Cattle
A Swiss Braunvieh cow wearing a cowbell
Conservation status
Domesticated
Scientific classification
ಸಾಮ್ರಾಜ್ಯ:
animalia
ವಿಭಾಗ:
Chordata
ವರ್ಗ:
Subclass:
ಕೆಳವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
B. primigenius
Subspecies:
B. p. taurus,
B. p. indicus
Binomial name
Bos primigenius
Bojanus, 1827
Trinomial name
Bos primigenius taurus,
Bos primigenius indicus

Synonyms

Bos taurus,
Bos indicus



ದನಗಳು ದೊಡ್ಡ ಪಳಗಿಸಿದ ಗೊರಸುಳ್ಳ ಪ್ರಾಣಿಗಳ ಅತಿ ಸಾಮಾನ್ಯ ವಿಧ. ಅವು ಬೋವಿನಿ ಉಪಕುಟುಂಬದ ಒಂದು ಪ್ರಮುಖ ಆಧುನಿಕ ಸದಸ್ಯವಾಗಿವೆ, ಬೋಸ್ ಪ್ರಜಾತಿಯ ಅತಿ ವ್ಯಾಪಕ ಜಾತಿಯಾಗಿವೆ, ಮತ್ತು ಅತಿ ಸಾಮಾನ್ಯವಾಗಿ ಒಟ್ಟಾರೆಯಾಗಿ ಬೋಸ್ ಪ್ರೀಮಿಗೇನ್ಯೂಸ್ ಎಂದು ವರ್ಗೀಕರಿಸಲ್ಪಡುತ್ತವೆ. ದನಗಳನ್ನು ಮಾಂಸಕ್ಕಾಗಿ (ಗೋಮಾಂಸ ಮತ್ತು ವೀಲ್) ಜಾನುವಾರುಗಳಾಗಿ, ಹಾಲು ಮತ್ತು ಇತರ ಕ್ಷೀರೋತ್ಪನ್ನಗಳಿಗಾಗಿ ಹೈನು ಪ್ರಾಣಿಗಳಾಗಿ, ಮತ್ತು ಭಾರ ಎಳೆಯುವ ಪ್ರಾಣಿಗಳಾಗಿ (ಎತ್ತುಗಳು ಅಥವಾ ಗವ್ಯ ಪ್ರಾಣಿಗಳು) (ಬಂಡಿಗಳು, ನೇಗಿಲುಗಳು ಮತ್ತು ಇತ್ಯಾದಿಗಳನ್ನು ಎಳೆಯುವುದಕ್ಕಾಗಿ) ಬಳಸಲಾಗುತ್ತದೆ.

ಹಿಂದೂ ಧರ್ಮ

ಬದಲಾಯಿಸಿ
  • ಹಿಂದೂ ಧರ್ಮದಲ್ಲಿ ದನಗಳನ್ನು ಗೋಮಾತೆ ಎಂದು ಪೂಜಿಸುತ್ತಾರೆ.ವೇದಗಳ ಕಾಲದಿಂದಲೂ ದನಕರುಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ.

ಪ್ರಪಂಚದ ದನಗಣತಿ

ಬದಲಾಯಿಸಿ
ಪ್ರದೇಶ ಜಾನುವಾರು ಬಾಹುಳ್ಯ
ಭಾರತ 281,700,000
ಬ್ರೆಜಿಲ್ 187,087,000
ಚೀನಾ 139,721,000
ಅಮೆರಿಕ ಸಂಯುಕ್ತ ಸಂಸ್ಥಾನ 96,669,000
ಐರೋಪ್ಯ ಒಕ್ಕೂಟ 87,650,000
ಅರ್ಜೆಂಟೀನ 51,062,000
ಆಸ್ಟ್ರೇಲಿಯ 29,202,000
ಮೆಕ್ಸಿಕೋ 26,489,000
ರಷ್ಯಾ ಒಕ್ಕೂಟ 18,370,000
ದಕ್ಷಿಣ ಆಫ್ರಿಕ 14,187,000
ಕೆನಡಾ 13,945,000
ಇತರೆ 49,756,000

ಕರುಗಳಿಗೆ ಗಡಿಗೆ ಹೊಟ್ಟೆ ಸಮಸ್ಯೆ

ಬದಲಾಯಿಸಿ
  • *ಮನುಷ್ಯರಂತೆ ಕರುಗಳಿಗೂ ಅದರ ತಾಯಿಯ ಹಾಲೇ ಸರ್ವಶ್ರೇಷ್ಠ. ಹುಟ್ಟಿದ ದಿನದಿಂದಲೂ ಕನಿಷ್ಠ 3–4 ತಿಂಗಳಾದರೂ ಕರುಗಳಿಗೆ ಅದರ ಶರೀರದ ತೂಕದ ಶೇ 10ರಷ್ಟು ತಾಯಿಯ ಹಾಲನ್ನು ನೀಡಬೇಕು. ಒಂದು ಮಿಶ್ರ ತಳಿಯ ಕರು ಹುಟ್ಟುವಾಗ ಸುಮಾರು 40ಕೆ.ಜಿ ತೂಕ ಇರುತ್ತದೆ.

ತಾಯಿಯ ಹಾಲು ಅಗತ್ಯ

ಬದಲಾಯಿಸಿ
  • ಇಂಥ ಕರುವಿಗೆ ಕನಿಷ್ಠ ನಾಲ್ಕು ಲೀಟರ್‌ ಹಾಲನ್ನು ನೀಡಬೇಕು. ಪ್ರತಿ ದಿನ ಒಂದು ಕರು 100–500 ಗ್ರಾಂನಷ್ಟು ಹೆಚ್ಚುವರಿ ತೂಕ ಹೊಂದುತ್ತದೆ. ಇದಕ್ಕೆ ತಕ್ಕಂತೆ ಹಾಲಿನ ಪ್ರಮಾಣವನ್ನು ಸಹ ಹೆಚ್ಚಿಸುವುದು ಬಹಳ ಮುಖ್ಯ.
  • ಆದರೆ ಈಗ ಲಾಭದ ಆಸೆಗಾಗಿ ಕರುವಿಗೆ ತಾಯಿ ಹಾಲಿನಿಂದ ವಂಚನೆ ಮಾಡುವುದು ಸಾಮಾನ್ಯವಾಗಿದೆ. ಇನ್ನು ಕೆಲವರು ಇಷ್ಟೆಲ್ಲಾ ಹಾಲನ್ನು ಕರುವಿಗೆ ನೀಡಿದರೆ ಕರುವಿಗೆ ಅಜೀರ್ಣವಾಗಿ ಬೇಧಿಯುಂಟಾಗುತ್ತದೆ ಎಂದು ಹೆದರುತ್ತಾರೆ. ಆದರೆ ಕರು ದಷ್ಟಪುಷ್ಟವಾಗಿ, ಆರೋಗ್ಯವಂತವಾಗಿ ಬೆಳವಣಿಗೆ ಹೊಂದಬೇಕು ಎಂದುಕೊಳ್ಳುವವರು ಅದಕ್ಕೆ ನೀಡುವ ಹಾಲಿನ ಪ್ರಮಾಣದ ಮೇಲೂ ಗಮನ ಕೊಡುವುದು ಅತಿ ಅವಶ್ಯಕ.
  • ಹೆಚ್ಚಿನ ಕರುಗಳಿಗೆ ಈಗ ಜೋಲು ಹೊಟ್ಟೆ ಅಥವಾ ಗಡಿಗೆ ಹೊಟ್ಟೆ ಬರುವುದು ಮಾಮೂಲಾಗಿದೆ. ಅದಕ್ಕೆ ಮುಖ್ಯ ಕಾರಣ ಅದರ ಬೆಳವಣಿಗೆಯ ಹಂತದಲ್ಲಿ ಅಗತ್ಯ ಇರುವಷ್ಟು ಹಾಲು ಮತ್ತು ಪೌಷ್ಟಿಕ ಆಹಾರ ನೀಡದೇ ಇರುವುದು. ಮತ್ತೊಂದು ಕಾರಣವೆಂದರೆ, ಎಳೆ ಕರುಗಳಿಗೂ ದೊಡ್ಡ ಹಸುಗಳಿಗೆ ನೀಡುವ ಸಾಮಾನ್ಯ ಆಹಾರ ನೀಡುವುದು.
  • ===ಹುಲ್ಲಿನಲ್ಲಿ ಆಹಾರಾಂಶ ಕಡಿಮೆ===
  • ಈ ಆಹಾರವನ್ನು ಕರುಗಳು ತುಂಬಾ ಇಷ್ಟಪಟ್ಟು ತಿನ್ನುತ್ತವೆ ನಿಜ. ಆದರೆ ಇದರಲ್ಲಿ ಕಡಿಮೆ ಪೌಷ್ಟಿಕಾಂಶ ಇರುತ್ತದೆ. ಇದನ್ನು ಗಮನಿಸಿದ ರೈತರು ಇದೇ ಆಹಾರ ನೀಡುತ್ತಾರೆ. ಅದು ಕರುವಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
  • ಅದೇ ರೀತಿ, ಕರು ಕೂಡ ಕೊಟ್ಟಿಗೆಯಲ್ಲಿ ಇರುವ ಹುಲ್ಲನ್ನು ತಿನ್ನಲು ಪ್ರಾರಂಭಿಸುತ್ತದೆ. ಅದು ಹುಲ್ಲು ತಿನ್ನುತ್ತದೆ ಎಂಬ ಕಾರಣಕ್ಕೆ ಅದರ ಮಾಲೀಕರೂ ಎಲ್ಲಾ ರಾಸುಗಳಿಗೆ ನೀಡುವ ಹುಲ್ಲನ್ನು ಕರುಗಳಿಗೂ ನೀಡುತ್ತಾರೆ.
  • ಈ ಆಹಾರವನ್ನು ಪಚನ ಮಾಡಲು ಅನುವಾಗುವಂತೆ ಕರುವಿನ ಹೊಟ್ಟೆ, ಕರುಳು ಮತ್ತು ಜೀರ್ಣಾಂಗದ ವಿವಿಧ ಭಾಗಗಳು ಜಾಸ್ತಿ ಬೆಳವಣಿಗೆ ಹೊಂದಿರುವುದು ನಿಜವೇ. ಆದರೆ ಆ ವಯಸ್ಸಿನಲ್ಲಿ ಅದಕ್ಕೆ ಹಾಲಿನಿಂದ ಲಭ್ಯವಾಗುವ ಕ್ಯಾಲ್ಸಿಯಂ ಮತ್ತು ರಂಜಕ ಸೂಕ್ತ ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ. ಇದರಿಂದ ಅಸ್ಥಿವ್ಯೂಹದ ಸರಿಯಾದ ಬೆಳವಣಿಗೆಯಾಗುವುದಿಲ್ಲ.
  • ಎಲುಬುಗಳು ಅದರಲ್ಲೂ ಹಿಂಭಾಗದ ಎಲುಬುಗಳು ಉತ್ತಮ ಬೆಳವಣಿಗೆ ಹೊಂದುವುದಿಲ್ಲ. ಇದರಿಂದಾಗಿ ಕರುವನ್ನು ಹಿಂಭಾಗದಿಂದ ಗಮನಿಸಿದಾಗ ಜೋಲು ಹೊಟ್ಟೆ ಅಥವಾ ಗಡಿಗೆ ಹೊಟ್ಟೆ ಎದ್ದು ಕಾಣುತ್ತದೆ. ಇದನ್ನು ಹಳ್ಳಿಯ ಭಾಷೆಯಲ್ಲಿ ‘ಹೊಟ್ಟೆ ಡುಮ್ಮಣ್ಣ; ಕೈಕಾಲು ಸಣ್ಣಣ್ಣ’ ಎಂದು ಕರೆಯುತ್ತಾರೆ.
  • ಇಲ್ಲಿ ತಿಳಿಸಿರುವಂತೆ ಆಹಾರ ಮತ್ತು ಹಾಲನ್ನು ನೀಡಿದಲ್ಲಿ ಕರುಗಳು ಉತ್ತಮ ಬೆಳವಣಿಗೆಯನ್ನು ಹೊಂದಿ ಒಂದು ವರ್ಷದ ಅವಧಿಯಲ್ಲಿ ಸುಮಾರು 180 ಕೆ.ಜಿ ತೂಕ ಹೊಂದಿ ಒಂದೂವರೆ ವರ್ಷದಲ್ಲಿ 250 ಕೆ.ಜಿ. ತೂಕ ತಲುಪುತ್ತದೆ. ಹೀಗೆ ದಷ್ಟಪುಷ್ಟವಾಗಿ ಬೆಳೆದು ನಿಗದಿತ ಅವಧಿಯಲ್ಲಿ ಬೆದೆಗೆ ಬಂದು ವರ್ಷಕ್ಕೊಂದು ಕರುವನ್ನು ನೀಡುತ್ತವೆ.
  • ಸರಿಯಾಗಿ ಬೆಳವಣಿಗೆ ಹೊಂದದ ಕರುಗಳು ಒರಟಾದ ಮತ್ತು ಒಣಕಲು ಚರ್ಮವನ್ನು ಹೊಂದಿದ್ದು ಉದ್ದನೇ ಕೂದಲನ್ನು ಹೊಂದಿರುತ್ತವೆ. ಕಣ್ಣುಗಳು ನಿಸ್ತೇಜವಾಗಿದ್ದು, ರಕ್ತಹೀನತೆಯನ್ನು ಹೊಂದಿರುತ್ತವೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇಂತಹ ಕರುಗಳು ನಿಗದಿತ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿ ಸೂಕ್ತ ಸಮಯದಲ್ಲಿ ಬೆದೆಗೆ ಬರುವುದಿಲ್ಲ.
  • ಬೆದೆಗೆ ಬಂದರೂ ಗರ್ಭಕೋಶ ಸೂಕ್ತ ರೀತಿಯಲ್ಲಿ ಬೆಳವಣಿಗೆಯಾಗದೇ ಇರುವುದರಿಂದ ಫಲ ಕಟ್ಟುವುದಿಲ್ಲ. ಇಂತಹ ಕರುಗಳಿಗೆ ಜಂತು ನಾಶಕ ಹಾಕುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. (ಹೆಚ್ಚಿನ ಮಾಹಿತಿಗಾಗಿ: ಡಾ.ಎನ್.ಬಿ. ಶ್ರೀಧರ:08182-2651005.)[]

ಸೋಂಕುಗಳು

ಬದಲಾಯಿಸಿ
  • ಬ್ರುಸೆಲ್ಲೋಸಿಸ್ - ಜಾನುವಾರು ರೋಗ

ಹಸುವಿನಲ್ಲಿರುವ ತಳಿಗಳು

ಬದಲಾಯಿಸಿ
  1. ಕಂಧಾರಿ (ಗೋವಿನ ತಳಿ)
  2. ಪೋನ್ವಾರ್ (ಗೋವಿನ ತಳಿ)
  3. ಮಲೆನಾಡು ಗಿಡ್ಡ (ಗೋವಿನ ತಳಿ)
  4. ಹಳ್ಳಿಕಾರ್ (ಗೋವಿನ ತಳಿ)
  5. ಗಿರ್

ಸೈನೈಡ್ ವಿಷಬಾಧೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಕರುಗಳಲ್ಲಿ ಗಡಿಗೆ ಹೊಟ್ಟೆ ಸಮಸ್ಯೆಗೆ ಪರಿಹಾರ;ಡಾ. ಎನ್.ಬಿ. ಶ್ರೀಧರ;28 Mar, 2017;(ಲೇಖಕರು, ಶಿವಮೊಗ್ಗದ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕರು)". Archived from the original on 2017-03-27. Retrieved 2017-03-28.
  2. ಮಂತ್ರಾಲಯ ಹಸುಗಳ ಸಾವು; 28 Sep, 2016
 
ಹಸು
"https://kn.wikipedia.org/w/index.php?title=ದನ&oldid=1231381" ಇಂದ ಪಡೆಯಲ್ಪಟ್ಟಿದೆ