ಚೂಚುಕವು (ಸ್ತನಾಗ್ರ, ಮೊಲೆತೊಟ್ಟು) ಮೊಲೆಯ ಮೇಲ್ಮೈ ಮೇಲೆ ಇರುವ ಉಬ್ಬಿದ ಪ್ರದೇಶ. ಹೆಣ್ಣುಗಳಲ್ಲಿ ಇದರಿಂದ ಶಿಶುವಿಗೆ ಉಣಿಸಲು ಮೊಲೆಯ ಹಾಲು ಕ್ಷೀರೋತ್ಪಾದಕ ನಾಳಗಳಿಂದ ಹೊರಬರುತ್ತದೆ. ಚೂಚುಕದ ಮೂಲಕ ಹಾಲು ನಿಷ್ಕ್ರಿಯವಾಗಿ ಹರಿಯಬಹುದು ಅಥವಾ ಅದನ್ನು ನಾಳೀಯ ವ್ಯವಸ್ಥೆಯ ಉದ್ದಕ್ಕೆ ಇರುವ ಮೃದು ಸ್ನಾಯುಗಳ ಸಂಕೋಚನದಿಂದ ಹೊರಹಾಕಬಹುದು. ಚೂಚುಕದ ಸುತ್ತ ಆ್ಯರಿಯೋಲಾ (ವರ್ಣವಲಯ) ಇರುತ್ತದೆ. ಹಲವುವೇಳೆ ಇದು ಸುತ್ತಲಿನ ಚರ್ಮಕ್ಕಿಂತ ಹೆಚ್ಚು ಗಾಢವಾದ ಬಣ್ಣವನ್ನು ಹೊಂದಿರುತ್ತದೆ.[೧] ಮಾನವರಲ್ಲಿ, ಗಂಡು ಮತ್ತು ಹೆಣ್ಣು ಇಬ್ಬರ ಚೂಚುಕಗಳನ್ನು ಲೈಂಗಿಕ ಪ್ರಚೋದನೆಯ ಭಾಗವಾಗಿ ಉದ್ರೇಕಿಸಬಹುದು. ಅನೇಕ ಸಂಸ್ಕೃತಿಗಳಲ್ಲಿ, ಹೆಣ್ಣು ಮಾನವರ ಚೂಚುಕಗಳನ್ನು ಲೈಂಗಿಕಗೊಳಿಸಲಾಗುತ್ತದೆ, ಅಥವಾ ಕಾಮಾಕರ್ಷಕ ವಸ್ತುಗಳಾಗಿ ಪರಿಗಣಿಸಲಾಗುತ್ತದೆ ಮತ್ತು ಅವುಗಳ ಭೌತಿಕ ಲಕ್ಷಣಗಳು ಹಾಗೂ ಲೈಂಗಿಕತೆಯ ಸಂಬಂಧದಲ್ಲಿ ಮೌಲ್ಯಮಾಪಿಸಲಾಗುತ್ತದೆ.

ಒಬ್ಬ ಮಹಿಳೆಯ ಚೂಚುಕ, ಆ್ಯರಿಯೋಲಾ ಮತ್ತು ಸ್ತನ

ಉಲ್ಲೇಖಗಳುಸಂಪಾದಿಸಿ

  1. "nipple - Taber's Online". www.tabers.com. Retrieved 12 August 2017.
"https://kn.wikipedia.org/w/index.php?title=ಚೂಚುಕ&oldid=930011" ಇಂದ ಪಡೆಯಲ್ಪಟ್ಟಿದೆ