ಕಾಂಗರೂ
ಕಾಂಗರೂ | |
---|---|
![]() | |
Eastern Grey Kangaroo | |
Scientific classification | |
Kingdom: | Animalia
|
Phylum: | Chordata
|
Class: | |
Infraclass: | |
Order: | |
Family: | |
Genus: | |
Subgenus: | Macropus and Osphranter
|
Species | |
6 species, see text. |
ಕಾಂಗರೂ ಮ್ಯಾಕ್ರೊ ಪೋಡಿಡೀ ಕುಟುಂಬದ (ಮ್ಯಾಕ್ರೊಪಾಡ್ ಎಂದರೆ ದೊಡ್ಡ ಪಾದ) ಒಂದು ಹೊಟ್ಟೆಚೀಲದ ಪ್ರಾಣಿ. ಸಾಮಾನ್ಯ ಬಳಕೆಯಲ್ಲಿ ಈ ಪದವನ್ನು ಈ ಕುಟುಂಬದ ಅತಿ ದೊಡ್ಡ ಪ್ರಜಾತಿಗಳನ್ನು, ವಿಶೇಷವಾಗಿ ಮ್ಯಾಕ್ರೊಪಸ್ ಜಾತಿಯವುಗಳನ್ನು, ಅಂದರೆ ಕೆಂಪು ಕಾಂಗರೂ, ಆಂಟಿಲೋಪಿನ್ ಕಾಂಗರೂ, ಪೌರ್ವಾತ್ಯ ಬೂದು ಕಾಂಗರೂ ಮತ್ತು ಪಾಶ್ಚಾತ್ಯ ಬೂದು ಕಾಂಗರೂವನ್ನು, ವಿವರಿಸಲು ಬಳಸಲಾಗುತ್ತದೆ. ಈ ಕುಟುಂಬವು ವಾಲಬಿಗಳು, ವೃಕ್ಷ ಕ್ಯಾಂಗರೂಗಳು, ವಾಲರೂಗಳು, ಪ್ಯಾಡಿಮೆಲನ್‍ಗಳು ಮತ್ತು ಕ್ವಾಕಾ, ಎಲ್ಲ ಸೇರಿ ಕೆಲವು ೬೩ ಜೀವಂತ ಪ್ರಜಾತಿಗಳನ್ನು ಒಳಗೊಂಡಂತೆ, ಅನೇಕ ಚಿಕ್ಕದಾದ ಪ್ರಜಾತಿಗಳನ್ನು ಕೂಡ ಒಳಗೊಳ್ಳುತ್ತದೆ.
ವೈಜ್ಞಾನಿಕ ವರ್ಗೀಕರಣಸಂಪಾದಿಸಿ
ಮ್ಯಾಕ್ರೋ ಪೋಡಿಡೀ ಕುಟುಂಬಕ್ಕ ಸೇರಿದ್ದು,ಮ್ಯಾಕ್ರೋಪಸ್ ಪಂಗಡಕ್ಕೆ ಸೇರಿದೆ.ಮುಖ್ಯವಾಗಿ ನಾಲ್ಕು ಪ್ರಭೇದಗಳನ್ನು ಗುರುತಿಸಲಾಗಿದೆ.
ಶಾರೀರಿಕ ಲಕ್ಷಣಗಳುಸಂಪಾದಿಸಿ
ನೆಗೆಯಲು ಅನುಕೂಲವಾಗುವ ಬಲಿಷ್ಠವಾದ,ಉದ್ದವಾದ ಹಿಂಗಾಲುಗಳನ್ನು ಹೊಂದಿವೆ.ಉದ್ದ ಬಾಲವಿರುತ್ತದೆ.ಮರಿಗಳನ್ನು ಹೊತ್ತು ಸಾಗಿಸಲು ಹೊಟ್ಟೆಯಲ್ಲಿ ಚೀಲಗಳಿರುವುದು ಇದರ ಮುಖ್ಯ ವೈಶಿಷ್ಟ್ಯ. ಚೀಲದೊಳಗೆ ನಾಲ್ಕು ಮೊಲೆತೊಟ್ಟುಗಳಿದ್ದು ಮರಿಗಳಿಗೆ ಹಾಲೂಡಿದಲು ಅನುಕೂಲವಾಗಿದೆ.
ಭೌಗೋಳಿಕ ವಿತರಣೆಸಂಪಾದಿಸಿ
ಕಾಂಗರೂಗಳು ಆಸ್ಟ್ರೇಲಿಯಾ ಖಂಡಕ್ಕಷ್ಟೇ ಸೀಮಿತವಾದ ಪ್ರಾಣಿ.ವೃಕ್ಷ ಕಾಂಗರೂವಿನ ಒಂದು ಪ್ರಭೇದ ಮಾತ್ರ ಪಾಪುವ ನ್ಯೂಗಿನಿಯಲ್ಲಿ ಕಂಡುಬರುತ್ತದೆ.