ಸಸ್ತನಿಗಳು
Temporal range: ಕೊನೆ ಟ್ರಯಾಸಿಕ್ – ಪ್ರಸಕ್ತ
ಜಿರಾಫೆ (ಜಿರಾಫ ಕ್ಯಾಮೆಲೊಪಾರ್ಡಾಲಿಸ್)
Scientific classification
ಸಾಮ್ರಾಜ್ಯ:
ವಿಭಾಗ:
Subphylum:
(ಶ್ರೇಣಿಯಿಲ್ಲದ್ದು):
ವರ್ಗ:
ಸಸ್ತನಿ

ಉಪವರ್ಗಗಳು ಮತ್ತು ಕೆಳವರ್ಗಗಳು

ಸಸ್ತನಿಗಳು ಕಶೇರುಕ(ಬೆನ್ನೆಲುಬುಳ್ಳ ಪ್ರಾಣಿ) ಗಳಲ್ಲಿ, ಮರಿ ಹಾಕಿ ಅವಕ್ಕೆ ಮೊಲೆಯುಣಿಸುವ ಜೀವ ಜಾತಿ. ಆಸ್ಟ್ರೇಲಿಯ ಖಂಡದಲ್ಲಿ ಮೊಟ್ಟೆಯಿಡುವ ಕೆಲವು ಸಸ್ತನಿಗಳಿವೆ.

ವರ್ಗೀಕರಣ ಬದಲಾಯಿಸಿ

ಮಾರ್ಸೂಪಿಯಲ್ಸ್ ಬದಲಾಯಿಸಿ

ಮರಿಗಳನ್ನು ತಮ್ಮ ಹೊಟ್ಟೆಯ ಹೊರ ಚೀಲದಲ್ಲಿ ಇಟ್ಟುಕೊಂಡು ಸಾಕಿ ಬೆಳೆಸುವ ಕಾಂಗರೂ, ಕೋಲಾ ಕರಡಿ, ಒಪೂಸಮ್ ಮುಂತಾದವುಗಳನ್ನು ಈ ವರ್ಗಕ್ಕೆ ಸೇರಿಸುತ್ತಾರೆ.

ರೋದಂತಗಳು ಬದಲಾಯಿಸಿ

ಆಹಾರವನ್ನು ಕಡಿದು ತಿನ್ನುವ ಮೊಲ, ಅಳಿಲು, ಬೀವರ್ ಮೊದಲಾದ ಪ್ರಾಣಿಗಳು ಈ ವರ್ಗಕ್ಕೆ(Rodents) ಸೇರುತ್ತವೆ.

ಮಾಂಸಾಹಾರಿಗಳು ಬದಲಾಯಿಸಿ

ಮಾಂಸಾಹಾರಿ(Carnivorous) ಪ್ರಾಣಿಗಳಾದ ಹುಲಿ, ಸಿಂಹ, ಕರಡಿ, ತೋಳ ಮುಂತಾದವು ಈ ವರ್ಗಕ್ಕೆ ಸೇರುತ್ತವೆ.

ಸಸ್ಯಾಹಾರಿಗಳು ಬದಲಾಯಿಸಿ

ಮಾಂಸಾಹಾರಿಗಳಲ್ಲದ, ಸಸ್ಯಾಹಾರಿಗಳಾದ ಸಸ್ತನಿಗಳನ್ನು ಪುನಃ ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ.ಕಾಲುಗುರಿನಿಂದ ನೆಲವನ್ನು ಕೆದಕುವ ಸಸ್ಯಾಹಾರಿಗಳದು ಒಂದು ಗುಂಪಾದರೆ,ಗೊರಸುಳ್ಳ ಜೀಬ್ರಾ, ಜಿಂಕೆ, ದನ, ಕುದುರೆ,ನೀರಾನೆ,ಖಡ್ಗಮೃಗಗಳು ಇನ್ನೊಂದು ಗುಂಪಿಗೆ ಸೇರುತ್ತವೆ.

ಇತರ ಸಸ್ತನಿಗಳು ಬದಲಾಯಿಸಿ

ವಿಶಿಷ್ಟ ಲಕ್ಷಣಗಳುಳ್ಳ ಅಪೂರ್ವ ಜೀವಿಗಳಾದ ಆನೆ,ಇರುವೆಬಾಕ(Ant-eater),ಜಲಚರಗಳಾದ ತಿಮಿಂಗಿಲ,ಹಂದಿಮೀನು ಹಾಗೂ ಪಕ್ಷಿಯಂತೆ ಕಾಣುವ ಬಾವಲಿ ಕೂಡಾ ಸಸ್ತನಿ ವರ್ಗಕ್ಕೆ ಸೇರುತ್ತವೆ.

ವಿಕಾಸಗೊಂಡ ಪ್ರಾಣಿವರ್ಗದಲ್ಲಿ ಕಪಿ,ಕೋತಿ,ಬಾಲವಿಲ್ಲದ ಚಿಂಪಾಂಜಿ,ಗೊರಿಲ್ಲಾಗಳು ಸಸ್ತನಿ ವರ್ಗಕ್ಕೆ ಸೇರುತ್ತವೆ.ಕಪಿಕುಲದ ಮುಂದಿನ ಮೆಟ್ಟಿಲಿನಲ್ಲಿಯೇ ವಿಕಾಸದ ಪರಮಾವಧಿ ಸಸ್ತನಿ ಮಾನವ ಕಾಣುತ್ತಾನೆ.

ಟೆಂಪ್ಲೇಟು:ಸಸ್ತನಿಗಳು

"https://kn.wikipedia.org/w/index.php?title=ಸಸ್ತನಿ&oldid=840711" ಇಂದ ಪಡೆಯಲ್ಪಟ್ಟಿದೆ