ಒಂದು ವ್ಯವಸ್ಥಿತ ಹಂತವನ್ನು ತಲುಪಿದ ಮಾನವಸಮಾಜ ಅಥವಾ ಸಂಸ್ಕೃತಿಯನ್ನು ನಾಗರೀಕತೆ ಎಂದು ಬಣ್ಣಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ನಾಗರೀಕತೆಗಳೂ ಬೇಸಾಯವನ್ನು ಮಾಡುವಂತಹವಾಗಿ, ಜನರಲ್ಲಿ ಕಸುಬುಗಳ ವರ್ಗೀಕರಣವಿದ್ದು, ನಗರಗಳನ್ನು ಸ್ಥಾಪಿಸುವಷ್ಟು ಜನಸಂಖ್ಯೆಯನ್ನು ಹೊಂದಿರುತ್ತವೆ.ನಗರಾಭಿವೃದ್ಧಿ, ಸಾಮಾಜಿಕ ಶ್ರೇಣೀಕರಣದ, ಸಾಂಕೇತಿಕ ಸಂವಹನ ,ಇವುಗಳು ನಾಗರೀಕತೆಯ ಗುಣಲಕ್ಷಣಗಳು .ನಾಗರಿಕತೆಯನ್ನು ಜನರಿರುವ ವಸಾಹತುಗಳ ವ್ಯವಸ್ಥೆಯಾಗಿ ವಿಂಗಡಿಸಬಹುದು.ನಾಗರೀಕತೆಯಿಂದ ಬರಿಯೆ ಸ್ಥಳದ ವ್ಯವಸ್ಥೆ ಬದಲಾಗದು, ಸ್ಥಳದ ವ್ಯವಸ್ಥೆ ಬದಲಾವಣೆಯೊಂದಿಗೆ ಆಯಾ ನೆಲದಲ್ಲಿ ವಾಸಿಸುತ್ತಿರುವ ಜನರ ಮನಸ್ಥಿತಿ ಸಹ ಬದಲಾಗುತ್ತದೆ.ನಾಗರೀಕತೆ'ಯೊಂದಿಗೆ ಜನರ ತಿಳುವಳಿಕೆ ಹೆಚ್ಚಾಗುತ್ತದೆ.

ನಗರಗಳು ಮಾನವ ನಾಗರೀಕತೆಯ ಪ್ರಮುಖ ಚಿಹ್ನೆಗಳು.

ನಾಗರಿಕ

ಬದಲಾಯಿಸಿ

ನಗರದಿಂದ ನಾಗರಿಕತೆ ಪದ ಉತ್ಪತ್ತಿಯಾಗಿದೆ. ನಾಗ ಅನ್ನುವ ಪದ ಪ್ರಜೆ ಅನ್ನುವ ಪದಕ್ಕೆ ಸಮನಾಗಿ ಬಳಸಲಾಗುತ್ತಿತ್ತು. ಹಾಗಾಗೆ ನಾಗ ಜನಾಂಗ ಎಂದು ಇತಿಹಾಸ ಅಭ್ಯಾಸ ಮಾಡುವವರು ಬಳಸಲು ಶುರುಮಾಡಿದರು. ನಿಜವಾದ ಸಂಗತಿ ಎಂದರೆ ನಾಗ, ನಾಗಸಂತತಿ, ನಾಗ ಕುಲದವರು ಎಂದು ಸನಾತನಿಗಳು ತಿರುಚಿ ಪೌರಾಣಿಕ ಗೊಳಿಸಿ ಪೌರೋಹಿತ್ಯದ ಲಾಭ ಪಡೆಯುತ್ತಿದ್ದಾರೆ.

ನಾಗಜನರ ಇತಿಹಾಸ

ಬದಲಾಯಿಸಿ

ಕ್ರಿ.ಪೂ.2500ರಲ್ಲಿದ್ದ ಸಿಂಧೂ ಬಯಲಿನ ನಾಗರಿಕತೆಯು ಇಡೀ ಏಷಿಯಾ ಖಂಡವನ್ನು ಆವರಿಸಿದ್ದು, ಇದನ್ನು ಮೂಲನಿವಾಸಿ ನಾಗ ಜನಾಂಗ ನಿರ್ಮಾಣ ಮಾಡಿತ್ತು. ಬಾಬಾ ಸಾಹೇಬ್ ಅಂಬೇಡ್ಕರರು ಏಷಿಯಾ ಖಂಡದ ಬಹು ಭಾಗಗಳನ್ನು ಆಳಿದ "ನಾಗ ಜನಾಂಗಕ್ಕೆ ಸೇರಿರುವವರು ನಾವು" ಎಂದು ಹೇಳುತ್ತಾರೆ.

ಭಾರತೀಯ ಪರಂಪರೆ ವಿಶ್ವದ ವಿವಿಧ ದೇಶಗಳಿಗಿಂತ ವಿಶಷ್ಟವಾದ ಪರಂಪರೆ, ನಮ್ಮ ದೇಶಕ್ಕೆ ತನ್ನದೇ ಆದ ಅದ್ಬುತ ಇತಿಹಾಸವಿದೆ. ವಿಶ್ವದ ಬೇರೆ ಯಾವುದೇ ದೇಶಗಳಲ್ಲಿ ಇರದ ನಾನಾ ಧರ್ಮಗಳು ಇಲ್ಲಿ ನೆಲೆಗೊಂಡಿವೆ. ಸುಮಾರು (1500)ಭಾಷೆಗಳಿಗಿಂತ ಹೆಚ್ಚಿನ ಭಾಷೆಗಳನ್ನು ನಮ್ಮ ಜನ ಇಲ್ಲಿ ಆಡುತ್ತಾರೆ.

ಸಿಂಧೂ ಬಯಲಿನ ನಾಗರಿಕತೆ ವಿಶ್ವದ ಎಲ್ಲಾ ನಾಗರಿಕತೆಗಳಿಗೆ ಒಂದು ಮಾದರಿ ನಾಗರಿಕತೆ. ಈ ನಾಗರಿಕತೆಯನ್ನು ಸುಮಾರು (4500) ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ದ್ರಾವಿಡರು, ನಾಗರು, ಅಸುರರು, ರಕ್ಕಸರು ಎಂದೆನ್ನಿಸಿಕೊಳ್ಳುವ ರಾಜರು ನಿರ್ಮಾಣ ಮಾಡಿದ್ದರು. ಬೆಚ್ಚಿ ಬೆರಗಾಗುವಂತಹ ಇತಿಹಾಸವನ್ನು ನಿರ್ಮಾಣ ಮಾಡಿದ ಭಾರತದ ನಾಗರಿಕತೆ.

ಈಗ ಸಮಸ್ಯೆಗಳ ನೆಲೆ ನಾಡಾಗಿದೆ. ನಿಜವಾದ ಅರ್ಥದಲ್ಲಿ ಸುಮಾರು 70% ಜನರು ಇಲ್ಲಿ ಅವಿದ್ಯಾವಂತರು, 65% ಜನರು ಇಲ್ಲಿ ಮೂಲಭೂತ ಸೌಕರ್ಯಗಳಲ್ಲಿದೆ ಬಡವರಾಗಿದ್ದಾರೆ. ನಿರುದ್ಯೋಗ, ಭ್ರಷ್ಟಾಚಾರ, ಮೂಢನಂಬಿಕೆ(ವಿಶೇಷವಾಗಿ ಮಾಧ್ಯಮಗಳ ಮೂಲಕ) ತಾಂಡವವಾಡುತ್ತಿವೆ. ರಾಜಕೀಯವಾಗಿ ಬಹುಜನರು, ಅಲ್ಪಜನರ ಹಿಡಿತದಲ್ಲಿದ್ದಾರೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಇಲ್ಲಿನ ಜನರ ಅಂತರ ಅಧಿಕವಾಗಿದೆ. ಸಾಮಾಜಿಕ ಚಿಂತಕರು, ಭಾರತದ ಸಾಮಾಜಿಕ ವ್ಯವಸ್ಥೆ ಜಾತಿ ವ್ಯವಸ್ಥೆಯಾಗಿದೆ ಎಂದು ಹೇಳುತ್ತಾರೆ‌. ರಾಜಕಾರಣವಾಗಲಿ, ಆರ್ಥಿಕ ರಂಗವಾಗಲಿ, ಸಾಮಾಜಿಕ ಆಥವಾ ಸಾಂಸ್ಕೃತಿಕ ರಂಗವಾಗಲೀ ಅಲ್ಲಿ ಜಾತಿಯ ಪಾತ್ರವನ್ನು ತಳ್ಳಿ ಹಾಕುವಂತಿಲ್ಲ. ನಮ್ಮ ದೇಶದ ಜಾತಿ ವ್ಯವಸ್ಥೆಯಂಥ ಅನಿಷ್ಟ ಪದ್ಧತಿಯೇ ನಮ್ಮೆಲ್ಲ ಸಮಸ್ಯೆಗಳ ಮೂಲಬೇರು. ಈ ಅನಿಷ್ಟ ಪದ್ಧತಿಯನ್ನು ಯಾರು, ಹೇಗೆ, ಯಾವಾಗ, ಏಕೆ ಸೃಷ್ಟಿ ಮಾಡಿದರು ಎಂದು " ಅಂಬೇಡ್ಕರ್ ವಾದಿ ದೃಷ್ಟಿಕೋನದಲ್ಲಿ ವಿಶ್ಲೇಷಿಸುವುದೇ ಈ ಅಧ್ಯಯನದ ಉದ್ದೇಶವಾಗಿದೆ.

ನಾಗ ಜನಾಂಗದವರು ತಮಿಳು ಭಾಷೆಯನ್ನು ಆಡುತ್ತಿದ್ದರು. ಆದ್ದರಿಂದ ಇವರನ್ನು ದ್ರಾವಿಡರು ಎಂದು ಕರೆಯಲಾಗುತ್ತದೆ. ವಿಶ್ವದ ಇತಿಹಾಸದಲ್ಲೇ ತುಂಬಾ ಹಳೆಯದಾದ ಭಾಷೆ ಅದು ತಮಿಳು ಎಂದು ಯೂರೋಪಿಯನ್ ಚಿಂತಕರು ಒಪ್ಪಿಕೊಂಡಿದ್ದಾರೆ. ತಮಿಳು ಎಂಬ ಪದವನ್ನು ಆರ್ಯರು ತಮ್ಮ ವೇದಗಳಲ್ಲಿ " ಧಮಿಳ " ಎಂದು ಬಳಸಿ, ನಂತರ " ಧಮಿಳೆ" ಧಮಿತೆ " ನಂತರ "ದ್ರಾವಿಡ " ಎಂದು ಬಳಸಿದ್ದರಿಂದ ತಮಿಳು ಎಂಬ ಪದ 'ದ್ರಾವಿಡ 'ವೆಂದಾಗಿದೆ ಎಂದು ಬಾಬಾಸಾಹೇಬ್ ಅಂಬೇಡ್ಕರರು ಹೇಳುತ್ತಾರೆ.

ನಾಗ ಜನಾಂಗವನ್ನು" ದಾನವ" ಎಂದು ಇನ್ನೊಂದು ಹೆಸರಿನಿಂದಲೂ ಕರೆಯಲಾಗಿತ್ತು. ನಾಗ ಜನಾಂಗದ ನಾಗರಿಕತೆಯಲ್ಲಿ ಹೇರಳವಾದ ಸಂಪತ್ತು ಚಿನ್ನ, ಬಂಗಾರ, ವಜ್ರ, ವೈಢೂರ್ಯಗಳು, ಆಹಾರ ಸಾಮಾಗ್ರಿಗಳು ದೊರಕುತ್ತಿದ್ದರಿಂದ ಇವರು ಪರದೇಶಿಯರಿಗೆ ಹೇರಳವಾಗಿ ದಾನ-ಧರ್ಮಗಳನ್ನು ನೀಡುತ್ತಿದ್ದರು. ಆದ್ದರಿಂದ ಇವರನ್ನು " ದಾನವರು" ಎಂದು ಕರೆಯಲಾಗುತ್ತಿತ್ತು. "ಬಲಿಚಕ್ರವರ್ತಿ ಎಂಬ ರಾಜ ಅತ್ಯಂತ ಪ್ರಸಿದ್ಧ ದಾನವರಲ್ಲಿ ಒಬ್ಬರಾಗಿದ್ದರು.

ನಾಗ ಜನಾಂಗವನ್ನು "ರಕ್ಕಸ" ಎಂಬ ಮತ್ತೊಂದು ಪದದಿಂದಲೂ ಕರೆಯಲಾಗಿತ್ತು. "ರಕ್ಕಸ" ಎಂದರೆ ' ರಕ್ಷಕ ' ಎಂದರ್ಥ, ಅಂದರೆ ರಕ್ಷಣೆ ಕೊಡುವವನು ಎಂದರ್ಥ. ವಿದೇಶಿಯರಿಂದ ನಾಗರಿಕತೆಯ ಮೇಲೆ ಆಕ್ರಮಣವಾದಾಗ ನಾಗರಿಕತೆಯನ್ನು ಉಳಿಸಲು ಕೆಲವು ರಕ್ಷಕ ರಾಜರನ್ನು ನೇಮಿಸಲಾಗಿತ್ತು. ಆದ್ದರಿಂದಲೇ ಇವರನ್ನು ರಾಕ್ಷಸರೆಂದು ಕರೆಯಲಾಗಿದೆ. ಮನುವಾದಿಗಳು " ರಕ್ಕಸ " ಎಂದರೆ ಕೆಟ್ಟವರು ಎಂದು ಪದದ ಅರ್ಥವನ್ನು ಬದಲಾಯಿಸಿದ್ದಾರೆ.

ನಾಗ ಜನಾಂಗವನ್ನು " ಅಸುರ " ಎಂಬ ಮತ್ತೊಂದು ಪದದಿಂದಲೂ ಕರೆಯಲಾಗಿತ್ತು. " ಅಸುರ " ಎಂದರೆ ಮದ್ಯಪಾನ ಮಾಡದೇ ಇರುವವನು, ನಾಗ ಜನರು ಕಟ್ಟಿದ ನಾಗರಿಕತೆಯಲ್ಲಿ ಮದ್ಯಪಾನವೆಂದರೇನು ಎಂಬುದು ತಿಳಿದಿರಲಿಲ್ಲ ಬೇರೆ ದೇಶಗಳಿಂದ ಬಂದ ಆರ್ಯರು ಈ ದೇಶದ ಜನರಿಗೆ ಮದ್ಯಪಾನ ಕಲಿಸುತ್ತಾರೆ. ಆರ್ಯರಿಗೆ " ಸುರರು " ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಅವರು ಸೋಮರಸ ಹಾಗೂ ರಾಮರಸಗಳನ್ನು ಮಾಡಿ ಯಥೇಚ್ಛವಾಗಿ ಮದ್ಯವನ್ನು ಸೇವಿಸುತ್ತಿದ್ದರು. ಆದ್ದರಿಂದಲೇ ಇವರನ್ನು " ಸುರರು ಎಂದು ಕರೆಯಲಾಗಿದೆ.

ಸಿಂಧೂ ಬಯಲಿನ ನಾಗರಿಕತೆಯನ್ನು ಬೇರೆ ನಾಗರಿಕತೆಗಳಿಗೆ ಮಾದರಿ ಎಂದು ಹೇಳಲು ಸಾಕಷ್ಟು ಉದಾಹರಣೆಗಳಿವೆ. ನಾಗರಿಕತೆಯಲ್ಲಿ ನೂರಾರು ಹರಪ್ಪ, ಮೆಹೆಂಜೊದಾರೋ, ಚೌನಾದಾರೋ, ಬನವಾಲಿ, ದೊಲವೀರಾ, ದೈಮಾಬಾದ್, ಕಾಲಿಬಂಗನ್, ಖಿರಸಾರ್, ಖೋಟ್ ಬಾಲ, ಅಲಮಗಿರ್ಪುರ್, ಬಾಲಾಕೋಟ್, ಕೋಟ್ ದಿಜಿ, ಕುಂಟಾಸಿ, ಲರ್ಕನ, ಲೋತೇಶ್ವರ್, ಮಂಡಿ, ಮಾಂಡ, ಜಮ್ಮು, ಮೆಹರ್ ಗಡ್, ಮಿಟಾತಲ್, ರಾಖಿಗಡಿ, ರಂಗಪುರ್, ರೂಪಾರ್, ಶಿಕಾರ್ ಪುರ್,ಸೋತಿ, ಸನೌಲಿ, ನೌಶಾರೋ, ರೆಹಮನ್ ಧೇರಿ, ಮುಂತಾದ ದೊಡ್ಡ ದೊಡ್ಡ ನಗರಗಳನ್ನು ನಿರ್ಮಿಸಲಾಗಿತ್ತು.

4500 ವರ್ಷಗಳ ಹಿಂದೆ ಸುಟ್ಟ ಇಟ್ಟಿಗೆಗಳಿಂದ ಕಟ್ಟಡಗಳನ್ನು,.ವಿದ್ಯಾ ಕೇಂದ್ರಗಳನ್ನು ನಿರ್ಮಿಸಲಾಗಿತ್ತು. ದೊಡ್ಡ ದೊಡ್ಡ 100 ಅಡಿ ರಸ್ತೆಗಳನ್ನು ನಿರ್ಮಿಸಲಾಗಿತ್ತು. ವೆಸಪೆಟೋಮಿಯ ನಾಗರಿಕತೆ ಹಾಗೂ ಬೇರೆ ನಾಗರಿಕತೆಗಳ ಜೊತೆ ಅಂತರರಾಷ್ಟ್ರೀಯ ವ್ಯಾಪಾರ ಚಟುವಟಿಕೆಗಳಿಗೆ ದೊಡ್ಡ ದೊಡ್ಡ ಬಂದರುಗಳನ್ನು ನಾಗ ಜನಾಂಗ ನಿರ್ಮಿಸಿತ್ತು. ಈ ನಾಗರಿಕತೆಯಲ್ಲಿ ಚಿನ್ನ, ಬಂಗಾರಗಳು ಹೇರಳವಾಗಿ ದೊರಕುತ್ತಿತ್ತು. ಕೋಲಾರ ಮತ್ತು ಮೈಸೂರಿನಿಂದ ಚಿನ್ನವು ಬೇರೆ ದೇಶಗಳಿಗೆ ರಫ್ತಾಗುತ್ತಿತ್ತು. ದಕ್ಷಿಣ ಭಾರತದ ಆಹಾರವಾದ " ಇಡ್ಲಿಯನ್ನು" ತಯಾರಿಸುವ ಬಗೆಯನ್ನು ಕಲಿಸಿಕೊಟ್ಟವರು ನಾಗ ಜನಾಂಗದವರು ತಮಿಳು ಭಾಷೆಯಲ್ಲಿ ಆಗ ಇಡ್ಲಿಯನ್ನು " ಪೂವ " ಎಂದು ಕರೆಯುತ್ತಿದ್ದರು.

ಇಲ್ಲಿನ ಸಾಮಾಜಿಕ ವ್ಯವಸ್ಥೆ ಬೇರೆ ಸಾಮಾಜಿಕ ವ್ಯವಸ್ಥೆಗಳಿಗೆ ಮಾದರಿಯಾಗಿತ್ತು. ಹೆಣ್ಣು- ಗಂಡಿನ ತಾರತಮ್ಯವಿರದೆ ಎಲ್ಲರೂ ಸಮನಾಗಿ ಬದುಕುತ್ತಿದ್ದರು‌. ನಾಗರು ಪ್ರಕೃತಿ ಆರಾಧಕರಾಗಿದ್ದರು. ಸೂರ್ಯ, ಭೂಮಿ, ಬೆಂಕಿ, ನೀರು, ಮರ ಹೀಗೆ ಪ್ರಕೃತಿಯನ್ನು ಪೂಜಿಸುತ್ತಿದ್ದರು. ಹೀಗೆ ಸ್ವಾತಂತ್ರ್ಯ, ಸಮಾನತೆ, ಸಹೋದರತೆಗಳಿಂದ ನಾಗ ಜನಾಂಗವು ಪ್ರಸಿದ್ಧ ಸಿಂದೂ ಬಯಲಿನ ನಾಗರಿಕತೆಯನ್ನು ನಿರ್ಮಾಣ ಮಾಡಿತ್ತು. ಇಲ್ಲಿ ಯಾವುದೇ ರೀತಿಯ ಕುಂದು ಕೊರತೆಗಳು, ಬಡತನ, ಅನಕ್ಷರತೆ, ಎಂಬ ಸಮಸ್ಯೆಗಳೇ ಇರಲಿಲ್ಲ. ಏಕೆಂದರೆ ಅಲ್ಲಿನ ಜನ ಯಾರು ಬಡವರಿರಲಿಲ್ಲ ಹಾಗೂ ಅನಕ್ಷರರೂ ಇರಲಿಲ್ಲ. ಇಂತಹ ಪ್ರಸಿದ್ಧ ನಾಗರಿಕತೆಯನ್ನು ಕಟ್ಟಿದ ನಾಗ ಜನಾಂಗ " ವಿಶ್ವದ " ಎಲ್ಲಾ ನಾಗರಿಕತೆಗಳಿಗೆ ಮಾದರಿ ನಾಗರಿಕತೆಯನ್ನು ಸೃಷ್ಟಿಮಾಡಿತ್ತು. ಪ್ರಪಂಚವೇ ಬೆಚ್ಚಿ ಬೆರಗಾಗಿ ಈ ನಾಗರಿಕತೆಯನ್ನು ನೋಡಲು ಕನಸು ಕಾಣುತ್ತಿತ್ತು.

ನಾಗರಿಕತೆಗಳು ಇತರ ಸಮಾಜಗಳ ಸ್ಪಷ್ಟವಾಗಿ ವಿವಿಧ ವಸಾಹತು ಮಾದರಿಗಳನ್ನು ಹೊಂದಿವೆ. ನಾಗರಿಕತೆ ಪದವು ಕೆಲವೊಮ್ಮೆ ಕೇವಲ "'ನಗರಗಳಲ್ಲಿ ವಾಸಿಸುತ್ತಿರುವ'" ಎಂಬ ಅರ್ಥದಿಂದ ವ್ಯಾಖ್ಯಾನಿಸಲಾಗಿದೆ. ಅಲ್ಲದೆ ರೈತರು ಕೆಲಸ ಮತ್ತು ವ್ಯಾಪಾರ ನಗರಗಳಲ್ಲಿ ಸಂಗ್ರಹಿಸಲು ಒಲವು. ಆರ್ಥಿಕವಾಗಿ, ನಾಗರಿಕತೆಗಳು ಕಡಿಮೆ ಸಂಘಟಿತ ಸಮಾಜದಲ್ಲಿ ಹೆಚ್ಚು ಮಾಲೀಕತ್ವ ಮತ್ತು ವಿನಿಮಯ ಸಂಕೀರ್ಣ ಮಾದರಿಗಳನ್ನು ಪ್ರದರ್ಶಿಸುತ್ತೆದೆ. ಒಂದು ಸ್ಥಳದಲ್ಲಿ ಜೀವಿಸಲು ಜನರಿಗೆ ಅಲೆಮಾರಿ ಜನರಿಗಿಂತ ಹೆಚ್ಚು ವೈಯಕ್ತಿಕ ಆಸ್ತಿ ಸಂಚಯಿಸಲು ಅನುಮತಿಸುತ್ತದೆ.

 
ಇಂದಸ್ ವ್ಯಾಲಿ
ಉಲ್ಲೇಖ್ಗಳು

[]

ಉಲ್ಲೇಖಗಳು

ಬದಲಾಯಿಸಿ