ರಕ್ತ
ಮಾನವ ರಕ್ತ ಕಣಗಳು- ಎರಿಥ್ರೋಸೈಟ್ಸ್; ನ್ಯೂಟ್ರೋಫಿಲ್; ಎಸಿನೋಫಿಲ್; ಲಿಂಫೋಸೈಟ್ 'ರಕ್ತ' ದೇಹವೆಂಬ ವಾಹನದಲ್ಲಿ ಜೀವಕಣಗಳನ್ನು ಹೊತ್ತೊಯ್ಯುವ ರಕ್ತವೇ ಎಲ್ಲಾ ಜೀವಿಗಳ ಪೋಷಕ ಶಕ್ತಿ. ಒಂದು ಅಮೂಲ್ಯ ಜೀವದ್ರವ. ಅದಕ್ಕೆ ರಕ್ತವನ್ನು ಒಂದು ವಿಶಿಷ್ಟ ವರ್ಗಕ್ಕೆ ಸೇರಿದ, "ಕನೆಕ್ಟೀವ್ ಟಿಶ್ಯೂ" ಎನ್ನುತ್ತಾರೆ. ಇಂತಹ ರಕ್ತದ ಬಹುಮುಖಿ ಮಹತ್ವವನ್ನು ಸರಿಯಾಗಿ ತಜ್ಞರಿಂದ ಅರಿತು, ಸಮತೋಲನದ ಆಹಾರವನ್ನು ಸೇವಿಸಿ, ಕಾಯಿಲೆಗಳಿಗೆ ದಾಸರಾಗುವುದನ್ನು ಕಡಿಮೆಮಾಡಬಹುದು.
ಪರಿಚಯಸಂಪಾದಿಸಿ
ರಕ್ತ ಪ್ಲಾಸ್ಮ ಎಂಬ ಜೀವರಸದಿಂದ ಕೂಡಿದ್ದು, ಅದರಲ್ಲಿ ವ್ಯವಸ್ಥಿತ ಪ್ರಮಾಣದಲ್ಲಿ
- ಕೆಂಪು ರಕ್ತಕಣಗಳು
- ಬಿಳಿರಕ್ತಕಣಗಳು, ಮತ್ತು
- ಪ್ಲೇಟ್ ಲೆಟ್ ಎಂಬಜೀವಕೋಶಗಳು ತೇಲುತ್ತಿರುತ್ತವೆ.
- ಪ್ಲಾಸ್ಮ ಶೇ. ೯೧-೯೨ % ರಷ್ಟು ನೀರಿನಿಂದಾಗಿದ್ದು, ಉಳಿದ ಭಾಗ ಘನವಸ್ತುಗಳಿಂದಾಗಿದೆ. ಸಸಾರಜನಕ, ಯೂರಿಯ, ಆಸಿಡ್, ಕ್ರಿಯಾಟಿನಿನ್, ಅಮೋನಿಯಾ, ಅಮೈನೋ ಆಸಿಡ್, ಗ್ಜಾಂಥಿನ್, ಪದಾರ್ಥಗಳು, ಶೇಕಡ ೭.೫% ರಷ್ಟು.
- ಇನ್ನುಳಿದದ್ದು, ಸೋಡಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್, ಮೆಗ್ನೀಶಿಯಮ್, ಫಾಸ್ಫರಸ್, ಮೊದಲಾದ, ನಿರವಯವ ಪದಾರ್ಥಗಳು. ಪಿಷ್ಟ, ಅಂದರೆ ಮುಖ್ಯವಾಗಿ ಗ್ಲೂಕೋಸ್, ಕೊಬ್ಬು, ಅಂದರೆ, ಕೊಲೆಸ್ಟರಾಲ್, ಟ್ರೈಗ್ಲಿಸರೈಡ್, ನಾನಾ ತರಹದ ಹಾರ್ಮೋನ್‍ಗಳು, ಕಿಣ್ವಗಳು, ಪ್ರತಿರೋಧಕಗಳು, ಗ್ಜಾಂಥೋಫಿಲಿನ್, ಕೆರೋಟಿನ್ ಮುಂತಾದ ಬಣ್ಣಬರಿಸುವ ಪದಾರ್ಥಗಳು. * ಸೋಡಿಯಮ್ ಪೊಟ್ಯಾಸಿಯಮ್ ಲವಣಾಂಶಗಳು ನಿಖರ ಪ್ರಮಾಣದಲ್ಲಿಲ್ಲದಿದ್ದರೆ ಕಾಯಿಲೆ ಖಂಡಿತ. ರಕ್ತದ ವಿಶಿಷ್ಟ ಗುರುತ್ವಾಕರ್ಷಣೆ, ೧.೦೪೮ ರಿಂದ, ೧.೦೬೬ ಇರುತ್ತದೆ. ದೇಹದ ನೀರಿನ ಅಂಶ ಕಡಿಮೆಯದಂತೆ ಇದರ ಪ್ರಮಾಣ ಕಡಿಮೆಯಾಗುತ್ತದೆ.
- ಆ ಕೆಂಪುರಕ್ತ ಕಣಗಳು ಸುಮಾರು ೨೦ ಬಗೆಯ ಬ್ಲಡ್ ಗ್ರೂಪ್ ನ್ನು ಹೊಂದಿದ್ದು, ಎ, ಬಿ, ಎಬಿ ಹಗೂ ಓ ಅವುಗಳಲ್ಲಿ ಮುಖ್ಯವಾದದ್ದು. ಹಿಮೋಗ್ಲೋಬಿನ್ ಅಂಶ ತೀರಾ ಕುಸಿದರೆ, (೧೮ ಗ್ರಾಮ್ ಇರಬೇಕು) ಮೂರ್ನಾಲ್ಕು ಆದಾಗ, ರೋಗಿಗೆ ರಕ್ತವನ್ನು ಮರುಪೂರಣ ಮಾಡಬೇಕಾಗುತ್ತದೆ.
- ಇದರಿಂದಾಗಿ ರೋಗಿಗಾಗುವ ಆಘಾತ (ಶಾಕ್) ಹಾಗೂ ರಕ್ತನಾಳಗಳ ಕುಸಿತವನ್ನು ತಪ್ಪಿಸಬಹುದು. ರಕ್ತದಲ್ಲಿ ಒಂದು ಬಿಳಿರಕ್ತಕಣಕ್ಕೆದುರಾಗಿ ೭೦೦ ಕೆಂಪುರಕ್ತ ಕಣಗಳಿರುತ್ತವೆ. (ಅಂದರೆ, ೧ : ೭೦೦)ಅನುಪಾತದಲ್ಲಿರುತ್ತವೆ. ಬಿಳಿರಕ್ತಕಣಗಳಲ್ಲಿ ಹಲವು ವಿಧಗಳಿವೆ. ಇವೆಲ್ಲಾ ದೇಹವನ್ನು ಸದಾಕಾಲವೂ ರಕ್ಷಿಸುವ ಸಿಪಾಯಿಗಳಂತೆ ವರ್ತಿಸುತ್ತವೆ. ಅವುಗಳ ವಿವರ ಕೆಳಗೆಕಂಡಂತಿದೆ.
- ಕೆಂಪು ಗಿಂತ ದೊಡ್ಡದಿದ್ದು ಬೀಜಾಣುವನ್ನು ಹೊಂದಿರುತ್ತವೆ. ಪಾರದರ್ಶಕವಾಗಿರುವುದರಿಂದ ಬಿಳಿಯ ರಕ್ತಕಣಗಳೆಂದು ಕರೆಯಲ್ಪಡುತ್ತವೆ. ಇವುಗಳ ಆಯುಸ್ಸು, ೩-೬ ದಿನಗಳು. ರಕ್ತದಲ್ಲಿ ಇವುಗಳ ಸಂಖ್ಯೆ ಕೆಂಪು ಗಳಿಗಿಂತ ಕಡಿಮೆ. ೪,೦೦೦-೧೧,೦೦೦ ಕ್ಯು. ಮಿ. ಮೀ ನಷ್ಟಿರುವ ಬಿಳಿರಕ್ತ ಕಣಗಳು ೪,೦೦೦ ಕ್ಯು. ಮಿ/ಮೀ ಗಿಂತ ಕಡಿಮೆ ಇರಬಾರದು.
- ಸೋಂಕುಬಲಿತು, ದೇಹಕ್ಕೆ, ಅತೀವ ತೊಂದರೆಯುಂಟಾಗುತ್ತದೆ. ಸೋಂಕಿನಿಂದ ಬೆರೆತ ರಕ್ತದಲ್ಲಿ ಹೆಚ್ಚಾಗುವ ಸ್ಥಿತಿ. (ಕುರು) ರಕ್ತಕೆಟ್ಟಿದೆ. ಬಿಳಿ ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಹೊಂದಿರುವುದಿಲ್ಲ. ನ್ಯೂಟ್ರೋಫಿಲ್ ಬಿ ಗಲು ೧೦-೧೨ ಮೈಕ್ರಾನ್ ನಷ್ಟಿದ್ದು, ಫಾಸ್ಫಟೇಸ್, ಪ್ರೋಟಿಯೇಸ್, ಅಮೈಲೇಸ್, ಮುಂತಾದ ಕಿಣ್ವಗಳನ್ನು ಹೊಂದಿರುತ್ತವೆ. ದೇಹದಮೇಲೆ ದಾಳಿಮಾಡುವ ವಿಷಕ್ರಿಮಿಗಳನ್ನು ನುಂಗಿ ಅರಗಿಸುವ ಕೆಲಸಮಾಡುತ್ತವೆ. ಅಂತಿಮವಾಗಿ ಹೋರಾಟದಲ್ಲಿ ಸಾಯುತ್ತವೆ. ಕೀವಾಗಿ ನಮಗೆ ಕಾಣಿಸಿಕೊಳ್ಳುವುದು, ಸೋಂಕನ್ನೂ ಸೋಂಕಿನಭಾಗವನ್ನೂ ಅರಗಿಸಿ ಹೊರದೂಡುವ ಕ್ರಮ. ಇಯೋಸಿನೋಫಿಲ್ ರಕ್ತಕಣಗಳು, ೧೦-೧೨ ಮೈಕ್ರಾನ್ ನಷ್ಟಿದ್ದು, ದೇಹಕ್ಕೆ ಅಲರ್ಜಿಯಾಗುವುದನ್ನು ತಪ್ಪಿಸಲು ಹೋರಾಟ ನಡೆಸುತ್ತವೆ. ಇವುಗಳಲ್ಲಿ ಹಿಸ್ಟಮಿನ್ ದಂಡಿಯಾಗಿದೆ. ಚರ್ಮದ ಅಲರ್ಜಿ, ಹಾಗೂ ಅಸ್ತಮಾ ಮುಂತಾದ ಶ್ವಾಸಕೋಶದ ಸೋಂಕಿನಲ್ಲಿ ಇವುಗಳ ಸಂಖ್ಯೆ ವೃದ್ಧಿಸುವುದು. ಬೆಸೋಫಿಲ್, ೮-೧೦ ಮೈಕ್ರಾನ್ಸ್, ಹಿಸ್ಟಮಿನ್ ಮತ್ತು ಹಿಪಾರಿನ್ ಗಳನ್ನು ಹೊಂದಿದೆ. ರಕ್ತನಾಳದೊಳಗೆ ಹೆಪ್ಪುಗಟ್ಟದಂತೆ ಇವು ಜಾಗ್ರತೆವಹಿಸುತ್ತವೆ. ದೇಹದ ವಿಷಕ್ರಿಮಿಗಳನ್ನು ನಾಶಮಾಡಲು, ಮಾನೋಸೈಟ್ ಗಳು ಸಹಾಯಮಾಡುತ್ತವೆ. (೧೬-೧೮ ಮೈಕ್ರಾನ್)
ಲಿಂಪೋಸೈಟ್‍ಗಳ ವಿಧಸಂಪಾದಿಸಿ
ಲಿಂಪೋಸೈಟ್‍ಗಳಲ್ಲಿ ಎರಡು ವಿಧ.
- ಸಣ್ಣವು ೭.೫ ಮೈಕ್ರಾನ್. ದೊಡ್ಡವು ೧೨ ಮೈಕ್ರಾನ್ ನಷ್ತಿರುತ್ತವೆ. ಇವುಗಳು ತಯಾರಿಸುವ ಗಾಮಾ ಗ್ಲಾಬ್ಯುಲಿನ್ ದೇಹಕ್ಕೆ ದಾಳಿಯಿಡುವ ವಿಷಕ್ರಿಮಿಗಳು ಉತ್ಪಾದಿಸುವ ವಿಷದ ವಿರುದ್ಧ ಹೋರಾಡಿ, ಅವುಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಬೀಟ ಗ್ಲಾಬ್ಯುಲಿನ್ ಗಳು ದೇಹಕ್ಕೆ ಅವಶ್ಯಕವಾದ ಪ್ರೋಟೀನ್ ಗಳನ್ನು ಒದಗಿಸುತ್ತವೆ.
- ಪ್ಲೇಟ್ ಲೆಟ್ ಗಳು (೨.೫ ಮೈಕ್ರಾನ್) ಸಣ್ಣ ಸಣ್ಣ ಪೆಪ್ಪರ್ ಮಿಂಟ್ ನ ಮಾದರಿಯಲ್ಲಿರುತ್ತವೆ. ರಕ್ತದಲ್ಲಿ ಇವುಗಳ ಸಂಖ್ಯೆ, ೧.೫ ಲಕ್ಷದಿಂದ ೪.೫ ಲಕ್ಷ ಕ್ಯು. ಮಿಲಿ. ಮೀಟರ್. ದೇಹದಲ್ಲಿ ರಕ್ತಸ್ರಾವವಾದಾಗ, ನಿಲ್ಲಿಸುವಲ್ಲಿ, ಗಾಯಗೊಂಡ ರಕ್ತನಾಳಗಳ ಒಳಪದರದ ದುರಸ್ತಿಯಲ್ಲಿ ತಕ್ಷಣ ಭಾಗವಹಿಸುತ್ತವೆ. ೫೦,೦೦೦ ಕ್ಯು. ಮಿಲಿ ಮೀಟರ್ ಗಿಂತ ಕ್ಕಿಂತ ಕಡಿಮೆಯಾದಲ್ಲಿ, 'ಪರ್ಪೂರ' ಎಂಬ ಕಾಯಿಲೆಬಂದು, ರಕ್ತಸ್ರಾವ ಸ್ಥಗಿತಗೊಳ್ಳಲು, ತಡವಾಗುವುದಲ್ಲದೆ, ಮೂಗಿನಿಂದ ರಕ್ತಬರಲೂಬಹುದು. ಚರ್ಮದ ಕೆಳಗೆ, ಕೀಲುಗಳಲ್ಲಿ ಸ್ವಲ್ಪ ಪೆಟ್ಟಾದರೂ, ರಕ್ತಸ್ರಾವವಾಗುತ್ತದೆ.
ರಕ್ತದ ಕಾರ್ಯವಿಧಾನಸಂಪಾದಿಸಿ
- ಆಮ್ಲಜನಕವನ್ನು ಶ್ವಾಸಕೋಶದಿಂದ ದಹದ ಎಲ್ಲಾ ಅಂಗಾಂಶಗಳಿಗೂ, ಇಂಗಾಲದ ಡೈ ಆಕ್ಸೈಡನ್ನು ದೇಹದ ಎಲ್ಲಾ ಅಂಗಗಳಿಂದ ಶ್ವಾಸಕೋಶಕ್ಕೂ ತರುವ ಕೆಲಸಮಾಡುತ್ತವೆ. ಪಚನಗೊಂಡ ಆಹಾರ ಪದಾರ್ಥಗಳನ್ನು ಕರುಳಿನಿಂದ ಅಂಗಾಂಗಗಳಿಗೆ, ಒದಗಿಸುತ್ತದೆ.
- ತಿಂದ ಆಹಾರದಲ್ಲಿರುವ ವಿಟಮಿನ್ ಶಕ್ತಿ, ಕೊಬ್ಬಿನಂಶ ಹಾಗೂ ದೇಹದಲ್ಲೇ ಉತ್ಪತ್ತಿಯಾಗುವ ಹಾರ್ಮೋನ್ ಗಳನ್ನು ಎಲ್ಲಿಗೆ ಸೇರಿಸಬೇಕೋ ಅಲ್ಲಿಗೆ ಸೇರಿಸಲು ಸಹಾಯಮಾಡುತ್ತವೆ. ದೇಹಕ್ಕೆ ಬೇಡವಾದ ವಸ್ತುಗಳನ್ನು ಅಂಗಾಶಗಳಿಂದ ಪಡೆದು, ಮೂತ್ರಪಿಂಡ, ಶ್ವಾಶಕೋಶ, ಹಾಗೂ ಕರುಳಿನಮುಖಾಂತರ, ದೇಹದಿಂದ ಹೊರದೂಡುತ್ತದೆ.
- ದೇಹಕ್ಕೆ ಅತ್ಯವಶ್ಯಕವಾದ, ನೀರಿನ, ಆಮ್ಲ- ಪ್ರತ್ಯಾಮ್ಲ, ಹಾಗೂ ಚರಾಣುಗಳ ಸಮತೋಲನದೊಂದಿಗೆ, ದೇಹದ ಉಷ್ಣತೆಯನ್ನು ೯೮.೪-೯೮.೬ ಫ್ಯಾರನ್ ಹೀಟ್ (೩೭ ಡಿಗ್ರಿ ಸ್ಯಾಲ್ಸಿಯಸ್) ನಲ್ಲಿರುವಂತೆ ಕಾಪಾಡುತ್ತದೆ. ದೇಹದ ಸಿಪಾಯಿಯಾಗಿ ರಕ್ಷಣೆ ಮಾಡುವುದಲ್ಲದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
- ರಕ್ತದಲ್ಲಿ ಪ್ರೋಟೀನ್ ಗಳಿವೆ. ಫೈಬ್ರನೋಜನ್, ಪ್ರೋಥ್ರಾಂಬಿನ್ ಗಳು, ರಕ್ತ ಹೆಪ್ಪು ಕಟ್ಟಲು ಸಹಾಯಮಾಡುತ್ತವೆ. ಆಲ್ಬುಮಿನ್ ರಕ್ತ ಹಾಗೂ ಉಳಿದ ಅಂಗಾಂಗಗಳ ನಡುವಿನ ಉಚ್ಚಾಲನಿಕ ಒತ್ತಡವನ್ನು ಕಾಪಾಡುತ್ತದೆ. ರಕ್ತದ ಸ್ನಿಗ್ಧತ್ವವನ್ನು ಇದು ಕಾಪಾಡುತ್ತದೆ. ದೇಹದ ರಕತದೊತ್ತಡ ನಿಯಂತ್ರಣಕ್ಕೆ ಅತ್ಯಾವಶ್ಯಕ.
- ಬಿಳಿ ರಕ್ತಕಣಗಳು ಟ್ರಿಫೋನ್ಸ್ ಎಂಬ ವಸ್ತುವನ್ನು ರಕ್ತದಲ್ಲಿನ ಪ್ರೋಟೀನ್ ಜೊತೆಗೂಡಿ ತಯಾರಿಸುತ್ತವೆ. ಇದು ಅಂಗಾಂಗಳ ಬೆಳವಣಿಗೆಗೂ ಪೋಷಣೆಗೂ ಅತ್ಯಗತ್ಯ. ಗಾಮಾಗ್ಲಾಬ್ಯುಲಿನ್ ಪ್ರತಿರೋಧಕ ವಸ್ತುವನ್ನು ತಯಾರಿಸಿ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತವೆ. ರಕ್ತದಲ್ಲಿ ಸುಮಾರು ೧೩ ಹೆಪ್ಪುಗಟ್ಟುವ ಅಂಶಗಳಿವೆ. ರಕ್ತಸ್ರಾವವಾಡೊಡನೆಯೇ ಕಾರ್ಯೋನ್ಮುಖವಾಗುತ್ತವೆ. * ರಕ್ತವನ್ನು ಹೆಪ್ಪುಗಟ್ಟಿಸಿ ಅಪಾಯವನ್ನು ತಪ್ಪಿಸುತ್ತವೆ. ರಕ್ತ ಸುರುಯುವುದು ಸುಮಾರು ೧ ರಿಂದ ೬ ನಿಮಿಷಗಳಲ್ಲಿ. ಹೆಪ್ಪುಗಟ್ಟಲು ತಗಲುವ ವೇಳೆ, ೪- ೧೦ ನಿಮಿಷಗಳು. ಫಬ್ರಿನೋಜಿನ್, ಪ್ರೋಥ್ರಾಂಬಿನ್, ಥ್ರಾಂಬೋ ಪ್ಲಾಸ್ಟಿನ್, ಆಂಟಿ ಹಿಮೋಫಿಲಿಕ್ ಫ್ಯಾಕ್ಟರ್, ಹೇಗ್ ಮನ್ ಫ್ಯಾಕ್ಟರ್, ಪಿಟಿಸಿ, ಮುಂತಾದವುಗಳು, ಮುಖ್ಯವಾದ ರಕ್ತ ಹೆಪ್ಪುಗಟ್ಟುವ ಅಂಶಗಳು.
- ಇವುಗಳ ಕೊರತೆಯಾದರೆ, ಕುಸುಮರೋಗ ಕ್ಕೆ (ಹೀಮೋಫಿಲಿಯ) ಬಲಿಯಾಗಬೇಕಾಗುತ್ತದೆ. ಸಣ್ಣಗಾಯವಾದರೂ, ಚರ್ಮದಕೆಳಗೆ, ಕೀಲುಗಳಲ್ಲಿ ರಕ್ತ ತುಂಬಿಕೊಂಡು ಅಸಾಧ್ಯ ನೋವನ್ನುಂಟುಮಾಡುತ್ತವೆ. ರಕ್ತನಾಳದಲ್ಲಿ ರಕ್ತ ದ್ರವರೂಪದಲ್ಲೇ ಇದ್ದು ಹೆಪ್ಪುಗಟ್ಟಿವುದಿಲ್ಲವೇಕೆ ಎಂಬ ಸಂಶಯ ಬರುವುದು ಸಹಜ.
- ರಕ್ತನಾಳದ ಒಳಪದರದಲ್ಲಿ ಯಾವುದೇ ಏಟು ಬೀಳದಿದ್ದರೆ, ರಕ್ತ ಹೆಪ್ಪುಗಟ್ಟುವುದಿಲ್ಲ. ಥ್ರಾಂಬಿನ್ ಅಂಶ ಇಲ್ಲಿ ಕಡಿಮೆಪ್ರಮಾಣದಲ್ಲಿ ಉತ್ಪತ್ತಿಯಾಗುವುದರಿಂದ. ಹೆಪ್ಪುಗಟ್ಟುವ ಮದ್ಯವರ್ತಿಗಳನ್ನು ಆರ್ ಇ ಜೀವಕೋಶಗಳು ತಕ್ಷಣ ತೆಗೆದುಬಿಡುತ್ತವೆ.
- ಅಲ್ಲದೆ, ರಕ್ತದಲ್ಲಿರುವ "ಹಿಪಾರಿನ್," ಅಂಶ, ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ರಕ್ತನಾಳದೊಳಗಿನ ರಕ್ತ ಯಾವುದೇ ಕಾರಣಕ್ಕೂ ಹೆಪ್ಪುಗಟ್ಟಲೇ ಬಾರದು. ತಕ್ಷಣ ಹೃದಯ ಸ್ತಂಬನವಾಗುತ್ತದೆ. ಇದೇ ಕ್ರಿಯೆ ಮೆದುಳಿನ ರಕ್ತನಾಳದಲ್ಲಾದರೆ, ಲಕ್ವ ಹೊಡೆಯುತ್ತದೆ.
ದೇಹದಲ್ಲಿ ರಕ್ತದ ಪ್ರಮಾಣಸಂಪಾದಿಸಿ
- ಸುಮಾರು ೭೦ ಕಿ. ತೂಗುವ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ಸುಮಾರು ೫ ಲೀಟರ್ ನಷ್ಟು ರಕ್ತವಿರುತ್ತದೆ. (ಒಟ್ಟುತೂಕದ ಶೇ. ೯%) ಎಲುಬಿನ ಮಜ್ಜೆ ರಕ್ತತಯಾರಿಸುವ ಕಾರ್ಖಾನೆ. ಇದು ದೇಹದ ಮೂಳೆಯೊಳಗಿನ ಟೊಳ್ಳುಭಾಗದಲ್ಲಿ ಅಡಗಿ ಕುಳಿತಿರುತ್ತದೆ. ಹುಟ್ಟುವಾಗ ಸುಮಾರು ೭೦ ಮಿ. ಲೀಟರ್ ತೂಗುವ ಮಜ್ಜೆ, ವಯಸ್ಕರಲ್ಲಿ ಸುಮಾರು, ೪ ಲೀಟರ್ ನಷ್ಟಾಗುತ್ತದೆ.
ಮಜ್ಜೆಯಲ್ಲಿನ ಎರಡುವಿಧಗಳುಸಂಪಾದಿಸಿ
ಕೆಂಪುಮಜ್ಜೆಸಂಪಾದಿಸಿ
- ಇಲ್ಲಿ ಕೆಂಪುರಕ್ತಕಣಗಳು ತಯಾರಾಗುತ್ತವೆ. ಭ್ರೂಣಾವಸ್ಥೆಯಲ್ಲಿ ಎಲ್ಲಾಮೂಳೆಗಳೂ ಕೆಂಪು ಮಜ್ಜೆಯನ್ನು ಹೊಂದಿದ್ದು, ವಯಸ್ಸಾದಂತೆ ಕಡಿಮೆಯಾಗುತ್ತಾ ಹೋಗುತ್ತವೆ. ಕಾಲಿನ ಉದ್ದನೆಯ ಮೂಳೆಗಳತುದಿಯಲ್ಲಿ, ಎದೆ ಮೂಳೆಗಳಲ್ಲಿ, ಪಕ್ಕೆಲುಬಿನ ಮೂಳೆಗಳಲ್ಲಿ, ತಲೆಬುರುದೆಮೂಳೆಗಳಲ್ಲಿ, ಹಾಗೂ ಪೃಷ್ಯದ ಮೂಳೆಗಳಲ್ಲಿಮಾತ್ರ ಕಾಣಸಿಗುತ್ತವೆ.
- ಉಳಿದವು ಹಳದಿ ಮಜ್ಜೆಯಾಗಿ ಮಾರ್ಪಾಟಾಗಿ ಕೆಲಸಕ್ಕೆ ಬಾರದಂತಾಗುತ್ತವೆ. ೭೦ ನೆಯ ವಯಸ್ಸಿನಲ್ಲಿ ಸುಮಾರು ೭೦ ರಿಂದ ೮೦ ರಷ್ಟು ಭಾಗ ಹಳದಿ ಮಜ್ಜೆಯಾಗಿ, ರಕ್ತ ತಯಾರಿಕೆ ಕುಂಟುತ್ತಾ ಸಾಗುತ್ತದೆ.
ಹಳದಿಮಜ್ಜೆಸಂಪಾದಿಸಿ
- ಮೂಳೆಗಳೆ ಕೆಂಪು ಮಜ್ಜೆಯಿಂದಾಗಿ, ಮೂತ್ರಪಿಂಡ ತಯಾರಿಸುವ, ಎರಿತ್ರೋ ಪಾಯಿಟಿನ್ ಎಂಬಹಾರ್ಮೋನ್ ನ ಉತ್ತೇಜನದಿಂದ, ಉತ್ಪತ್ತಿಯಾಗುವ ಕೆಂಪು ರಕ್ತ ಕಣಗಳು ಕೆಂಪಾಗಿ ಕಾಣಲು ಅದರಲ್ಲಿ ಹುದುಗಿಕೊಂಡಿರುವ ಹಿಮೋಗ್ಲೋಬಿನ್ ಕಾರಣ. ಕೆಂಪುರಕ್ತ ಕಣಗಳು ಸುಮಾರು ೪ ತಿಂಗಳು ಬದುಕುತ್ತವೆ.
- ಹಿಮೋಗ್ಲೋಬಿನ್ ೯೬%, ಗ್ಲೋಬಿನ್ ಎಂಬ ಪ್ರೋಟೀನ್ ನಿಂದ ಆಗಿದ್ದು, ಉಳಿದ ೪% ಹೀಮ್ ಎಂಬ ಕಬ್ಬಿಣದಂಶದ ಜೊತೆ ಸೇರಿಕೊಂಡಿದೆ. ಈ ಬಣ್ಣಕ ಆಮ್ಲಜನಕದ ಜೊತೆಗೆ ಬಹುಸುಲಭವಾಗಿ ಬೆರೆತು, ಅಷ್ಟೇ ಸುಲಭವಾಗಿ ಬಿಟ್ಟುಕೊಡುವ ಸ್ವಭಾವ ಹೊಂದಿದೆ.
- ೧೦೦ ಮಿ. ಲೀಟರ್ ನೀರು, ಒಂದು ಮಿಲಿಲೀಟರ್ ನ ಮೂರನೆಯ ಒಂದು ಭಾಗದಷ್ಟು ಆಮ್ಲಜನಕವನ್ನು ಹೀರಿದರೆ, ಹಿಮಾಗ್ಲೋಬಿನ್ ೨೦ ಮಿಲ್. ಲೀಟರ್ ನಷ್ಟು, ಹೀರುವ ಶಕ್ತಿ ಪಡೆದಿದೆ. (ಅಂದರೆ ೬೦% ಹೆಚ್ಚು) ಈ ಗುಣದಿಂದಾಗಿಯೇ ಮಾನವದೇಹಕ್ಕೆ ಅತ್ಯವಶ್ಯಕವಾದ ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೂ ತಲುಪಿಸುವ ವಾಹನದಂತೆ ಕಾರ್ಯನಿರ್ವಹಿಸುತ್ತದೆ.
ಅನೀಮಿಯಸಂಪಾದಿಸಿ
- ರಕ್ತ ಸುಮಾರು ೧.೨ ಲೀಟರ್ ನಷ್ಟು ಆಮ್ಲಜನಕವನ್ನು ಸಾಗಿಸುತ್ತದೆ. ರಕ್ತದಲ್ಲಿ ಸುಮಾರು ೩ ಗ್ರಾಮ್ ನಷ್ಟು ಕಬ್ಬಿಣ, ಹಿಮೋಗ್ಲೋಬಿನ್ ರೂಪದಲ್ಲಿದೆ. ಪುರುಷರಲ್ಲಿ ೧೩.೫ ಗ್ರಾಮ್, ಹಾಗೂ ಸ್ತ್ರೀಯರು ಮತ್ತು ಮಕ್ಕಳಲ್ಲಿ ೧೧.೫ ರಿಂದ ೧೬.೪ ಗ್ರಾಮ್ ನಷ್ಟಿರುತ್ತದೆ.
- ಹಿಮೋಗ್ಲೋಬಿನ್ ನ್ನು, ಕಾಪಾಡಲು ಒಳ್ಳೆಯ ಪ್ರೋಟೀನ್ ಯುಕ್ತ ಹಾಗೂ ೧೫ ರಿಂದ ೨೦ ಮಿ. ಗ್ರಾಮ್ ಕಬ್ಬಿಣಾಂಶವನ್ನು ಒದಗಿಸುವ ಆಹಾರವನ್ನು ಸೇವಿಸಬೇಕು. ಹಿಮೋಗ್ಲೋಬಿನ್ ಕೊರೆತೆಯಿಂದ ಬರುವಕಾಹಿಲೆಯನ್ನು ರಕ್ತಹೀನತೆ ಅಥವಾ ಅನೀಮಿಯ ಎನ್ನುತ್ತೇವೆ. ಈ ಕೊರತೆಗೆಗೆ ಕಾರಣಗಳು ಹಲವು.
- ರಕ್ತಕಣಗಳಲ್ಲಿನ ಉತ್ಪತ್ತಿಯ ಕೊರತೆ.
- ಉತ್ಪತ್ತಿಯಾದ ಜೀವಕೋಶದಲ್ಲಿನ ಗುಣಮಟ್ಟದ ನ್ಯೂನತೆಯಿಂದಿರಬಹುದು.
- ಮೂಲವ್ಯಾಧಿ, ಇಲ್ಲವೇ ಹೊಟ್ಟೆಯಲ್ಲಿರುವ ಹುಳುಗಳಿಂದಾಗಿರಬಹುದು.
ರಕ್ತಹೀನತೆಯ ಸಾಮಾನ್ಯ ಲಕ್ಶಣಗಳುಸಂಪಾದಿಸಿ
- ಆಯಾಸ, ನಿರುತ್ಸಾಹ, ಸ್ವಲ್ಪಕೆಲಸಮಾಡಿದರೂ ಏದುಸಿರು ಬರುವುದು.
- ಎದೆಬಡಿತ ಹೆಚ್ಚಾಗಿ, ದಬ-ದಬಗುಟ್ಟುವುದು
- ಹಸಿವು ಮಾಯವಾಗಿ, ತಲೆಸುತ್ತುವುದು.
- ಕಣ್ಣು ಮಂಜಾಗುವುದು
- ನಿದ್ರೆಬಾರದೆ ಕಾಲುಗಳು ಪದೇ ಪದೇ ಜೋಮುಹಿಡಿಯುವುದು.
- ಕಾಲುಗಳು ಊದಿಕೊಂಡು, ಹೃದಯ ದೊಡ್ಡದಾಗಿ ಸಾವು ಸಂಭವಿಸುವ ಅಪಾಯವಿದೆ.
- ಬಾಯಿನ ಮೂಲೆಗಳು ಸೀಳಿಕೊಳ್ಳುವುದು. ಬಾಯಿಹುಣ್ಣಾಗುವುದು.
- ಕೈಕಾಲಿನ ಉಗುರುಗಳು ಚಮಚದಂತೆ ಗುಳಿಬೀಳುವುದು.
- ಪೈಕ, ಎನ್ನುವ ವಿಚಿತ್ರ ಬಯಕೆಯಾಗುವುದು. ಇಲ್ಲಿ ರೋಗಿ, ಇದ್ದಿಲು, ಮಣ್ಣು, ಗೋಡೆಯ ಸುಣ್ಣ ಇಲ್ಲವೇ ಒಂದೇ ಬಗೆಯ ತರಕಾರಿಗಳನ್ನು ಮಿತಿಮೀರಿತಿನ್ನುತ್ತಲೇ ಇರುವುದು. ಸಾಮನ್ಯವಾದ ಕುರುಹುಗಳು.
ಹಿಮಾಗ್ಲೋಬಿನ್ ಬಗ್ಗೆ ಚಿಕ್ಕ-ಪುಟ್ಟವಿವರಗಳುಸಂಪಾದಿಸಿ
ರಕ್ತದಲ್ಲಿ ಹಿಮಾಗ್ಲೋಬಿನ್ ಅಂಶ, ೧೮ ಗ್ರಾಮ್ ಮೀರಿದರೂ, ಅದು ದೇಹಕ್ಕೆ ಒಳ್ಳೆಯದಲ್ಲ. ಅಪಾಯಕಾರಿ. ಈಸ್ಥಿತಿಯನ್ನು "ಪಾಲಿಸೈಥೆಮಿಯ ವೀರ" ಎನ್ನುತ್ತೇವೆ. ಈ ಕೊರತೆ ಸಾಮಾನ್ಯವಾಗಿ, ೪೦ ವರ್ಷದ ಮೇಲಿನ ಪ್ರಾಯದ ಜನರಲ್ಲಿ ಕಾಣಿಸಿಕೊಳ್ಳುವುದು ಸ್ವಾಭಾವಿಕ. ಇದರ ಲಕ್ಷಣಗಳನ್ನು ಸ್ಥೂಲವಾಗಿ ದಾಖಲಿಸಬಹುದು
- ನಿರುತ್ಸಾಹ,
- ಏಕಾಗ್ರತೆಯ ಕೊರತೆ,
- ತಲೆನೋವು, ತಲೆಸುತ್ತು,
- ಜ್ಞಾನ ತಪ್ಪುವುದು,
- ಮೈಕಡಿತ,
- ಅಜೀರ್ಣ,
- ರಕ್ತನಾಳಗಳತೊಂದರೆಯಿಂದಾಗಿ, ಕಾಲುಗಳು ಅನೇಕಬಾರಿ, ಜೋಮುಹಿಡಿಯುವುದು, ಇವೇ ಮುಂತಾದ ರೋಗಲಕ್ಷಣಗಳು ತಲೆದೋರುತ್ತವೆ.