ್ ಒತ್ತಡ ಸಂಜ್ಞಾಪರಿವರ್ತಕದ ಜೊತೆ ಸೇರಿಸಬೇಕು. ಈ ವ್ಯವಸ್ಥೆಯ ಅನುಕೂಲವೆಂದರೆ, ಪ್ರತಿ ಬಡಿತವನ್ನು ನಿರಂತರವಾಗಿ ನೋಡಬಹುದು, ಮತ್ತು ತರಂಗರೂಪಗಳಲ್ಲಿ (ಕಾಲಕ್ಕೆ ಸರಿಯಾಗಿ ಒತ್ತಡದ ರೇಖಾಚಿತ್ರ) ಕಾಣಬಹುದು. ಮಾನವ ಮತ್ತು ಪಶುವೈದ್ಯಕೀಯ(ತೀವ್ರ ಶುಶ್ರೂಷೆ ಔಷಧಿ, ಅರಿವಳಿಕೆ ಶಾಸ್ತ್ರ) ಮತ್ತು ಸಂಶೋಧನೆಗಳಲ್ಲಿ ಈ ಆಕ್ರಮಣಶೀಲ ತಂತ್ರಜ್ಞಾನವನ್ನು ನಿಯತವಾಗಿ ಬಳಸುತ್ತಾರೆ.

ನಾಳೀಯ ಒತ್ತಡದ ಮಾಪನಕ್ಕಾಗಿ ತೂರುನಳಿಗೆಯನ್ನು ತೂರಿಸುವ ಆಕ್ರಮಣಶೀಲ ವಿಧಾನ ಕೆಲವೊಮ್ಮೆ ತ್ರೊಂಬೊಸಿಸ್, ಸೋಂಕು ಮತ್ತು ರಕ್ತಸ್ರಾವದಂತಹ ಜಟಿಲ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆಕ್ರಮಣಶೀಲ ವಿಧಾನದಲ್ಲಿ ಅಪಧಮನಿಯ ಚಿಕಿತ್ಸೆಗೆ ಒಳಪಟ್ಟ ರೋಗಿಗಳ ಬಗ್ಗೆ ತೀರಾ ಸಮೀಪದ ಮೇಲ್ವಿಚಾರಣೆಯ ಅಗತ್ಯವಿದೆ, ಏಕೆಂದರೆ ಅಪಧಮನಿಯ ನಾಳಗಳು ಸಂಪರ್ಕ ಕಡಿದುಕೊಂಡಲ್ಲಿ ತೀವ್ರ ರಕ್ತಸ್ರಾವವಾಗುವ ಅಪಾಯವಿದೆ. ಸಾಮಾನ್ಯವಾಗಿ ಈ ವಿಧಾನ ರೋಗಿಗಳಿಗೆ ಮೀಸಲಾಗಿರುತ್ತದೆ, ಏಕೆಂದರೆ ಅವರ ಅಪಧಮನಿಯ ಒತ್ತಡಗಳಲ್ಲಿ ಕ್ಷಿಪ್ರ ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಆಕ್ರಮಣಶೀಲ ನಾಳೀಯ ಒತ್ತಡ ಮಾನಿಟರ್‌ಗಳು ಒತ್ತಡ ಮೇಲ್ವಿಚರಣೆಗಾಗಿ ವಿನ್ಯಾಸಗೊಳಿಸಿದ ವ್ಯವಸ್ಥೆಗಳಾಗಿದ್ದು, ಇವು ಒತ್ತಡ ಕುರಿತ ಮಾಹಿತಿಯನ್ನು ಪಡೆದು ಸಂಸ್ಕರಿಸುತ್ತವೆ ಮತ್ತು ಪ್ರದರ್ಶಿಸುತ್ತವೆ. ಆಘಾತ, ತುರ್ತು ಚಿಕಿತ್ಸೆ, ಮತ್ತು ಶಸ್ತ್ರ ಚಿಕಿತ್ಸಾ ಕೋಣೆಯ ಉಪಕರಣಗಳಿಗಾಗಿ ವಿವಿಧ ರೀತಿಯ ಆಕ್ರಮಣಶೀಲ ನಾಳೀಯ ಒತ್ತಡ ಮಾನಿಟರ್‌ಗಳಿವೆ. ಏಕ ಒತ್ತಡ, ಇಬ್ಬಗೆಯ ಒತ್ತಡ, ಮತ್ತು ಬಹು-ಪರಿಮಾಣ (i.e. ಒತ್ತಡ / ಉಷ್ಣತೆ)ಇವುಗಳಲ್ಲಿ ಸೇರಿವೆ. ಅಪಧಮನಿ, ಕೇಂದ್ರ ಅಭಿಧಮನಿ, ಶ್ವಾಸಕೋಶದ ಅಪಧಮನಿ, ಎಡ ಹೃತ್ಕರ್ಣ, ಬಲ ಹೃತ್ಕರ್ಣ, ತೊಡೆಯೆಲುಬಿನ ಅಪಧಮನಿ, ಹೊಕ್ಕುಳಿನ ರಕ್ತನಾಳಗಳು, ಹೊಕ್ಕುಳಿನ ಅಪಧಮನಿ, ಮತ್ತು ಮೆದುಳಿನ ಒತ್ತಡಗಳ ಮಾಪನ ಮತ್ತು ಮುನ್ನಡೆಯುವ ನಿಟ್ಟಿನಲ್ಲಿ ಮಾನಿಟರ್‌ಗಳನ್ನು ಬಳಸಬಹುದು.

ಮಾನಿಟರ್‌ಗಳ ಮೈಕ್ರೊ ಕಂಪ್ಯೂಟರ್ ವ್ಯವಸ್ಥೆಗಳಿಂದ ನಾಳೀಯ ಒತ್ತಡ ಪರಿಮಾಣಗಳು ಹುಟ್ಟಿಕೊಂಡಿವೆ. ಸಾಮಾನ್ಯವಾಗಿ, ಸಂಕೋಚನದ, ವ್ಯಾಕೋಚನದ, ಮತ್ತು ಸರಾಸರಿ ಒತ್ತಡಗಳು ಮಿಡಿತದ ತರಂಗರೂಪಗಳಾಗಿ ಏಕಕಾಲದಲ್ಲಿ ಕಾಣಿಸಿಕೊಳ್ಳುತ್ತವೆ (i.e. ಅಪಧಮನಿ ಮತ್ತು ಶ್ವಾಸಕೋಶದ ಅಪಧಮನಿ). ಕೆಲವು ಮಾನಿಟರ್‌ಗಳು CPP (ಮಿದುಳಿನ ಸೇಚನೆ ಒತ್ತಡ)ಯನ್ನು ಲೆಕ್ಕಮಾಡುತ್ತವೆ ಮತ್ತು ಪ್ರದರ್ಶಿಸುತ್ತವೆ ಕೂಡ. ಸಾಮಾನ್ಯವಾಗಿ, ಮಾನಿಟರ್ ‌ಗಳ ಎದುರು ಭಾಗದಲ್ಲಿರುವ ಶೂನ್ಯ ಕೀಯನ್ನು ಅದುಮಿದರೆ ಒತ್ತಡವನ್ನು ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಶೂನ್ಯಕ್ಕೆ ತಂದು ನಿಲ್ಲಿಸುತ್ತದೆ. ರೋಗಿಯನ್ನು ನೋಡಿಕೊಳ್ಳುವ ಜವಾಬ್ದಾರಿಯಿರುವ ವೈದ್ಯಕೀಯ ವೃತ್ತಿಯ ವ್ಯಕ್ತಿಗೆ ಸಹಕರಿಸಲೆಂದು ಎಚ್ಚರಿಕೆ ಗಂಟೆಯನ್ನು ಇಡುವ ವ್ಯವಸ್ಥೆ ಕೂಡ ಇದರಲ್ಲುಂಟು. ಕಾಣಬಹುದಾದ ಉಷ್ಣತಾ ಪರಿಮಾಣಗಳ ಆಧಾರದ ಮೇಲೆ ಹೆಚ್ಚು ಮತ್ತು ಕಡಿಮೆ ಮಟ್ಟದ ಎಚ್ಚರಿಕೆ ಗಂಟೆಗಳನ್ನು ಇಡಬಹುದು.

ಮನೆಯಿಂದಲೇ ಮೇಲ್ವಿಚಾರಣೆ ಬದಲಾಯಿಸಿ

ಕೆಲವು ರೋಗಿಗಳಿಗೆ, ವೈದ್ಯರ ಕಚೇರಿಯಲ್ಲಿ ತೆಗೆದುಕೊಂಡ ರಕ್ತದೊತ್ತಡ ಮಾಪನಗಳು ಅವರ ನೈಜ ರಕ್ತದೊತ್ತಡದ ಬಗ್ಗೆ ಸರಿಯಾದ ಚಿತ್ರಣ ನೀಡದೇ ಇರಬಹುದು. ವೈದ್ಯರ ಕಚೇರಿಗೆ ಭೇಟಿ ನೀಡಿದ 25% ಮಂದಿ ರೋಗಿಗಳ ರಕ್ತದೊತ್ತಡದ ಮಾಪನ, ಅವರ ನೈಜ ರಕ್ತದೊತ್ತಡಕ್ಕಿಂತ ಅಧಿಕವಿರುವ ಸಾಧ್ಯತೆಗಳೇ ಹೆಚ್ಚು. ಈ ತೆರನಾದ ತಪ್ಪುಗಳನ್ನು ವೈಟ್‌ ಕೋಟ್ ಅಧಿಕ ರಕ್ತದೊತ್ತಡವೆನ್ನುತ್ತಾರೆ ಮತ್ತು ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವವರು ಪರೀಕ್ಷೆಗಳನ್ನು ನಡೆಸುವಾಗ ಉಂಟಾಗುವ ತಳಮಳದಿಂದಾಗಿ ಈ ಫಲಿತಾಂಶಗಳು ದೊರೆಯುತ್ತವೆ.[೪] ಈ ರೋಗಿಗಳಿಗೆ ಅಧಿಕ ರಕ್ತದೊತ್ತಡವೆಂದು ತಪ್ಪಾಗಿ ನಿರ್ಣಯಿಸಿದ ಪರಿಣಾಮ ಅವರು ಹಾನಿಕಾರ ಔಷಧಗಳನ್ನು ತೆಗೆದುಕೊಂಡು ಅನಾವಶ್ಯಕ ಮತ್ತು ಅಪಾಯಕಾರಿ ಸನ್ನಿವೇಶಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಇದರಿಂದಾಗಿ ಆಗುವ ಪರಿಣಾಮಗಳ ಮಹತ್ವದ ಬಗ್ಗೆ ಚರ್ಚೆಗಳು ಮುಂದುವರಿದಿವೆ. ಕೆಲವು ಪ್ರತಿಕ್ರಿಯಾಶೀಲ ರೋಗಿಗಳು ತಮ್ಮ ನಿತ್ಯ ಜೀವನದುದ್ದಕ್ಕೂ ಎದುರಾಗುವ ಇತರ ಅನೇಕ ಪ್ರೇರಣೆಗಳಿಗೆ ಕೂಡ ಪ್ರತಿಕ್ರಿಯಿಸುತ್ತಾರೆ, ಮತ್ತು ಅವರಿಗೆ ಚಿಕಿತ್ಸೆಯ ಅವಶ್ಯಕತೆಯಿದೆ.ವೈಟ್ ಕೋಟ್ ಪರಿಣಾಮ ಒಂದು ಸೂಚನೆಯಾಗಿರಬಹುದು, ಆದರೆ ಇಲ್ಲಿ ಹೆಚ್ಚಿನ ತಪಾಸಣೆಯ ಅಗತ್ಯವಿದೆ. ಇನ್ನೊಂದು ನಿಟ್ಟಿನಲ್ಲಿ ಗಮನಿಸಿದರೆ, ಕೆಲವು ಪ್ರಕರಣಗಳಲ್ಲಿ ವೈದ್ಯರ ಕಚೇರಿಯಲ್ಲಿ ದಾಖಲಾದ ರೋಗಿಯ ರಕ್ತದೊತ್ತಡ ಆತನ ನೈಜ ರಕ್ತದೊತ್ತಡಕ್ಕಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ರೋಗಿಗಳು ಅಧಿಕ ರಕ್ತದೊತ್ತಡಕ್ಕಿರುವ ಅವಶ್ಯ ಚಿಕಿತ್ಸೆ ಪಡೆಯಲು ಸಾಧ್ಯವಾಗದೆಯೂ ಇರಬಹುದು.[೫]

ಸಂಚಾರಿ ರಕ್ತದೊತ್ತಡ ಉಪಕರಣಗಳು ದಿನದ ಉದ್ದಕ್ಕೂ ಪ್ರತಿ ಅರ್ಧ ತಾಸಿಗೊಮ್ಮೆ ರಕ್ತದೊತ್ತಡದ ವಿವರಗಳನ್ನು ನೀಡುತ್ತವೆ ಮತ್ತು ರಾತ್ರಿ ವೇಳೆಯಲ್ಲಿ ಈ ಉಪಕರಣಗಳು ಗುರುತಿಸಲು ಮತ್ತು ಶಾಂತವಾಗಿರಲು ನೆರವಾಗುತ್ತವೆ. ನಿದ್ರೆಯಲ್ಲಿನ ಅವಧಿಗಳನ್ನು ಹೊರತುಪಡಿಸಿ, ಸಂಚಾರಿ ರಕ್ತದೊತ್ತಡದ ಮೇಲ್ವಿಚಾರಣೆಯ ಬದಲು ಮನೆಯಿಂದಲೇ ಮೇಲ್ವಿಚಾರಣೆ ಮಾಡುವ ವಿಧಾನವನ್ನು ಬಳಸಿಕೊಳ್ಳಬಹುದು.[೬] ಅಧಿಕ ರಕ್ತದೊತ್ತಡ ನಿರ್ವಹಣೆಯ ಸುಧಾರಣೆ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳಿಂದಾಗುವ ಪರಿಣಾಮಗಳ ಮೇಲ್ವಿಚಾರಣೆ ಮತ್ತು ರಕ್ತದೊತ್ತಡ ಸಂಬಂಧಿ ಚಿಕಿತ್ಸೆಗಳ ನಿರ್ವಹಣೆಗೆ ಕೂಡ ಮನೆ ಮೇಲ್ವಿಚಾರಣೆಯನ್ನು ಬಳಸಬಹುದು.[೭] ಸಂಚಾರಿ ರಕ್ತದೊತ್ತಡ ಮಾಪನಗಳಿಗೆ ಹೋಲಿಸಿದಲ್ಲಿ, ಮನೆ ಮೇಲ್ವಿಚಾರಣೆ ವಿಧಾನ ಹೆಚ್ಚು ಪರಿಣಾಮಕಾರಿ ಮತ್ತು ಇತರವುಗಳಿಗಿಂತ ಕಡಿಮೆ ವೆಚ್ಚದ್ದು ಎಂದು ಕಂಡು ಬಂದಿದೆ.[೬][೮][೯]

ವೈಟ್ ಕೋಟ್ ಪರಿಣಾಮಗಳನ್ನು ಹೊರತುಪಡಿಸಿ, ಬಹುತೇಕ ಜನರು ಕ್ಲಿನಿಕ್‌ಗಳಿಂದ ಹೊರಗೆ ತೆಗೆದ ಅಪಧಮನಿಯ ಒತ್ತಡ ಮಾಪನದ ವಿವರಗಳು ಸಾಮಾನ್ಯವಾಗಿ ಸ್ವಲ್ಪ ಮಟ್ಟಿಗೆ ಕಡಿಮೆಯಿರುತ್ತವೆ. ಅಧಿಕ ರಕ್ತದೊತ್ತಡದಿಂದಾಗುವ ಅಪಾಯಗಳು ಮತ್ತು ಕ್ಲಿನಿಕ್ ಪರಿಸರದಲ್ಲಿ ದೊರೆಯುವ ವಿವರಗಳ ಆಧಾರದ ಮೇಲೆ ಬಾಧಿತ ರೋಗಿಗಳಲ್ಲಿ ಅಪಧಮನಿಯ ಒತ್ತಡವನ್ನು ಕಡಿಮೆ ಮಾಡುವುದರಿಂದಾಗುವ ಪ್ರಯೋಜನಗಳ ಕುರಿತು ಅಧ್ಯಯನಗಳು ನಡೆದಿವೆ.

ರಕ್ತದೊತ್ತಡವನ್ನು ಅಳೆಯುವುದಕ್ಕಿಂತ 30 ನಿಮಿಷಗಳ ಮುನ್ನ ಆತ ಅಥವಾ ಆ ವ್ಯಕ್ತಿ ಕಾಫಿ ಸೇವಿಸಿರಬಾರದು, ಧೂಮಪಾನ ಮಾಡಿರಬಾರದು, ಅಥವಾ ಕಠಿಣ ವ್ಯಾಯಮಗಳನ್ನು ಮಾಡಿರಬಾರದು. ಹೀಗಿದ್ದಲ್ಲಿ ಮಾತ್ರ ರಕ್ತದೊತ್ತಡದ ನಿಖರವಾದ ವಿವರ ಸಿಗುತ್ತದೆ. ಹೊಟ್ಟೆ ತುಂಬ ಆಹಾರ ಸೇವನೆ ಕೂಡ ರಕ್ತದೊತ್ತಡದ ಮಾಪನದ ಮೇಲೆ ಸಣ್ಣ ಪರಿಣಾಮ ಬೀರಬಹುದು, ಅಲ್ಲದೆ ತುರ್ತಾಗಿ ಮೂತ್ರ ವಿಸರ್ಜನೆ ಮಾಡಬೇಕೆಂದೆಸಿದರೆ ಮಾಪನದ ಮುಂಚೆಯೇ ಅದನ್ನು ಪೂರೈಸಬೇಕು. ರಕ್ತದೊತ್ತಡ ಮಾಪನದ 5 ನಿಮಿಷಕ್ಕಿಂತ ಮುನ್ನ ವ್ಯಕ್ತಿ, ಪಾದವನ್ನು ನೆಲಸಮಾನವಾಗಿಸಿ ಕಾಲುಗಳನ್ನು ಅಡ್ಡಹಾಕದೆ ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಳ್ಳಬೇಕು. ರಕ್ತದೊತ್ತಡ ಅಳೆಯುವ ಪಟ್ಟಿಯನ್ನು ಯಾವಾಗಲೂ ನಗ್ನ ಚರ್ಮಕ್ಕೆ ಕಟ್ಟಬೇಕು, ಏಕೆಂದರೆ ಅಂಗಿಯ ತೋಳಿಗೆ ಕಟ್ಟಿದಲ್ಲಿ ನಿಖರ ಮಾಪನಗಳು ಸಿಗುವ ಸಾಧ್ಯತೆ ಕಡಿಮೆ. ಮಾಪನದ ವೇಳೆ, ಪಟ್ಟಿಯನ್ನು ಕಟ್ಟಲು ಬಳಸಿದ ತೋಳನ್ನು ಸಡಿಲವಾಗಿಡಬೇಕು ಮತ್ತು ಅದು ಹೃದಯ ಮಟ್ಟದಲ್ಲಿರಬೇಕು, ಉದಾರಹಣೆಗೆ ತೋಳನ್ನು ಮೇಜಿನ ಮೇಲೆ ಇರಿಸಿ ನಿರಾಳವಾಗಬಹುದು.[೧೦]

ಅಪಧಮನಿಯ ಒತ್ತಡದಲ್ಲಿ ದಿನದುದ್ದಕ್ಕೂ ವ್ಯತ್ಯಾಸಗಳಾಗುವುದರಿಂದ, ಒಟ್ಟು ವಿವರಗಳು ಹೋಲಿಕೆಗೆ ಅರ್ಹವಾಗಿದೆ ಎಂದು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ಬದಲಾವಣೆಗಳ ಮೇಲೆ ನಿಗಾವಿಡಲೆಂದು ಉದ್ದೇಶಿಸಿ ದೀರ್ಘಕಾಲಾವಧಿಗೆ ಹೊಂದಿಸಿದ ಮಾಪನಗಳನ್ನು ದಿನದ ಆಯಾ ಸಮಯಕ್ಕೆ ದಾಖಲಿಸಿಕೊಳ್ಳಬೇಕು. ಸೂಕ್ತ ಸಮಯಗಳು:

  • ಎಚ್ಚರವಾದ ತಕ್ಷಣ(ಮುಖ ತೊಳೆಯುವುದು/ವಸ್ತ್ರಧಾರಣೆ ಮತ್ತು ಉಪಹಾರ/ಪಾನೀಯ ಸೇವನೆಗೆ ಮುನ್ನ), ದೇಹವಿನ್ನೂ ವಿರಮಿಸಿಕೊಂಡಿರುವಾಗ
  • ಕೆಲಸ ಮುಗಿಸಿದ ಕೂಡಲೆ.

ಸ್ವಯಂಚಾಲಿತ ಸ್ವಯಂ-ಅಂತರ್ಗತ ರಕ್ತದೊತ್ತಡ ಮಾನಿಟರ್‌ಗಳು ಈಗ ದುಬಾರಿಯಲ್ಲದ ಬೆಲೆಯಲ್ಲಿ ದೊರೆಯುತ್ತವೆ, ಅವುಗಳ ಪೈಕಿ ಕೆಲವು ಆಸಿಲೋಮೆಟ್ರಿಕ್ ವಿಧಾನಕ್ಕೆ ಹೆಚ್ಚುವರಿಯಾಗಿ ಕೊರೊತ್ಕೋಫ್ ಮಾಪನ ಮಾಡುವ ಸಾಮಾರ್ಥ್ಯವನ್ನೂ ಹೊಂದಿವೆ. ಅಸಹಜ ಹೃದಯ ಬಡಿತ ಹೊಂದಿರುವ ರೋಗಿಗಳು ತಮ್ಮ ನಿಖರವಾದ ರಕ್ತದೊತ್ತಡವನ್ನು ಪಡೆಯಲು ಇವು ನೆರವಾಗುತ್ತದೆ.

ವರ್ಗೀಕರಣ ಬದಲಾಯಿಸಿ

ರಕ್ತದೊತ್ತಡದ ಈ ಕೆಳಗಿನ ವರ್ಗೀಕರಣ 18 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ವಯಸ್ಕರಿಗೆ ಅನ್ವಯವಾಗುತ್ತದೆ. ಈ ಕೆಳಗಿನವು ಆಸೀನ ಸ್ಥಿತಿಯಲ್ಲಿ ದಾಖಲಿಸಿದ ರಕ್ತದೊತ್ತಡದ ಮಾಪನಗಳ ಸರಾಸರಿ ಆಧಾರದ ಮೇಲೆ ಇವೆ, ವೈದ್ಯರಲ್ಲಿಗೆ 2 ಅಥವಾ ಹೆಚ್ಚು ಬಾರಿ ಭೇಟಿ ನೀಡಿದ್ದಾಗ ಸರಿಯಾಗಿ ಅಳತೆ ಮಾಡಿ ದಾಖಲಿಸಿಕೊಳ್ಳಲಾಗಿದೆ.[೭][೧೧]

ವಯಸ್ಕರ ರಕ್ತದೊತ್ತಡದ ವರ್ಗೀಕರಣ
ವಿಭಾಗ ಸಂಕೋಚನದ, mmHg ವ್ಯಾಕೋಚನದ , mmHg
ತೀರಾ ಕಡಿಮೆ ರಕ್ತದೊತ್ತಡ
< 90
< 60   
ಸಾಮಾನ್ಯ
 90 – 119
60 – 79    
ಆರಂಭದ ಅಧಿಕ ರಕ್ತದೊತ್ತಡ
120 – 139
80 – 89  
ಹಂತ 1 ಅಧಿಕ ರಕ್ತದೊತ್ತಡ
140 – 159
90 – 99  
ಹಂತ 2 ಅಧಿಕ ರಕ್ತದೊತ್ತಡ
≥ 160
≥ 100  

ಸಾಮಾನ್ಯ ಮೌಲ್ಯಗಳು ಬದಲಾಯಿಸಿ

ನೀಡಲಾದ ಜನಸಂಖ್ಯೆಯಲ್ಲಿ ಅಪಧಮನಿಯ ಒತ್ತಡದ ಸರಾಸರಿ ಲೆಕ್ಕಾಚಾರ ಸಾಧ್ಯವಾಗಬಹುದಾದರೆ, ವ್ಯಕ್ತಿಯಿಂದ ವ್ಯಕ್ತಿಗೆ ಭಾರಿ ವ್ಯತ್ಯಾಸಗಳು ಆಗ್ಗಿಂದಾಗ್ಗೆ ಆಗಬಹುದು; ವ್ಯಕ್ತಿಗಳಲ್ಲಿ ಕ್ಷಣದಿಂದ ಕ್ಷಣಕ್ಕೆ ಅಪಧಮನಿಯ ಒತ್ತಡ ವ್ಯತ್ಯಾಸವಾಗುತ್ತದೆ. ಹೆಚ್ಚಿನದ್ದಾಗಿ, ನೀಡಲಾದ ಯಾವುದೇ ಜನಸಂಖ್ಯೆಯ ಸರಾಸರಿ ತೆಗೆದರೆ ಅದರ ಒಟ್ಟು ಆರೋಗ್ಯದ ಬಗ್ಗೆ ಪ್ರಶ್ನಾರ್ಹ ಪರಸ್ಪರ ಸಂಬಂಧಗಳಿರಬಹುದು, ಆದ್ದರಿಂದ ಅಂತಹ ಸರಾಸರಿ ಮೌಲ್ಯಗಳ ಪ್ರಸ್ತುತತೆ ಕೂಡ ಅಷ್ಟೇ ಸಮಾನವಾಗಿ ಪ್ರಶ್ನಾರ್ಹವಾಗಿದೆ. ಆದಾಗ್ಯೂ, ಅಧಿಕ ರಕ್ತದೊತ್ತಡ ಹೊಂದಿರುವ 100 ಜನರ ಅಧ್ಯಯನ ಕೈಗೊಂಡಾಗ ಸರಾಸರಿ 112/64 mmHg ರಕ್ತದೊತ್ತಡ ಕಂಡು ಬಂದಿದೆ,[೧೨] ಅದು ಸಾಮಾನ್ಯ ಪರಿಮಿತಿಯಲ್ಲೇ ಇದೆ.

ಮಕ್ಕಳಲ್ಲಿ ಸಾಮಾನ್ಯ ಪರಿಮಿತಿಗಳು ವಯಸ್ಕರಿಗಿಂತ ಕಡಿಮೆಯಿರುತ್ತವೆ.[೧೩] ವಯಸ್ಸಾದವರಲ್ಲಿ ರಕ್ತದೊತ್ತಡದ ಮೌಲ್ಯಗಳು ಸಾಮಾನ್ಯ ವಯಸ್ಕರಿಗಿಂತ ಹೆಚ್ಚಿರುವುದು ಸರ್ವೇಸಾಧಾರಣ. ವಯಸ್ಸು ಮತ್ತು ಲಿಂಗ [೧೪] ಇತ್ಯಾದಿ ವಿಷಯಗಳು ರಕ್ತದೊತ್ತಡದ ಮೇಲೆ ಪ್ರಭಾವ ಬೀರುತ್ತವೆ. ವ್ಯಾಯಾಮ, ಭಾವನಾತ್ಮಕ ಪ್ರತಿಕ್ರಿಯೆ, ನಿದ್ರೆ, ಜೀರ್ಣಕ್ರಿಯೆ ಮತ್ತು ದಿನದ ಸಮಯಕ್ಕೆ ಅನುಗುಣವಾಗಿ ಒತ್ತಡ ಬದಲಾಗುತ್ತಾ ಹೋಗುತ್ತದೆ.

ಎಡ ಮತ್ತು ಬಲ ತೋಳಿನ ರಕ್ತದೊತ್ತಡದ ಮಾಪನಗಳಲ್ಲಿನ ವ್ಯತ್ಯಾಸಗಳು ಗೊತ್ತುಗುರಿಯಿಲ್ಲದ ಪ್ರವೃತ್ತಿಯನ್ನು ಹೊಂದಿರುತ್ತವೆ ಮತ್ತು ಸಾಕಷ್ಟು ಮಾಪನಗಳನ್ನು ತೆಗೆದುಕೊಂಡಲ್ಲಿ ಸರಾಸರಿ ಶೂನ್ಯದ ಸನಿಹದಲ್ಲಿರುತ್ತದೆ. ಆದಾಗ್ಯೂ, ಕೆಲವು ಸಣ್ಣ ಪ್ರಮಾಣದ ಪ್ರಕರಣಗಳಲ್ಲಿ 10 mmHgಗಿಂತಲೂ ಹೆಚ್ಚು ವ್ಯತ್ಯಾಸ ಸ್ಥಿರವಾಗಿ ಮುಂದುವರಿದಿರುವುದು ಕಂಡು ಬಂದಿದೆ, ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ತಪಾಸಣೆಯ ಅಗತ್ಯ ಬೀಳಬಹುದು, e.g. ಪ್ರತಿರೋಧಕ ಅಪಧಮನಿಯ ರೋಗ.[೧೫][೧೬]

ಅಪಧಮನಿಯ ಒತ್ತಡ 115/75 mmHgರಿಂದ ಆರಂಭಗೊಂಡು ಏರುತ್ತಾ ಹೋದಲ್ಲಿ ಹೃದಯನಾಳೀಯ ರೋಗದ ಅಪಾಯ ಸಾಧ್ಯತೆಗಳು ಹೆಚ್ಚುತ್ತಾ ಹೋಗಬಹುದು.[೧೭] ಈ ಹಿಂದೆ, ಅಧಿಕ ಅಪಧಮನಿಯ ಒತ್ತಡಕ್ಕೆ ಪೂರಕವಾದ ಸೂಚನೆಗಳು ಪ್ರಸ್ತುತವಿದ್ದಲ್ಲಿ ಮಾತ್ರ ಅಧಿಕ ರಕ್ತದೊತ್ತಡ ರೋಗ ನಿರ್ಣಯಿಸಲಾಗುತ್ತಿತ್ತು. UKನಲ್ಲಿ, ರೋಗಿಗಳ ಅಪಧಮನಿಯ ಒತ್ತಡ 140/90 mmHgರಷ್ಟಿದ್ದರೂ ಅದು ಸಾಮಾನ್ಯವೆಂದೇ ಪರಿಗಣಿಸಲಾಗುತ್ತಿದೆ.[೧೮]

ಅಪಧಮನಿಯ ಒತ್ತಡವನ್ನು ಮೇಲಿನ ಒತ್ತಡ ಪರಿಮಿತಿಗಳಿಂತ ಕೆಳಮಟ್ಟದಲ್ಲಿ ಕಾಪಾಡಿಕೊಂಡು ಬರುವ ಜನರ ಹೃದಯನಾಳೀಯ ಆರೋಗ್ಯ ದೀರ್ಘಕಾಲದಲ್ಲೂ ಸಾಕಷ್ಟು ಉತ್ತಮವಾಗಿರುತ್ತವೆ ಎಂಬುದನ್ನು ಪ್ರಾಯೋಗಿಕ ಪರೀಕ್ಷೆಗಳು ಸಾಬೀತುಪಡಿಸಿವೆ. ಇಂತಹ ಒತ್ತಡವನ್ನು ತಾವಾಗಿ ನಿಯಂತ್ರಿಸಲು ವಿಫಲರಾಗುವ ಮಂದಿ ಈ ಪರಿಮಿತಿಯೊಳಗೆ ಬಳಸುವ ಕಡಿಮೆ ಒತ್ತಡಗಳ ವಿಧಾನಗಳ ಆಕ್ರಮಣಶೀಲತೆ ಮತ್ತು ಸಂಬಂಧಿತ ಮೌಲ್ಯದ ಕುರಿತು ಪ್ರಧಾನ ವೈದ್ಯಕೀಯ ಚರ್ಚೆಗಳು ಕಳವಳ ವ್ಯಕ್ತಪಡಿಸಿವೆ. ಒತ್ತಡದ ಈ ಏರಿಕೆಗಳು ಹೆಚ್ಚಾಗಿ ವಯಸ್ಸಾದವರಲ್ಲಿ ಕಂಡು ಬಂದಿದೆಯಾದರೂ, ಇವು ಸಾಮಾನ್ಯ ಸಂಗತಿಯೆಂದೇ ಆಗ್ಗಿಂದಾಗ್ಗೆ ಪರಿಗಣಿಸಲಾಗಿದೆ. ಆದರೆ ಇವು ಹೆಚ್ಚುತ್ತಿರುವ ಅಸ್ವಸ್ಥತೆ ಮತ್ತು ಪ್ರಾಣಹಾನಿಗೆ ಕಾರಣವಾಗಿದೆ.

ಶರೀರ ವಿಜ್ಞಾನ ಬದಲಾಯಿಸಿ

ರಕ್ತಪರಿಚಲನಾ ವ್ಯವಸ್ಥೆಯ ಭೌತವಿಜ್ಞಾನ ಬಹಳ ಸಂಕೀರ್ಣವಾಗಿವೆ. ಅನೇಕ ಶಾರೀರಿಕ ಅಂಶಗಳು ಅಪಧಮನಿಯ ಒತ್ತಡದ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಲಾಗಿದೆ. ಅಂತೆಯೇ ಈ ಪ್ರತಿಯೊಂದು ಅಂಶಗಳು ಆಹಾರ ಕ್ರಮ, ವ್ಯಾಯಾಮ, ರೋಗ, ಔಷಧಿಗಳು ಅಥವಾ ಮಾದಕದ್ರವ್ಯ, ಒತ್ತಡ, ಬೊಜ್ಜು ಮತ್ತು ಇತ್ಯಾದಿ ದೈಹಿಕ ಅಂಶಗಳ ಪ್ರಭಾವಕ್ಕೆ ಒಳಗಾಗಬಹುದು.

ಕೆಲವು ಶಾರೀರಿಕ ಅಂಶಗಳು:

  • ಹೊರಸೂಸುವ(ಪಂಪ್) ಗತಿ. ರಕ್ತಪರಿಚಲನಾ ವ್ಯವಸ್ಥೆಯಲ್ಲಿ, ಈ ಪ್ರಮಾಣವನ್ನು ಹೃದಯದ ಗತಿಯೆನ್ನುತ್ತಾರೆ. ಇಲ್ಲಿ ದ್ರವರೂಪದ ರಕ್ತವನ್ನು ಹೃದಯ ಹೊರಸೂಸುತ್ತದೆ. ಹೃದಯದಿಂದ ರಕ್ತ ಹರಿಯುವಿಕೆಯ ಪ್ರಮಾಣವೇ ಹೃದಯದ ಔಟ್‌ಪುಟ್‌, ಇದನ್ನು ಆಘಾತದ ಮೊತ್ತದಿಂದ ಗುಣಿಸಿದಾಗ ಸಿಗುವ ಹೃದಯದ ಗತಿ (ಪ್ರತಿ ಸಂಕೋಚನಕ್ಕೆ ಹೃದಯದಿಂದ ಹೊರಸೂಸುವ ರಕ್ತದ ಮೊತ್ತ).ಆಘಾತದ ಮೊತ್ತ ಕಡಿಮೆಯಾಗದು ಎಂದು ಊಹಿಸಿಕೊಂಡ ಸ್ಥಿತಿಯಲ್ಲಿ ಹೃದಯದ ಗತಿ ಏರಿದರೆ, ಅಪಧಮನಿಯ ಒತ್ತಡವೂ ಹೆಚ್ಚಾಗುತ್ತದೆ.
  • ದ್ರವದ ಪ್ರಮಾಣ ಅಥವಾ ರಕ್ತದ ಪ್ರಮಾಣವೆಂದರೆ, ಪ್ರಸ್ತುತ ದೇಹದಲ್ಲಿರುವ ರಕ್ತದ ಒಟ್ಟು ಪ್ರಮಾಣ. ದೇಹದಲ್ಲಿ ಹೆಚ್ಚು ರಕ್ತವಿದ್ದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ರಕ್ತ ಹೃದಯಕ್ಕೆ ವಾಪಸಾಗಿ ಹೃದಯದ ಔಟ್‌ಪುಟ್‌ ಪ್ರಕ್ರಿಯೆ ಆರಂಭವಾಗುತ್ತದೆ. ಆಹಾರದ ಜೊತೆಗೆ ಸೇವಿಸುವ ಉಪ್ಪು ಮತ್ತು ಹೆಚ್ಚಿದ ರಕ್ತದ ಪ್ರಮಾಣದ ನಡುವೆ ಕೆಲವು ಸಂಬಂಧಗಳಿದ್ದು, ಇದರಿಂದಾಗಿ ಅಧಿಕ ಅಪಧಮನಿಯ ಒತ್ತಡವುಂಟಾಗುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾದರೂ, ಸ್ವ-ನಿಯಂತ್ರಿತ ನರಗಳ ವ್ಯವಸ್ಥೆಯ ಪ್ರತಿಕ್ರಿಯೆ ಮತ್ತು ಹೆಚ್ಚಾಗಿ ರೆನಿನ್-ಆಂಜಿಯೋಟೆನ್ಸಿನ್ ವ್ಯವಸ್ಥೆಯನ್ನು ಅವಲಂಬಿಸಿದೆ.
  • ಪ್ರತಿರೋಧ. ರಕ್ತ ಪರಿಚಲನಾ ವ್ಯವಸ್ಥೆಯಲ್ಲಿ ಇದು ರಕ್ತನಾಳಗಳ ಪ್ರತಿರೋಧ. ಪ್ರತಿರೋಧವು ಹೆಚ್ಚಾದಷ್ಟು, ರಕ್ತದ ಹರಿವಿನ ಪ್ರವಾಹಕ್ಕೆ ಪ್ರತಿರೋಧವಾಗಿ ಬರುವ ಅಪಧಮನಿಯ ಒತ್ತಡವೂ ಹೆಚ್ಚಾಗುತ್ತದೆ. ರಕ್ತನಾಳದ ಪ್ರತಿರೋಧ ಶಕ್ತಿಯು ರೇಡಿಯಸ್‌(ರೇಡಿಯಸ್ ‌ದೊಡ್ಡದಿದ್ದಲ್ಲಿ, ಪ್ರತಿರೋಧ ಶಕ್ತಿ ಕಡಿಮೆಯಿರುತ್ತದೆ), ರಕ್ತನಾಳದ ಉದ್ದ (ರಕ್ತನಾಳ ಉದ್ದವಿದ್ದಲ್ಲಿ ಹೆಚ್ಚು ಪ್ರತಿರೋಧ ಶಕ್ತಿಯಿರುತ್ತದೆ), ಮತ್ತು ರಕ್ತನಾಳದ ಗೋಡೆಗಳ ನುಣುಪಾಗಿರುವಿಕೆಗೆ ಸಂಬಂಧಿಸಿದೆ. ಅಪಧಮನಿಯ ಗೋಡೆಗಳಲ್ಲಿ ಕೊಬ್ಬಿನಾಂಶಗಳು ತುಂಬುವುದರಿಂದ ನುಣುಪು ಕಡಿಮೆಯಾಗುತ್ತದೆ. ವ್ಯಾಸೊಕಾನ್‌ಸ್ಟ್ರಿಕ್ಟರ್ ಎಂಬ ವಸ್ತು ರಕ್ತನಾಳಗಳ ಗಾತ್ರವನ್ನು ಕಿರಿದಾಗಿಸುವುದರಿದಾಂಗಿ, ರಕ್ತದೊತ್ತಡ ಹೆಚ್ಚುತ್ತದೆ. ವ್ಯಾಸೊಡಿಲೇಟರ್‌ಗಳು (ನೈಟ್ರೋಗ್ಲಿಸರಿನ್ ನಂತಹ) ರಕ್ತನಾಳಗಳ ಗಾತ್ರವನ್ನು ಹೆಚ್ಚಿಸಿ, ಅಪಧಮನಿಯ ಒತ್ತಡವನ್ನು ಇಳಿಸುತ್ತವೆ. ಪ್ರತಿರೋಧಕ, ಮತ್ತು ಗಾತ್ರೀಯ ಹರಿಯುವಿಕೆಯ ಪ್ರಮಾಣ(Q)ದ ಜೊತೆಗಿನ ಸಂಬಂಧ ಮತ್ತು ರಕ್ತನಾಳದ ಎರಡು ತುದಿಗಳ ಒತ್ತಡದಲ್ಲಿನ ವ್ಯತ್ಯಾಸಗಳನ್ನು ಪೊಯ್‌ಸ್ಯುಲ್ಲೇಸ್‌ನ ನಿಯಮ ವಿವರಿಸುತ್ತದೆ.
  • ದ್ರವದ ಜಿಗುಟು ಗುಣ ಅಥವಾ ದಪ್ಪ. ರಕ್ತ ದಪ್ಪವಾದಲ್ಲಿ, ಅಪಧಮನಿಯ ಒತ್ತಡ ಹೆಚ್ಚುತ್ತದೆ. ಕೆಲವು ವೈದ್ಯಕೀಯ ಪರಿಸ್ಥಿತಿಗಳು ರಕ್ತದ ಜಿಗುಟು ಗುಣವನ್ನು ಹೋಗಲಾಡಿಸಬಲ್ಲವು. ಉದಾಹರಣೆಗೆ, ಕೆಂಪು ರಕ್ತ ಕಣಗಳು ಕಡಿಮೆಯಿದ್ದಲ್ಲಿ , ಅನಿಮಿಯಾ, ಜಿಗುಟು ಗುಣವೂ ಕಡಿಮೆಯಿರುತ್ತದೆ, ಅಂತೆಯೇ ಹೆಚ್ಚು ಕೆಂಪು ರಕ್ತ ಕಣಗಳಿದ್ದಲ್ಲಿ ಜಿಗುಟುತ್ವವೂ ಹೆಚ್ಚಿರುತ್ತದೆ. ರಕ್ತದ ಸಕ್ಕರೆ ಪ್ರಮಾಣ ಹೆಚ್ಚುವುದರಿಂದ ಕೂಡ ರಕ್ತ ದಪ್ಪವಾಗುತ್ತದೆ- ಸಕ್ಕರೆ ದ್ರಾವಣವನ್ನು ಪಂಪ್ ಮಾಡುವುದನ್ನು ಊಹಿಸಿಕೊಳ್ಳಿ. ಆಸ್ಪಿರಿನ್ ಮತ್ತು ರಕ್ತ ತೆಳ್ಳಗೆ ಮಾಡುವ ಔಷಧಿಗಳು ರಕ್ತದ ಜಿಗುಟು ಗುಣವನ್ನು ಕಡಿಮೆ ಮಾಡುತ್ತವೆ ಎಂಬ ಅಭಿಪ್ರಾಯ ಈವರೆಗಿತ್ತು, ಆದರೆ ಈ ಔಷಧಿಗಳು ರಕ್ತವು ಹೆಪ್ಪುಗಟ್ಟುವ ಪ್ರವೃತ್ತಿಯನ್ನು ಕಡಿಮೆ ಮಾಡುತ್ತವೆ ಎಂಬುದು ಅಧ್ಯಯನದ [೧೯] ವೇಳೆ ಕಂಡು ಬಂದಿದೆ.

ಸಾಮಾನ್ಯವಾಗಿ, ಪ್ರತಿಯೊಬ್ಬ ವ್ಯಕ್ತಿಯ ಸ್ವ-ನಿಯಂತ್ರಿತ ನರಗಳ ವ್ಯವಸ್ಥೆಯು ಈ ಎಲ್ಲಾ ಪಾರಸ್ಪರಿಕ ಅಂಶಗಳಿಗೆ ಪ್ರತಿಕ್ರಿಯಿಸುತ್ತದೆ ಮತ್ತು ನಿಯಂತ್ರಿಸುತ್ತದೆ, ಹೀಗಿರುವಾಗ ಮೇಲಿನ ವಿಷಯಗಳು ಪ್ರಮುಖವಿದ್ದಾಗ್ಯೂ, ವ್ಯಕ್ತಿಯ ಅಪಧಮನಿಯ ನೈಜ ಒತ್ತಡದ ಪ್ರತಿಕ್ರಿಯೆಯಲ್ಲಿ ವ್ಯಾಪಕವಾಗಿ ವ್ಯತ್ಯಾಸಗಳಾಗುತ್ತವೆ, ಏಕೆಂದರೆ ನರಗಳ ವ್ಯವಸ್ಥೆ ಮತ್ತು ಅಂಗಗಳ ಕೊನೆಯ ಕ್ಷಣಾರ್ಧ ಮತ್ತು ನಿಧಾನ ಗತಿಯ ಪ್ರತಿಕ್ರಿಯೆಗಳು ಇದಕ್ಕೆ ಕಾರಣ. . ಕ್ರಿಯೆಗಳು ಮತ್ತು ರಕ್ತದೊತ್ತಡದಲ್ಲಿ ಕ್ಷಣದಿಂದ ಕ್ಷಣಕ್ಕೆ ಬದಲಾವಣೆ ತರಲು ಈ ಪ್ರತಿಕ್ರಿಯೆಗಳು ಬಹಳ ಪರಿಣಾಮಕಾರಿ.

ಸರಾಸರಿ ಅಪಧಮನಿಯ ಒತ್ತಡ ಬದಲಾಯಿಸಿ

ಸಂಪೂರ್ಣ ಹೃದಯದ ಆವರ್ತನದ ಸರಾಸರಿಯನ್ನು ಸರಾಸರಿ ಅಪಧಮನಿಯ ಒತ್ತಡ (MAP)ವೆನ್ನುತ್ತಾರೆ ಮತ್ತು ಇದನ್ನು ಹೃದಯದ ಔಟ್‌ಪುಟ್‌ (CO), ದೇಹದ ನಾಳೀಯ ಪ್ರತಿರೋಧಕ (SVR) ಮತ್ತು ಕೇಂದ್ರ ಅಭಿಧಮನಿಯ ಒತ್ತಡ (CVP) ನಿರ್ಧರಿಸುತ್ತದೆ.[೨೦]

 

ಸಂಕೋಚನದ ಒತ್ತಡದ ಮಾಪನಗಳ ಮೂಲಕ MAP ಯನ್ನು ಅಂದಾಜು ಮಾಡಬಹುದು.    ಮತ್ತು ವ್ಯಾಕೋಚನದ ಒತ್ತಡದ ಮೂಲಕವೂ ಇದು ಸಾಧ್ಯ.  ಇದಕ್ಕೆ ಹೃದಯ ಬಡಿತದ ಪ್ರಮಾಣ ಸಾಮಾನ್ಯ ಸ್ಥಿತಿಯಲ್ಲಿರಬೇಕು,[೨೦]

 

ನಾಡಿಯ ಒತ್ತಡ ಬದಲಾಯಿಸಿ

ಹೃದಯದ ಔಟ್‌ಪುಟ್‌ನ ಮಿಡಿತದ ಸ್ವಭಾವದಿಂದಾಗಿ ಅಪಧಮನಿಯ ಒತ್ತಡದಲ್ಲಿ ಏರಿಳಿತಗಳಾಗುತ್ತವೆ, i.e. ಹೃದಯ ಬಡಿತ. ನಾಡಿಯ ಒತ್ತಡವನ್ನು ಹೃದಯದ ಆಘಾತದ ವರ್ತನೆ, ಮಹಾಪಧಮನಿಯ ಅನುಸರಣೆ (ವಿಸ್ತರಣಾ ಸಾಮಾರ್ಥ್ಯ), ಮತ್ತು ಅಪಧಮನಿಯ ವೃಕ್ಷದಲ್ಲಿ ಹರಿವಿನ ಪ್ರತಿರೋಧ ನಿರ್ಧರಿಸುತ್ತದೆ. ಮಹಾಪಧಮನಿಯು ಒತ್ತಡಕ್ಕೆ ಒಳಗಾಗಿ ವಿಸ್ತರಣೆಯಾಗುವುದರಿಂದ, ಹೃದಯ ಬಡಿತದ ವೇಳೆ ಹೃದಯದಿಂದ ಹೊರಡುವ ರಕ್ತದ ವೇಗವನ್ನು ಅರಗಿಸಿಕೊಳ್ಳುವಲ್ಲಿ ಸಫಲವಾಗುತ್ತದೆ. ಒಂದು ವೇಳೆ ಮಹಾಪಧಮನಿ ಆಜ್ಞಾನುವರ್ತಿಯಾಗಿರದೇ ಇರುತ್ತಿದ್ದಲ್ಲಿ, ನಾಡಿಯ ಒತ್ತಡ ಹೇಗಿರಬೇಕಾಗಿತ್ತೋ ಹಾಗಿರುವ ಬದಲು ಈ ರೀತಿಯಲ್ಲಿ ಇಳಿಯುತ್ತದೆ.[೨೧]

ಸಂಕೋಚನದ ಮತ್ತು ವ್ಯಾಕೋಚನದ ಒತ್ತಡಗಳ ಮಾಪನಗಳಲ್ಲಿನ ವ್ಯತ್ಯಾಸಗಳನ್ನು ಬಳಸಿ ನಾಡಿಯ ಒತ್ತಡವನ್ನು ಸರಳವಾಗಿ ಲೆಕ್ಕ ಹಾಕಬಹುದು,[೨೧]

 

ನಾಳೀಯ ಪ್ರತಿರೋಧ ಬದಲಾಯಿಸಿ

ಭೂತ ಕನ್ನಡಿಯ ಸಹಾಯವಿಲ್ಲದೆ ನೋಡಬಹುದಾದ ದೊಡ್ಡ ಅಪಧಮನಿಗಳು, ಹೆಚ್ಚು ಹರಿವಿನ ಪ್ರಮಾಣ ಹೊಂದಿರುವ ಕಡಿಮೆ ಪ್ರತಿರೋಧದ ಕೊಳವೆಗಳಾಗಿವೆ (ಅಪಧಮನಿಯಲ್ಲಿ ಹೊಸತಾಗಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಊಹಿಸಿಕೊಂಡು). ಅವು ಒತ್ತಡದಲ್ಲಿ ಸಣ್ಣ ಹನಿಯನ್ನಷ್ಟೇ ಸೃಜಿಸುತ್ತವೆ.

ನಾಳೀಯ ಒತ್ತಡ ತರಂಗ ಬದಲಾಯಿಸಿ

ನಾಳೀಯ ಒತ್ತಡ ತರಂಗ (VPW) ಎಂಬ ಪರಿಕಲ್ಪನೆಯನ್ನು ಆಧುನಿಕ ಶರೀರ ವಿಜ್ಞಾನ ಅಭಿವೃದ್ಧಿಪಡಿಸಿತು. ಸಂಕೋಚನ ವೇಳೆ ತರಂಗವನ್ನು ಹೃದಯ ಸೃಷ್ಟಿಸುತ್ತದೆ ಮತ್ತು ಇದು ಆರೋಹಣದ ಮಹಾಪಧಮನಿಯಲ್ಲಿ ಹುಟ್ಟುತ್ತದೆ. ಇದು ರಕ್ತದ ಹರಿವಿಗಿಂತಲೂ ವೇಗವಾಗಿ ರಕ್ತನಾಳದ ಗೋಡೆಗಳ ಮೂಲಕ ಬಾಹ್ಯದ ಅಪಧಮನಿಗಳಿಗೆ ರವಾನೆಯಾಗುತ್ತದೆ. ಆದ್ದರಿಂದ ಬಾಹ್ಯದ ನಾಡಿ ಮಿಡಿತ ಪರೀಕ್ಷಿಸಿದಂತೆ ಒತ್ತಡ ತರಂಗವನ್ನೂ ಸ್ಪರ್ಶ ಪರೀಕ್ಷೆಯಿಂದ ತಿಳಿಯಬಹುದು. ಬಾಹ್ಯದ ಅಭಿಧಮನಿಗಳಲ್ಲಿ ಈ ತರಂಗ ಪ್ರತಿಫಲಿಸುತ್ತಿದ್ದಂತೆ ಕೇಂದ್ರಗಾಮಿಯಾಗಿ ಸಾಗುತ್ತದೆ .ಅಲ್ಲಿ ಪ್ರತಿಫಲನಗಳ ಪ್ರಧಾನ ಅಂಶಗಳು ಮತ್ತು ಮೂಲ ತರಂಗ ಸಂಧಿಸುತ್ತದೆ, ರಕ್ತನಾಳದ ಒಳಗಿನ ಒತ್ತಡ ಮಹಾಪಧಮನಿಯ ನೈಜ ಒತ್ತಡಕ್ಕಿಂತ ಹೆಚ್ಚಿರುತ್ತದೆ. ಕಾಲುಗಳ ಬಾಹ್ಯ ಅಪಧಮನಿಗಳ ಒಳಗೆ ಅಪಧಮನಿಯ ಒತ್ತಡವೇಕೆ ಮತ್ತು ಮಹಾಪಧಮನಿಯಲ್ಲಿ ಬಾಹುಗಳು ಅಪಧಮನಿಯ ಒತ್ತಡಕ್ಕಿಂತ ಹೆಚ್ಚು,[೨೨][೨೩][೨೪] ಮತ್ತು ಪ್ರತಿಯಾಗಿ ಹಿಮ್ಮಡಿಯಲ್ಲಿ ಕಂಡ ಅಧಿಕ ಒತ್ತಡಗಳನ್ನು ಸಾಮಾನ್ಯ ಹಿಮ್ಮಡಿ ತೋಳಿನ ಒತ್ತಡ ಸೂಚಿಕೆಯ ಮೌಲ್ಯಗಳನ್ನು ಹೊಂದಿದ ತೋಳಿನ ಜೊತೆ ಹೋಲಿಸುವುದೇಕೆ ಎಂಬುದನ್ನು ಈ ಪರಿಕಲ್ಪನೆ ವಿವರಿಸುತ್ತದೆ.

ನಿಯಂತ್ರಣ ಬದಲಾಯಿಸಿ

ಅಪಧಮನಿಯ ಒತ್ತಡದ ಅಂತರ್ವರ್ಧಕ ನಿಯಂತ್ರಣವನ್ನು ಇನ್ನೂ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲಾಗಿಲ್ಲ. ಪ್ರಸ್ತುತ, ಅಪಧಮನಿಯ ಒತ್ತಡವನ್ನು ನಿಯಂತ್ರಿಸುವ ಮೂರು ವಿಧಾನಗಳನ್ನು ಮಾತ್ರ ಸ್ಪಷ್ಟವಾಗಿ ನಿರೂಪಿಸಲಾಗಿದೆ.

RAS ಮತ್ತು ಆಲ್ಡೊಸ್ಟ್ರಿರಾನ್ ಬಿಡುಗಡೆ ನಡುವಿನ ಕೊಂಡಿ ಸೂಚಿಸಿರುವಂತೆ, ಮೇಲಿನ ವಿವಿಧ ವಿಧಾನಗಳು ಪರಸ್ಪರ ಸ್ವತಂತ್ರವಾಗಿರಬೇಕೆಂಬ ಅವಶ್ಯಕತೆಯೇನಿಲ್ಲ. ಪ್ರಸ್ತುತ, RAS ವ್ಯವಸ್ಥೆಯನ್ನು ವಿಜ್ಞಾನರೀತ್ಯಾವಾಗಿ ACE ಪ್ರತಿರೋಧಕಗಳು ಮತ್ತು ಆಂಜಿಯೋಟೆನ್ಸಿನ್ II ಪ್ರತಿವರ್ತಿ ಸ್ನಾಯು ಗ್ರಾಹಿ‌ಗಳು ಗುರಿ ಮಾಡಿಕೊಂಡಿವೆ. ಆಲ್ಡೊಸ್ಟಿರಾನ್ ಪ್ರತಿವರ್ತಿ ಸ್ನಾಯು ಆಗಿರುವ ಸ್ಪಿರನೊಲಾಕ್ಟೋನ್ ಆಲ್ಡೊಸ್ಟಿರಾನ್ ವ್ಯವಸ್ಥೆಯನ್ನು ನೇರವಾಗಿ ಗುರಿ ಮಾಡಿಕೊಂಡಿದೆ. ಮೂತ್ರವರ್ಧಕಗಳು ದ್ರವ ಧಾರಣಶಕ್ತಿಯನ್ನು ಗುರಿಯಾಗಿಸಬಹುದು; ಮೂತ್ರವರ್ಧಕಗಳು ರಕ್ತ ಪ್ರಮಾಣದ ಮೇಲೆ ಪರಿಣಾಮ ಬೀರುವುದರಿಂದ ಮೂತ್ರ ವಿಸರ್ಜನೆಯ ಉದ್ವೇಗವುಂಟಾಗುತ್ತದೆ. ಸಾಮಾನ್ಯವಾಗಿ, ಅಧಿಕ ರಕ್ತದೊತ್ತಡದಲ್ಲಿ ಬ್ಯಾರೊರ್‌ಸೆಪ್ಟರ್‌ ಪ್ರತಿವರ್ತನ ಗುರಿಯಾಗಿಲ್ಲ, ಏಕೆಂದರೆ ಒಂದು ವೇಳೆ ರಕ್ತದೊತ್ತಡವನ್ನು ನಿರ್ಬಂಧಿಸಿದಲ್ಲಿ, ವ್ಯಕ್ತಿಗಳು ಅರ್ಥೊಸ್ಟೇಟಿಕ್ ತೀರಾ ಕಡಿಮೆ ರಕ್ತದೊತ್ತಡಕ್ಕೆ ಒಳಗಾಗಬಹುದು ಮತ್ತು ಪ್ರಜ್ಞಾಶೂನ್ಯರಾಗಬಹುದು.

ರೋಗ-ಶರೀರ ವಿಜ್ಞಾನ ಬದಲಾಯಿಸಿ

ಅತಿ ಅಪಧಮನಿಯ ಒತ್ತಡ ಬದಲಾಯಿಸಿ

 
ಮರುಕಳಿಸುವ ಅತಿ ರಕ್ತದೊತ್ತಡದ ತೊಡಕುಗಳ ಮೇಲ್ನೋಟ

ಅಪಧಮನಿಯ ಅಧಿಕ ರಕ್ತದೊತ್ತಡ ಇತರ ಸಮಸ್ಯೆಗಳ ಸೂಚನೆಯಾಗಿರಬಹುದು ಮತ್ತು ದೀರ್ಘ ಕಾಲದಲ್ಲಿ ಪ್ರತಿಕೂಲ ಪರಿಣಾಮವನ್ನು ಬೀರಬಹುದು. ಕೆಲವೊಮ್ಮೆ ಅದು ತೀವ್ರ ಸಮಸ್ಯೆಯಾಗಿರಬಹುದು, ಉದಾಹರಣೆಗೆ ಅಧಿಕ ಒತ್ತಡದ ತುರ್ತು.

ಅಪಧಮನಿಯ ಒತ್ತಡದ ಎಲ್ಲ ಮಟ್ಟಗಳು ಅಪಧಮನಿಯ ಗೋಡೆಗಳ ಮೇಲೆ ಯಾಂತ್ರಿಕ ಒತ್ತಡ ಹಾಕುತ್ತವೆ. ಅಧಿಕ ಒತ್ತಡಗಳು ಹೃದಯದ ಕೆಲಸವನ್ನು ಹೆಚ್ಚಿಸುತ್ತವೆ ಮತ್ತು ಅಪಧಮನಿಯ ಗೋಡೆಗಳೊಳಗೆ ಅಥೆರೋಮಾ ಎಂಬ ಅನಾರೋಗ್ಯಕರ ಅಂಗಾಂಶ ಹುಟ್ಟಿಕೊಂಡು ಬೆಳವಣಿಗೆಯಾಗುತ್ತಾ ಸಾಗುತ್ತದೆ. ಪ್ರಸಕ್ತವಿರುವ ಹೆಚ್ಚಿನ ಒತ್ತಡದಿಂದಾಗಿ ಅಧಿಕ ಒತ್ತಡವುಂಟಾಗುತ್ತದೆ ಮತ್ತು ಇದರಿಂದಾಗಿ ಅಥೆರೋಮಾಗಳು ಹೆಚ್ಚುತ್ತವೆ ಮತ್ತು ಹೃದಯದ ಸ್ನಾಯು ದಪ್ಪವಾಗುತ್ತದೆ, ದೊಡ್ಡದಾಗುತ್ತದೆ ಮತ್ತು ಕಾಲಾನಂತರ ಬಲಹೀನವಾಗುತ್ತದೆ.

ಪದೇ ಪದೇ ಮರುಕಳಿಸುವ ಅಧಿಕ ರಕ್ತದೊತ್ತಡವು ಅಪಾಯಕಾರಿಯಾಗಿದ್ದು ಆಘಾತಗಳು, ಹೃದಯ ಸ್ತಂಭನ, ಹೃದಯ ವೈಫಲ್ಯ ಮತ್ತು ಅಪಧಮನಿಯ ಊತಗಳಿಗೆ ಕಾರಣವಾಗಬಹುದು, ಅಲ್ಲದೆ ಮತ್ತು ದೀರ್ಘಕಾಲದ ಮೂತ್ರಪಿಂಡ ವೈಫಲ್ಯಕ್ಕೆ ಇದು ಪ್ರಮುಖ ಕಾರಣವಾಗಬಹುದು. ಅಪಧಮನಿಯ ಒತ್ತಡದಲ್ಲಿನ ಮಧ್ಯಮ ಏರಿಕೆಯಿಂದ ಕೂಡ ಜೀವನ ನಿರೀಕ್ಷೆ ಕುಂಠಿತಗೊಳ್ಳುತ್ತದೆ. ತೀವ್ರ ಅತಿ ಒತ್ತಡಗಳಲ್ಲಿ, ಅಂದರೆ ಅಪಧಮನಿಯ ಒತ್ತಡ 50% ಅಥವಾ ಸರಾಸರಿಗಿಂತ ಹೆಚ್ಚಿದ್ದಾಗ, ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಒಬ್ಬ ವ್ಯಕ್ತಿಯು ಹೆಚ್ಚು ವರ್ಷಗಳ ಕಾಲ ಬದುಕುವುದು ಕಷ್ಟ ಸಾಧ್ಯವಾದೀತು.[೨೬]

ಈ ಹಿಂದೆ, ವ್ಯಾಕೋಚನದ ಒತ್ತಡಕ್ಕೆ ಹೆಚ್ಚು ಗಮನ ಕೇಂದ್ರೀಕರಿಸಲಾಗಿತ್ತು; ಆದರೆ ಅತಿ ಸಂಕೋಚನ ಒತ್ತಡ ಮತ್ತು ಅತಿ ನಾಡಿ ಒತ್ತಡ (ಸಂಕೋಚನದ ಮತ್ತು ವ್ಯಾಕೋಚನದ ಒತ್ತಡದ ನಡುವಿನ ಅಂಕಿ ವ್ಯತ್ಯಾಸ) ಎರಡೂ ಅಪಾಯಕಾರಿ ಎಂಬುದನ್ನು ಈಗ ಗುರುತಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ, ಅತಿ ವ್ಯಾಕೋಚನದ ಒತ್ತಡದ ಇಳಿಕೆ ಕೂಡ ಅಪಾಯಕಾರಿ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ, ಸಂಕೋಚನದ ಮತ್ತು ವ್ಯಾಕೋಚನದ ಒತ್ತಡಗಳ ವ್ಯತ್ಯಾಸಗಳು ಇದಕ್ಕೆ ಪ್ರಾಯಶಃ ಕಾರಣವಾಗಿರಬಹುದು(ನಾಡಿ ಒತ್ತಡ ಲೇಖನವನ್ನು ನೋಡಿರಿ).

ಕಡಿಮೆ ಅಪಧಮನಿಯ ಒತ್ತಡ ಬದಲಾಯಿಸಿ

ರಕ್ತದೊತ್ತಡ ತೀರಾ ಕಡಿಮೆಯಿರುವುದನ್ನು ತೀರಾ ಕಡಿಮೆ ರಕ್ತದೊತ್ತಡವೆನ್ನುತ್ತಾರೆ. ಅಧಿಕ ರಕ್ತದೊತ್ತಡ ದ ಉಚ್ಚಾರಣೆ ಇದನ್ನೇ ಹೋಲುವ ಕಾರಣ ಗೊಂದಲಗಳಿಗೆ ಕಾರಣವಾಗಬಹುದು. ತಲೆತಿರುಗುವಿಕೆ, ಪ್ರಜ್ಞೆ ತಪ್ಪುವುದು ಅಥವಾ ತೀವ್ರ ಪ್ರಕರಣಗಳಾದ ಆಘಾತ ಇತ್ಯಾದಿಗಳ ಸೂಚನೆ ಅಥವಾ ಚಿಹ್ನೆ ಕಂಡು ಬಂದಲ್ಲಿ ತೀರಾ ಕಡಿಮೆ ರಕ್ತದೊತ್ತಡ ಬಗ್ಗೆ ವೈದ್ಯಕೀಯ ತಪಾಸಣೆ ಅವಶ್ಯವಾಗಬಹುದು.[೧೧]

ಅಪಧಮನಿಯ ಒತ್ತಡ ಮತ್ತು ರಕ್ತದ ಹರಿಯುವಿಕೆ ಒಂದು ನಿರ್ದಿಷ್ಟ ಹಂತದಿಂದ ಕೆಳಗಿಳಿದಾಗ, ಮೆದುಳಿನ ಸೇಚನೆ ಗಂಭೀರವಾಗಿ ಇಳಿಯುತ್ತದೆ (i.e., ರಕ್ತದ ಪೂರೈಕೆ ಸಾಕಷ್ಟಿಲ್ಲದಾಗ), ಮತ್ತು ತಲೆಭಾರವಾಗುವುದು, ತಲೆತಿರುಗುವುದು, ಬಲಹೀನತೆ ಅಥವಾ ಪ್ರಜ್ಞೆ ತಪ್ಪುವಿಕೆಗೆ ಕಾರಣವಾಗಬಹುದು.

ಕೆಲವೊಮ್ಮೆ ಕುಳಿತಿದ್ದ ರೋಗಿಯು ಎದ್ದುನಿಂತಾಗಲೂ ಅಪಧಮನಿಯ ಒತ್ತಡ ಗಮನಾರ್ಹವಾಗಿ ಇಳಿಯುತ್ತದೆ. ಇದನ್ನು ಅರ್ಥೊಸ್ಟಾಟಿಕ್ ತೀರಾ ಕಡಿಮೆ ರಕ್ತದೊತ್ತಡವೆನ್ನುತ್ತಾರೆ (ಭಂಗಿಯ ತೀರಾ ಕಡಿಮೆ ರಕ್ತದೊತ್ತಡ); ದೇಹದ ರಕ್ತನಾಳಗಳಿಂದ ರಕ್ತದ ಪ್ರಮಾಣ ಹೃದಯಕ್ಕೆ ವಾಪಸಾಗುವುದನ್ನು ಗುರುತ್ವವು ಕಡಿಮೆಮಾಡುತ್ತದೆ, ಇದರಿಂದಾಗಿ ಆಘಾತ ಪ್ರಮಾಣ ಮತ್ತು ಹೃದಯದ ಔಟ್‌ಪುಟ್‌ ಕೂಡ ಕಡಿಮೆಯಾಗುತ್ತದೆ.

ಜನರು ಆರೋಗ್ಯವಾಗಿದ್ದಾಗ, ಅವರ ಹೃದಯದ ಕೆಳಗಿರುವ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ಗುರುತ್ವದ ಪರಿಣಾಮವನ್ನು ಸರಿದೂಗಿಸುವುದಕ್ಕಾಗಿ ಮತ್ತು ಕನಿಷ್ಠಗೊಳಿಸಲು ಹೃದಯದ ಗತಿ ಏರುತ್ತದೆ. ಈ ಪಕ್ರಿಯೆಯನ್ನು ಸ್ವ-ನಿಯಂತ್ರಿತ ನರಗಳ ವ್ಯವಸ್ಥೆ ಯಾದೃಚ್ಛಿಕವಾಗಿ ಕೈಗೊಳ್ಳುತ್ತದೆ. ಸಂಪೂರ್ಣವಾಗಿ ಹೊಂದಿಕೊಳ್ಳಲು ಈ ವ್ಯವಸ್ಥೆಗೆ ಕೆಲವು ಕ್ಷಣಗಳ ಅಗತ್ಯವಿದೆ ಮತ್ತು ಸರಿದೂಗಿಸುವುದು ತೀರಾ ನಿಧಾನವಾದಾಗ, ವ್ಯಕ್ತಿಯು ಮೆದುಳಿಗೆ ರಕ್ತ ಹರಿಯುವ ಪ್ರಮಾಣ ಕುಂಠಿತಗೊಳ್ಳುತ್ತದೆ, ಅಲ್ಲದೆ ತಲೆತಿರುಗುವಿಕೆ ಮತ್ತು ಜ್ಞಾನ ತಪ್ಪುವ ಸಾಧ್ಯತೆಗಳಿವೆ. G-ಲೋಡಿಂಗ್ ‌ನಲ್ಲಿ ಏರಿಕೆಯಾಗುತ್ತದೆ, ನಿತ್ಯ ಏರೊಬ್ಯಾಟಿಕ್‌ನಲ್ಲಿ ತೊಡಗಿರುವವರಿಗೆ ಅಥವಾ ಯುದ್ಧ ಪೈಲಟ್ ‌ಗಳಿಗೆ ಇದರ ಅನುಭವವಾಗುತ್ತದೆ, 'ಸೆಳೆಯುವ Gs', ಅಂತಹವರಿಗೆ ಇದರ ಪರಿಣಾಮ ಹೆಚ್ಚು. ಗುರುತ್ವಕ್ಕೆ ಲಂಬವಾಗಿ ದೇಹವನ್ನು ಹೊಂದಿಸಿಕೊಳ್ಳುವುದರಿಂದ ಈ ಸಮಸ್ಯೆಯನ್ನು ಬಹುಮಟ್ಟಿಗೆ ಹೋಗಲಾಡಿಸಬಹುದು.

ಕಡಿಮೆ ಅಪಧಮನಿಯ ಒತ್ತಡದಿಂದಾಗುವ ಇತರ ಪರಿಣಾಮಗಳು:

ಆಘಾತ ಒಂದು ಜಟಿಲ ಪರಿಸ್ಥಿತಿಯಾಗಿದ್ದು, ಸೇಚನೆ ಇಳಿದು ಗಂಭೀರವಾಗುತ್ತದೆ. ರಕ್ತದ ಪ್ರಮಾಣ ನಷ್ಟವಾದಲ್ಲಿ ಸಾಮಾನ್ಯವಾಗಿ ಅನುಸರಿಸುವ ವಿಧಾನಗಳೆಂದರೆ, ಹೃದಯಕ್ಕೆ ವಾಪಸಾಗುವ ರಕ್ತದ ಪ್ರಮಾಣವನ್ನು ಬೇಕಾದಷ್ಟು ತಗ್ಗಿಸಿ ಮತ್ತು/ ಅಥವಾ ಹೃದಯ ಪಂಪ್ ‌ಮಾಡುವುದನ್ನು ನಿಧಾನಗೊಳಿಸಿ ರಕ್ತನಾಳಗಳೊಳಗೆ ರಕ್ತವನ್ನು ಹರಿಸುವುದು. ಕಡಿಮೆ ಅಪಧಮನಿಯ ಒತ್ತಡ, ಪ್ರಮುಖವಾಗಿ ಕಡಿಮೆ ನಾಡಿ ಒತ್ತಡ ಆಘಾತದ ಸೂಚನೆ, ಮಾತ್ರವಲ್ಲದೆ ಇದು ಸೇಚನೆಯನ್ನು ಪ್ರತಿಫಲಿಸುತ್ತದೆ ಮತ್ತು ಅದಕ್ಕೆ ಸೇರಿಕೊಳ್ಳುತ್ತದೆ.

ಒಂದು ತೋಳಿನಿಂದ ಇನ್ನೊಂದು ತೋಳಿನ ಒತ್ತಡದಲ್ಲಿ ಮಹತ್ವದ ವ್ಯತ್ಯಾಸವಿದ್ದರೆ, ಅದು ಅಪಧಮನಿ ಕಿರಿದಾಗುತ್ತಿರುವುದರ ಸೂಚನೆಯಾಗಿರಬಹುದು (ಉದಾಹರಣೆಗೆ, ಮಹಾಪಧಮನಿಯ ಒತ್ತಡಕಣೆ, ಮಹಾಪಧಮನಿಯ ಛೇದನ, ತ್ರೊಂಬೊಸಿಸ್ ಅಥವಾ ರಕ್ತ ಗೆಡ್ಡೆ)ಕಟ್ಟುವಿಕೆಯಿಂದಾಗಿ)

ಇತರ ವಿಷಯಗಳು ಬದಲಾಯಿಸಿ

ದೇಹದ ಪರಿಚಲನೆಯಲ್ಲಿ ನ ಅಪಧಮನಿಯ ಒತ್ತಡಕ್ಕೆ ಸಾಮಾನ್ಯವಾಗಿ ರಕ್ತದೊತ್ತಡವೆನ್ನುತ್ತಾರೆ.ಆದಾಗ್ಯೂ, ರಕ್ತಪರಿಚಲನಾ ವ್ಯವಸ್ಥೆ ಮತ್ತು ಶ್ವಾಸಕೋಶದ ರಕ್ತನಾಳಗಳ ಒತ್ತಡಗಳ ಮಾಪನ ತೀವ್ರ ಶುಶ್ರೂಷೆ ಔಷಧಿ ವೇಳೆ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಆದರೆ ಆಕ್ರಮಣಶೀಲ ಕೇಂದ್ರ ಅಭಿಧಮನಿಯ ಕ್ಯಾತಿಟರ್‌ ನ ಅಗತ್ಯವಿದೆ.

ಅಭಿಧಮನಿಯ ಒತ್ತಡ ಬದಲಾಯಿಸಿ

ರಕ್ತನಾಳದಲ್ಲಿ ಅಥವಾ ಹೃದಯದ ಆಟ್ರಿಯಾದಲ್ಲಿ ಕಾಣಿಸಿಕೊಳ್ಳುವ ನಾಳೀಯ ಒತ್ತಡವನ್ನು ಅಭಿಧಮನಿಯ ಒತ್ತಡವೆನ್ನುತ್ತಾರೆ. ಅಥವಾ ಇದು ಅಪಧಮನಿಯ ಒತ್ತಡಕ್ಕಿಂತ ಬಹಳಷ್ಟು ಕಡಿಮೆ, ಬಲ ಮಧ್ಯದಲ್ಲಿ 5 mmHg ಮತ್ತು ಎಡ ಮಧ್ಯದಲ್ಲಿ 8 mmHg ಮೌಲ್ಯಗಳನ್ನು ಹೊಂದಿವೆ.

ಶ್ವಾಸಕೋಶದ ಒತ್ತಡ ಬದಲಾಯಿಸಿ

ಇತರವುಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ, ಶ್ವಾಸಕೋಶದ ಅಪಧಮನಿಯ ಒತ್ತಡ ಸುಮಾರು 15 mmHg ರಷ್ಟಿರುತ್ತದೆ.[೨೭]

ಶ್ಲಾಸಕೋಶದ ಲೋಮನಾಳಗಳಲ್ಲಿ ರಕ್ತದೊತ್ತಡ ಹೆಚ್ಚಿದರೆ,ಶ್ವಾಸಕೋಶದ ಅಧಿಕ ರಕ್ತದೊತ್ತಡವುಂಟಾಗುತ್ತದೆ, ಇಂಟರ್‌ಸ್ಟಿಯಲ್ ಇಡೆಮಾದ ಜೊತೆಗೆ, ಒಂದು ವೇಳೆ ಒತ್ತಡ 20 mmHg ಗಿಂತ ಮೇಲೆ ಏರಿದಲ್ಲಿ, ಮತ್ತು ಇನ್ನೂ ಸರಳವಾಗಿ ಹೇಳುವುದಿದ್ದರೆ ಶ್ವಾಸಕೋಶದ ಇಡೆಮಾ ಒತ್ತಡದ ವೇಳೆ 25 mmHgರಷ್ಟಿರುತ್ತದೆ.[೨೮]

ಶಿಶುವಿನ ರಕ್ತದೊತ್ತಡ ಬದಲಾಯಿಸಿ

ಗರ್ಭಾವಸ್ಥೆಯಲ್ಲಿ, ಶಿಶುವಿನ ಹೃದಯದಿಂದ ರಕ್ತದೊತ್ತಡವುಂಟಾಗಿ ಶಿಶುವಿನ ರಕ್ತಪರಿಚಲನೆಗೆ ನೆರವಾಗುತ್ತದೆ. ಇಲ್ಲಿ ತಾಯಿಯ ಹೃದಯದಿಂದಾಗಿ ರಕ್ತದೊತ್ತಡ ಉಂಟಾಗುವುದಿಲ್ಲ.

ಗರ್ಭಧಾರಣೆಯಾದ 20 ವಾರಗಳ ನಂತರ ಶಿಶುವಿನ ಮಹಾಪಧಮನಿಯಲ್ಲಿ ರಕ್ತದೊತ್ತಡ ಅಂದಾಜು 30 mmHgರಷ್ಚಿರುತ್ತದೆ, ಮತ್ತು ಗರ್ಭಧಾರಣೆಯಾದ 40 ವಾರಗಳ ನಂತರ ಅದು 45 mmHgಗೆ ಏರುತ್ತದೆ.[೨೯]
ಪೂರ್ಣಾವಧಿ ಶಿಶುಗಳ ರಕ್ತದೊತ್ತಡದ ಸರಾಸರಿ:
ಸಂಕೋಚನದ 65–95 mm Hg
ವ್ಯಾಕೋಚನದ 30–60 mm Hg

[೩೦]

ಇದನ್ನು ನೋಡಿರಿ ಬದಲಾಯಿಸಿ

ಅಡಿಬರಹ ಬದಲಾಯಿಸಿ

  1. Deakin CD, Low JL (2000). "Accuracy of the advanced trauma life support guidelines for predicting systolic blood pressure using carotid, femoral, and radial pulses: observational study". BMJ. 321 (7262): 673–4. doi:10.1136/bmj.321.7262.673. PMC 27481. PMID 10987771. {{cite journal}}: Unknown parameter |month= ignored (help)
  2. ವ್ಯಾಖ್ಯಾನ - ರಕ್ತದೊತ್ತಡ - ಜೀವಾಧಾರಕಗಳು Archived 2012-07-02 at Archive.is, "ಫ್ಲೊರಿಡಾ ವಿಶ್ವವಿದ್ಯಾಲಯ". Retrieved 2008-03-18.
  3. G8 ದ್ವಿತೀಯ ಸಮೀಕ್ಷೆ Archived 2008-06-25 ವೇಬ್ಯಾಕ್ ಮೆಷಿನ್ ನಲ್ಲಿ., "ಮನಿತೋಬಾ". Retrieved 2008-03-18.
  4. Jhalani, Juhee a; Goyal, Tanya a; Clemow, Lynn a; Schwartz, Joseph E. b; Pickering, Thomas G. a; Gerin, William a. "Anxiety and outcome expectations predict the white-coat effect". 10(6), December 2005. Lippincott Williams & Wilkins, Inc.: pp317–319. {{cite journal}}: Cite journal requires |journal= (help); |pages= has extra text (help)CS1 maint: multiple names: authors list (link)
  5. Elliot, Victoria Stagg (2007-06-11). "Blood pressure readings often unreliable". American Medical News. American Medical Association. Retrieved 2008-08-16. {{cite news}}: Cite has empty unknown parameter: |coauthors= (help)
  6. ೬.೦ ೬.೧ Mancia G, De Backer G, Dominiczak A; et al. (2007). "2007 Guidelines for the management of arterial hypertension: The Task Force for the Management of Arterial Hypertension of the European Society of Hypertension (ESH) and of the European Society of Cardiology (ESC)". Eur Heart J. 28 (12): 1462–536. doi:10.1093/eurheartj/ehm236. PMID 17562668. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  7. ೭.೦ ೭.೧ Chobanian AV, Bakris GL, Black HR; et al. (2003). "Seventh report of the Joint National Committee on Prevention, Detection, Evaluation, and Treatment of High Blood Pressure". Hypertension. 42 (6): 1206–52. doi:10.1161/01.HYP.0000107251.49515.c2. PMID 14656957. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  8. Niiranen, TJ (2006). "A comparison of home measurement and ambulatory monitoring of blood pressure in the adjustment of antihypertensive treatment". Am J Hypertens. 19 (5): 468–74. doi:10.1016/j.amjhyper.2005.10.017. PMID 16647616. {{cite journal}}: Unknown parameter |coauthors= ignored (|author= suggested) (help)
  9. Shimbo, Daichi (2007). "Relative utility of home, ambulatory, and office blood pressures in the prediction of end-organ damage" ([ಮಡಿದ ಕೊಂಡಿ]). Am J Hypertens. 20 (5): 476–82. doi:10.1016/j.amjhyper.2006.12.011. PMID 17485006. {{cite journal}}: Unknown parameter |coauthors= ignored (|author= suggested) (help)
  10. National Heart, Lung and Blood Institute. "Tips for having your blood pressure taken". {{cite journal}}: Cite journal requires |journal= (help)
  11. ೧೧.೦ ೧೧.೧ "Diseases and Conditions Index - Hypotension". National Heart Lung and Blood Institute. 2008. Retrieved 2008-09-16. {{cite web}}: Unknown parameter |month= ignored (help)
  12. Pesola GR, Pesola HR, Nelson MJ, Westfal RE (2001). "The normal difference in bilateral indirect blood pressure recordings in normotensive individuals". Am J Emerg Med. 19 (1): 43–5. doi:10.1053/ajem.2001.20021. PMID 11146017. Archived from the original on 2011-04-05. Retrieved 2009-10-21. {{cite journal}}: |archive-date= / |archive-url= timestamp mismatch (help); Unknown parameter |month= ignored (help)CS1 maint: multiple names: authors list (link)
  13. National Heart, Lung and Blood Institute. "Blood Pressure Tables for Children and Adolescents". {{cite journal}}: Cite journal requires |journal= (help) (50ನೆ ಶೇಕಡಕವು ಅಪಧಮನಿ ರಕ್ತದೊತ್ತಡದ ಬಗ್ಗೆ ಕೊಟ್ಟಿರುವುದನ್ನು ಗಮನಿಸಿ ಮತ್ತು ನೀಡಲಾಗಿರುವ ವಯಸ್ಸು, ಎತ್ತರ ಮತ್ತು ಲಿಂಗ ನಿರ್ಧಾರದ ಆಧಾರದ ಮೇಲೆ ಅಧಿಕ ರಕ್ತದೊತ್ತಡವನ್ನು 95ನೆ ಶೇಕಡಕವು ವ್ಯಾಖ್ಯಾನಿಸಿದೆ.)
  14. Reckelhoff, Jane F. (2001 May). "Gender Differences in the Regulation of Blood Pressure". Hypertension. 37 (5): 1199–208. PMID 11358929. PMID 11358929. Archived from the original on 2009-08-25. {{cite journal}}: Check date values in: |date= (help); Cite has empty unknown parameter: |coauthors= (help); Unknown parameter |day= ignored (help); Unknown parameter |month= ignored (help)
  15. Eguchi K, Yacoub M, Jhalani J, Gerin W, Schwartz JE, Pickering TG (2007). "Consistency of blood pressure differences between the left and right arms". Arch Intern Med. 167 (4): 388–93. doi:10.1001/archinte.167.4.388. PMID 17325301. {{cite journal}}: Unknown parameter |month= ignored (help)CS1 maint: multiple names: authors list (link)
  16. Agarwal R, Bunaye Z, Bekele DM (2008). "Prognostic significance of between-arm blood pressure differences". Hypertension. 51 (3): 657–62. doi:10.1161/HYPERTENSIONAHA.107.104943. PMID 18212263. {{cite journal}}: Unknown parameter |month= ignored (help)CS1 maint: multiple names: authors list (link)
  17. Appel LJ, Brands MW, Daniels SR, Karanja N, Elmer PJ, Sacks FM (2006). "Dietary approaches to prevent and treat hypertension: a scientific statement from the American Heart Association". Hypertension. 47 (2): 296–308. doi:10.1161/01.HYP.0000202568.01167.B6. PMID 16434724. {{cite journal}}: Unknown parameter |month= ignored (help)CS1 maint: multiple names: authors list (link)
  18. "Hypertension: management of hypertension in adults in primary care" (PDF), NICE Clinical Guideline 34, London, England: National Institute for Health and Clinical Excellence (NICE), June 2006, retrieved 2008-09-15 {{citation}}: Cite has empty unknown parameters: |coeditors= and |coauthors= (help)
  19. Rosenson RS, Wolff D, Green D, Boss AH, Kensey KR (2004). "Aspirin. Aspirin does not alter native blood viscosity". J. Thromb. Haemost. 2 (2): 340–1. PMID 14996003. {{cite journal}}: Unknown parameter |month= ignored (help)CS1 maint: multiple names: authors list (link)
  20. ೨೦.೦ ೨೦.೧ Klabunde, Richard E. (2007). "Cardiovascular Physiology Concepts - Mean Arterial Pressure". Retrieved 2008-09-29.
  21. ೨೧.೦ ೨೧.೧ Klabunde, Richard E. (2007). "Cardiovascular Physiology Concepts - Pulse Pressure". Retrieved 2008-10-02.
  22. Messerli FH, Williams B, Ritz E (2007). "Essential hypertension". Lancet. 370 (9587): 591–603. doi:10.1016/S0140-6736(07)61299-9. PMID 17707755.{{cite journal}}: CS1 maint: multiple names: authors list (link)
  23. O'Rourke M (1995). "Mechanical principles in arterial disease". Hypertension. 26 (1): 2–9. PMID 7607724. {{cite journal}}: Unknown parameter |day= ignored (help); Unknown parameter |month= ignored (help)
  24. Mitchell GF (2006). "Triangulating the peaks of arterial pressure". Hypertension. 48 (4): 543–5. doi:10.1161/01.HYP.0000238325.41764.41. PMID 16940226.
  25. Klabunde, Richard E. (2007). "Cardiovascular Physiology Concepts - Arterial Baroreceptors". Retrieved 2008-09-09.
  26. ವೈದ್ಯಕೀಯ ಶರೀರವಿಜ್ಞಾನ ಪಠ್ಯ ಪುಸ್ತಕ, 7ನೆ ಆವೃತ್ತಿ., ಗೈಟನ್ ಮತ್ತು ಹಾಲ್ , ಎಲ್ಸೆವಿಯರ್ -ಸೌಂಡರ್ಸ್, ISBN 0-7216-0240-1, ಪುಟ 220.
  27. ಶ್ವಾಸಕೋಶದ ಅಧಿಕ ರಕ್ತದೊತ್ತಡ ಎಂದರೇನು? ರೋಗಗಳಿಂದ ಮತ್ತು ಪರಿಸ್ಥಿತಿಗಳ ಸೂಚಿಕೆ(DCI). ರಾಷ್ಟ್ರೀಯ ಹೃದಯ, ಶ್ವಾಸಕೋಶ, ಮತ್ತು ರಕ್ತದ ಸಂಸ್ಥೆ. ಸೆಪ್ಟೆಂಬರ್ 2008ರಲ್ಲಿ ಕೊನೆಯದಾಗಿ ಪರಿಷ್ಕರಿಸಲಾಗಿದೆ.ಎಪ್ರಿಲ್ 6, 2009ರಂದು ಪುನರ್ ಸಂಪಾದಿಸಲಾಗಿದೆ.
  28. ಅಧ್ಯಾಯ 41, ಪುಟ 210ರಲ್ಲಿ : ಹೃದಯವಿಜ್ಞಾನದ ರಹಸ್ಯಗಳು ಲೇಖಕ ಒಲಿವಿಯಾ ವ್ಯನ್ ಅಡೇರ್ ಆವೃತ್ತಿ: 2, ವಿವರಿಸಲಾಗಿದೆ. 2001ರಲ್ಲಿ ಎಲ್ಸೆವಿಯರ್ ಆರೋಗ್ಯ ವಿಜ್ಞಾನಗಳು, ಇದನ್ನು ಪ್ರಕಟಿಸಿದೆ. ISBN 1-56053-420-6, 9781560534204
  29. Struijk PC, Mathews VJ, Loupas T; et al. (2008). "Blood pressure estimation in the human fetal descending aorta". Ultrasound Obstet Gynecol. 32 (5): 673–81. doi:10.1002/uog.6137. PMID 18816497. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  30. ಶರಾನ್, ಎಸ್.ಎಂ. ಮತ್ತು ಎಮಿಲಿ, ಎಸ್.ಎಂ.(2006ಫಂಡೇಷನ್ಸ್ ಆಫ್ ಮೆಟರ್ನಲ್-ನ್ಯೂಬಾರ್ನ್‌ . (4ನೆ ಆವೃತ್ತಿ ಪಿ.476). ಫಿಲಡೆಲ್ಫಿಯಾ: ಎಲ್ಸೆವಿಯರ್.

ಹೊರಗಿನ ಕೊಂಡಿಗಳು ಬದಲಾಯಿಸಿ