ಮಣಿಕಟ್ಟು

ಕೆಳಗಿನ ತೋಳು ಮತ್ತು ಕೈ ನಡುವಿನ ತೋಳಿನ ಭಾಗ

ಮಾನವ ಅಂಗರಚನಾಶಾಸ್ತ್ರದಲ್ಲಿ, ಮಣಿಕಟ್ಟು ಎಂಬುದಕ್ಕೆ ಅನೇಕ ವ್ಯಾಖ್ಯಾನಗಳಿವೆ 1) ಮಣಿಬಂಧದ ಎಲುಬುಗಳು, ಕೈಯ ಹತ್ತಿರದ ಅಸ್ಥಿ ಭಾಗವನ್ನು ರೂಪಿಸುವ ಎಂಟು ಮೂಳೆಗಳ ಜಾಲಬಂಧ; (2) ಮಣಿಬಂಧದ ಕೀಲು ಅಥವಾ ರೇಡಿಯೊಕಾರ್ಪಲ್ ಕೀಲು, ರೇಡಿಯಸ್ ಹಾಗೂ ಕಾರ್ಪಸ್ ನಡುವಿನ ಕೀಲು (3) ಮುಂದೋಳಿನ ಮೂಳೆಗಳ ಅಂತ್ಯದ ಭಾಗಗಳು ಹಾಗೂ ಅಂಗೈ ಮೂಳೆಗಳ ಹತ್ತಿರದ ಭಾಗಗಳು ಸೇರಿದಂತೆ ಮಣಿಬಂಧವನ್ನು ಸುತ್ತುವರಿದಿರುವ ಶಾರೀರಿಕ ಪ್ರದೇಶ.

Hand parts.jpg

ಕಾರ್ಯಸಂಪಾದಿಸಿ

ಚಲನೆಸಂಪಾದಿಸಿ

ಕೈಯ ಬಾಹ್ಯ ಸ್ನಾಯುಗಳು ಮುಂದೋಳಿನಲ್ಲಿ ಸ್ಥಿತವಾಗಿರುತ್ತವೆ. ಇಲ್ಲಿ ಇವುಗಳ ಟೊಳ್ಳು ಭಾಗಗಳು ಹತ್ತಿರದ ಮಾಂಸಲ ವರ್ತುಲತೆಯನ್ನು ರೂಪಿಸುತ್ತವೆ. ಸಂಕೋಚನವಾದಾಗ, ಈ ಸ್ನಾಯುಗಳ ಬಹುತೇಕ ಸ್ನಾಯುರಜ್ಜುಗಳು ಅಂಗೈ ಮೇಲ್ಗಡೆ ಫ಼್ಲೆಕ್ಸರ್ ರೆಟಿನ್ಯಾಕ್ಯುಲಮ್‍ನ ಹಾಗೂ ಹಿಂಭಾಗದಲ್ಲಿ ಎಕ್ಸ್‌ಟೆನ್ಸರ್ ರೆಟಿನ್ಯಾಕ್ಯುಲಮ್‍ನ ಕೆಳಗೆ ಸಾಗುವ ಮೂಲಕ, ಮಣಿಕಟ್ಟಿನ ಸುತ್ತ ಬಿಗಿಯಾದ ಬಿಲ್ಲುಹೆದೆಗಳಂತೆ ನಿಂತುಕೊಳ್ಳುವುದು ತಡೆಯಲ್ಪಡುತ್ತದೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ

  • Hand kinesiology at the University of Kansas Medical Center