ಹುಣಿಸೆ ಲೇಖನಕ್ಕಾಗಿ ಇಲ್ಲಿ ನೋಡಿ.

ಆಮ್ಲಎಂದರೆ ಜಲಜನಕಅಯಾನನ್ನು ಇನ್ನೊಂದು ಸಂಯುಕ್ತಕ್ಕೆ ವರ್ಗಾಯಿಸುವ ಒಂದು ಸಂಯುಕ್ತ ವಸ್ತು.ಹೆಚ್ಚಿನ ಎಲ್ಲಾ ಆಮ್ಲಗಳು ಹುಳಿ ರುಚಿಯನ್ನು ಹೊಂದಿದ್ದು, ಸಂಪರ್ಕಕ್ಕೆ ಬಂದಲ್ಲಿ ಚರ್ಮವನ್ನು ಸುಡುತ್ತದೆ.ಹೆಚ್ಚಿನ ಲೋಹಗಳು ಆಮ್ಲಗಳಲ್ಲಿ ಕರಗುತ್ತದೆ.ನೀಲಿ ಲಿಟ್ಮಸ್‌ನ್ನು ಕೆಂಪಾಗಿಸುತ್ತದೆ.ಕ್ಷಾರಗಳು ಆಮ್ಲಗಳನ್ನು ಸ್ಥಿರಗೊಳಿಸುತ್ತವೆ.

ಸತು, ಒಂದು ವಿಶಿಷ್ಟ ಲೋಹವು, ಹೈಡ್ರೋಕ್ಲೋರಿಕ್ ಆಮ್ಲ, ಒಂದು ವಿಶಿಷ್ಟ ಆಮ್ಲದೊಂದಿಗೆ ಪ್ರತಿಕ್ರಿಯಿಸುತ್ತದೆ

ವೈಶಿಷ್ಟ್ಯಗಳುಸಂಪಾದಿಸಿ

ಆಮ್ಲಗಳಲ್ಲಿ ಎರಡು ವಿಧಗಳಿವೆ. ಜೈವಿಕ ಹಾಗೂ ಅಜೈವಿಕ.ಇಂಗಾಲಪರಮಾಣುಗಳನ್ನು ಹೊಂದಿರುವ ಆಮ್ಲಗಳನ್ನು ಜೈವಿಕ ಆಮ್ಲಗಳೆಂದೂ,ಇಂಗಾಲದ ಪರಮಾಣುಗಳನ್ನು ಹೊಂದಿಲ್ಲದ ಅಮ್ಲಗಳನ್ನು ಅಜೈವಿಕ ಅಮ್ಲಗಳೆಂದೂ ಕರೆಯುತ್ತಾರೆ.ಅಜೈವಿಕ ಆಮ್ಲಗಳಿಗೆ ಉದಾಹರಣೆಯೆಂದರೆ ನೈಟ್ರಿಕ್ ಆಮ್ಲ,ಗಂಧಕಾಮ್ಲ,ರಂಜಕಾಮ್ಲ ಮುಂತಾದವುಗಳು.ಜೈವಿಕ ಆಮ್ಲಗಳಿಗೆ ಉದಾಹರಣೆ:ಸಿಟ್ರಿಕ್ ಆಮ್ಲ,ಅಮಿನೋ ಆಮ್ಲ,ಕೊಬ್ಬಿನ ಆಮ್ಲಗಳು ಮುಂತಾದವುಗಳು.

ಉಪಯೋಗಗಳುಸಂಪಾದಿಸಿ

ಆಮ್ಲಗಳು ಹಲವು ರೀತಿಯಲ್ಲಿ ಉಪಯೋಗದಲ್ಲಿದೆ.ನಮ್ಮ ಜೀರ್ಣಾಂಗಗಳು ಹೈಡ್ರೊಕ್ಲೋರಿಕ್ ಅಮ್ಲವನ್ನು ಉತ್ಪಾದಿಸಿ ಆಹಾರವನ್ನು ಜೀರ್ಣಿಸುತ್ತವೆ.ಹಲವಾರು ಆಮ್ಲಗಳು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿವೆ.ಅಮಿನೋ ಆಮ್ಲಗಳು ನಮ್ಮ ದೇಹದ ಪ್ರೊಟೀನ್ ಉತ್ಪಾದನೆಗೆ ಆವಶ್ಯಕ.ಅಸ್ಕೊರ್ಬಿಕ್ ಆಮ್ಲ ವಿಟಮಿನ್-ಸಿ ಯಾಗಿ ಆವಶ್ಯಕವಾಗಿದೆ.ಕೆಲವು ಆಮ್ಲಗಳು ಔಷಧ ರೂಪದಲ್ಲಿ ನಿತ್ಯಬಳಕೆಯಲ್ಲಿವೆ.ಪ್ರಬಲ ಅಜೈವಿಕ ಆಮ್ಲಗಳು ಹಲವಾರು ನಿತ್ಯಬಳಕೆಯ ವಸ್ತುಗಳ ತಯಾರಿಕೆಗಳಿಗೆ ಅತ್ಯವಶ್ಯಕವಾಗಿವೆ.ರಾಸಾಯನಿಕ ಗೊಬ್ಬರ,ಬಣ್ಣಗಳು,ಮಾರ್ಜಕಗಳು,ಸ್ಪೋಟಕಗಳು,ಲೋಹಗಳು,ತೈಲ ಶುದ್ಧೀಕರಣ ಇತ್ಯಾದಿಗಳಲ್ಲಿ ವ್ಯಾಪಕ ಬಳಕೆಯಲ್ಲಿವೆ.ಅಡುಗೆ ಎಣ್ಣೆಯಲ್ಲಿ ೯೪%ಯನಕ ಕೊಬ್ಬಿನ ಆಮ್ಲಗಳಿದ್ದಾವೆ.ಕೊಬ್ಬ್ನ ಆಮ್ಲಗಳಿಂದ ಅಮಿನೋ ಅಮ್ಲಗಳು ಉತ್ಪನ್ನವಾಗಿತ್ತವೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಆಮ್ಲ&oldid=1133804" ಇಂದ ಪಡೆಯಲ್ಪಟ್ಟಿದೆ