ಶ್ವಾಸಕೋಶವು ಬಹುತೇಕ ಚತುಷ್ಪದಿಗಳು, ಕೆಲವು ಮೀನುಗಳು ಮತ್ತು ಕೆಲವು ಶಂಬುಕಗಳನ್ನು ಒಳಗೊಂಡಂತೆ, ಅನೇಕ ಗಾಳಿಯನ್ನು ಉಸಿರಾಡುವ ಪ್ರಾಣಿಗಳಲ್ಲಿ ಅಗತ್ಯ ಉಸಿರಾಟದ ಅಂಗ. ಸಸ್ತನಿಗಳು ಮತ್ತು ಹೆಚ್ಚು ಸಂಕೀರ್ಣ ಜೀವರೂಪಗಳಲ್ಲಿ, ಎರಡು ಶ್ವಾಸಕೋಶಗಳು ಹೃದಯದ ಎರಡೂ ಬದಿಯಲ್ಲಿ ಬೆನ್ನೆಲುಬಿನ ಹತ್ತಿರ ನೆಲೆಸಿರುತ್ತವೆ. ವಾತಾವರಣದಿಂದ ರಕ್ತಪ್ರವಾಹದೊಳಗೆ ಆಮ್ಲಜನಕವನ್ನು ಸಾಗಿಸುವುದು, ಮತ್ತು ರಕ್ತಪ್ರವಾಹದಿಂದ ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ಅನ್ನು ಬಿಡುವುದು ಅವುಗಳ ಪ್ರಧಾನ ಕಾರ್ಯವಾಗಿದೆ.

Respiratory system complete en