ಬೆದೆ ಚಕ್ರವು ಬಹುತೇಕ ಸಸ್ತನಿ ಥೀರಿಯನ್ ಹೆಣ್ಣುಗಳಲ್ಲಿ ಸಂತಾನೋತ್ಪತ್ತಿ ಹಾರ್ಮೋನುಗಳಿಂದ ಉಂಟಾದ ಪುನರಾವರ್ತಿತ ಶಾರೀರಿಕ ಬದಲಾವಣೆಗಳು. ಬೆದೆ ಚಕ್ರಗಳು ಹೆಣ್ಣುಗಳಲ್ಲಿ ಪೂರ್ಣ ಲೈಂಗಿಕ ವಿಕಸನದ ನಂತರ ಪ್ರಾರಂಭವಾಗುತ್ತವೆ ಮತ್ತು ಲೈಂಗಿಕ ಬಿಡುವಿನ ಹಂತಗಳು ಅಥವಾ ಗರ್ಭಧಾರಣೆಗಳಿಂದ ವಿಚ್ಛಿನ್ನಗೊಳ್ಳುತ್ತವೆ. ಸಾಮಾನ್ಯವಾಗಿ, ಬೆದೆ ಚಕ್ರಗಳು ಮರಣದ ತನಕ ಮುಂದುವರೆಯುತ್ತವೆ. ಕೆಲವು ಪ್ರಾಣಿಗಳು ರಕ್ತಮಯ ಯೋನಿ ಸ್ರಾವ ಪ್ರದರ್ಶಿಸಬಹುದು. ಇದನ್ನು ಹಲವುವೇಳೆ ಮುಟ್ಟು ಎಂದು ತಪ್ಪುತಿಳಿಯಲಾಗುತ್ತದೆ.

ಬೆದೆ (ಕಾಮೋದ್ರೇಕ) ಪದವು ಹೆಣ್ಣು ಪ್ರಾಣಿಯು ಲೈಂಗಿಕವಾಗಿ ಗ್ರಹಣಾಕಾಂಕ್ಷಿಯಾಗಿರುವ ಹಂತವನ್ನು ಸೂಚಿಸುತ್ತದೆ. ಗೋನ್ಯಾಡ್‍ ಪ್ರಚೋದಕ ಹಾರ್ಮೋನುಗಳ ನಿಯಂತ್ರಣದಲ್ಲಿ, ಅಂಡಾಶಯ ಕೋಶಕಗಳು ವಿಕಸನಗೊಂಡು ಈಸ್ಟ್ರೋಜನ್ ಸ್ರಾವಗಳು ಅತಿ ದೊಡ್ಡ ಪ್ರಭಾವವನ್ನು ಬೀರುತ್ತವೆ. ಆಗ ಹೆಣ್ಣು ಲೆಂಗಿಕವಾಗಿ ಗ್ರಹಣಾಕಾಂಕ್ಷಿ ವರ್ತನೆಯನ್ನು ಪ್ರದರ್ಶಿಸುತ್ತದೆ.[೧] ಗೋಚರವಾದ ಶಾರೀರಿಕ ಬದಲಾವಣೆಗಳಿಂದ ಈ ಸ್ಥಿತಿಯು ಪ್ರಕಟವಾಗಬಹುದು. ಬೆದೆಯು ಸಾಮಾನ್ಯವಾಗಿ ಪ್ರೈಮೇಟ್‍ಗಳು ಸೇರಿದಂತೆ ಸಸ್ತನಿ ಪ್ರಜಾತಿಗಳಲ್ಲಿ ಕಂಡುಬರುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. Geoffrey Miller (April 2007). "Ovulatory cycle effects on tip earnings by lap dancers: Economic evidence for human estrus?" (PDF). Evolution and Human Behavior (28): 375–381.