ಶರೀರಶಾಸ್ತ್ರ
ಶರೀರಶಾಸ್ತ್ರವು ಜೀವಿಗಳ ದೇಹದ ಭಾಗಗಳ ಕಾರ್ಯನಿರ್ವಹಣೆಯ ವಿಜ್ಞಾನವಾಗಿದೆ. ಇದು ಜೀವಶಾಸ್ತ್ರದ ಒಂದು ಉಪವಿಭಾಗವಾಗಿದೆ. ಶರೀರಶಾಸ್ತ್ರದಲ್ಲಿ, ಜೀವವ್ಯವಸ್ಥೆಯಲ್ಲಿ ಜೀವಿಗಳು, ಅಂಗವ್ಯೂಹಗಳು, ಅಂಗಗಳು, ಜೀವಕೋಶಗಳು ಮತ್ತು ಜೀವಾಣುಗಳು ಹೇಗೆ ರಾಸಾಯನಿಕ ಅಥವಾ ಭೌತಿಕ ಕಾರ್ಯ ನಿರ್ವಹಣೆ ಮಾಡುತ್ತವೆ ಎಂಬುದಕ್ಕೆ ವೈಜ್ಞಾನಿಕ ವಿಧಾನವನ್ನು ಬಳಸಲಾಗುತ್ತದೆ. ಶರೀರಶಾಸ್ತ್ರ ಪದವು ಗ್ರೀಕ್‌ನಿಂದ ಬಂದಿದೆ φύσις, ಫೈಸಿಸ್ , "ನೇಚರ್, ಒರಿಜಿನ್"; ಮತ್ತು -λογία, -ಲಾಜಿಯಾ , "ಸ್ಟಡಿ ಅಫ್". ಸಜೀವಿಗಳ ದೇಹ ರಚನೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅಧ್ಯಯನ ಮಾಡುವುದೇ ಶರೀರಶಾಸ್ತ್ರ.
ಇತಿಹಾಸಸಂಪಾದಿಸಿ
- ಮಾನವ ಶರೀರಶಾಸ್ತ್ರವು ಕನಿಷ್ಟ 420 B.C.ಗಳಷ್ಟು ಹಿಂದಿನದಾಗಿದೆ ಮತ್ತು ಹಿಪ್ಪೊಕ್ರೇಟ್ಸ್,[೧] ಔಷಧಗಳ ಪಿತಾಮಹನ ಸಮಯವಾಗಿತ್ತು. ಅರಿಸ್ಟಾಟಲ್‌ನ ವಿಮರ್ಶಾತ್ಮಕ ಯೋಚನೆ ಮತ್ತು ಪುರಾತನ ಗ್ರೀಸ್‌ನಲ್ಲಿ ರಚನೆ ಮತ್ತು ಕಾರ್ಯಗಳ ನಡುವಿನ ಸಂಬಂಧದ ಆತ ನೀಡಿದ ಪ್ರಾಮುಖ್ಯತೆಯು ಶರೀರಶಾಸ್ತ್ರದ ಪ್ರಾರಂಭವೆಂದು ಗುರುತಿಸಲಾಗಿದೆ. *ಕ್ಲಾಡಿಯಸ್ ಗ್ಯಾಲೆನಸ್ (c. 126-199 A.D.), ಗ್ಯಾಲೆನ್ ಎಂದು ಗುರುತಿಸಲಾಗುವ ಈತನು ದೇಹದ ಕಾರ್ಯನಿರ್ವಹಣೆಯನ್ನು ವಿವರವಾಗಿ ಪರೀಕ್ಷಿಸಲು ಪ್ರಯೋಗಗಳನ್ನು ನಡೆಸಿದ ಮೊದಲಿಗನಾಗಿದ್ದಾನೆ. ಗ್ಯಾಲೆನ್ ಪ್ರಯೋಗಾತ್ಮಕ ಶರೀರ ಶಾಸ್ತ್ರವನ್ನು ಕಂಡುಹಿಡಿದವನು.[೨] ಪುರಾತನ ಭಾರತೀಯ ಆಯುರ್ವೇದ ಪುಸ್ತಕಗಳಾದ, ಸುಶ್ರೂತ ಸಂಹಿತ ಮತ್ತು ಚರಕ ಸಂಹಿತ ಗಳೂ ಸಹ ಮಾನವ ಅಂಗರಚನೆ ಮತ್ತು ಶರೀರಶಾಸ್ತ್ರದ ಬಗ್ಗೆ ವಿವರಣೆಗಳನ್ನು ಹೊಂದಿವೆ.
- ಆಂಡ್ರಿಯಾಸ್ ವೆಸಾಲಿಯಸ್ ಮತ್ತು ವಿಲಿಯಮ್ ಹಾರ್ವೇ ಅವರ ಆಗಮನದಿಂದ ಮಾತ್ರ ಗ್ಯಾಲ್ವನಿಸಂನಿಂದ ವೈದ್ಯಕೀಯ ವಿಶ್ವಕ್ಕೆ ಚಾಲನೆ ಸಿಕ್ಕಿತು.[೩] ಮಧ್ಯ ಯುಗದ ಸಮಯದಲ್ಲಿ, ಪುರಾತನ ಗ್ರೀಕ್ ಮತ್ತು ಭಾರತೀಯ ವೈದ್ಯಕೀಯ ಸಂಪ್ರದಾಯವು ಮುಸ್ಲಿಂ ಶರೀರಶಾಸ್ತ್ರಜ್ಞರಿಂದ ಇನ್ನೂ ಅಭಿವೃದ್ಧಿಗೊಂಡಿತು.
- ವಿಶೇಷವಾಗಿ ಅವಿಸೆನ್ನಾ (980-1037) ಎಂಬುವವನು ದಿ ಕ್ಯಾನನ್ ಆಫ್ ಮೆಡಿಸಿನ್ ನಲ್ಲಿ ಶರೀರಶಾಸ್ತ್ರದ ಅಧ್ಯಯನಕ್ಕಾಗಿ ಪ್ರಯೋಗಪರೀಕ್ಷೆ ಮತ್ತು ಕ್ವಾಂಟಿಫಿಕೇಷನ್ ಅನ್ನು ಪರಿಚಯಿಸಿದ. ಹಲವಾರು ಪುರಾತನ ಶರೀರಶಾಸ್ತ್ರದ ಉಪದೇಶಗಳನ್ನು ಕೊನೆಯಲ್ಲಿ ಇಬ್ನ್ ಅಲ್-ನಫೀಸ್ (1213–1288) ಎಂಬುವವನು ಅಲ್ಲಗಳೆದಿದ್ದಾನೆ, ಈತನು ಹೃದಯದ ಅಂಗರಚನೆಯನ್ನು ಸರಿಯಾಗಿ ವಿವರಿಸಿದ ಮೊದಲ ಶಾರೀರ ಶಾಸ್ತ್ರಜ್ಞ, ಕರೊನರಿ ರಕ್ತಪರಿಚಲನೆ, ಶ್ವಾಸಕೋಶಗಳ ರಚನೆ, ಮತ್ತು ಪಲ್ಮನರಿ ರಕ್ತಪರಿಚಲನೆಗಳಿಂದಾಗಿ ಈತನನ್ನು ರಕ್ತಪರಿಚಲನೆಯ ಶರೀರಶಾಸ್ತ್ರದ ಪಿತಾಮಹನೆಂದು ಪರಿಗಣಿಸಲಾಗುತ್ತದೆ.[೪]
- ಅಲ್ಲದೆ ಈತ ಶ್ವಾಸಕೋಶಗಳ ಹಾಗೂ ರಕ್ತದ ವಾತೀಕರಣದ ನಡುವಿನ ಸಂಬಂಧ, ಹೃದಯಬಡಿತವಾಗುವುದು ಮತ್ತು ಕ್ಯಪಿಲರಿ ರಕ್ತಪರಿಚಲನೆಯ ಮೊದಲ ಕಲ್ಪನೆ ಇವುಗಳ ಬಗ್ಗೆ ವಿವರಣೆ ನೀಡಿದ ಮೊದಲಿಗ ಕೂಡಾ.[೫]
- ಮಧ್ಯಯುಗಗಳಿಂದ ಮುಂದುವರೆದು, ನವೋದಯ ಕಾಲದಲ್ಲಿ ಪಶ್ಚಿಮ ವಿಶ್ವದಲ್ಲಿ ಅಂಗರಚನೆ ಮತ್ತು ಶರೀರ ಶಾಸ್ತ್ರದ ಬಗ್ಗೆ ಆಧುನಿಕ ಅಧ್ಯಯನಗಳು ಹೆಚ್ಚಾಗಿವೆ. ಆಂಡ್ರಿಯಾಸ್ ವೆಸಾಲಿಯಸ್‍ನು ಮಾನವ ಅಂಗರಚನೆಯ ಅತಿ ಪ್ರಭಾವಶಾಲಿ ಪುಸ್ತಕ ಡಿ ಹ್ಯುಮನಾಯ್ ಕಾರ್ಪೊರಿಸ್ ಫ್ಯಾಬ್ರಿಕಾ ದ ಲೇಖಕ.[೬] ವೆಸಾಲಿಯಸನನ್ನು ಮಾನವ ಅಂಗರಚನಾಶಾಸ್ತ್ರದ ಸ್ಥಾಪಕನೆಂದು ಗುರುತಿಸಲಾಗುತ್ತದೆ.[೭]
- ಶರೀರ ರಚನಾ ಶಾಸ್ತ್ರಜ್ಞ ವಿಲಿಯಮ್ ಹಾರ್ವೇ 17ನೆಯ ಶತಮಾನದಲ್ಲಿ ರಕ್ತಪರಿಚಲನೆಯ ವ್ಯವಸ್ಥೆ ಬಗ್ಗೆ ವಿವರಣೆ ನೀಡಿದ್ದಾರೆ,[೮] ದೇಹದ ಕಾರ್ಯನಿರ್ವಹಣೆಯನ್ನು ಕಲಿಯಲು ನಯವಾದ ಪ್ರಯೋಗಗಳನ್ನು ಮತ್ತು ಹತ್ತಿರದ ಅವಲೋಕನದ ಕಸುವಾದ ಸಂಯೋಗಗಳನ್ನು ಇದರಲ್ಲಿ ತೋರಿಸಿದ್ದಾರೆ.
- ಪ್ರಯೋಗಾತ್ಮಕ ಶರೀರಶಾಸ್ತ್ರದ ಅಭಿವೃದ್ಧಿಯಲ್ಲಿ ಇದು ಮೊದಲನೆಯದಾಗಿದೆ. ಹರ್ಮನ್ ಬೋರ್ಹಾವೆಯನ್ನು ಆತನ ಲೀಡನ್‌ನಲ್ಲಿನ ಆದರ್ಶಪ್ರಾಯ ಭೋಧನೆ ಹಾಗೂ ಪಠ್ಯಪುಸ್ತಕ Institutiones medicae (1708)ಯಿಂದಾಗಿ ಶರೀರಶಾಸ್ತ್ರದ ಪಿತಾಮಹನೆಂದು ಕೆಲವುಬಾರಿ ಹೇಳಲಾಗುತ್ತದೆ. 18ನೆಯ ಶತಮಾನದಲ್ಲಿ, ಈ ವಿಭಾಗದಲ್ಲಿ ಪ್ರಮುಖ ಅಧ್ಯಯನ ನಡೆಸಿದವರೆಂದರೆ ಫ್ರೆಂಚ್ ವೈದ್ಯ ಮತ್ತು ಶರೀರಶಾಸ್ತ್ರಜ್ಞ ಪಿಯೆರ್ರೆ ಕ್ಯಬಾನಿಸ್. 19ನೆಯ ಶತಮಾನದಲ್ಲಿ, ಶರೀರಶಾಸ್ತ್ರದ ಜ್ಞಾನವು ಅತಿ ವೇಗವಾಗಿ ಒಟ್ಟುಗೂಡಲಾರಂಭಿಸಿತು.
- ಅತಿ ವಿಶೇಷವಾಗಿ[peacock term] 1838ರ ಮ್ಯಾಥಿಯಾಸ್ ಸ್ಚೆಲೆಯ್ಡನ್ನ ಸೆಲ್ ಥಿಯರಿ, ಇದು ಜೀವಕೋಶಗಳೆಂದು ಕರೆಯಲ್ಪಡುವ ಅಂಶಗಳಿಂದ ಜೀವಾಣುಗಳು ಮಾಡಲ್ಪಟ್ಟಿವೆಯೆಂದು ಸಂಪೂರ್ಣವಾಗಿ ಹೇಳಿತು. ಕ್ಲಾಡೆ ಬರ್ನಾರ್ಡ್‌ನ (1813–1878) ನಂತರದ ಅನ್ವೇಷಣೆಗಳು ಆತನ ಆಲೋಚನೆ ಅಂತಿಮವಾಗಿ milieu interieur (ಆಂತರಿಕ ಪರಿಸರ)ಕ್ಕೆ ದಾರಿ ತೋರಿತು.
- ನಂತರದಲ್ಲಿ ಇದು ಅಮೆರಿಕನ್ ಶರೀರಶಾಸ್ತ್ರಜ್ಞ ವಾಲ್ಟರ್ ಕ್ಯಾನನ್ನ(1871–1945) "ಹೋಮಿಯೊಸ್ಟಾಸಿಸ್" ಎಂದು ತೆಗೆದುಕೊಳ್ಳಲಾಯಿತು.[clarification needed] 20ನೆಯ ಶತಮಾನದಲ್ಲಿ, ಜೀವಶಾಸ್ತ್ರಜ್ಞರು ಸಹ ಮಾನವರಲ್ಲದೆ ಇತರೆ ಜೀವಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರಲ್ಲಿ ಆಸಕ್ತಿ ತೋರಿಸಲಾರಂಭಿಸಿದರು.
- ಕೊನೆಯಲ್ಲಿ ಹೋಲಿಕೆಯ ಶರೀರಶಾಸ್ತ್ರ ಮತ್ತು ಎಕೊಫಿಸಿಯಾಲಜಿ ಕ್ಷೇತ್ರಗಳು ಬೆಳವಣಿಗೆ ಕಂಡವು.[೯] ಈ ಕ್ಷೇತ್ರಗಳ ಪ್ರಮುಖ ವ್ಯಕ್ತಿತ್ವಗಳೆಂದರೆ ನಟ್ ಶಿಮಿಡ್ಟ್-ನೀಲ್ಸನ್ ಮತ್ತು ಜಾರ್ಜ್ ಬಾರ್ಥೊಲೊಮೆವ್. ತೀರಾ ಇತ್ತೀಚೆಗೆ, ಎವೊಲ್ಯೂಷನರಿ ಫಿಸಿಯಾಲಜಿಯು ಪ್ರತ್ಯೇಕವಾದ ಉಪವ್ಯವಸ್ಥೆಯಾಗಿದೆ.[೧೦]
ಶಾಲೆಗಳುಸಂಪಾದಿಸಿ
ವಿದ್ಯಾರ್ಥಿಗಳಿಗೆ ಶರೀರಶಾಸ್ತ್ರವನ್ನು ಪ್ರಮುಖ ವಿಷಯವನ್ನಾಗಿ ಅಧ್ಯಯನ ನಡೆಸಲು ಅವಕಾಶ ನೀಡುವಂತಹ ವಿಶ್ವವಿದ್ಯಾಲಯಗಳು ಬಹಳಷ್ಟಿವೆ. ಪದವಿಪೂರ್ವ ವಿದ್ಯಾರ್ಥಿಗಳಿಗೆ ಅತಿವೇಗವಾಗಿ ಬೆಳೆಯುತ್ತಿರುವ ವಿಷಯಗಳಲ್ಲಿ ಇದು ಒಂದು ಎಂದು ಪರಿಗಣಿಸಲಾಗಿದೆ.
ಗೌರವಗಳು ಮತ್ತು ಪ್ರಶಸ್ತಿಗಳುಸಂಪಾದಿಸಿ
ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್‌ನವರು 1901ರಿಂದ ಪಡೆದ ಅತ್ಯುನತ ಗೌರವವೆಂದರೆ ಶರೀರ ಶಾಸ್ತ್ರದ ನೋಬೆಲ್ ಪ್ರೈಜ್ ಆಗಿದೆ.
ಈ ಕೆಳಗಿನವುಗಳನ್ನೂ ನೋಡಬಹುದುಸಂಪಾದಿಸಿ
ಆಕರಗಳುಸಂಪಾದಿಸಿ
- ↑ Physiology - History of physiology, Branches of physiolog y
- ↑ Thoracic Surgery Clinics: Historical Perspectives of Thoracic Anatomy, ಸ್ಟ್ಯಾನ್ಲೆ ಸಿ. ಫೆಲ್ ಮತ್ತು F. ಗ್ರಿಫಿತ್ ಪಿಯರ್ಸನ್
- ↑ aphies/Galen.html ಗಾಲೆನ್[ಶಾಶ್ವತವಾಗಿ ಮಡಿದ ಕೊಂಡಿ]
- ↑ Chairman's Reflections (2004), "Traditional Medicine Among Gulf Arabs, Part II: Blood-letting", Heart Views 5 (2), p. 74-85 [80].
- ↑ ಪಾಲ್ ಗಾಲಿಯಂಗ್ವಿ, Ibn an-Nafis, Cairo, 1966, pp. 109-129, and "The West denies Ibn Al Nafis's contribution to the discovery of the circulation" for the Symposium on Ibn al-Nafis , Second International Conference on Islamic Medicine: Islamic Medical Organization, Kuwait, 1982.
- ↑ Page through a virtual copy of Vesalius's De Humanis Corporis Fabrica
- ↑ Andreas Vesalius (1514-1567)
- ↑ ಜಿಮ್ಮೆರ್, ಕಾರ್ಲ್. 2004. Soul Made Flesh: The Discovery of the Brain - and How It Changed the World. New York: Free Press.
- ↑ ಫೆಡರ್, M. E., A. F. ಬೆನ್ನೆಟ್, W. W. ಬರ್ಗ್ರೆನ್, ಮತ್ತು R. B. ಹುಯೆ, eds. 1987. New directions in ecological physiology. Cambridge Univ. Press, New York.
- ↑ http://www.biology.ucr.edu/people/faculty/Garland/GarlCa94.pdf Archived 2021-04-12 ವೇಬ್ಯಾಕ್ ಮೆಷಿನ್ ನಲ್ಲಿ. Garland, T., Jr., and P. A. Carter. 1994. Evolutionary physiology. Annual Review of Physiology 56:579-621.
ಬಾಹ್ಯ ಕೊಂಡಿಗಳುಸಂಪಾದಿಸಿ
- The Physiological Society
- Molecular & Integrative Physiology[ಶಾಶ್ವತವಾಗಿ ಮಡಿದ ಕೊಂಡಿ]
- Developmental physiology
- The American Physiological Society
- physiologyINFO.org Archived 2010-02-02 ವೇಬ್ಯಾಕ್ ಮೆಷಿನ್ ನಲ್ಲಿ., a public information website sponsored by The American Physiological Society
- The Biophysical Society
- Physiwiki Archived 2013-05-11 ವೇಬ್ಯಾಕ್ ಮೆಷಿನ್ ನಲ್ಲಿ.