ಚರ್ಮ
ಚರ್ಮವು ಕಶೇರುಕಗಳ ಬಾಹ್ಯ ಮೃದು ಹೊದಿಕೆ. ಸಸ್ತನಿಗಳಲ್ಲಿ, ಚರ್ಮವು ಹೊರಪದರ ವ್ಯವಸ್ಥೆಯ ಅಂಗ ಮತ್ತು ಬಾಹ್ಯಕೋಶಸ್ತರೀಯ ಅಂಗಾಂಶದ ಹಲವು ಪದರಗಳನ್ನು ಹೊಂದಿರುತ್ತದೆ, ಮತ್ತು ಕೆಳಗಿನ ಸ್ನಾಯುಗಳು, ಮೂಳೆಗಳು, ಅಸ್ಥಿರಜ್ಜುಗಳು ಹಾಗೂ ಆಂತರಿಕ ಅಂಗಗಳನ್ನು ಕಾಪಾಡುತ್ತದೆ. ಉಭಯಚರಗಳು, ಸರೀಸೃಪಗಳು ಮತ್ತು ಪಕ್ಷಿಗಳಲ್ಲಿ ಬೇರೆ ಸ್ವರೂಪದ ಚರ್ಮ ಇರುತ್ತದೆ. ತಿಮಿಂಗಿಲಗಳು, ಡಾಲ್ಫಿನ್‍ಗಳು ಮತ್ತು ಸಮುದ್ರಹಂದಿಗಳಂತಹ ಸಮುದ್ರ ಸಸ್ತನಿಗಳು ಸೇರಿದಂತೆ, ಎಲ್ಲ ಸಸ್ತನಿಗಳು ಚರ್ಮದ ಮೇಲೆ ಸ್ವಲ್ಪ ಕೂದಲನ್ನು ಹೊಂದಿರುತ್ತವೆ.